ಫ್ಯಾಕ್ಟ್‌ ಚೆಕ್: ಫ್ಲೇಮ್ ಟವರ್ಸ್‌ನ ಮೇಲೆ ಇಸ್ರೇಲಿ ಧ್ವಜವನ್ನು ಪ್ರದರ್ಶಿಸಲಾಗಿದೆ ಎಂದು ಹರಿದಾಡುತ್ತಿರುವ ಸುದ್ದಿ ಸುಳ್ಳು

ಫ್ಲೇಮ್ ಟವರ್ಸ್‌ನ ಮೇಲೆ ಇಸ್ರೇಲಿ ಧ್ವಜವನ್ನು ಪ್ರದರ್ಶಿಸಲಾಗಿದೆ ಎಂದು ಹರಿದಾಡುತ್ತಿರುವ ಸುದ್ದಿ ಸುಳ್ಳು

Update: 2023-10-21 13:00 GMT

ಹಠಾತ್ತಾಗಿ ಇಸ್ರೇಲ್‌ನ ಹಲವು ಪ್ರಾಂತಗಳ ಮೇಲೆ ಪ್ಯಾಲೇಸ್ತೀನ್‌ ಉಗ್ರಗಾಮಿ ಸಂಸ್ಥೆಗಳು ವೈಮಾನಿಕಾ ದಾಳಿ ನಡಿಸಿ, ಇಸ್ರೇಲ್‌ನಲ್ಲಿರುವ ಹಲವು ಅಮಾಯಕರ ಪ್ರಾಣಗಳನ್ನು ತೆಗೆದು, ತನ್ನ ಸೇಡನ್ನು ತೀರಿಸಿಕೊಂಡಿದೆ. ಕೇವಲ ಪ್ಯಾಲೇಸ್ತೀನ ಜನರನ್ನ ಮಾತ್ರ ಸೆರೆ ಹಿಡಿಯದೆ, ಪ್ಯಾಲೇಸ್ತೀನದಲ್ಲಿರುವ ಬೇರೆ ದೇಶದ ಪ್ರಜೆಗಳನ್ನೂ ಸಹ ಸೆರೆ ಹಿಡಿದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕೆಲವು ಬಳಕೆದಾರರು, ಬಾಕುವಿನಲ್ಲಿರುವ ಅಜೆರ್ಬೈಜಾನ್‌ನ ಫ್ಲೇಮ್‌ ಟವರ್ಸ್‌ನ ಮೇಲೆ ಇಸ್ರೇಲ್ಗೆ ಸಂಬಂಧಿಸಿದ ಫೋಟೋವೊಂದು ಪ್ರದರ್ಶನಗೊಂಡಿರುವುದನ್ನ ಹಲವರು ಷೇರ್‌ ಮಾಡಿದ್ದಾರೆ.


Full View


“ಇಸ್ರೇಲಿನ ಧ್ವಜವನ್ನು ರಾಜಧಾನಿ ಬಾಕುವಿನಲ್ಲಿರುವ ಫ್ಲೇಮ್‌ ಟವರ್ಸ್‌ ಮೇಲೆ ಪ್ರದರ್ಶನಗೊಂಡಿರುವುದು ನಮ್ಮೆಲ್ಲರ ಒಗ್ಗಟ್ಟಿನ ಸಂಕೇತವಾಗಿ- "ಧನ್ಯವಾದಗಳು ಅಜರ್‌ಬೈಜಾನ್ " ಎಂಬ ಶೀರ್ಷಿಕೆಯೊಂದಿಗೆ ಬಳಕೆದಾರರು ಚಿತ್ರವನ್ನು ಹಂಚಿಕೊಂಡಿದ್ದಾರೆ.

Thank you Azerbaijan – Israeli flag on buildings in the capital of Baku as a sign of solidality” ಎಂದು ಪೋಸ್ಟ್ ಮಾಡುತ್ತಿದ್ದಾರೆ.


