ಫ್ಯಾಕ್ಟ್‌ಚೆಕ್‌: ಹೈದರಾಬಾದ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಶಿವತಾಂಡವವನ್ನು ಅಸಾದುದ್ದೀನ್‌ ಓವೈಸಿ ಪಠಿಸಿದ್ದಾರಾ?

ಹೈದರಾಬಾದ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಶಿವತಾಂಡವವನ್ನು ಅಸಾದುದ್ದೀನ್‌ ಓವೈಸಿ ಪಠಿಸಿದ್ದಾರಾ?

Update: 2024-03-19 17:57 GMT

ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವೈರಲ್‌ ಆದ ವಿಡಿಯೋದಲ್ಲಿ ಓವೈಸಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಬೇಕಾದರೆ ಶಿವತಾಂಡವ ಸ್ತೋತ್ರವನ್ನು ಪಠಣೆ ಮಾಡಿದ್ದಾರೆ.

ತಮ್ಮ ಮಾತುಗಳ ಮೂಲಕ ಮತ್ತು ಭಾಷಣದ ಮೂಲಕವೇ ಹೆಸರುವಾಸಿಯಾಗಿರುವ ಅಸಾದುದ್ದೀನ್ ಓವೈಸಿ ಇತ್ತೀಚಿಗೆ ಸಭೆಯೊಂದರಲ್ಲಿ ವೇದಿಕೆ ಮೇಲೆ ಭಜನೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಮಾಲತಿ ರೆಡ್ಡಿ 2.0 ಎಂ ಎಕ್ಸ್‌ ಖಾತೆದಾರ ಓವೈಸಿ ವಿಡಿಯೋವನ್ನು ತಮ್ಮ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದರು.

“మాధవీ లత గారు పోటీ చేస్తారు అనగానే సాహెబ్ గారి నోటినుండి శివ తాండవ స్తోత్రం అద్భుతంగా చెప్పారు సార్, మత ఘర్షణలు లేకుండ చూసుకుంటే మీరే మళ్లీ గెలుస్తారు-నా సొంత అభిప్రాయం” ಎಂಬ ತೆಲುಗು ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಶೇರ್‌ ಮಾಡಿದ್ದರು

ಶೀರ್ಷಿಕೆಯನ್ನು ಅನುವಾದಿಸಿದಾಗ ನಮಗೆ ತಿಳಿದಿದ್ದೇನೆಂದರೆ, "ಮಾಧವಿ ಲತಾ ಚುನಾವಣೆಯಲ್ಲಿ ಸ್ಪರ್ಥಿಸುತ್ತಿದ್ದಾರೆ ಎಂದ ತಕ್ಷಣ ಅಸಾದುದ್ದೀನ್‌ ಓವೈಸಿ ಶಿವತಾಂಡವ ಸ್ತೋತ್ರ ಪಠಿಸುತ್ತಿದ್ದಾರೆ. ನೀವು ಹೀಗೆ ಕೋಮು ಘರ್ಷಣೆಯಿಲ್ಲದೆ ಇರುವ ಹಾಗೆ ನೋಡಿಕೊಂಡರೆ ನೀವೆ ಈ ಸಲವೂ ಸಹ ನೀವೆ ಗೆಲ್ಲುತ್ತೀರಿ- ಇದು ನನ್ನ ಸ್ವಂತ ಅಭಿಪ್ರಾಯ" ಎಂದು ಬರೆದು ಪೋಸ್ಟ್‌ ಮಾಡಿದ್ದರು.

ವೈರಲ್‌ ಆದ ಓವೈಸಿ ವಿಡಿಯೋವನ್ನು ಹಲವು ಸಾಮಾಜಿಕ ಜಾಲತಾನದ ಬಳಕೆದಾರರು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ.

ಈ ವಿಡಿಯೋವಿನ ಅಸಲಿಯತ್ತನು ಕಂಡುಹಿಡಿಯಲು ನಾವು ವಿಡಿಯೋವಿನ ಕೆಲವು ಪ್ರಮುಖ ಫ್ರೇಮ್‌ಗಳನ್ನು ಉಪಯೋಗಿಸಿ ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ ಮಾಡಿದೆವು. ನಮಗೆ ದೊರೆತಂತಹ ಮೂಲ ವಿಡಿಯೋದಲ್ಲಿ ಅಸುದುದ್ದೀನ್‌ ಓವೈಸಿ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ ಹೊರೆತು ಯಾವುದೇ ಭಜನೆಯನ್ನು ಮಾಡಿಲ್ಲ.

ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಡಿದಾದ ನಮಗೆ ಅಕ್ಟೋಬರ್ 26, 2022 ರಂದು ನ್ಯೂಸ್ 18 ಚಾನೆಲ್‌ನಲ್ಲಿ ಉರ್ದು ಲೈವ್ ಸ್ಟ್ರೀಮ್ ವೀಡಿಯೊವನ್ನು ಯೂಟ್ಯೂಬ್‌ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡೆವು. “Asaduddin Owaisi addressing a public meeting in Bijapur, Karnataka city. Why Amit Shah will not continue the survey of border areas where there are non-Muslims? After all, on what basis are Amit Shah and the BJP people doubting the Muslims of the border areas? - Barrister Asaduddin Owaisi” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಅಪ್‌ಲೋಡ್‌ ಮಾಡಲಾಗಿತ್ತು. ಕರ್ನಾಟಕ ರಾಜ್ಯದ ಬಿಜಾಪುರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಸಾದುದ್ದೀನ್ ಓವೈಸಿ ವಿಡಿಯೊವನ್ನು ಪೋಸ್ಟ್ ಮಾಡಿದ್ದನ್ನು ನಾವು ಕಂಡುಕೊಂಡೆವು. ವಿಡಿಯೋವಿನಲ್ಲಿ ಮುಸ್ಲಿಮೇತರ ಗಡಿ ಪ್ರದೇಶಗಳ ಸಮೀಕ್ಷೆಯನ್ನು ಅಮಿತ್ ಶಾ ಏಕೆ ಮುಂದುವರಿಸುವುದಿಲ್ಲ? ಎಂಬ ಪ್ರಶ್ನೆಯನ್ನು ಅಸಾದುದ್ದೀನ್ ಓವೈಸಿ ಕೇಳಿದ್ದಾರೆ.

Full View 

ಅಕ್ಟೋಬರ್ 26, 2022 ರಂದು ಓವೈಸಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ “ಮೋದಿ ಜೀ, ಕ್ಯಾ ಬಿಜಾಪುರ್ ಪಾಕಿಸ್ತಾನ್ ಹೈ?” ಎಂದು ಪೋಸ್ಟ್ ಮಾಡಿದ್ದರು. ಅದೇ ಶೀರ್ಷಿಕೆಯೊಂದಿಗೆ ವೀಡಿಯೊವೊಂದನ್ನು ಅಪ್‌ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ.

ʼಬಿಜಾಪುರ, ಕರ್ನಾಟಕ ಕಾ ದಿಲ್ ಹೈ, ಬಿಜಾಪುರ ಕರ್ನಾಟಕ ಕಾ ಇತಿಹಾಸ ಹೈ, ಔರ್ ಬಿಜಾಪುರ ಕೆ ಗೋಲ್ ಗುಂಬಜ್ ಕರ್ನಾಟಕ ಕಿ ಖುಬ್ಸುರ್ತಿ ಕಿ ಮಿಸಲ್ ಹೈ.' ಎಂಬ ಹೇಳಿಕೆಯನ್ನು ಸಾರ್ವಜನಿಕ ಸಭೆಯಲ್ಲಿ ಅಸಾದುದ್ದೀನ್ ಹೇಳಿದ್ದನ್ನು ನಾವು ಕಂಡುಕೊಂಡೆವು.

Full View 

ವೈರಲ್‌ ಆದ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ವೈರಲ್‌ ಆದ ವಿಡಿಯೋವಿನಲ್ಲಿ ಓವೈಸಿಯ ಮುಖ ಹಾವಭಾವಗಳು ಮತ್ತು ಮುಖದ ಚಲನವಲನೆಗಳು ಅಸಹಜವಾಗಿದೆ. ಅಷ್ಟೇ ಅಲ್ಲ ಮಾತನಾಡುವಾಗ ತುಟಿಯ ಚಲನವಲನೆಗಳಿಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ನಾವು ಕಂಡುಕೊಂಡೆವು.

ಹೀಗಾಗಿ ವೈರಲ್‌ ಆದ ವಿಡಿಯೋವನ್ನು ಎಡಿಟ್‌ ಮಾಡಲಾಗಿದೆ ಎಂದು ನಾವು ಕಂಡುಕೊಂಡೆವು. ವೈರಲ್‌ ಆದ ವಿಡಿಯೋ ಹೈದರಾಬಾದ್‌ ನಗರದಲ್ಲ, ಬಿಜಾಪುರದಲ್ಲಿ ನಡೆದ ಸಭೆಯಲ್ಲಿ ಅಸಾದುದ್ದೀನ್‌ ಓವೈಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದರು.

Claim :  Hyderabad MP Asaduddin Owaisi is chanting bhajan
Claimed By :  Social Media Users
Fact Check :  False
Tags:    

Similar News