ಫ್ಯಾಕ್ಟ್‌ಚೆಕ್: ಪ್ರಧಾನಿ ನರೇಂದ್ರ ಮೋದಿ ಕೈಗಳ ಮೂಲಕ ನಡೆಯುತ್ತಿರುವ ವಿಡಿಯೋವಿನ ಸತ್ಯಾಂಶವೇನು?
ಪ್ರಧಾನಿ ನರೇಂದ್ರ ಮೋದಿ ಕೈಗಳ ಮೂಲಕ ನಡೆಯುತ್ತಿರುವ ವಿಡಿಯೋವಿನ ಸತ್ಯಾಂಶವೇನು?
ಇತ್ತೀಚಿಗೆ 3 ನಿಮಿಷ, 47 ಸೆಕೆಂಡ್ ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋವಿನಲ್ಲಿ ಒಬ್ಬ ವ್ಯಕ್ತಿ ತನ್ನ ಕೈಗಳ ಮೂಲಕ ದೇವರ ಗರ್ಭಗುಡಿಯನ್ನು ಪ್ರದರ್ಶನೆ ಮಾಡಿತ್ತಿರುವುದನ್ನು ನೋಡಬಹುದು. ಈ ವಿಡಿಯೋವನ್ನು ಸಾಕಷ್ಟು ಸಾಮಾಜಿಕ ಮಾಧ್ಯಮದ ಬಳಕೆದಾರರು ತಮ್ಮ ಖಾತೆಗಳಲ್ಲಿ ಹಂಚಿಕೊಂಡು ವಿಡಿಯೋವಿಗೆ ಶೀರ್ಷಿಕೆಯಾಗಿ "ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಬಾಲ್ಯದಲ್ಲಿ ಕೈಗಳ ಮೂಲಕ ದೇವರ ದರ್ಶನ ಮಾಡಿದ್ದಾರೆ" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
ಮತ್ತಷ್ಟು ಬಳಕೆದಾರರು, "ನರೇಂದ್ರ ಮೋದಿಯವರು ಯೋಗ ಮಾಡುತ್ತಿರುವ ಅಪರೂಪದ ವಿಡಿಯೋವಿದು" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
ಮತ್ತೊಬ್ಬರು, "ಯಾರಿಗೆ ಗೊತ್ತು ಇಲ್ಲಿ ಕೈಗಳ ಮೂಲಕ ದೇವರ ದರ್ಶನ ಮಾಡುತ್ತಿರುವ ವ್ಯಕ್ತಿ ಮುಂದೊಂದು ದಿನ ಭಾರತದ ಪ್ರಧಾನಿಯಾಗುತ್ತಾರೆ ಎಂದು ಯಾರಿಗೂ ಗೊತ್ತಿರಲಿಲ್ಲ" ಎಂದು ಪೋಸ್ಟ್ ಮಾಡಿದ್ದರು.
जब ये वीडियो बना था तो यह सोचा भी नहीं होगा कि यह योगी एक दिन देश का प्रधानमंत्री बनेगा।ऐसे दिव्य आत्मा को। बर्फबारी के बीच में हाथों के बल उल्टा चलकर केदारनाथ के परिक्रमा करते हुए। ऐसी आत्माए जब जब भी धरती पर आई है तो बहुत लोगों ने उनको गालियां दी। लेकिन आज उनकी पूजा हो रही है। pic.twitter.com/yugcSUf3SH
— Braham Jyot Satti ( मोदी का परिवार ) (@BrahamSitu) March 1, 2024
👆👆उम्र छब्बीस की थी, जब रिषिकेश स्थित साधु दयानंद जी के मठ में योग विद्या ग्रहण किया। पहचानिए इस तपस्वी को आज हमारे प्रधानमंत्री हैं। एक दुर्लभ विडियो मोदीजी का 👌👍 pic.twitter.com/tpt9ZC3BV6
— MissMatch! (@ShimlaHelpline) July 11, 2022
ऊँच-नीच में भेद नहीं करते हम हिंदुस्तानी, हमारी मातृ भाषा हिंदी में कैपिटल या स्माल लेटर्स नहीं होते।
— बिजेंद्र सिंह चौधरी 💚मोदी का परिवार❤️🕉️ (@Krishna__Bhakt_) October 3, 2020
हर अक्षर प्रेम से निर्मित है।#जय_माँ_भारती #जय_जवान_जय_किसान #हर_घर_हों_बाल_संस्कार #जय_जय_श्री_राम 🚩🚩 pic.twitter.com/sLjeCRJ4Hd
ಫ್ಯಾಕ್ಟ್‌ಚೆಕ್
ವೈರಲ್ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ, ವೈರಲ್ ಆದ ವಿಡಿಯೋವಿನಲ್ಲಿ ಕಾಣುವ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿಯವರಲ್ಲ.
