ಫ್ಯಾಕ್ಟ್‌ಚೆಕ್‌: ಉದ್ಯಮಿ ರತನ್‌ ಟಾಟಾ ಭಾರತೀಯ ಸೇನೆಗೆ ಬುಲೆಟ್‌ ಫ್ರೂಫ್‌ ಬಸ್‌ಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆಯೇ?

ಉದ್ಯಮಿ ರತನ್‌ ಟಾಟಾ ಭಾರತೀಯ ಸೇನೆಗೆ ಬುಲೆಟ್‌ ಫ್ರೂಫ್‌ ಬಸ್‌ಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆಯೇ?

Update: 2024-01-06 05:00 GMT

Bullet proof bus

ಭಾರತದ ಪ್ರಮುಖ ಉದ್ಯಮಿ ರತನ್‌ ಟಾಟಾ ಇತ್ತೀಚಿಗಷ್ಟೇ ತಮ್ಮ 86ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಇವರು ಮಾಡಿರುವ ಹಲವಾರು ಉತ್ತಮ ಕೆಲಸಗಳಿಂದ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಭಾರತದ ಪ್ರಜೆಗಳಿಗೆ ಅವರು ಮಾಡಿರುವ ಲೋಕೋಪಕಾರಿ ಕೆಲಸಗಳಿಂದ ಹೆಸರುವಾಸಿಯಾಗಿರುವ ಇವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯೂ ಸಹ ಸಂದಿದೆ.

ಇತ್ತೀಚೆಗೆ ರತನ್‌ ಟಾಟಾರವರು ಭಾರತೀಯ ಸೇನೆಗೆ ಬುಲೆಟ್‌ ಫ್ರೋಫ್‌ ಬಸ್ ಒಂದು ಉಡುಗರೆಯಾಗಿ ನೀಡಿದ್ದಾರೆಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವೈರಲ್‌ ಆದ ಚಿತ್ರಕ್ಕೆ ಶೀರ್ಷಿಕೆಯಾಗಿ "“मशहूर उद्योगपति रतन टाटा ने भारतीय सेना को बुलेट प्रूफ और बम प्रूफ बसें उपलब्ध कराई है!” ಎಂದು ಹಿಂದಿಯಲ್ಲಿ ಶೀರ್ಷಿಕೆಯಾಗಿ ಬರೆದುಕೊಂಡಿದ್ದಾರೆ.

ಶೀರ್ಷಿಕೆಯನ್ನು ಅನುವಾದಿಸಿದಾಗ ನಮಗೆ ತಿಳಿದಿದ್ದೇನೆಂದರೆ "ರತನ್‌ ಟಾಟಾ ಭಾರತೀಯ ಸೇನೆಗೆ ಬುಲೆಟ್‌ ಫ್ರೂಫ್‌ ಬಸ್‌ ಮತ್ತು ಬಾಂಬ್‌ ಫ್ರೂಪ್‌ ಬಸ್ಸನ್ನು ಉಡುಗರೆಯಾಗಿ ನೀಡಿದ್ದಾರೆ " ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿತ್ತು.

ಇನ್ನಷ್ಟು ಪೋಸ್ಟ್‌ಗಳು ಇಲ್ಲಿವೆ

Full View

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ.

ವೈರಲ್‌ ಆದ ಬಸ್ಸನ್ನು ರತನ್‌ ಟಾಟಾ ಭಾರತೀಯ ಸೇನೆಗೆ ಉಡುಗರೆಯಾಗಿ ನೀಡಿಲ್ಲ. ಈ ಬಸ್ಸನ್ನು ಮಿಧಾನಿ ಕಂಪನಿಯು ಭಾರತದ ಸಿಆರ್‌ಪಿಎಫ್‌ಗಾಗಿ ಪ್ರತ್ಯೇಕವಾಗಿ ತಯಾರಿಸಿ ನೀಡಲಾಗಿತ್ತು.

ನಾವು ವೈರಲ್‌ ಆದ ಸುದ್ದಿಯಲ್ಲಿ ಏನಾದರೂ ಸತ್ಯಾಂಶವಿದೆಯಾ ಎಂದು ತಿಳಿಯಲು ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ ಮಾಡಿದಾಗ ನಮಗೆ ಸೆಪ್ಟಂಬರ್‌ 2017ರಂದು ಸೆಂಟ್ರಲ್‌ ಆರ್ಮ್ಡ್‌ ಪೊಲೀಸ್‌ ಫೋರ್ಸ್‌ (ಸಿಆರ್‌ಪಿಎಫ್‌) ಎಕ್ಸ್‌ ಖಾತೆಯಲ್ಲಿ ಅಪ್‌ಲೋಡ್‌ ಆದಂತಹ ಪೋಸ್ಟ್‌ ಒಂದು ಕಂಡುಬಂದಿತು. ಪೋಸ್ಟ್‌ನಲ್ಲಿ ಬಸ್‌ಗಳ ಚಿತ್ರವನ್ನು ಹಂಚಿಕೊಂಡು ಅದಕ್ಕೆ ಶೀರ್ಷಿಕೆಯಾಗಿ ‘Armored Bus and Bhabha Kavach, lightweight BP jacket manufactured under #makeinindia by Midhani handed over to DG CRPF today.' ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದರು.

