ಫ್ಯಾಕ್ಟ್‌ಚೆಕ್‌: ಷರಂ ಎನ್ನುವ ಹೆಸರಿನಲ್ಲಿ ಅಮೂಲ್‌ ಸಂಸ್ಥೆ ಚೀಜ್‌ನ್ನು ತಯಾರು ಮಾಡಿದೆಯಾ?

ಷರಂ ಎನ್ನುವ ಹೆಸರಿನಲ್ಲಿ ಅಮೂಲ್‌ ಸಂಸ್ಥೆ ಚೀಜ್‌ನ್ನು ತಯಾರು ಮಾಡಿದೆಯಾ?;

facebooktwitter-grey
Update: 2023-12-26 11:00 GMT
Sharam cheese, amul cheese, AI generated image, Image shows Amul product named Sharam cheese

Amul Sharam Cheese

  • whatsapp icon

ರೈತರೇ ಸ್ಥಾಪಿಸಿದಂತಹ ಸಂಸ್ಥೆ ಅಮೂಲ್‌. ಮಾರಾಟ ಮಾಡುವಾಗ ಬರುವ ಮಧ್ಯವರ್ತಿಗಳ ಶೋಷಣೆಯನ್ನು ತಡೆಯಲು ಅಮೂಲನ್ನು ಸ್ಥಾಪಿಸಿದರು. ಇದೀಗ ಇದೇ ಕಂಪನಿ ಭಾರತದಲ್ಲಿರುವ ಡೈರಿ ಕ್ಷೇತ್ರದಲ್ಲೇ ಅತಿ ದೊಡ್ಡ ಬ್ರಾಂಡ್‌ ಆಗಿ ಬೆಳೆದಿದೆ. ಅಮೂಲ್‌ ಕಂಪನಿ ಕೇವಲ ಹೆಸರು ಗಳಿಸಿಲ್ಲ ಅಮೂಲ್‌ ರೈತರ ಬದುಕನ್ನೂ ಸಹ ಬದಲಾಯಿಸಿದೆ. ಹಲವು ವರ್ಷಗಳಿಂದ ಹುಣಮಟ್ಟದ ಉತ್ಪನ್ನಗಳನ್ನು ತಯಾರಿಸುವುದಲ್ಲದೇ ದೇಶದಾದ್ಯಂತ ಒಂದೊಳ್ಳೆಯ ಬ್ರಾಂಡ್‌ ಆಗಿ ಜನಪ್ರಿಯತೆಯನ್ನು ಪಡೆದಿದೆ.

ಇದೀಗ ಅಮೂಲ್‌ ಬ್ರಾಂಡ್‌ನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ವೈರಲ್‌ ಆಗಿದೆ. ವೈರಲ್‌ ಆದ ಸುದ್ದಿಯಲ್ಲಿರುವುದೇನೆಂದರೆ ಅಮುಲ್ ಕಂಪನಿ ‘ಷರಂ’ ಎಂಬ ಚೀಸ್ ಬಿಡುಗಡೆ ಮಾಡಿದೆ. ಈ ಚೀಸ್‌ ಈಗ ಮಾಡುಕಟ್ಟೆಗಳಲ್ಲಿ ನಿಮ್ಮ ಹತ್ತಿರದ ಮಾರಾಟ ಮಳಿಗೆಗಳಲ್ಲಿ ದೊರೆಯುತ್ತದೆ ಎಂದು ಪೋಸ್ಟ್‌ ಮಾಡಿದ್ದರು ಅಷ್ಟೇ ಅಲ್ಲ ಈ ಚಿತ್ರಕ್ಕೆ ಶೀರ್ಷಿಕೆಯಾಗಿ "ಅಬ್ ಶರಮ್ ನಾಮ್ ಕಿ ಚೀಸ್ ಬಜಾರ್ ಮೇ ಮಿಲ್ತಿ ಹೈ. ಧನ್ಯವಾದಗಳು ಅಮುಲ್" ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಪೋಸ್ಟ್‌ ಮಾಡಿದ್ದಾರೆ.

Full View

Full View

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಅಮೂಲ್‌ ಕಂಪನಿ ʼಷರಂʼ ಎನ್ನುವ ಯಾವು ಚೀಸ್‌ನ್ನೂ ಉತ್ಪಾದನೆ ಮಾಡುತ್ತಿಲ್ಲ. ವೈರಲ್‌ ಆದ ಚಿತ್ರವನ್ನು ಏಐನ ಮೂಲಕ ರಚಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಲಾಗಿದೆ.