ವೈರಲ್ ಆದ ವಿಡಿಯೋವಿನ ಸತ್ಯಾಂಶವನ್ನು ತಿಳಿಯಲು ನಾವು ವೈರಲ್ ಆದ ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಫ್ರೇಮ್‌ಗಳನ್ನು ಉಪಯೋಗಿಸಿಕೊಂಡು ಗೂಗಲ್ ರಿವರ್ಸ್ ಇಮೇಜ್ ಮೂಲಕ ಹುಡುಕಾಡಿದಾಗ ನಮಗೆ ಯೋಗಿ ನರ್ಮದಾನಾಥ್ ಫೇಸ್‌ಬುಕ್ ಖಾತೆಯಲ್ಲಿ ಜೂನ್, 21,2021ರಂದು ಅಪ್‌ಲೋಡ್ ಮಾಡಿದ ವಿಡಿಯೋವೊಂದು ಕಂಡೆವು. ವಿಡಿಯೋವಿಗೆ ಶೀರ್ಷಿಕೆಯಾಗಿ “Param Yogi Mahadev Kedareshwar’s Shri Charan Acharya Shri Santosh Trivedi ji circumambulating Kedarnath Jyotirlinga temple with his yoga” ಎಂದು ನೀಡಿ ಪೋಸ್ಟ್ ಮಾಡಿದ್ದರು. ಪರಮ ಯೋಗಿ ಮಹಾದೇವ ಕೇದಾರೇಶ್ವರ ಶ್ರೀ ಚರಣ್ ಆಚಾರ್ಯ ಶ್ರೀ ಸಂತೋಷ ತ್ರಿವೇದಿ ಜೀಯವರು ತಮ್ಮ ಕೈಗಳ ಮೂಲಕ ಪ್ರದರ್ಶನೆ ಮಾಡುತ್ತಿರುವ ವಿಡಿಯೋವಿದು ಎಂದು ಪೋಸ್ಟ್ ಮಾಡಿದ್ದರು.
ವಿಡಿಯೋವನ್ನು ತೀಕ್ಷ್ಣವಾಗಿ ಗಮನಿಸಿದರೆ, ವಿಡಿಯೋವಿನಲ್ಲಿ ಕಾಣುವ ಹಿಮಪಾತ ನೈಸರ್ಗಿಕವಾಗಿಲ್ಲ, ಅಸ್ವಾಭಾವಿಕವಾಗಿ ಕಾಣುತ್ತಿದೆ. ನೀಲಿ ಫಿಲ್ಟರ್ ಉಪಯೋಗಿಸಿದಂತೆ ಕಾಣುತ್ತಿದೆ.
ಮತ್ತಷ್ಟು ಈ ವಿಡಿಯೋವಿನ ಕುರಿತು ಹುಡುಕಾಡಿದಾಗ ನಮಗೆ ಮಾರ್ಚ್ 22,2024ರಂದು ಎಎನ್‌ಐ ಪ್ರಕಟಿಸಿದ್ದ ಲೇಖನವೊಂದನ್ನು ನಾವು ಕಂಡುಕೊಂಡೆವು.
ಅಷ್ಟೇ ಅಲ್ಲ ನಾವು ಆಚಾರ್ಯ ಶ್ರೀ ಸಂತೋಷ ತ್ರಿವೇದಿ ಜೀ ಎಂಬ ಕೀವರ್ಡ್‌ನ್ನು ಉಪಯೋಗಿಸಿ ಗೂಗಲ್‌ನಲ್ಲಿ ಹುಡುಕಾಡಿದಾಗ ನಮಗೆ ಕೆಲವಷ್ಟು ಫಲಿತಾಂಶಗಳು ಕಂಡೆವು.
ದಿ ಕಮ್ಯೂನಿಮಾಗ್ ವರದಿಯ ಪ್ರಕಾರ "ಕೇದಾರನಾಥ ದೇವಾಲಯದ ಅರ್ಚಕರಾದ, ಆಚಾರ್ಯ ಶ್ರೀ ಸಂತೋಷ ತ್ರಿವೇದಿ ಜೀಯವರು ದೇವಸ್ಥಾನವನ್ನು ಕೈಗಳಲ್ಲಿ ಸುತ್ತುತ್ತಿದ್ದಾರೆ" ಎಂದು ಬರೆದು ಪೋಸ್ಟ್ ಮಾಡಿದ್ದರು.
"ಶ್ರೀ ಕೇದಾರ್ 360 ಟ್ರಸ್ಟ್" ಎಂಬ ಎಕ್ಸ್ ಖಾತೆದಾರ ಜೂನ್ 21, 2021 ರಂದು ವೈರಲ್ ಆದ ವೀಡಿಯೊವನ್ನು ಹಂಚಿಕೊಂಡು ಯೋಗದಲ್ಲಿ ನೈಪುಣ್ಯತೆ ಹೊಂದಿರುವ ಆಚಾರ್ಯ ಶ್ರೀ ಸಂತೋಷ ತ್ರಿವೇದಿ ಅವರು ಕೇದಾರನಾಥ ದೇವಸ್ಥಾನದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಕೈಗಳ ಮೂಲಕ ನಡೆಯುವುದನ್ನು ನೋಡಬಹುದು ಎಂಬ ಶೀರ್ಷಿಕೆಯೊಂದಿಗೆ ವಿಡಿಯೊವನ್ನು ಹಂಚಿಕೊಂಡಿದ್ದರು.
Teerth Purohit 'Acharya Shri Santosh Trivedi' celebrating international Yog Day at Kedarnath Temple. The skill and competency Own by Shri Acharya ji is exemplary and motivates many people across the globe.
— Shri Kedar 360 Trust (@Kedar360Purohit) June 21, 2021
Jai Shri Kedarnath@UN @UNinIndia @narendramodi#kedarnath #YogaDay pic.twitter.com/B7d25Owrud
ಹೀಗಾಗಿ ವೈರಲ್ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂವಿಲ್ಲ ಎಂದು ಸಾಭೀತಾಗಿದೆ. ವೈರಲ್ ಆದ ವಿಡಿಯೋ ಪ್ರಧಾನಿ ನರೇಂದ್ರ ಮೋದಿಯವರದ್ದಲ್ಲ. ಕೇದಾರನಾಥ ದೇವಾಲಯದ ಅರ್ಚಕ ಆಚಾರ್ಯ ಸಂತೋಷ್ ತ್ರಿವೇದಿ 2021ರ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ತಮ್ಮ ಕೈಗಳ ಮೂಲಕ ದೇವಸ್ಥಾನವನ್ನು ಪ್ರದರ್ಶನ ಮಾಡಿದ್ದ ವೀಡಿಯೋವದು.