ಫ್ಯಾಕ್ಟ್‌ಚೆಕ್‌: ರಾಜಸ್ಥಾನದಲ್ಲಿ ರಜೆಯನ್ನು ಕಳೆಯಲು ಬಂದಿದ್ದ ಗಾಯಕ-ಗೀತರಚನೆಕಾರ ದುವಾ ಲಿಪಾ ಲೈಂಗಿಕ ಕಿರುಕುಳವನ್ನು ಎದುರಿಸಿದ್ದಾರೆಯೇ?

ರಾಜಸ್ಥಾನದಲ್ಲಿ ರಜೆಯನ್ನು ಕಳೆಯಲು ಬಂದಿದ್ದ ಗಾಯಕ-ಗೀತರಚನೆಕಾರ ದುವಾ ಲಿಪಾ ಲೈಂಗಿಕ ಕಿರುಕುಳವನ್ನು ಎದುರಿಸಿದ್ದಾರೆಯೇ?

Update: 2024-01-03 15:30 GMT

Dua Lipa

ಗ್ರ್ಯಾಮಿ ಪ್ರಶಸ್ತಿ ವಿಜೇತೆ, ಗಾಯಕಿ, ಗೀತ ರಚನೆಗಾರ್ತಿ, ಕಲಾವಿದೆ, ಪಾಪ್‌ ಸಿಂಗರ್ ದುವಾ ಲಿಪಾ‌ ಯುನೈಟೆಡ್‌ ಕಿಂಕ್ಡಮ್‌ನಿಂದ ಭಾರತದಲ್ಲಿನ ರಾಜಸ್ಥಾನ ಮತ್ತು ನವದೆಹಲಿಯ ಕೆಲವು ಸ್ಥಳಗಳೊಂದಿಗೆ ತನ್ನ ಕುಟುಂಬದ ಜೊತೆಗೆ ರಜೆಯನ್ನು ಕಳೆಯಲು ಬಂದಿದ್ದರು.

ರಾಜಸ್ಥಾನಕ್ಕೆ ಭೇಟಿ ನೀಡಿದ್ದ ಲಿಪಾಗೆ ಅಲ್ಲಿನ ಕೆಲವು ಪುರುಷರು ಲೈಂಗಿಕ ಕಿರುಕುಳ ನೀಡಿದ್ದರೆಂಬ ಸುದ್ದಿಯೊಂದಿಗೆ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ರಾಜಸ್ಥಾನದ ಸ್ಥಳೀಯರು ಲಿಪಾಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಬೇಕಿತ್ತು. ಭಾರದದಲ್ಲಿ ಮಹಿಳೆಯರಿಗೆ ಸುರಕ್ಷಿತೆಯಿಲ್ಲ ಎಂಬ ಸೂಚ್ಯಾಂಕ್ಯದಿಂದ ಪೋಸ್ಟ್‌ನ್ನು ಹಂಚಿಕೊಂಡಿದ್ದರು.

ಕ್ರೈಮ್‌ ರಿಪೋರ್ಟ್‌ ಇಂಡಿಯಾ ತನ್ನ ಎಕ್ಸ್‌ ಖಾತೆಯಲ್ಲಿ ಫೋಟೋವೊಂದನ್ನು ಪೊಸ್ಟ್‌ ಮಾಡಿ ಶೀರ್ಷಿಕೆಯಾಗಿ " ಭಾರತದಲ್ಲಿ ಮಹಿಳೆಯರಿಗೆ ಸುರಕ್ಷಿತೆಯಿಲ್ಲ. ರಾಜಸ್ಥಾನಕ್ಕೆ ಭೇಟಿ ನೀಡಿದಾಗ ಆಕೆಗೆ ಅಲ್ಲಿನ ಪುರುಷರು ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಪೊಸ್ಟ್‌ ಮಾಡಿದ್ದರು.

ಮತ್ತೊಬ್ಬರು "ಕೆಲವು ಪುರುಷರು ಲಿಪಾಗೆ ಭಾರತದಲ್ಲಿ ಕಿರುಕುಳ ನೀಡಿದ್ದಾರೆ, ಮಹಿಳೆಯರಿಗೆ ಸುರಕ್ಷಿತ ಸ್ಥಳ!" ಎಂದು ಬರೆದು ಪೊಸ್ಟ್‌ ಮಾಡಿದ್ದಾರೆ

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಯಾವದೇ ಸತ್ಯಾಂಶವಿಲ್ಲ. ಜೋಧಾಪುರದಲ್ಲಿ ರಜೆಯನ್ನು ಕಳೆಯಲು ಬಂದಿದ್ದ ಲಿಪಾಗೆ ಯಾರೂ ಕಿರುಕುಳವನ್ನು ನೀಡಲಿಲ್ಲ. ಸತ್ಯಾಂಶವೇನೆಂದರೆ ಪಾಪ್‌ ಸಿಂಗರ್‌ ಲಿಪಾರನ್ನು ರಾಜಸ್ಥಾನದಲ್ಲಿ ಯಾರು ಕಂಡು ಹಿಡಿದಿರಲಿಲ್ಲ.

