ಫ್ಯಾಕ್ಟ್‌ಚೆಕ್: ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮೋದಿ ಹೆಸರನ್ನು ಕೂಗಲಾಗಿದೆ ಎಂಬ ಸುದ್ದಿ ವೈರಲ್
ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮೋದಿ ಹೆಸರನ್ನು ಕೂಗಲಾಗಿದೆ ಎಂಬ ಸುದ್ದಿ ವೈರಲ್
ಭೂಪ್ರದೇಶದಲ್ಲೇ ಅತಿದೊಡ್ಡ ಭೂ ಪ್ರಾಂತವಿರುವುದು ಪಾಕಿಸ್ತಾನದ ಬಲೂಚಿಸ್ತಾನದಲ್ಲಿ. ಬಲುಚಿಸ್ತಾನ ಪಾಕಿಸ್ತಾನದಲ್ಲಿ 44%ನಷ್ಟಿದೆ. ಬಲೂಚಿಸ್ತಾನದಲ್ಲಿ ಹೆಚ್ಚಿನ ಪ್ರಾದೇಶಿಕ ಪ್ರಾಂತ ಉಗ್ರಗಾಮಿ ಸಂಸ್ಥೆಗಳಿಗೆ ಉಪಯೋಗಿಸುತ್ತಿದ್ದಾರೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.
ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯ ಸಂಸತ್ತಿನ ಅಧಿವೇಶನದಲ್ಲಿ ಸದಸ್ಯರು ಮೋದಿ ಪರ ಘೋಷಣೆಗಳನ್ನು ಕೂಗುತ್ತಿದ್ದರು ಎಂಬ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತೆಲುಗಿನಲ್ಲಿ ವೀಡಿಯೋವಿಗೆ ಶೀರ್ಷಿಕೆಯನ್ನು ಕೊಟ್ಟಿದ್ದರು. ಶೀರ್ಷಿಕೆಯಲ್ಲಿ "“పాకిస్థాన్ పార్లమెంట్ లో మోదీ మోదీ మోదీ మోదీ... నినాదాలు చేసిన బలూఛిస్తాన్ ఎంపీలు. పాకిస్తాన్ పార్లమెంట్ లో మారుమోగిన మోడీ మోడీ నినాదం చేసిన బలోచిస్తాన్ ఎంపీలు.. పాకిస్తాన్ నుండి వేరుపడుతాం.. మోడీ బలోచిస్తాన్ ను పాకిస్తాన్ నుండి మమ్మల్ని వేరు చేయాలని వేడుకోలు. మన శత్రుదేశం అయిన పాకిస్థాన్ కూడ. మన మోడీ గారిని పొగడుతూ ఉoటే ఇక్కడున్న కొందరు దళారి, బ్రోకర్, చెంచా, లోఫర్ గాళ్లకు నరేంద్రుని గొప్పతనం, నిజాయితీ తెలియడం లేదు .... జై శ్రీరామ్” ಎಂದು ಶೀರ್ಷಿಕೆಯನ್ನು ನೀಡಿದ್ದರು.
ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಿದೆವು "ಬಲುಚಿಸ್ತಾನದ ಸಂಸದರು ಪಾಕಿಸ್ತಾನದ ಅಸೆಂಬ್ಲಿಯಲ್ಲಿ ಮೋದಿ ಪರ ಘೋಷಣೆಯನ್ನು ಕೂಗುತ್ತಿದ್ದಾರೆ. ಮೋದಿಯನ್ನು ಶತ್ರು ದೇಶವಾದ ಪಾಕಿಸ್ತಾನದ ಜನರು ಹಾಡಿ ಕೊಂಡಾಡುತ್ತಿದ್ದಾರೆ. ಆದರೆ ನಮ್ಮ ಭಾರತ ದೇಶದಲ್ಲಿ ಮೋದಿಗೆ ಯಾವುದೇ ಗೌರವ ನೀಡುವುದಿಲ್ಲ. ನರೇಂದ್ರ ಮೋದಿಯ ಶ್ರೇಷ್ಟತೆಯನ್ನು ಮತ್ತು ಪ್ರಾಮಾಣಿಕತೆಯನ್ನು ತಿಳಿದುಕೊಂಡಿಲ್ಲ. ಜೈ ಶ್ರೀರಾಮ್" ಎಂದು ಶೀರ್ಷಿಕೆಯನ್ನು ನೀಡಿದ್ದರು.
Balochistan MPs chanted Modi Modi inside Pakistan Parliament .
— Sistla Sujatha (@sistla_sujatha) November 1, 2023
పాకిస్థాన్ పార్లమెంట్ లో మోదీ మోదీ మోదీ మోదీ... నినాదాలు చేసిన బలూఛిస్తాన్ ఎంపీలు....