ಮತ್ತಷ್ಟು ಹುಡುಕಾಟದಲ್ಲಿ ನಮಗೆ ಮಿಧಾನಿ ವೆಬ್‌ಸೈಟ್‌ನಲ್ಲಿ ಹಂಚಿಕೊಳ್ಳಲಾಗಿದ್ದ ಕೆಲವು ಫೋಟೋಗಳು ಕಂಡುಬಂದವು.

ಏರೋಡೈನಾಮಿಕ್ಸ್‌ ಎಂಬ ಎಕ್ಸ್‌ ಖಾತೆದಾರ ಇನ್ನ ಪೋಸ್ಟ್‌ನಲ್ಲಿ "ಹೈದರಾಬಾದ್‌ಗೆ ಸೇರಿರುವ ಮಿಧಾನಿ ಸಂಸ್ಥೆ ಒಂದು ದೊಡ್ಡ ಬುಲೆಟ್‌ ಫ್ರೂಫ್‌ ಬಸ್ಸು ಮತ್ತು ಬಾಂಬ್‌ ಫ್ರೋಫ್‌ ಬಸ್ಸನ್ನು ತಯಾರಿಸಿದೆ. ಈ ವಾಹನವನ್ನು ಡಿಫೆನ್ಸ್‌ಎಕ್ಸ್‌ಫೋ ದಲ್ಲೂ ಸಹ ಪ್ರದರ್ಶಿಸಲಾಗಿತ್ತು. ತಯಾರಾದ ವಾಹನ ಬಾಂಬ್‌ ದಾಳಿಯನ್ನ ತಡೆಗಟ್ಟುವಂತಹ ಸಾಮರ್ಥ್ಯವನ್ನು ಹೊಂದಿದೆ ಎಂದು ಪೋಸ್ಟ್‌ ಮಾಡಿದ್ದರು.

ಎಲ್‌ಬಿಪಿವಿ ಬಸ್ 7.62*39ಮಿ ಎಮ್‌ಎಸ್‌ಸಿಯಿಂದ ಪೂರ್ಣಗೊಂಡಿದೆ ಎಂದು ಪೋಸ್ಟ್‌ ಮಾಡಿದ್ದರು.

ಆಲ್‌ ಇಂಡಿಯಾ ರೇಡಿಯೋ ಎಕ್ಸ್‌ ಖಾತೆಯಲ್ಲೂ ಸಹ ಈ ಹುರಿತ ಮಾಹಿತಿ ನಮಗೆ ಲಭ್ಯವಾಗಿತ್ತು. ಸಿಆರ್‌ಪಿಎಫ್‌ಗೆ ಸಂಬಂಧಿಸಿದ ಬಸ್‌ಗಳ ಚಿತ್ರಗಳನ್ನು ಹಂಚಿಕೊಂಡು ಶೀರ್ಷಿಕೆಯಾಗಿ "“@nsitharaman hands over armored bus, ARGO avenger terrain vehicle to #CentralArmedPolice forces; HM @rajnathsingh also present.” ಎಂಬ ಪೋಸ್ಟ್‌ ಮಾಡಿದ್ದರು.

ರಕ್ಷಣಾ ಮತ್ತು ಗೃಹ ಸಚಿವರ ಸಮ್ಮುಖದಲ್ಲಿ ಬುಲೆಟ್‌ ಫ್ರೂಫ್‌ ಬಸ್ಸುಗಳನ್ನು ಸಿಆರ್‌ಪಿಎಫ್‌ಗೆ ನೀಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿತ್ತು.

ಹೀಗಾಗಿ ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ಬಸ್‌ಗಳಿಗೂ ರತನ್‌ ಟಾಟಾಗೂ ಯಾವುದೇ ಸಂಬಂಧವಿಲ್ಲ. ಈ ಬಸ್‌ಗಳನ್ನು ಮಿಧಾನಿ ಕಂಪನಿ ಸಿಆರ್‌ಪಿಎಫ್‌ಗೆ ಉಡುಗರೆಯಾಗಿ ಭಾರತೀಯ ಸೇನೆಗೆ ನೀಡಿರುವುದು ಎಂದು ಸಾಭೀತಾಗಿದೆ.

Claim :  Ratan Tata provided bulletproof and bomb-proof buses to the Indian Army
Claimed By :  Social Media Users
Fact Check :  False
Tags:    

Similar News