ವೈರಲ್‌ ಆದ ಸುದ್ದಿಯ ಕುರಿತು ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ ನಮಗೆ ದುವಾ ಲಿಪಾಗೆ ಕುರಿತ ಯಾವುದೇ ರೀತಿಯ ಸುದ್ದಿಗಳು ಕಂಡುಬಂದಿಲ್ಲ.

ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ನಾವು ದುವಾ ಲಿಪಾ ಮತ್ತು ಪಾಪ್‌ ತಾರೆಯ ಪ್ರವಾಸ ಎಂಬ ಕೀವರ್ರ್ಡ್‌‌ ಬಳಸಿ ಹುಡುಕಾಟ ನಡೆಸಿದೆವು.

ಲೇಟಿಸ್ಟಲೀ.ಕಾಂ ಎಂಬ ವರದಿಯ ಪ್ರಕಾರ, ದುವಾ ಲಿಪಾ ಭಾರತಕ್ಕೆ ಪ್ರವಾಸ ಮಾಡಿದಾಗ ರಾಜಸ್ಥಾನದಲ್ಲಿನ ಜನರು ಆಕೆಯನ್ನು ಗುರುತಿಸಲಿಲ್ಲ. ಹೀಗಾಗಿ ಆಕೆ ಸ್ವಚ್ಚಂದಿನಿಂದ ಆಕೆ ಭಾರತದಲ್ಲಿ ಸಮಯವನ್ನು ಕಳೆದಳು. ರಾಜಸ್ಥಾನವನ್ನು ಭೇಟಿ ನೀಡಿದಾಗ ಅಲ್ಲಿನ ಸ್ಥಳೀಯರಿಗೆ ಆಕೆ ಸೆಲೆಬ್ರೆಟಿ ಎನ್ನುವ ವಿಷಯವೇ ತಿಳಿದಿರಲಿಲ್ಲ. ಹೀಗಾಗಿ ಆಕೆ ಸಂತೋಷದಿಂದ ಭಾರತದಲ್ಲಿ ಸಮಯವನ್ನು ಕಳೆದಿದ್ದಳು ಎಂದು ವರದಿ ಮಾಡಿದ್ದರು.

ಇಂಡಿಯಾ ಟುಡೇ ವರದಿಯ ಪ್ರಕಾರ ರಾಜಸ್ಥಾನದಲ್ಲಿ ಚಿತ್ರೀಕರಿಸಿದ ದುವಾ ಲಿಪಾಳ ವಿಡಿಯೋವೊಂದು ವೈರಲ್‌ ಆಗಿತ್ತು. ವಿಡಿಯೋದಲ್ಲಿ ಗಾಯಕಿಯು ತನ್ನ ಜಾಗತಿಕ ತಾರೆ ಸ್ಥಾನಮಾನದ ಹೊರತಾಗಿಯೂ ಸಾರ್ವಜನಿಕರ ಗಮನಕ್ಕೆ ಬಾರದಂತೆ ಭಾರತದಲ್ಲಿ ಸಮಯವನ್ನು ಕಳೆದಿದ್ದಾಳೆ ಎಂದು ವರದಿ ಆಗಿತ್ತು.

ಹೀಗಾಗಿ ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಜೋಧಾಪುರದಲ್ಲಿ ರಜೆಯನ್ನು ಕಳೆಯಲು ಬಂದಿದ್ದ ಲಿಪಾಗೆ ಯಾರೂ ಕಿರುಕುಳವನ್ನು ನೀಡಲಿಲ್ಲ. ಸತ್ಯಾಂಶವೇನೆಂದರೆ ಪಾಪ್‌ ಸಿಂಗರ್‌ ಲಿಪಾರನ್ನು ರಾಜಸ್ಥಾನದಲ್ಲಿ ಯಾರು ಕಂಡು ಹಿಡಿದಿರಲಿಲ್ಲ.

Claim :  Singer-songwriter Dua Lipa was harassed by local men during her vacation in Jodhpur, Rajasthan, India
Claimed By :  Twitter users
Fact Check :  False
Tags:    

Similar News