ಫ್ಯಾಕ್ಟ್‌ಚೆಕ್‌: ಹೈದರಾಬಾದ್ ಪೊಲೀಸರು ರಾತ್ರಿ 11 ಗಂಟೆಯೊಳಗೆ ಅಂಗಡಿಗಳನ್ನು ಮುಚ್ಚಬೇಕು ಎಂದು ಯಾವುದೇ ನಿಯಮಗಳನ್ನು ರೂಪಿಸಿಲ್ಲ

ಹೈದರಾಬಾದ್ ಪೊಲೀಸರು ರಾತ್ರಿ 11 ಗಂಟೆಯೊಳಗೆ ಅಂಗಡಿಗಳನ್ನು ಮುಚ್ಚಬೇಕು ಎಂದು ಯಾವುದೇ ನಿಯಮಗಳನ್ನು ರೂಪಿಸಿಲ್ಲ

Update: 2024-07-03 20:31 GMT

ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹಾಗೂ ತೆಲಂಗಾಣ ರಾಜ್ಯ ಪೊಲೀಸರ ಲೋಗೋ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. "ಅಂಗಡಿಗಳು 10:30 ಅಥವಾ 11:00 ಕ್ಕೆ ಮುಚ್ಚಬೇಕು" ಎಂದು ಹೇಳುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವಿವಿಧ ಹಕ್ಕುಗಳೊಂದಿಗೆ ಸಾಮಾಜಿಕ ಬಳಕೆದಾರರು ಪೋಸ್ಟ್‌ ಮಾಡುತ್ತಿದ್ದಾರೆ.

Full View

ವೈರಲ್ ಚಿತ್ರವು INC ತೆಲಂಗಾಣ ಹಂಚಿಕೊಂಡಿರುವ ಸ್ಕ್ರೀನ್‌ಶಾಟ್‌ನ ಹಾಗೆ ಕಾಶಿಸುತ್ತಿದೆ. ಈ ಪೋಸ್ಟ್‌ಗೆ ನಾಸಿರ್ ಘಿಯಾಸ್ ಎಂಬ ಪತ್ರಕರ್ತ ಕೂಡ ಪ್ರತಿಕ್ರಿಯಿಸಿ ಇಂತಹ ಘೋಷಣೆಯನ್ನು ಪೊಲೀಸರು ಮತ್ತು ಸರ್ಕಾರ ಅಧಿಕೃತವಾಗಿ ಹೇಳಿಕೆ ನೀಡಿದರೆ ಒಳ್ಳೆಯದು ಎಂದು ಟ್ವೀಟ್‌ನಲ್ಲಿ ವಿನಂತಿಸಿದ್ದಾರೆ.

ಮತ್ತೊಬ್ಬ ಟ್ವಿಟರ್ ಬಳಕೆದಾರ ತನ್ನ ಎಕ್ಸ್‌ ಖಾತೆಯಲ್ಲಿ ವೈರಲ್‌ ಆಗುತ್ತಿರುವ ಸುದ್ದಿಯ ಬಗ್ಗೆ ಜನರಲ್ಲಿ ಬಹಳಷ್ಟು ಗೊಂದಲವಿದೆ. ಈ ಸುದ್ದಿ ಸುಳ್ಳೋ ನಿಜಾನಾ ಎಂದು ಸ್ಪಷ್ಟೀಕರಣ ಕೊಟ್ಟರೆ ಒಳ್ಳೆಯದು ಎಂದು ತನ್ನ ಎಕ್ಸ್‌ ಖಾತೆಯಲ್ಲಿ "Dear @hydcitypolice can you please confirm is it true or fake? It’s creating confusion in public of #Hyderabad @HiHyderabad" ಎಂದು ಟ್ವಿಟ್‌ ಮಾಡಿದ್ದರು.

