ಫ್ಯಾಕ್ಟ್‌ಚೆಕ್‌: TGSRTC ಹೊಸ ಲೋಗೋ ನಕಲಿ; ಅಂತಿಮ ಲೋಗೋ ಇನ್ನೂ ಬಿಡುಗಡೆಯಾಗಿಲ್ಲ.

TGSRTC ಹೊಸ ಲೋಗೋ ನಕಲಿ; ಅಂತಿಮ ಲೋಗೋ ಇನ್ನೂ ಬಿಡುಗಡೆಯಾಗಿಲ್ಲ.

Update: 2024-06-01 19:36 GMT

ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮ (TSRTC), ಸರ್ಕಾರಿ ಸ್ವಾಮ್ಯದ ರಸ್ತೆ ಸಾರಿಗೆ ನಿಗಮವು ಇನ್ನು ಮುಂದೆ TGSRTC ಆಗಿ ಬದಲಾಗಲಿದೆ. ಆಂಧ್ರಪ್ರದೇಶದ ವಿಭಜನೆಯ ನಂತರ ರಸ್ತೆ ಸಾರಿಗೆ ಸಂಸ್ಥೆಗಳನ್ನು APSRTC ಮತ್ತು TSRTC ಎಂದು ಮರುನಾಮಕರಣ ಮಾಡಲಾಗಿತ್ತು. ಆದರೆ ಇದೀಗ ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಮತ್ತೆ ಟಿಜಿಎಸ್‌ಆರ್‌ಟಿಸಿ ಎಂದು ಹೆಸರು ಬದಲಾಯಿಸಿದರು. ಹೀಗಾಗಿ ಆರ್‌ಟಿಸಿ ಸಂಬಂಧಿತ ಸ್ಟೇಷನರಿ, ಅಂಚೆ ಚೀಟಿಗಳು ಮತ್ತು ಲೆಟರ್‌ಹೆಡ್‌ಗಳನ್ನು ಹೊಸದಾಗಿ ಮಾಡಲಾಗುತ್ತಿದೆ.

ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಖಾತೆಗಳಲ್ಲಿ TGSRTC ಯ ಹೊಸ ಲೋಗೋವಿನ ಪೋಸ್ಟ್‌ನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಚಲಾವಣೆಯಲ್ಲಿರುವ ಲೋಗೋ APSRTC ಯ ಹಳೆಯ ಲೋಗೋವಿನ ಹಾಗೆ ಕಾಣುತ್ತದೆ. TGSRTCಯ ಇತ್ತೀಚಿನ ಲೋಗೋವಿನಲ್ಲಿ ಚಾರ್ಮಿನಾರ್ ಮತ್ತು ಕಾಕತೀಯ ಕಲಾತೋರಣದ ಚಿತ್ರಗಳನ್ನು ತೆಗೆದುಹಾಕಲಾಗಿದೆ. ಹೀಗಾಗಿ ಹೊಸ ಲೋಗೋವಿಗೆ ಹಲವರು ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.

Full View

Full View

ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆದ ಹೊಸ ಲೋಗೊವನ್ನು ಹಂಚಿಕೊಂಡು ಮತ್ತೆ ಆ ಪೋಸ್ಟ್‌ನ್ನು ಡಿಲೀಟ್‌ ಮಾಡಿದ್ದಾರೆ.




ಫ್ಯಾಕ್ಟ್‌ಚೆಕ್‌

ವೈರಲ್ ಆದ ಪೋಸ್ಟ್‌ನಲ್ಲಿ ಯಾವುದೇ ಸತ್ಯಾಂಶವಿಲ್ಲ. ಟಿಜಿಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿಸಿ ಸಜ್ಜನರ್ ವೈರಲ್‌ ಆದ ಸುದ್ದಿಯನ್ನು ತಳ್ಳಿಹಾಕಿದ್ದಾರೆ. ʼಟಿಜಿಎಸ್‌ಆರ್‌ಟಿಸಿ ನ್ಯೂ ಲೋಗೋʼ ಎಂಬ ಕೀವರ್ಡ್‌ನ ಮೂಲಕ ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ ನಮಗೆ, ವ್ಯವಸ್ಥಾಪಕ ನಿರ್ದೇಶಕರ ವಿಸಿ ಸಜ್ಜನರ್‌ ಪ್ರಕಟಿಸಿದ್ದ ಕೆಲವು ಸುದ್ದಿ ಲೇಖನಗಳು ಕಂಡುಬಂದವು.

ವಿಸಿ ಸಜ್ಜನರ್ ಕೂಡ ಟ್ವಿಟ್ಟರ್ ನಲ್ಲಿ ವಿವರಣೆ ನೀಡಿದ್ದಾರೆ.

ಹೊಸ ಲೋಗೋ ಇನ್ನೂ ಬಂದಿಲ್ಲ, ವೈರಲ್ ಆಗುತ್ತಿರುವ ಲೋಗೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ ಈ ಲೋಗೋಗಳು ನಕಲಿಯದ್ದು. ಇನ್ನು ತೆಲಂಗಾಣ ಆರ್‌ಟಿಸಿಗೆ ಸಂಬಂಧ ಪಟ್ಟಂತಹ ಹೊಸ ಲೋಗೋವನ್ನು ವಿನ್ಯಾಸ ಮಾಡಲಾಗುತ್ತದೆ ಎಂದು ತಮ್ಮ ಟ್ವಿಟರ್‌ ಖಾತೆಯಲ್ಲಿ ವಿಸಿ ಸಜ್ಜನರ್ ವಿವರಣೆ ನೀಡಿದ್ದರು.

