ಫ್ಯಾಕ್ಟ್‌ಚೆಕ್‌: ಜೂನ್ 4ರ ನಂತರವೂ ನರೇಂದ್ರ ಮೋದಿ ಭಾರತದ ಪ್ರಧಾನಿಯಾಗಿ ಮುಂದಿವರಿಯಲಿದ್ದಾರೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರಾ?

ಜೂನ್ 4ರ ನಂತರವೂ ನರೇಂದ್ರ ಮೋದಿ ಭಾರತದ ಪ್ರಧಾನಿಯಾಗಿ ಮುಂದಿವರಿಯಲಿದ್ದಾರೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರಾ?

Update: 2024-05-31 17:33 GMT

ರಾಹುಲ್ ಗಾಂಧಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವ 56 ಸೆಕೆಂಡ್‌ಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

‘ನರೇಂದ್ರ ಮೋದಿಯೇ ಭಾರತದ ಮುಂದಿನ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ’ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಜೂನ್ 4ರ ನಂತರವೂ ಮೋದಿ ತನ್ನ ಸ್ಥಾನದಲ್ಲೇ ಮುಂದುವರಿಯಲಿದ್ದಾರೆ. ಹಾಗೆ ಉತ್ತರ ಪ್ರದೇಶದಲ್ಲಿರುವ ತಮ್ಮ ಮೈತ್ರಿಕೂಟ ಒಂದೇ ಒಂದು ಸ್ಥಾನವನ್ನು ಗೆಲ್ಲುವುದಿಲ್ಲ ಎಂದು ರಾಹುಲ್‌ ಗಾಂಧಿ ಹೇಳಿರುವ ವಿಡಿಯೋ ವೈರಲ್‌.

ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಖಾತೆಯಲ್ಲಿ “राहुल गांधी जी की बात एकदम सही है। "आएंगे तो मोदी जी ही रहेंगे तो मोदी जी ही बात खत्म।" ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ

ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ರಾಹುಲ್ ಗಾಂಧಿ ಹೇಳುತ್ತಿರುವುದು ಸತ್ಯ.. ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಿದ್ದಾರೆ" ಎಂದು ಬರೆದು ಪೋಸ್ಟ್‌ ಮಾಡಲಾಗಿತ್ತು.

Full View

Full View

Full View

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ವಿಡಿಯೋವನ್ನು ಎಡಿಟ್‌ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಮೂಲ ವಿಡಿಯೋವಿನಲ್ಲಿ ರಾಹುಲ್‌ ಗಾಂಧಿ ನರೇಂದ್ರ ಮೋದಿಯೇ ಮುಂದಿನ ಪ್ರಧಾನಿಯಾಗುತ್ತಾರೆಂದು ಹೇಳಲಿಲ್ಲ.

ಮೂಲ ವಿಡಿಯೋವಿನಲ್ಲಿ ರಾಹುಲ್‌ ಗಾಂಧಿ ಜೂನ್‌ 4ರಂದು ಉತ್ತರ ಪ್ರದೇಶದ ತಮ್ಮ ಮೈತ್ರಿಕೂಟಕ್ಕೆ 50ಕ್ಕಿಂತ ಹೆಚ್ಚು ಸ್ಥಾನ ಸಿಗುವುದಿಲ್ಲ ಎಂದು ಹೇಳಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ನಾವು ವಿಡಿಯೋವಿನ ಕೆಲವು ಫ್ರೇಮ್‌ಗಳನ್ನು ಉಪಯೋಗಿಸಿಕೊಂಡು ಗೂಗಲ್‌ನಲ್ಲಿ ರಿವರ್ಸ್ ಇಮೇಜ್ ಹುಡುಕಾಟದ ಸಮಯದಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ತನ್ನ ಅಧಿಕೃತ ಖಾತೆಯಲ್ಲಿ ಮೂಲ ವೀಡಿಯೊವನ್ನು ಮತ್ತು ವೈರಲ್ ಪೋಸ್ಟ್‌ನ್ನು ಹೋಲಿಸಿ ಒಟ್ಟಿಗೆ ಪೋಸ್ಟ್‌ ಮಾಡಿದ್ದರು.

ಭಾಷಣವನ್ನು ಕೇಳುತ್ತಿರುವಾಗ, ಯುಪಿಯಲ್ಲಿ ರಾಹುಲ್ ಗಾಂಧಿಯವರ ಸಾರ್ವಜನಿಕ ಸಭೆಯನ್ನು ಪರಿಶೀಲಿಸುವಾಗ, ಕಾನ್ಪುರದ ಸಾರ್ವಜನಿಕ ಸಭೆಯಲ್ಲಿ ರಾಹುಲ್‌ ಗಾಂಧಿ ಭಾಷಣದಲ್ಲಿ ಯುಪಿಯಲ್ಲಿ ತಮ್ಮ ಮೈತ್ರಿಕೂಟಕ್ಕೆ 50 ಕ್ಕಿಂತ ಕಡಿಮೆ ಸ್ಥಾನಗಳು ಬರುವುದಿಲ್ಲ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಜೂನ್‌ 4,2024ರಂದು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದ ವಿಡಿಯೋನ 47:33 ಟೈಮ್‌ಸ್ಟ್ಯಾಂಪ್‌ನಲ್ಲಿ ನಾವು ರಾಹುಲ್ ಗಾಂಧಿ "ನರೇಂದ್ರ ಮೋದಿ ಮತ್ತೊಮ್ಮೆ ಭಾರತದ ಪ್ರಧಾನಿಯಾಗುವುದಿಲ್ಲ." ಉತ್ತರ ಪ್ರದೇಶದಲ್ಲಿ ನಮ್ಮ ಮೈತ್ರಿಕೂಟ ಕನಿಷ್ಠ 50 ಸ್ಥಾನಗಳನ್ನು ಗಳಿಸಲಿದೆ ಎಂಧು ಹೇಢಳಿಕೆಯನ್ನು ನೀಡುತ್ತಿರುವ ವಿಡಿಯೋವನ್ನು ನಾವು ಕಂಡುಕೊಂಡೆವು.

