ಫ್ಯಾಕ್ಟ್‌ಚೆಕ್‌: ವೈಎಸ್‌ಆರ್‌ಸಿಪಿ ನಾಯಕರು ಮತದಾನದ ವೇಳೆ ಅಳಿಸಲಾಗದ ಶಾಯಿ ಬಳಸುತ್ತಿದ್ದಾರೆ ಎಂದು ಜನಸೇನಾ ಮುಖಂಡ ನಾಗೇಂದ್ರ ಬಾಬು ಕೊನಿಡೇಲ ಆರೋಪದಲ್ಲಿ ನಿಜಾಂಶವೇನು?

ವೈಎಸ್‌ಆರ್‌ಸಿಪಿ ನಾಯಕರು ಮತದಾನದ ವೇಳೆ ಅಳಿಸಲಾಗದ ಶಾಯಿ ಬಳಸುತ್ತಿದ್ದಾರೆ ಎಂದು ಜನಸೇನಾ ಮುಖಂಡ ನಾಗೇಂದ್ರ ಬಾಬು ಕೊನಿಡೇಲ ಆರೋಪದಲ್ಲಿ ನಿಜಾಂಶವೇನು?

Update: 2024-05-20 19:44 GMT

ಆಂಧ್ರಪ್ರದೇಶದಲ್ಲಿ ನಡೆದ ಅಸೆಂಬ್ಲಿ ಚುನಾವಣೆ ಮತ್ತು ಲೋಕಸಭೆ ಸಾರ್ವತ್ರಿಕ ಚುನಾವಣೆಯ ನಾಲ್ಕನೇ ಹಂತದ ಮತದಾನವು ಮೇ 14 ರಂದು ನಡೆಯಿತು. YSRCP ಅಧ್ಯಕ್ಷ ಮತ್ತು ಹಾಲಿ ಸಿಎಂ ಜಗನ್ ಮೋಹನ್ ರೆಡ್ಡಿ ಪುಲಿವೆಂದುಲಾ ಕ್ಷೇತ್ರದಿಂದ ಸ್ಪರ್ಥಿಸಿದರು. ವಿರೋಧ ಪಕ್ಷದ ನಾಯಕ ಮತ್ತು ತೆಲುಗು ದೇಶಂ ಪಾರ್ಟಿಯ ಅಧ್ಯಕ್ಷ ನಾರಾ ಚಂದ್ರಬಾಬು ನಾಯ್ಡು ಕುಪ್ಪಂನಿಂದ ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಪಿಠಾಪುರಂ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಜನಸೇನಾ ಮುಖಂಡ ನಾಗೇಂದ್ರ ಬಾಬು ಕೊನಿಡೇಲಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮೇ 11,2024ರಂದು ಅಪ್‌ಲೋಡ್‌ ಆಗಿರುವ ವೈರಲ್‌ ವಿಡಿಯೋವಿನಲ್ಲಿ ನಾಗೇಂದ್ರ ಬಾಬು "ಮತದಾನದ ಸಮಯದಲ್ಲಿ ವೈಸಿಪಿ ಪಕ್ಷ ಮತದಾರರನ್ನು ಖರೀದಿಸಿ ಅವರಿಗೆ ಆ ಪಕ್ಷದ ಶಾಯಿಯ ಗುರುತನ್ನು ಬೆರಳಿಗೆ ಹಾಕಿದ್ದಾರೆ ಎಂದು ಜನಸೇನಾ ಪಕ್ಷದ ನಾಯಕ ನಾಗೇಂದ್ರ ಬಾಬು ಕೊನಿಡೇಲ ಆರೋಪಿಸಿದ್ದಾರೆ"

ಮೇ 11, 2024 ರಂದು, ಜನ ಸೇನಾ ಪಕ್ಷವು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮದ ಖಾತೆಗಳಲ್ಲಿ ಅದೇ ವೀಡಿಯೊವನ್ನು ಹಂಚಿಕೊಂಡಿದೆ.

