ಫ್ಯಾಕ್ಟ್‌ಚೆಕ್‌: ಗುಜರಾತ್‌ನಲ್ಲಿ ಗರ್ಬಾ ಮಾಡುತ್ತಿದ್ದ ಮಹಿಳೆಯರ ಮೇಲೆ ಮುಸ್ಲಿಂ ಯುವಕರು ಕಲ್ಲು ತೂರಾಟ ಮಾಡಿದ್ದಾರೆಂದು ಹಳೆಯ ವಿಡಿಯೋ ಹಂಚಿಕೆ

ಗುಜರಾತ್‌ನಲ್ಲಿ ಗರ್ಬಾ ಮಾಡುತ್ತಿದ್ದ ಮಹಿಳೆಯರ ಮೇಲೆ ಮುಸ್ಲಿಂ ಯುವಕರು ಕಲ್ಲು ತೂರಾಟ ಮಾಡಿದ್ದಾರೆಂದು ಹಳೆಯ ವಿಡಿಯೋ ಹಂಚಿಕೆ

Update: 2024-10-19 05:00 GMT

ಇತ್ತೀಚಿಗೆ ದೇಶದಾದ್ಯಂತ ನವರಾತ್ರಿ ಸಂಭ್ರಮ ಮನೆ ಮಾಡಿತ್ತು. ನವರಾತ್ರಿಯಲ್ಲಿ ದುರ್ಗಾ ಪೂಜೆಯ ಜೊತೆಗೆ ದಾಂಡಿಯಾ, ಗರ್ಬಾ ನೃತ್ಯ ಕಾರ್ಯಕ್ರಮಗಲನ್ನು ಆಯೋಜಿಸಲಾಗುತ್ತದೆ. ನವರಾತ್ರಿ ಎಂದ ತಕ್ಷಣ ನಮಗೆ ಮೊದಲು ನೆನಪಾಗೋದು ಗುಜರಾತಿನ ಗರ್ಬಾ. ನವರಾತ್ರಿಯ ಒಂಭತ್ತು ದಿನವೂ ಗರ್ಬಾ ನಡೆಯುತ್ತದೆ. ಗುಜರಾತಿನ ರಾಜಧಾನಿ ಅಹಮದಾಬಾದ್ ಪೂರ್ತಿ ಬಣ್ಣ ಬಣ್ಣ ರಂಗುಗಳಿಂದ ಕಂಗೊಳಿಸುತ್ತದೆ. ಸಣ್ಣ ಮಕ್ಕಳಿಂದ ವೃದ್ಧರವರೆಗೂ ಪ್ರತಿಯೊಬ್ಬರೂ ಈ ಹಬ್ಬದಲ್ಲಿ ಪಾಲ್ಗೊಂಡು ಗರ್ಬಾದಲ್ಲಿ ಕುಣಿದು ಕುಪ್ಪಳಿಸ್ತಾರೆ.

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಗರ್ಬಾಗೆ ಸಂಬಂಧಿಸಿದ ವಿಡಿಯೋವೊಂದು ಹರಿದಾಡುತ್ತಿದೆ. ಒಂದು ನಿಮಿಷ ಆರು ಸೆಕೆಂಡುಗಳ ವಿಡಿಯೋವಿನಲ್ಲಿ ಪೊಲೀಸರು ಕೆಲವರನ್ನು ಕಂಬಕ್ಕೆ ಕಟ್ಟಿ ಹೊಡೆಯುವುದನ್ನು ಕಾಣಬಹುದು. ವಿಡಿಯೋವಿಗೆ ಶೀರ್ಷಿಕೆಯಾಗಿ "ಗುಜರಾತ್ ನಲ್ಲಿ ಗರ್ಬಾ ನೃತ್ಯ ಯಾತ್ರೆ ನಡೆಯುವಾಗ ಕಲ್ಲು ಎಸೆದ ಜಿಹಾದಿಗಳಿಗೆ ಅರಬ್ ಮಾದರಿಯಲ್ಲಿ ಸಾರ್ವಜನಿಕರ ಮದ್ಯೆ ಲಾಠಿ ರುಚಿ ತೋರಿಸಿದ ಗುಜರಾತಿ ಪೊಲೀಸರು" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಕೃಷ್ಣ ಪ್ರೇಮಿ ಎಂಬ ಎಕ್ಸ್‌ ಖಾತೆದಾರ ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದಾ


