ಫ್ಯಾಕ್ಟ್‌ಚೆಕ್: ಎಂಐಎಂಗೆ ಮೋದಿ ಬೆಂಬಲ ವ್ಯಕ್ತಪಡಿಸಿದ್ದರಾ?
ಎಂಐಎಂಗೆ ಮೋದಿ ಬೆಂಬಲ ವ್ಯಕ್ತಪಡಿಸಿದ್ದರಾ?
ಬಿಜೆಪಿ ನಾಯಕ ನರೇಂದ್ರ ಮೋದಿ ಎಐಎಂಐಎಂ (ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್) ಅನ್ನು ಬೆಂಬಲಿಸುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ 26 ಸೆಕೆಂಡುಗಳ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮೋದಿ ತನ್ನ ಭಾಷಣದಲ್ಲಿ “Telangana is saying Congress nakko BRS nakko, BJP nakko, MIM ko ich vote denge”. In the end, he also said: “MIM ko hi jitayenge Bahoot Bahoot Dhanyabad”. ಎಂದು ಹೇಳಿರುವುದನ್ನು ನಾವು ನೋಡಬಹುದು.
ಕನ್ನಡಕ್ಕೆ ಅನುವಾದಿಸಿದಾಗ: "ತೆಲಂಗಾಣದ ಜನತೆ ಕಾಂಗ್ರೆಸ್ ಪಕ್ಷವನ್ನು ಬೇಡ, ಬಿಜೆಪಿ (ಭಾರತೀಯ ಜನತಾ ಪಾರ್ಟಿ), ಬಿಆರ್‌ಎಸ್ (ಭಾರತ್ ರಾಷ್ಟ್ರ ಸಮಿತಿ) ಅಲ್ಲ, ಎಂಐಎಂಗೆ ಮತ ನೀಡಿ ಎಂದು ಹೇಳಿದ್ದಾರೆ. ನಾವು ಎಂಐಎಂ ಗೆಲ್ಲುವಂತೆ ಮಾಡುತ್ತೇವೆ" ಎಂದು ಹೇಳಿದ್ದಾರೆ. ವೀಡಿಯೊದಲ್ಲಿ, “Modi Ne Hyderabad Me AIMIM ko Kiya Support” ಕನ್ನಡದಲ್ಲಿ, ಇದರರ್ಥ "ಮೋದಿ ಹೈದರಾಬಾದ್‌ನಲ್ಲಿ ಎಐಎಂಐಎಂ ಅನ್ನು ಬೆಂಬಲಿಸಿದ್ದಾರೆ" ಎಂದು ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಬಳಕೆದಾರರು ವೀಡಿಯೊವನ್ನು ಹಂಚಿಕೊಂಡಿದ್ದಾರೆ
*Modi ne Hyderabad me AIMIM ko kiya Support*#Aimim #Asaduddinowaisi #NarendraModi #BJP #mim #voteforkite #patang #loksabhaelection #hyderabad #Telangana pic.twitter.com/vlb9IOOVMQ
— Mohammed masii (@MdMasi13) May 10, 2024
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ನರೇಂದ್ರ ಮೋದಿಯವರ ವಿಡಿಯೋವನ್ನು ಎಡಿಟ್ ಮಾಡಲಾಗಿದೆ. ಮೂಲ ವಿಡಿಯೋದಲ್ಲಿ ಮೋದಿ ಬಿಜೆಪಿಯನ್ನು ಬೆಂಬಲಿಸಿ ಮಾತನಾಡಲಿಲ್ಲ. ವಿಡಿಯೋವಿನ ಆಡಿಯೋವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ.
ನಾವು ಹೈದರಾಬಾದ್‌ನಲ್ಲಿ ಪ್ರಧಾನಿ ಮೋದಿಯವರ ಸಾರ್ವಜನಿಕ ಸಭೆಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹುಡುಕಾಡಿದಾಗ, ನಮಗೆ ನರೇಂದ್ರ ಮೋದಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ಸ್ಟ್ರೀಮ್ ಕಂಡುಬಂದಿತು.
ಕ್ಲಿಪ್‌ನ ಮೂಲ ಆವೃತ್ತಿಯ 3.26 ಸಮಯ ಸ್ಟ್ಯಾಂಪ್‌ನಲ್ಲಿ ವೈರಲ್ ವಿಡಿಯೋವಿನ ಕ್ಲಿಪ್‌ನ್ನು ಕಂಡುಕೊಂಡೆವು. ಮೋದಿಯವರು ತಮ್ಮ ಭಾಷಣದಲ್ಲಿ “Congress Nakko, BRS Nakko, MIM Nakko, BJP ko ich vote denge” ಎಂದು ಮೂಲ ವಿಡಿಯೋದಲ್ಲಿ ಹೇಳುವುದನ್ನು ನಾವು ನೋಡಬಹುದು.
ಹುಡುಕಾಟದ ಸಮಯದಲ್ಲಿ, ನಾವು ಮೋದಿಯ ಭಾಷಣ ಕುರಿತ ವರದಿಯನ್ನು www.narendramodi.in ನಲ್ಲಿರುವುದನ್ನು ಕಂಡುಕೊಂಡೆವು.
ಮೇ 10, 2024 ರಂದು, ದಿ ಸ್ಟೇಟ್ಸ್‌ಮನ್ ಯೂಟ್ಯೂಬ್ ಚಾನೆಲ್‌ನಲ್ಲಿ “Congress agenda anti-development and anti-national: PM in Telangana". In paragraph number 9, The Statesman published Modi speech ಮೋದಿ ಭಾಷಣವನ್ನು ಪ್ರಕಟಿಸಿದೆ.
ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ಸಾಭೀತಾಗಿದೆ. ವೈರಲ್ ಆದ ನರೇಂದ್ರ ಮೋದಿಯವರ ವಿಡಿಯೋವನ್ನು ಎಡಿಟ್ ಮಾಡಲಾಗಿದೆ. ಮೂಲ ವಿಡಿಯೋದಲ್ಲಿ ಮೋದಿ ಬಿಜೆಪಿಯನ್ನು ಬೆಂಬಲಿಸಿ ಮಾತನಾಡಲಿಲ್ಲ. ವಿಡಿಯೋವಿನ ಆಡಿಯೋವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ.