ಫ್ಯಾಕ್ಟ್‌ಚೆಕ್: ನಟ ಅರ್ಜುನ್ ಕಪೂರ್, ಕ್ರಿಕೆಟಿಗ ಕುಲದೀಪ್ ಯಾದವ್ ಬಿಆರ್‌ಎಸ್ ಅಭ್ಯರ್ಥಿ ಮಹಿಪಾಲ್ ರೆಡ್ಡಿ ಗೆಲುವಿಗಾಗಿ ಆಶಿಸಿದ್ದರಾ? ವೈರಲ್ ಆದ ವಿಡಿಯೋವಿನ ಅಸಲಿಯತ್ತೇನು?
ನಟ ಅರ್ಜುನ್ ಕಪೂರ್, ಕ್ರಿಕೆಟಿಗ ಕುಲದೀಪ್ ಯಾದವ್ ಬಿಆರ್‌ಎಸ್ ಅಭ್ಯರ್ಥಿ ಮಹಿಪಾಲ್ ರೆಡ್ಡಿ ಗೆಲುವಿಗಾಗಿ ಆಶಿಸಿದ್ದರಾ? ವೈರಲ್ ಆದ ವಿಡಿಯೋವಿನ ಅಸಲಿಯತ್ತೇನು?
ಒಂದು ತಿಂಗಳಿಂದ ನಡೆಯುತ್ತಿದ್ದ ರಾಜಕೀಕ ಪ್ರಚಾರ ನವಂಬರ್ 28, 2023ರಂದು ಕೊನೆಗೊಂಡಿತು. ಪ್ರಚಾರದ ಕೊನೆಯ ದಿನ ಸೈಕಲ್, ಬೈಕ್ ಮತ್ತು ರೋಡ್ ಶೋ ಮೂಲಕ, ಸಾರ್ವಜನಿಕ ಸಭೆಗಳು, ಮನೆ ಮನೆಗೆ ಭೇಟಿ ನೀಡಿ ಪ್ರಚಾರವನ್ನು ಅಭ್ಯರ್ಥಿಗಳು ನಡೆಸಿದರು. ಮತದಾರರ ಗಮನ ಸೆಳೆಯಲು ಸಾಕಷ್ಟು ಹೊಸ ಹೊಸ ತಂತ್ರಗಾರಿಕೆಯನ್ನು ಉಪಯೋಗಿಸಿಕೊಂಡು ಮತದಾರರ ಗಮನ ಸೆಳೆಯಲು ಯತ್ನಿಸಿದ್ದರು.
ಅದರಲ್ಲಿ ಒಂದು ಭಾರತೀಯ ನಟ ಮತ್ತು ಕ್ರಿಕೆಟಿಗ ಕುಲದೀಪ್ ಯಾದವ್ ಬಿಆರ್‌ಎಸ್ ಅಭ್ಯರ್ಥಿ ಮಹಿಪಾಲ್ ರೆಡ್ಡಿ ಗೆಲುವಿಗಾಗಿ ಶುಭ ಹಾರೈಸುತ್ತಿದ್ದಾರೆ ಎಂಬ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋವನ್ನು ಈಗಾಗಲೇ ಸಾಕಷ್ಟು ಸಾಮಾಜಿಕ ಜಾಲತಾಣದ ಬಳಕೆದಾರರು ತಮ್ಮ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಭಾರತೀಯ ಕ್ರಿಕೆಟಿಗ ಕುಲದೀಪ್ ಯಾದವ್ ಶುಭ ಕೋರಿರುವ ವೀಡಿಯೊಗಳ ಲಿಂಕ್‌ಗಳು ಇಲ್ಲಿವೆ.
ನಟ ಅರ್ಜುನ್ ಕಪೂರ್ ಶುಭ ಕೋರಿರುವ ವೀಡಿಯೊಗಳ ಲಿಂಕ್‌ಗಳು ಇಲ್ಲಿವೆ.
ಫ್ಯಾಕ್ಟ್‌ಚೆಕ್
ಬಿಆರ್‌ಎಸ್ ಅಭ್ಯರ್ಥಿ ಮಹಿಪಾಲ್ ರೆಡ್ಡಿಗೆ ಸೆಲೆಬ್ರೆಟಿಗಳು ಶುಭ ಹಾರೈಸಿದ್ದಾರೆಂಬ ಸುದ್ದಿ ಸುಳ್ಳು. ವೈರಲ್ ಆದ ವೀಡಿಯೋವನ್ನು ಮಾರ್ಫ್ ಮಾಡಲಾಗಿದೆ. ಸೆಲೆಬ್ರೆಟಿಗಳು ಯಾವುದೇ ರೀತಿಯ ವೀಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿಲ್ಲ.ಹಾಗೆ ಅವರ ಸಾಮಾಜಿಕ ಮಾಧ್ಯಮದಲ್ಲಿ ಅಂತಹ ಯಾವುದೇ ವೀಡಿಯೊ ನಮಗೆ ಕಂಡುಬಂದಿಲ್ಲ .