ನಂದ್‌ಕಿಶೋರ್‌ ಯಾದವ್‌ ಎಂಬ ಎಕ್ಸ್‌ ಖಾತೆದಾರ "महिलाओं पर मस्जिद से हुए पथराव में कुछ महिलाएं घायल हो गईं। पुलिस ने सख्ती दिखाते हुए उपद्रवियों को सही सबक सिखाया। ये गुजरात है, यहाँ कानून का पालन होगा, न कि बंगाल या तेलंगाना जैसी छूट! अब देखना है और कितनों के पिछवाड़े *लाल* होते हैं! " ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ಕೆಲವರು ಮಸೀದಿಯಿಂದ ಮಹಿಳೆಯರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟದಲ್ಲಿ ಮಹಿಳೆಯರು ಗಾಯಗೊಂಡಿದ್ದಾರೆ. ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳಿಗೆ ಪೊಲೀಸರು ತಕ್ಕ ಪಾಠ ಕಲಿಸಿದ್ದಾರೆ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ʼಖಬರ್‌ ಪರ್‌ ನಜರ್‌ʼ ಎಂಬ ಯೂಟ್ಯೂಬ್‌ ಖಾತೆಯಲ್ಲಿ "गरबा नृत्य कर रही महिलाओं पर पत्थर बाज को कैसे सबक सिखाया पुलिस ने देखे" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ಕಾಣಬಹುದು.

Full View

Full View 

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್‌ ಆದ ವಿಡಿಯೋ ಇತ್ತಿಚಿನದಲ್ಲ. 2022ರದ್ದು. ಗುಜರಾತ್‌ನಲ್ಲಿ ನಡೆದ ಗರ್ಬಾ ಕಾರ್ಯಕ್ರಮದಲ್ಲಿ ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳಿಗೆ ಪೊಲೀಸರು ಥಳಿಸಿದ ವಿಡಿಯೋವದು.

ನಾವು ವೈರಲ್‌ ಆದ ಸುದ್ದಿಯಲ್ಲಿರುವ ಸತ್ಯಾಸತ್ಯತೆಯನ್ನು ತಿಳಿಯಲು ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಫ್ರೇಮ್‌ಗಳನ್ನು ಬಳಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಎನ್‌ಡಿಟಿವಿ "Muslims Boycott polls In Gujarath Villaģe Site Of public Flogging By Cops" ಎಂಬ ಶೀರ್ಷಿಕೆಯೊಂದಿಗೆ ಪ್ರಚರಿಸಿದ ವರದಿಯೊಂದು ಕಂಡಬಂದಿತು. ವರದಿಯಲ್ಲಿ "2022ರಲ್ಲಿ ಗುಜರಾತ್‌ನ ಉಂಧೇಲಾ ಗ್ರಾಮದಲ್ಲಿ ಮುಸ್ಲಿಮರು ಗುಜರಾತ್‌ ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ನವರಾತ್ರಿಯ ಗಾರ್ಬಾ ಕಾರ್ಯಕ್ರಮದಲ್ಲಿ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಕೆಲವು ಮುಸ್ಲಿಂ ಯುವಕರನ್ನು ಕಂಬಕ್ಕೆ ಕಟ್ಟಿ ಪೊಲೀಸರು ಥಳಿಸಿದ್ದಾರೆ" ಎಂದು ವರದಿಯಾಗಿರುವುದನ್ನು ನಾವು ಗಮನಿಸಬಹುದು.

ಅಕ್ಟೋಬರ್‌ 04,2022ರಂದು ʼಮಝೀದ್‌ ಫ್ರೀಮಾನ್‌ʼ ಎಂಬ ಎಕ್ಸ್‌ ಖಾತೆದಾರ "Muslims flogged publicly in Kheda, India IN. In BJP ruled #Gujarat, 9 Muslim men who were allegedly arrested for throwing stones at a Garba event were tied to a pole & publicly flogged with a cane by the Police while the crowd chanted “Hail Mother India” slogans. @HindutvaWatchIn ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ಬಿಜೆಪಿ ಆಡಳಿತ ಗುಜರಾತ್‌ನಲ್ಲಿ, ಗರ್ಬಾ ಕಾರ್ಯಕ್ರಮದಲ್ಲಿ ಕಲ್ಲು ಎಸೆದ 9 ಮುಸ್ಲಿಮರನ್ನು ಪೊಲೀಸರು ಅವರನ್ನು ಕಂಬಕ್ಕೆ ಕಟ್ಟಿ ಸಾರ್ವಜನಿಕವಾಗಿ ಥಳಿಸಿದ್ದಾರೆ. ಅಲ್ಲಿ ನೆರೆದಿದ್ದ ಜನರು "ಭಾರತ ಮಾತೆಗೆ ಜಯವಾಗಲಿ" ಎಂದು ಘೋಷಣೆ ಕೂಗಿದರು" ಎಂದು ಬರೆದು ಹಂಚಿಕೊಂಡಿದ್ದಾರೆ