ಫ್ಯಾಕ್ಟ್‌ ಚೆಕ್‌

ವೈರಲ್‌ ಆಗುತ್ತಿರುವ ಸುದ್ದಿ ಸುಳ್ಳು. ಬಾಕುವಿನಲ್ಲಿರುವ ಫ್ಲೇಮ್‌ ಟವರ್ಸ್‌ ಮೇಲೆ ಇಸ್ರೇಲ್‌ನ ಧ್ವಜ ಪ್ರದರ್ಶನಗೊಂಡಿಲ್ಲ. ಈ ಚಿತ್ರ 2015ರದ್ದು. ನಾವು ಗೂಗಲ್‌ನಲ್ಲಿ ರಿವರ್ಸ್‌ ಇಮೇಜ್‌ನ ಮೂಲಕ ಹುಡುಕಿದಾಗ ನಮಗೆ ಈ ಚಿತ್ರದ ಮೂಲ ಕಂಡುಬಂದಿತು. ಅಜರ್‌ಬೈಜಾನ್ ಇನ್‌ ಎಲ್.ಎ ಎಂಬ X ಖಾತೆಯಲ್ಲಿ ಈ ಚಿತ್ರವನ್ನು 2015, ಜೂನ್‌ ತಿಂಗಳಲ್ಲಿ ಇಸ್ರೇಲ್‌ನ ಧ್ವಜವನ್ನು ಬಾಕುವಿನ ಫ್ಲೇಮ್‌ ಟವರ್ಸ್‌ನ ಮೇಲ್‌ ಪ್ರದರ್ಶಿಸಲಾಗಿತ್ತು. 


ಇನ್ನು ಲಾಸ್‌ ಏಂಜಲೀಸ್‌ನಲ್ಲಿರುವ ಕಾನ್ಸುಲೇಟ್‌ ಜನರಲ್‌ ಅಜರ್‌ಬೈಜಾನ್ ಇನ್‌ ಲಾಸ್‌ ಏಂಜಲೀಸ್‌ನ ಫೇಸ್‌ಬುಕ್‌ನ ಪೇಜಿನಲ್ಲಿ “ಯುರೋಪಿಯನ್‌ ಗೇಮ್ಸ್‌ನಲ್ಲಿ ಪಾಲ್ಗೋಂಡ ಟೀಮ್‌ನ ಗೌರವಾರ್ಥವಾಗಿ, ಇಸ್ರೇಲ್‌ನ ಧ್ವಜವನ್ನು ಫ್ಲೇಮ್ಸ್‌ ಟವರ್ಸ್‌ನ ಮೇಲೆ ಪ್ರದರ್ಶಿಸಲಾಯಿತು ಎಂದು ಕ್ಯಾಪ್ಷನ್‌ ನೀಡಲಾಗಿತ್ತು.


Full View


ಇಷ್ಟೇ ಅಲ್ಲದೇ ನಾನು ಯೂಟ್ಯೂಬ್‌ನಲ್ಲೂ ಸಹ ಈ ಕುರಿತು ಏನಾದರೂ ಮಾಹಿತಿಯದೆಯಾ ಎಂದು ಕಲೆ ಹಾಕಿದಾಗ ನಮಗೆ 2015ರಲ್ಲಿ ಫ್ಲೇಮ್ಸ್‌ ಟವರ್ಸ್‌ ಬಾಕು ಆಲ್‌ ಯೂರೋಪ್‌ ಫ್ಲಾಗ್ಸ್‌ ಎಂಬ ಟೈಟಲ್ನೊಂದಿಗಿರುವ ವೀಡಿಯೋವೊಂದು ನಮಗೆ ಸಿಕ್ಕಿತು. 

Full View

ಹಾಗಾಗಿ ನಾವು ಖಚಿತಪಡಿಸಿಕೊಂಡಿದ್ದು ಏನಂದರೆ, ಇಸ್ರೇಲ್‌ ಧ್ವಜವನ್ನು ಬಾಕಿವಿನ ಫ್ಲೇಮ್‌ ಟವರ್‌ನ ಮೇಲೆ ಪ್ರದರ್ಶಿಸಿರುವುದು ಇತ್ತೀಚಿನ ವೀಡಿಯೋ ಅಥವಾ ಫೋಟೋವಲ್ಲ. 2015ರಲ್ಲಿ ಇಸ್ರೇಲ್‌ನ ಧ್ವಜವನ್ನು ಪ್ರಕಟಿಸಲಾಗಿತ್ತು. ವೈರಲ್‌ ಆಗುತ್ತಿರುವ ಸುದ್ದಿ ಸುಳ್ಳು.

Claim :  Israeli flag displayed on the illuminated Flame Towers in Baku in Azerbaijan in support of the ongoing Al-aqsa flood operation.
Claimed By :  Social Media Users
Fact Check :  Misleading
Tags:    

Similar News