ʼಕುಲದೀಪ್ ಯಾದವ್ ವಿಶ್ಸ್ ಮಹಿಪಾಲ್ ರೆಡ್ಡಿ' ಎಂಬ ಕೀವರ್ಡ್‌ಗಳನ್ನು ಬಳಸಿ, ಗೂಗಲ್‌ನಲ್ಲಿ ಹುಡುಕಿದಾಗ,ಅಕ್ಟೋಬರ್ 31ರಂದು 2023ರಂದು ಆರೋಮ್ಯಾಕ್ಸ್ ಡಿಜಿಟಲ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಆದಂತಹ ವಿಡಿಯೋವನ್ನು ನಾವು ಕಂಡುಕೊಂಡೆವು. ವಿಡಿಯೋಗೆ ಶೀರ್ಷಿಕೆಯಾಗಿ 'ಇಂಡಿಯನ್ ಸ್ಪಿನ್ನರ್ ಕುಲದೀಪ್ ಯಾದವ್ ವಿಶಸ್ ತ್ರಿದೇವ್ ಆಚಾರ್ಯ | ICC ಕ್ರಿಕೆಟ್ ವಿಶ್ವಕಪ್ 2023' ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಅಪ್‌ಲೋಡ್ ಆಗಿದೆ.
ತ್ರಿದೇವ್ ಆಚಾರ್ಯ ಹುಟ್ಟುಹಬ್ಬದಂದು ಇತರ ಸೆಲೆಬ್ರಿಟಿಗಳು ಶುಭಾಶಯ ಕೋರುವ ವೀಡಿಯೊಗಳನ್ನು ಈ ಯೂಟ್ಯೂಬ್ ಚಾನೆಲ್‌ನಲ್ಲಿ ನೋಡಬಹುದು.
ನವೆಂಬರ್ 14, 2023 ರಂದು My World ಹೆಸರಿನ YouTube ಚಾನೆಲ್‌ನಲ್ಲಿ "have u received a surprise like this #kuldeepyadavʼ ಎಂಬ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.
ಅರ್ಜುನ್ ಕಪೂರ್ ಶುಭಾಶಯವನ್ನು ಕೋರಿದ್ದಾರಾ ಎಂದು ತನ್ನ ಸಾಮಾಜಿಕ ಜಾಲತಾಣಗಳನ್ನು ಪರಿಶೀಲಿಸಿದಾಗ ನಮಗೆ ಯಾವುದೇ ರೀತಿಯ ವೀಡಿಯೋಗಳು ಅರ್ಜುನ್ ಕಪೂರ್ ಮಾಧ್ಯಮ ಖಾತೆಯಲ್ಲಿ ಕಂಡುಬಂದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಹುಡುಕಿದಾಗ, FNP ಹೆಸರಿನ ವೆಬ್‌ಸೈಟ್‌ನಲ್ಲಿ ವೈಯಕ್ತಿಕ ವ್ಯಕ್ತಿ ಹತ್ತಿರ ಅಥವಾ ಸೆಲಬ್ರೆಟಿಗಳ ಹತ್ತಿರ ತಮ್ಮ ಹುಟ್ಟುಹಬ್ಬಕ್ಕೆ ಸಂದೇಶವನ್ನು ಪಡೆಯಲು ಇಚ್ಚಿಸುವವರು FNP ವೆಬ್‌ಸೈಟ್‌ಗೆ ಭೇಟಿ ನೀಡಿ ಎಂದು ಬರೆಯಲಾಗಿತ್ತು.
FNP ವೆಬ್‌ಸೈಟ್‌ನಲ್ಲಿ ಸಾಕಷ್ಟು ವೈಯಕ್ತೀಕರಿಸಬಹುದಾದ ಮತ್ತು ಪ್ರೀತಿಪಾತ್ರರಿಗೆ ಕಳುಹಿಸಬಹುದಾದ ಹಲವಾರು ಸೆಲೆಬ್ರಿಟಿಗಳ ವೀಡಿಯೊಗಳನ್ನು ನಾವು ಕಂಡುಕೊಂಡೆವು. ಅರ್ಜುನ್ ಕಪೂರ್ ಹುಟ್ಟುಹಬ್ಬದ ಶುಭಾಷಯದ ವಿಡಿಯೋವಿಗಾಗಿ ರೂ 599 ಪಾವತಿಸಬೇಕು ಎಂದು ಬರೆಯಲಾಗಿತ್ತು.
ಹಾಗಾಗಿ, ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಮಹಿಪಾಲ್ ರೆಡ್ಡಿಗೆ ಜಯವಾಗಲಿ ಎಂದು ಕುಲದೀಪ್ ಯಾದವ್ ಮತ್ತು ಅರ್ಜುನ್ ಕಪೂರ್ ಹಾರೈಸುತ್ತಿರುವ ವಿಡಿಯೋಗಳು ನಿಜವಲ್ಲ. ಈ ವೀಡಿಯೋಗಳನ್ನು ವೈಯಕ್ತೀಕರಿಸಲಾಗಿದೆ. ಹಾಗೆ ವಿಡಿಯೋವನ್ನು ಮಾರ್ಫ್ ಮಾಡಲಾಗಿದೆ.