ʼಇಂಡಿಯಾ ಟುಡೆʼ ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ "Communal Clash Erupts During Garba Event In Kheda, Gujarat Police Thrash Accused | Gujarat News" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ನೋಡಬಹುದು. ಈ ವಿಡಿಯೋವಿನ ವರದಿಯ ಪ್ರಕಾರ "ಗುಜರಾತ್‌ನ ಖೇಡಾ ಪ್ರದೇಶದಲ್ಲಿ ಗರ್ಬಾ ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಕೋಮು ಘರ್ಷಣೆ ಸಂಭವಿಸಿದೆ. ಆರೀಫ್‌ ಮತ್ತು ಜಹೀರ್‌ ಎಂಬ ಇಬ್ಬರು ಮುಸ್ಲಿಂ ವ್ಯಕ್ತಿಗಳ ನೇತೃತ್ವದ ಜನರ ಗುಂಪೊಂದು ಗರ್ಬಾ ಸ್ಥಳಕ್ಕೆ ಬಂದು ಕಲ್ಲು ತೂರಾಟ ನಡೆಸಿದ್ದಾರೆ" ಎಂದು ಖೇಡಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಗರ್ಹಿಯಾ ಹೇಳಿದ್ದಾರೆ ಎಂದು ವರದಿಯಾಗಿದೆ.

Full View 

ಇಂಡಿಯಾ ಟುಡೆ ವರದಿಯ ಪ್ರಕಾರ "ಅಕ್ಟೋಬರ್ 3, 2022ರ ರಾತ್ರಿ, ಖೇಡಾದ ಉಂಧೇಲಾ ಗ್ರಾಮದಲ್ಲಿ ನಡೆದ ನವರಾತ್ರಿಯ ಸಂದರ್ಭದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟಕ್ಕೆ ಸಂಬಂಧಿಸಿದ ಒಂಬತ್ತು ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿ, ಒಬ್ಬೊಬ್ಬರನ್ನೇ ಕಂಬಕ್ಕೆ ಕಟ್ಟಿ ಥಳಿಸಿದ್ದರು. ಅಲ್ಲಿ ನೆರೆದಿದ್ದ ಗ್ರಾಮಸ್ಥರು ‘ಗುಜರಾತ್ ಪೊಲೀಸ್ ಜಿಂದಾಬಾದ್’ ಎಂಬ ಘೋಷಣೆಗಳನ್ನು ಕೂಗಿದರು" ಎಂದು ವರದಿಯಾಗಿದೆ


ಇದೇ ಸುದ್ದಿಯನ್ನು ಎನ್‌ಡಿಟಿವಿ, ದಿ ಹಿಂದೂ ಮತ್ತು ವೈರ್‌ ವೆಬ್‌ಸೈಟ್‌ನಲ್ಲಿ ಈ ಕುರಿತ ವರದಿಗಳನ್ನು ಪರಿಶೀಲಿಸಿದರೆ ವೈರಲ್‌ ಆದ ವಿಡಿಯೋ 2022ರದ್ದು ಎಂದು ಸಾಭೀತಾಗಿದೆ.

ಹೀಗಾಗಿ ವೈರಲ್‌ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್‌ ಆದ ವಿಡಿಯೋ ಇತ್ತೀಚಿಗೆ ನಡೆದ ಗರ್ಬಾ ಕಾರ್ಯಕ್ರಮಕ್ಕೆ ಸಂಬಂಧಿಸಿದ್ದಲ್ಲ. 2022ರಲ್ಲಿ ಗುಜರಾತ್‌ನಲ್ಲಿ ನಡೆದ ಗರ್ಬಾ ಕಾರ್ಯಕ್ರಮದಲ್ಲಿ ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳಿಗೆ ಪೊಲೀಸರು ಥಳಿಸಿದ ವಿಡಿಯೋವದು.

Claim :  ಗುಜರಾತ್‌ನಲ್ಲಿ ಗರ್ಬಾ ಮಾಡುತ್ತಿದ್ದ ಮಹಿಳೆಯರ ಮೇಲೆ ಮುಸ್ಲಿಂ ಯುವಕರು ಕಲ್ಲು ತೂರಾಟ ಮಾಡಿದ್ದಾರೆಂದು ಹಳೆಯ ವಿಡಿಯೋ ಹಂಚಿಕೆ
Claimed By :  Social Media Users
Fact Check :  False
Tags:    

Similar News