#TGSRTC కొత్త లోగో విషయంలో సోషల్‌ మీడియాలో జరుగుతున్న ప్రచారంలో ఏమాత్రం వాస్తవం లేదు. అధికారికంగా ఇప్పటివరకు కొత్త లోగోను సంస్థ విడుదల చేయలేదు. టీజీఎస్‌ఆర్టీసీ కొత్త లోగో అంటూ సోషల్‌ మీడియాలో ప్రచారంచేస్తోన్న లోగో ఫేక్‌. ఆ లోగోతో సంస్థకు ఎలాంటి సంబంధం లేదు. కొత్త లోగోను సంస్థ రూపొందిస్తోంది. కొత్త లోగోను టీజీఎస్ఆర్టీసీ యాజమాన్యం ఇంకా ఫైనల్ చేయలేదు. ಎಂದು ಪೋಸ್ಟ್‌ ಮಾಡಿದ್ದರು.

ಕನ್ನಡಕ್ಕೆ ಅನುವಾದಿಸಿದಾಗ "#TGSRTC ಹೊಸ ಲೋಗೋ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಯಲ್ಲಿ ಯಾವುದೇ ಸತ್ಯಾಂವಿಲ್ಲ. ಕಂಪನಿಯು ಇನ್ನೂ ಅಧಿಕೃತವಾಗಿ ಹೊಸ ಲೋಗೋವನ್ನು ಬಿಡುಗಡೆ ಮಾಡಿಲ್ಲ. TGSRTC ಹೊಸ ಲೋಗೋ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಾಗುತ್ತಿರುವ ಲೋಗೋ ನಕಲಿದ್ದು. ಇನ್ನು ಲೋಗೋವನ್ನು ಕಂಪನಿ ವಿನ್ಯಾಸಗೊಳಿಸುತ್ತಿದೆ. ಎಂದು ಬರೆದು ಪೋಸ್ಟ್‌ ಮಾಡಿದ್ದರು.

Siasat.com ಪ್ರಕಾರ , APSRTCಯಂತೆಯೇ ಕಾಣುವ ಪ್ರಸ್ತುತ ಲೋಗೋ ಇನ್ನು ಬದಲಾಗಿಲ್ಲ ಎಂದು TGSRTC ವ್ಯವಸ್ಥಾಪಕ ನಿರ್ದೇಶಕ ವಿಸಿ ಸಜ್ಜನರ್ ಸ್ಪಷ್ಟಪಡಿಸಿದ್ದಾರೆ. "ಸಂಸ್ಥೆಯು ಯಾವುದೇ ಹೊಸ ಲೋಗೋವನ್ನು ಇನ್ನು ಅಂತಿಮಗೊಳಿಸಿಲ್ಲ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ಲೋಗೋ ನಕಲಿಯದ್ದು" ಎಂದು ಪೋಸ್ಟ್‌ ಮಾಡಿದ್ದರು.

ಹೆಚ್ಚುವರಿಯಾಗಿ, ವೆಬ್‌ಸೈಟ್, ಲೆಟರ್‌ಹೆಡ್‌ಗಳು, ರಬ್ಬರ್ ಸ್ಟ್ಯಾಂಪ್‌ಗಳು, ಆಫೀಸ್ ಸಿಗ್ನೇಜ್, ಬಸ್ ಡಿಪೋಗಳು, ಬಸ್ ಪಾಸ್‌ಗಳು, ಗುರುತಿನ ಚೀಟಿಗಳು, ಟಿಕೆಟ್‌ಗಳು ಮತ್ತು ಬಸ್‌ಗಳು ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಸಂಕ್ಷೇಪಣ ಮತ್ತು ಲೋಗೋವನ್ನು ನವೀಕರಿಸಲು ಸಮಗ್ರ ಪ್ರಯತ್ನವನ್ನು ಕೈಗೊಳ್ಳಲು ನಿಗಮವು ಯೋಜಿಸಿದೆ.

ನಕಲಿ ಲೋಗೋ ಸೃಷ್ಟಿಗೆ ಸಂಬಂಧಿಸಿದಂತೆ ಟಿಜಿಎಸ್‌ಆರ್‌ಟಿಸಿ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಚಿಕ್ಕಡಪಲ್ಲಿ ಠಾಣೆ ಪೊಲೀಸರು ಕೆ.ದಿಲೀಪ್ ಮತ್ತು ಹರೀಶ್ ರೆಡ್ಡಿ ವಿರುದ್ಧ ಐಪಿಸಿ 469, 504, 505 (1) (ಬಿ) (ಸಿ) ಮತ್ತು ಐಟಿ ಕಾಯಿದೆಯ ಸೆಕ್ಷನ್ 67 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಹ್ಯಾನ್ಸ್ ಇಂಡಿಯಾದಲ್ಲಿ ಪ್ರಕಟವಾದ ಲೇಖನದಲ್ಲಿ ತಿಳಿಸಲಾಗಿದೆ.

ಹೀಗಾಗಿ ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಚಲಾವಣೆಯಲ್ಲಿರುವ ಚಿತ್ರವು TGSRTC ಬಿಡುಗಡೆ ಮಾಡಿದ ಲೋಗೋ ಅಲ್ಲ ಜನರನ್ನು ದಾರಿತಪ್ಪಿಸಲು ಚಿತ್ರವನ್ನು ಮಾರ್ಫ್‌ ಮಾಡಿ ಸಾಮಾಜಿಕ ಮಾದ್ಯಮಗಳಲ್ಲಿ ಪೋಸ್ಟ್‌ ಮಾಡಲಾಗುತ್ತಿದೆ.

Claim :  TGSRTC ಹೊಸ ಲೋಗೋ ನಕಲಿ; ಅಂತಿಮ ಲೋಗೋ ಇನ್ನೂ ಬಿಡುಗಡೆಯಾಗಿಲ್ಲ.
Claimed By :  Social Media Users
Fact Check :  False
Tags:    

Similar News