ಹೈದರಾಬಾದ್ ಪೊಲೀಸರು ರಾತ್ರಿ 11 ಗಂಟೆಯ ನಂತರ ರಸ್ತೆಗಳಲ್ಲಿ ಓಡಾಡದಂತೆ ಎಚ್ಚರಿಕೆ ನೀಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಜೂನ್ 24, 2024 ರಂದು ವೀಡಿಯೊಗೆ ಪ್ರತಿಕ್ರಿಯಿಸಿದ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ತೆಲಂಗಾಣ ಡಿಜಿಪಿ ಮತ್ತು ಪೊಲೀಸ್ ಕಮಿಷನರ್ ಅವರನ್ನು ಟ್ಯಾಗ್ ಮಾಡಿದ್ದಾರೆ, ಕನಿಷ್ಠ ಮಧ್ಯರಾತ್ರಿಯವರೆಗೆ ಅಂಗಡಿಗಳನ್ನು ತೆರೆದಿಡಲು ಅನುಮತಿಸಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ದೇಶಾದ್ಯಂತ ಮೆಟ್ರೋ ನಗರಗಳಲ್ಲಿ ರಾತ್ರಿಯಲ್ಲಿ ಅಂಗಡಿಗಳನ್ನು ತೆರೆಯಲು ಅವಕಾಶ ನೀಡುತ್ತಿವೆ ಎಂದು ಟ್ವಿಟ್‌ ಮಾಡಿದ್ದಾರೆ.

ಜುಬಿಲಿ ಹಿಲ್ಸ್‌ನಲ್ಲಿ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ, ಇರಾನಿ ಚಾಯ್ ಹೋಟೆಲ್‌ಗಳು, ಗಿರವಿ ಅಂಗಡಿಗಳು ಅಥವಾ ವಾಣಿಜ್ಯ ಸಂಸ್ಥೆಗಳು ಕೇವಲ 12 ಗಂಟೆಯವರಗೆ ಮಾತ್ರ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ನೀಡಬೇಕು, ದೇಶದ ದೊಡ್ಡ ಮೆಟ್ರೋ ನಗರಗಳಲ್ಲಿ, ರಾತ್ರಿಯಲ್ಲಿ ಅಂಗಡಿಗಳನ್ನು ತೆರೆಯಲು ಅನುಮತಿಸಿದ್ದಾರೆ. ಹೈದರಾಬಾದ್‌ನಲ್ಲಿ ಏಕೆ ಭಿನ್ನವಾಗಿ ಹೊಸ ರೂಲ್ಸ್‌ ?" ಎಂದು ಅಸಾದುದ್ದೀನ್ ಓವೈಸಿ ಎಕ್ಸ್‌ ಖಾತೆಯಲ್ಲಿ ಪ್ರಶ್ನಿಸಿದ್ದಾರೆ.

“‘No Friendly Police, Lathicharge Police': Hyderabad Cops Ask Shops To Shut By 11 PM; 'Allow It Till 12 AM', Says Owaisi” ಎಂಬ ಶೀರ್ಷಿಕೆಯೊಂದಿಗೆ The Press Free journal ಸಹ ವರದಿ ಮಾಡಿರುವುದನ್ನು ನಾವು ಕಂಡುಕೊಂಡೆವು. ಹೈದರಾಬಾದ್‌ ಪೊಲೀಸರು 11 ಗಂಟೆಗೆ ಅಂಗಡಿಗಳನ್ನು ಮುಚ್ಚುವಂತೆ ಎಚ್ಚರಿಕೆ ನೀಡಿರುವುದನ್ನು ಅಸಾದುದ್ದೀನ್ ಓವೈಸಿ ಖಂಡಿಸಿದ್ದಾರೆ.

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಹೈದರಾಬಾದ್ ನಗರ ಪೊಲೀಸರು ರಾತ್ರಿ 10:30 ಅಥವಾ 11 ಗಂಟೆಯ ಮೊದಲು ಅಂಗಡಿಗಳನ್ನು ಮುಚ್ಚುವಂತೆ ಯಾವುದೇ ಅಧಿಕೃತ ಆದೇಶವನ್ನು ನೀಡಿಲ್ಲ.

ನಾವು ಸಿಎಂಒ ತೆಲಂಗಾಣ ಸಾಮಾಜಿಕ ಮಾಧ್ಯಮಕ್ಕೆ ಸಂಬಂಧಿಸಿದ ನೋಟೀಸ್‌ಗಳನ್ನು ಹುಡುಕಾಡಿದೆವು ನಮಗೆ ವೈರಲ್‌ ಸುದ್ದಿಗೆ ಸಂಬಂಧಿಸಿದ ಯಾವುದೇ ವರದಿಗಳು ಕಂಡಬಂದಿಲ್ಲ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಅಥವಾ INC ತೆಲಂಗಾಣದಲ್ಲಿ ಅಂತಹ ಯಾವುದೇ ಪೋಸ್ಟ್ ಇರಲಿಲ್ಲ.