Full View

ಐಎನ್‌ಸಿ ಹಂಚಿಕೊಂಡಿರುವ ವೀಡಿಯೊವನ್ನು ರಾಹುಲ್ ಗಾಂಧಿ ರೀಪೋಸ್ಟ್‌ ಮಾಡಿದ್ದರು, “‘झूठ की फैक्ट्री’ भाजपा खुद को कितना भी दिलासा दे ले, कोई फर्क नहीं पड़ने वाला। एक बार फिर कह रहा हूं - 4 जून के बाद नरेंद्र मोदी प्रधानमंत्री नहीं रहेंगे। देश के हर कोने में INDIA की आंधी चल रही है”। ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದರು.

‘ಸುಳ್ಳಿನ ಕಾರ್ಖಾನೆ’ ನಡೆಸುತ್ತಿರುವ ಬಿಜೆಪಿಯವರು ಎಷ್ಟೇ ಸಮಾಧಾನ ಮಾಡಿಕೊಂಡರೂ ಪರವಾಗಿಲ್ಲ. ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ - ಜೂನ್ 4 ರ ನಂತರ ನರೇಂದ್ರ ಮೋದಿ ಇನ್ನು ಮುಂದೆ ಪ್ರಧಾನಿಯಾಗುವುದಿಲ್ಲ ಎಂದು ಹೇಳಿಕೆಯನ್ನೀಡುವ ದೃಶ್ಯವನ್ನು ನಾವು ಮೂಲ ವಿಡಿಯೋವಿನಲ್ಲಿ ನೋಡಬಹುದು.

ಅದೇ ವೀಡಿಯೋವನ್ನು ಐಎನ್‌ಸಿ ಬಿಹಾರ, ಐಎನ್‌ಸಿ ಉತ್ತರಾಖಂಡ, ಐಎನ್‌ಸಿ ದೆಹಲಿ ಮತ್ತು ಇತರ ಹಲವು ಐಎನ್‌ಸಿ ರಾಜ್ಯ ಅಧಿಕಾರಿಗಳು ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದರು.

ಹಿಂದೂಸ್ತಾನ್ ಟೈಮ್ಸ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, “Senior Congress leader Rahul Gandhi on Friday asserted that an INDIA bloc storm was arriving in Uttar Pradesh and the ruling BJP was going to face its worst- ever defeat on June 4, the day votes are counted after conclusion of the ongoing Lok Sabha polls on June 1” ಎಂದು ವರದಿಯನ್ನು ಹಂಚಿಕೊಂಡಿದ್ದರು.

ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ಉತ್ತರ ಪ್ರದೇಶಕ್ಕೆ ಇಂಡಿಯಾ ಅಲೈಯನ್ಸ್‌ ಚಂಡಮಾರುತ ಬರುತ್ತಿದೆ, ಜೂನ್ 4 ರಂದು ಆಡಳಿತಾರೂಢ ಬಿಜೆಪಿ ಹೀನಾಯ ಸೋಲನ್ನು ಎದುರಿಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಹಾಗಾಗಿ ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ಸಾಭೀತಾಗಿದೆ. ವೀಡಿಯೊವನ್ನು ಎಡಿಟ್ ಮಾಡಿ ಸುಳ್ಳು ಸುದ್ದಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಮೂಲ ವಿಡಿಯೋದಲ್ಲಿ ಜೂನ್ 4ರ ನಂತರ ನರೇಂದ್ರ ಮೋದಿ ಪ್ರಧಾನಿಯಾಗುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಹಾಗೂ ಉತ್ತರಪ್ರದೇಶದಲ್ಲಿ ತಮ್ಮ ಮೈತ್ರಿಕೂಟಕ್ಕೆ 50ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ತಮ್ಮ ಭಾಷಣದಲ್ಲಿ ರಾಹುಲ್‌ ಗಾಂಧಿ ಹೇಳಿದ್ದಾರೆ.

Claim :  ನರೇಂದ್ರ ಮೋದಿ ಭಾರತದ ಪ್ರಧಾನಿಯಾಗಿ ಮುಂದುವರಿಯುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ
Claimed By :  Social Media Users
Fact Check :  False
Tags:    

Similar News