పాకిస్తాన్ నుండి వేర్పడుతాం.. మోడీ బలోచిస్తాన్ ను పాకిస్తాన్ నుండి వేర్పరుచాలని వేడుకోలు.... pic.twitter.com/PcPGCd4ZtG
ಫ್ಯಾಕ್ಟ್‌ಚೆಕ್
ವೈರಲ್ ಆದ ವೀಡಿಯೋ ಇತ್ತೀಚಿನದಲ್ಲ 2020ರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೋದಲ್ಲಿ ಕಾಣುವ ಪ್ರಮುಖ ಫ್ರೇಮ್‌ಗಳನ್ನು ಬಳಸಿ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ ನಮಗೆ 92 ನ್ಯೂಸ್ HD ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ʼಶಾ ಮೆಹಬೂಬ್ ಖುರೇಷಿ ಸ್ಪೀಚ್ ಇನ್ ನ್ಯಾಷನಲ್ ಅಸೆಂಬ್ಲಿʼ ಎಂಬ ಶೀರ್ಷಿಕೆಯಡಿಯಲ್ಲಿ ವೀಡಿಯೋವೊಂದು ಅಪ್‌ಲೋಡ್ ಆಗಿತ್ತು.
ಯೂಟ್ಯೂಬ್‌ನಲ್ಲಿದ್ದ ವೀಡಿಯೋದಲ್ಲಿ ಸ್ಪೀಕರ್ ಮತ್ತು ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿರ ಮತದಾನ ನಡೆಯುತ್ತಿತ್ತು. ವೋಟಿಂಗ್ ಸಮಯದಲ್ಲಿ ಸದಸ್ಯರು "ವೋಟಿಂಗ್ ವೋಟಿಂಗ್" ಎಂದು ಕೂಗುತ್ತಿರುವುದು ಸ್ಪಷ್ಟವಾಗಿ ಕೇಳಬಹುದು.
BBC.com ವರದಿಯ ಪ್ರಕಾರ ಪಾಕಿಸ್ತಾನದ ವಿರೋಧ ಪಕ್ಷದ ನಾಯಕ ಖ್ವಾಜಾ ಆಸಿಫ್ ಹಾಗೂ ಇತರ ಪಾರ್ಲಿಮೆಂಟ್‌ನ ಸಂಸದರು, ಪ್ಯಾರಿಸ್‌ನಲ್ಲಿ ಶಿಕ್ಷಕರೊಬ್ಬರ ಹತ್ಯೆಗೆ ಕಾರಣವಾದ ಪ್ರವಾದಿ ಮೊಹಮ್ಮದ್‌ನ ವ್ಯಂಗ್ಯಚಿತ್ರಗಳನ್ನು ಫ್ರಾನ್ಸ್‌ನಲ್ಲಿ ಪ್ರಕಟಿಸುವುದನ್ನು ಖಂಡಿಸಿ ಮತವನ್ನು ಚಲಾಯಿಸಲು ಒತ್ತಾಯಿಸಿದರು. ಸದನದಲ್ಲಿ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಮಾತನಾಡಲು ಅವಕಾಶ ನೀಡದೆ "ವೋಟಿಂಗ್ ವೋಟಿಂಗ್" ಎಂದು ಘೋಷಣೆಯನ್ನು ಕೂಗಲು ಪ್ರಾರಂಭಿಸಿದ್ದರು.
ಇಮ್ರಾನ್ ಖಾನ್‌ಗೆ ಮುಜಗರ ಮಾಡಲು ಎರಡು ನಿಮಿಷಗಳ ಕಿರು ವೀಡಿಯೋವಗೆ ಬೇರೆ ಆಡಿಯೋ ಹಾಕಿ ವೈರಲ್ ಮಾಡಿದ್ದರು. ವೈರಲ್ ಆದ ವೀಡಿಯೋದಲ್ಲಿ ಪಾಕಿಸ್ತಾನ ಸಂಸತ್ತಿನ ನಾಯಕರು ಮೋದಿ ಪರ ಘೋಷಣೆಯನ್ನು ಕೂಗುತ್ತಿರುವ ವೀಡಿಯೋವನ್ನು ಮಾಧ್ಯಮಗಳು ವರದಿ ಮಾಡಿತ್ತು.
ಹಾಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ನಿಜಾಂಶವಿಲ್ಲ. ಪಾಕಿಸ್ತಾನದ ಸಂಸದ್‌ನಲ್ಲಿ ಸದಸ್ಯರು ಮೋದಿ ಪರ ಘೋಷಣೆಯನ್ನು ಕೂಗಲಿಲ್ಲ. ವೋಟಿಂಗ್ ವೋಟಿಂಗ್ ಎಂದು ಹೇಳುವ ಆಡಿಯೋವನ್ನು ತಿರಚಿ ಮೋದಿ ಮೋದಿ ಎಂದು ಮಾಡಲಾಗಿತ್ತು.