ವೈರಲ್‌ ಆದ ಸುದ್ದಿ ಕುರಿತು ಸತ್ಯಾಂಶವನ್ನು ತಿಳಿಯಲು ನಾವು ʼಅಮೂಲ್‌ ಷರಂ ಚೀಸ್‌ʼ ಎಂದು ಹುಡುಕಿದಾಗ ನಮಗೆ ಈ ಕುರಿತು ಗೂಗಲ್‌ನಲ್ಲಿ ಯಾವುದೇ ಫಲಿತಾಂಶವೂ ಸಿಗಲಿಲ್ಲ.ಬದಲಿಗೆ ಅಮೂಲ್‌ ಕಂಪನಿ ವೈರಲ್‌ ಆದ ಸುದ್ದಿಯನ್ನು ನಿರಾಕರಿಸಿದೆ ಎಂಬ ಸುದ್ದಿಯ ವರದಿಗಳು ನಮಗೆ ಕಂಡುಬಂದಿತು.

ಲೈವ್‌ಮಿಂಟ್‌.ಕಾಂ ವರದಿಯ ಪ್ರಕಾರ ಅಮೂಲ್‌ ತನ್ನ ಎಕ್ಸ್‌ನ ಅಧಿಕೃತ ಖಾತೆಯಲ್ಲಿ ಈ ಕುರಿತ ಪೋಸ್ಟ್‌ವೊಂದನ್ನು ಮಾಡಿತ್ತು. "ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅಮೂಲ್‌ ಕುರಿತು ಸಕಲಿ ಸಂದೇಶವೊಂದು ಹರಿದಾಡುತ್ತಿದೆ. ಅಮೂಲ್‌ ಸಂಸ್ಥೆ ʼಷರಂʼ ಎನ್ನುವ ಚೀಸ್‌ನ್ನು ಅತ್ಪಾದನೆ ಮಾಡಿಲ್ಲ. ಗ್ರಾಹಕರು ಜಾಗರೂಕತೆಯಿಂದಿರಿ, ವೈರಲ್‌ ಆದ ಚಿತ್ರವೂ ಸಹ ನಿಜವಾಗಿದ್ದಲ್ಲ ಈ ಚಿತ್ರವನ್ನು ಏಐನ ಮೂಲಕ ರಚಿಸಲಾಗಿದೆ" ಎಂದು ವರದಿ ಮಾಡಿದ್ದರು.

ಅಂಕಿತಾ ಸಾವಂತ್‌ ಎಂಬ ಎಕ್ಸ್‌ ಖಾತೆದಾರ ತಾನೆ ಈ ಷರಂ ಷೀಸ್‌ನ ಚಿತ್ರವನ್ನು ರಚಿಸಿದ್ದು ಎಂದು ಒಪ್ಪಿಕೊಂಡಿದ್ದಾರೆ. ಸುಳ್ಳು ಸುದ್ದಿಯನ್ನು ಹಬ್ಬಿಸುವ ಉದ್ದೇಶ ನನಗಿಲ್ಲ. ಕೇವಲ ನನಗೆ ಒಂದು ನಿಮಿಷ ಸಾಕಾಯಿತು ಈ ಚಿತ್ರವನ್ನು ರಚಿಸಲು ಆದರೆ ಈ ಚಿತ್ರ ಎಷ್ಟು ವೇಗವಾಗಿ ಸುಳ್ಳು ಸುದ್ದಿ ಹಬ್ಬಿದೆ. ನಾನು @ಅಮೂಲ್‌_ಕೂಪ್‌ಗೆ ಕ್ಷಮೆ ಕೇಳಲು ಇಚ್ಛಿಸುತ್ತೇನೆ ಎಂದು ತನ್ನ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದರು.

ಹೀಗಾಗಿ ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಅಮೂಲ್‌ ಸಂಸ್ಥೆ ಯಾವುದೇ ಷರಂ ಚೀಸ್‌ ಎನ್ನುವ ಉತ್ಪನ್ನವನ್ನು ಉತ್ಪಾದಿಸಿಲ್ಲ. ವೈರಲ್‌ ಆದ ಚಿತ್ರವನ್ನು ಎಐ ಮೂಲಕ ರಚಿಸಿಲಾಗಿದೆ.

Claim :  Image shows Amul product named Sharam cheese
Claimed By :  Social Media Users
Fact Check :  False
Tags:    

Similar News