ಫ್ಯಾಕ್ಟ್‌ಚೆಕ್: ಕ್ರಿಕೆಟ್‌ನ ವಿಶ್ವಕಪ್‌ಸಮಯದಲ್ಲಿ ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್‌ನ್ನು ಪ್ರಧಾನಿ ನರೇಂದ್ರ ಮೋದಿ ಕಡಗಣಿಸಿದ್ದಾರೆ ಎಂದು ವೈರಲ್ ಆದ ಹೇಳಿಕೆಯ ಅಸಲಿಯತ್ತೇನು?
ಕ್ರಿಕೆಟ್‌ನ ವಿಶ್ವಕಪ್‌ಸಮಯದಲ್ಲಿ ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್‌ನ್ನು ಪ್ರಧಾನಿ ನರೇಂದ್ರ ಮೋದಿ ಕಡಗಣಿಸಿದ್ದಾರೆ ಎಂದು ವೈರಲ್ ಆದ ಹೇಳಿಕೆಯ ಅಸಲಿಯತ್ತೇನು?
ಕ್ರಿಕೆಟ್ ಪುರುಷರ ODI ವಿಶ್ವಕಪ್ ಸಮಯದಲ್ಲಿ ಭಾರತ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಫೈನಲ್ಸ್‌ನ್ನು ತಲುಪಿತು. ಆಸ್ಟ್ರೇಲಿಯಾ ಆರನೇ ಬಾರಿ ಫೈನಲ್ಸ್‌ನಲ್ಲಿ 6 ವಿಕೇಟ್‌ನ ಅಂತರದಲ್ಲಿ ಭಾರತದ ಮೇಲೆ ಗೆಲುವನ್ನು ಸಾಧಿಸಿತು. ಆಸ್ಟ್ರೇಲಿಯಾದ ಕ್ರಿಕೆಟಿಗ ಟ್ರಾವಿಸ್ ಹೆಡ್ 137 ರನ್ ಗಳಿಸಿ ನಡೆದ ಪಂದ್ಯದಲ್ಲಿ ಗೆಲುವಿಗೆ ಕಾರಣರಾದರು.
ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಗೆದ್ದ ನಂತರ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಉಪ ಪ್ರಧಾನಿ ರಿಚರ್ಡ್ ಮಾರ್ಲ್ಸ್ ಮೂಲಕ 2023 ರ ಐಸಿಸಿ ವಿಶ್ವಕಪ್ ಟ್ರೋಫಿಯನ್ನು ನೀಡಲಾಗಿತ್ತು. ಟ್ರೋಫಿಯನ್ನು ಸ್ವೀಕರಿಸಿದ ನಂತರ ಆಸ್ಟ್ರೇಲಿಯಾದ ಕ್ರಿಕೆಟ್ ನಾಯಕ ಪ್ಯಾಟ್ ಕಮಿನ್ಸ್ ಒಬ್ಬರೇ ನಿಂತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವೀಡಿಯೋಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಕಮ್ಮಿನ್ಸ್‌ರನ್ನು ಕಡೆಗಣಿಸಿದ್ದಾರೆ ಎಂಬ ವೈರಲ್ ಹೇಳಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್‌ಚೆಕ್
ವೈರಲ್ ಆದ ವೀಡಿಯೋ ಮತ್ತು ಅದರಲ್ಲಿರುವ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ.
ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಗೆದ್ದ ನಂತರ ಆಸ್ಟ್ರೇಲಿಯ ನಾಯಕನಿಗೆ ಮೋದಿ ಅಭಿನಂದನೆಯನ್ನು ಸಲ್ಲಿಸದೇ ಹೋಗುತ್ತಿರುವ ವೀಡಿಯೋವನ್ನು ಎಡಿಟ್ ಮಾಡಲಾಗದೆ.
ವೈರಲ್ ಆದ ವೀಡಿಯೋವಿನ ಸತ್ಯಾಂಶವನ್ನು ತಿಳಿಯಲು ಕೆಲವು ಕೀವರ್ಡ್‌ನ್ನು ಉಪಯೋಗಿಸಿ ಹುಡುಕಾಟವನ್ನು ನಡೆಸಿದೆವು. ಹುಡುಕುತ್ತಿರುವಾಗ ನವೆಂಬರ್ 20, 2023 ರಂದು ಅಂಶು ಕಶ್ಯಪ್ ವ್ಲಾಗ್ಸ್ ಎಂಬ ಯೂಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಿರುವ ವೀಡಿಯೋವೊಂದನ್ನು ನಾವು ಕಂಡುಕೊಂಡೆವು. ಟ್ರೋಫಿಯನ್ನು ಆಸ್ಟ್ರೇಲಿಯಾ ತಂಡದ ನಾಯಕ ಕಮ್ಮಿನ್ಸ್‌ಗೆ ನೀಡಿದ ನಂತರ ನರೇಂದ್ರ ಮೋದಿ ನಾಯಕನಿಗೆ ಹೃತ್ಪೂರ್ವಕವಾಗಿ ಅಭಿನಂದನೆಯನ್ನು ಸಲ್ಲಿಸಿದರು.
ಅಂಶು ಕಶ್ಯಪ್ ವ್ಲಾಗ್ಸ್ ಚಾನೆಲ್‌ನಲ್ಲಿ ನಾವು ಕಂಡುಕೊಂಡ ವೀಡಿಯೋವಿನ ಕ್ಲೋಸ್-ಅಪ್ ವೀಡಿಯೋ ಇಲ್ಲಿದೆ.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2023ರ ಪುರುಷರ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ಜಯಗಳಿಸಿದ ನಂತರ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾದ ಉಪ ಪ್ರಧಾನಿ ರಿಚರ್ಡ್ ಮಾರ್ಲ್ಸ್ ವಿಶ್ವಕಪ್‌ನ್ನು ನೀಡಿ ಗೌರವಿಸಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ANI ಪೋಸ್ಟ್ ಮಾಡಿತ್ತು.
Aljazeera.com ನಲ್ಲಿ ವಿಶ್ವಕಪ್‌ಗೆ ಸಂಬಂಧಿಸಿದ ಕೆಲವು ಫೋಟೋವನ್ನು ಪ್ರಕಟಿಸಲಾಗಿತ್ತು. ಪ್ರಧಾನಿ ಮೋದಿ ಆಸ್ಟ್ರೇಲಿಯಾದ ನಾಯಕನಿಗೆ ಟ್ರೋಫಿಯನ್ನು ನೀಡಿ ಹಸ್ತಲಾಘವ ಮಾಡಿ ಶುಭಾಶಯ ಕೋರುವುದನ್ನು ಈ ವೆಬ್‌ಸೈಟ್‌ನಲ್ಲಿ ನೋಡಬಹುದು.
ಹೀಗಾಗಿ ವೈರಲ್ ಆದ ವೀಡಿಯೋದಲ್ಲಿ ನೀಡಿರುವ ಹೇಳಿಕೆ ತಪ್ಪಾಗಿದೆ. ಪ್ರಧಾನಿ ಮೋದಿ ಟ್ರೋಫಿ ನೀಡುವ ಮುನ್ನ ಮತ್ತು ನಂತರ ಕಮ್ಮಿನ್ಸ್‌ನ್ನು ಅಭಿನಂದಿಸಿದ್ದರು.