Full View

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಭಾರತದ ಚುನಾವಣಾ ಆಯೋಗದಿಂದ ನೇಮಕಗೊಂಡ ಅಧಿಕಾರಿಗಳಿಗೆ ಮಾತ್ರ ಅಳಿಸಲಾಗದ ಶಾಯಿ ಬಳಸುವ ಅಧಿಕಾರವಿದೆ ಎಂದು ಆಂಧ್ರಪ್ರದೇಶದ ಮುಖ್ಯ ಚುನಾವಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ನಾವು ಗೂಗಲ್ ರಿವರ್ಸ್ ಇಮೇಜ್ ಸರ್ಚ್‌ ಮಾಡಿದಾಗ ನಮಗೆ ಮೇ 12, 2024 ರಂದು ಆಂಧ್ರಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ ನಾಗೇಂದ್ರ ಬಾಬು ಕೊನಿಡೆಲಾ ಹಂಚಿಕೊಂಡಿರುವ ವೀಡಿಯೊವಿನ ಸ್ಕ್ರೀನ್‌ಶಾಟ್‌ವೊಂದನ್ನು ನಾವು ಕಂಡಿಕೊಂಡೆವು.

ಸಿಇಓ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ವೈರಲ್‌ ಆದ ಸುದ್ದಿಯ ಕುರಿತು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು, ಹಂಚಿಕೊಂಡ ಪೋಸ್ಟ್‌ಗೆ ಶೀರ್ಷಿಕೆಯಾಗಿ,"ಸುಳ್ಳು ಮಾಹಿತಿಯನ್ನು ನಂಬಬೇಡಿ ಹಾಗೂ ಶೇರ್‌ ಮಾಡಬೇಡಿ ಎಂದು ಪಿಠಾಪುರಂ ವಿಧಾನಸಭಾ ಕ್ಷೇತ್ರದ ಜಂಟಿ ಕಲೆಕ್ಟರ್ ಮತ್ತು ಚುನಾವಣಾಧಿಕಾರಿ ವಿಡಿಯೋವನ್ನು ಮಾಡಿ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದರು.

ವೈರಲ್‌ ವಿಡಿಯೋವಿಗೆ ಸಂಬಂಧಿಸಿದ ಕೆಲವು ಕೀವರ್ಡ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದಾಗ ನಮಗೆ ಮೇ,13,2024ರಂದು ಟೈಮ್ಸ್‌ ಆಫ್‌ ಇಂಡಿಯಾ ಬರೆದಿರುವ ವರದಿಯೊಂದು ಕಾಣಿಸಿತು. ಚುನಾವಣಾ ಆಯೋಗವು ಚುನಾವಣಾ ಶಾಯಿಯನ್ನು ದುರ್ಬಳಿಕೆ ಮಾಡಿಕೊಳ್ಳುತ್ತಿಲ್ಲ ಎಂದು ಸ್ಪಷ್ಟನೆ ನೀಡಿ ವಿಡಿಯೋವನ್ನು ಹಂಚಿಕೊಂಡಿದ್ದನ್ನು ನಾವು ಕಂಡೆವು.

ತೆಲುಗು ವೋಕ್ಸ್ ವರದಿಯ ಪ್ರಕಾರ "ನಾಗಬಾಬು ಅವರ ಹೇಳಿಕೆಗೆ ಸಿಇಓ ಸ್ಪಷ್ಟನೆ ನೀಡಿದೆ "

ಹೀಗಾಗಿ, ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಭಾರತದ ಚುನಾವಣಾ ಆಯೋಗದಿಂದ ನೇಮಕಗೊಂಡ ಅಧಿಕಾರಿಗಳಿಗೆ ಮಾತ್ರ ಅಳಿಸಲಾಗದ ಶಾಯಿ ಬಳಸುವ ಅಧಿಕಾರವಿದೆ ಎಂದು ಆಂಧ್ರಪ್ರದೇಶದ ಮುಖ್ಯ ಚುನಾವಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

Claim :  ವೈಎಸ್‌ಆರ್‌ಸಿಪಿ ಪಕ್ಷದ ನಾಯಕರು ಮತದಾನದ ವೇಳೆ ಅಳಿಸಲಾಗದ ಶಾಯಿ ಬಳಸುತ್ತಿದ್ದಾರೆ ಎಂದು ಜನಸೇನಾ ಮುಖಂಡ ನಾಗೇಂದ್ರ ಬಾಬು ಕೊನಿಡೇಲ ಮಾಡಿರುವ ಆರೋಪದಲ್ಲಿ ಅಸಲಿಯತ್ತೇನು?
Claimed By :  Social Media Users
Fact Check :  False
Tags:    

Similar News