ಜೂನ್ 24, 2024 ರಂದು, ಹೈದರಾಬಾದ್ ನಗರ ಪೊಲೀಸರು ತಮ್ಮ ಅಧಿಕೃತ X ಖಾತೆಯಲ್ಲಿ "The recent social media news making rounds that city police are closing shops by 10.30 or 11 pm are totally misleading. The shops and establishments will open/close as per the already existing rules only. Hence the same may be noted by all" ಎಂದು ಪೋಸ್ಟ್‌ ಮಾಡಿದ್ದರು.

ಜೂನ್ 25, 2024 ರಂದು, siasat.com ಗೆ ಸಂಬಂಧಿಸಿದ ಲೇಖನದಲ್ಲಿ “ಹೈದರಾಬಾದ್ ಸಿಟಿ ಪೊಲೀಸರು 10.30 ಅಥವಾ 11 ಗಂಟೆಯ ಮೊದಲು ಅಂಗಡಿಗಳನ್ನು ಮುಚ್ಚಲು ನಿರ್ಬಂಧಗಳನ್ನು ವಿಧಿಸುತ್ತಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ ಆದರೆ ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೈದರಾಬಾದ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ" ಎಂದು ವರದಿ ಮಾಡಿರುವುದನ್ನು ನಾವು ಕಂಡುಕೊಂಡೆವು.

ಹೈದರಾಬಾದ್ ಮೇಲ್ ಪ್ರಕಟಿಸಿದ ಲೇಖನದಲ್ಲಿ "ಅಂಗಡಿಗಳನ್ನು ಅನುಮತಿಸಲಾದ ಸಮಯಕ್ಕಿಂತ ಹೆಚ್ಚು ಸಮಯ ಕಾರ್ಯನಿರ್ವಹಿಸದಂತೆ ಹೈದರಾಬಾದ್‌ ಪೊಲೀಸರು ಕೇಳಿಕೊಂಡಿದ್ದಾರೆ" ಎಂದು ದಕ್ಷಿಣ ವಲಯ ಪೊಲೀಸ್ ಉಪ ಆಯುಕ್ತೆ ಸ್ನೇಹಾ ಮೆಹ್ರಾ ಐಪಿಎಸ್‌ಗೆ ತಿಳಿಸಿದ್ದಾರೆ.ಎಂದು ವರದಿ ಮಾಡಿತ್ತು.

ಆದರೆ, ರಾತ್ರಿ 10:30 ಅಥವಾ 11 ಗಂಟೆಯೊಳಗೆ ಅಂಗಡಿಗಳನ್ನು ಮುಚ್ಚುವಂತೆ ಯಾವುದೇ ಅಧಿಕೃತ ಆದೇಶವಿರಲಿಲ್ಲ.


ರಿವೀಲ್ ಇನ್‌ಸೈಡ್ ಲೇಖನದ ಪ್ರಕಾರ, “ರಾತ್ರಿ 10:30 ಅಥವಾ 11 ಗಂಟೆಗೆ ಅಂಗಡಿಗಳನ್ನು ಮುಚ್ಚುವ ಬಗ್ಗೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳು ಹರಡುತ್ತಿವೆ, ಆದರೆ ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೈದರಾಬಾದ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಹೀಗಾಗಿ, ವೈರಲ್ ಆಗುತ್ತಿರುವ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ. ರಾತ್ರಿ 10:30 ಅಥವಾ 11 ಗಂಟೆಯೊಳಗೆ ಅಂಗಡಿಗಳನ್ನು ಮುಚ್ಚುವಂತೆ ತೆಲಂಗಾಣ ಪೊಲೀಸರಿಂದ ಯಾವುದೇ ಅಧಿಕೃತವಾಘಿ ಆದೇಶಿಸಿಲ್ಲ.

Claim :  ಹೈದರಾಬಾದ್ ಪೊಲೀಸರು ರಾತ್ರಿ 11 ಗಂಟೆಯೊಳಗೆ ಅಂಗಡಿಗಳನ್ನು ಮುಚ್ಚಬೇಕು ಎಂದು ಯಾವುದೇ ನಿಯಮಗಳನ್ನು ರೂಪಿಸಿಲ್ಲ
Claimed By :  Social Media Users
Fact Check :  False
Tags:    

Similar News