ಫ್ಯಾಕ್ಟ್‌ಚೆಕ್‌: ಬೆಂಗಳೂರಿನ ಜಮಿಯಾ ಮಸೀದ್‌ಗೆ ಸಂಬಂಧಿಸಿದ ಫೋಟೋವನ್ನು ಮಾರ್ಫಿಂಗ್‌ ಮಾಡಲಾಗಿದೆಯೇ?

ಬೆಂಗಳೂರಿನ ಜಮಿಯಾ ಮಸೀದ್‌ಗೆ ಸಂಬಂಧಿಸಿದ ಫೋಟೋವನ್ನು ಮಾರ್ಫಿಂಗ್‌ ಮಾಡಲಾಗಿದೆಯೇ?

Update: 2024-01-02 11:58 GMT

Jumma Masjid

ಕರ್ನಾಟಕದಲ್ಲಿ ಕನ್ನಡ ಪರ ಸಂಘಟನೆಗಳು ಇಂಗ್ಲೀಷ್‌ ನಾಮಪದಕವನ್ನು ವಿರೋಧಿಸಿ ನಿರಂತರವಾಗಿ ಪ್ರತಿಭಟನೆಯನ್ನು ಮಾಡುತ್ತಿರುವುದು ಎಲ್ಲರಿಗೂ ತಿಳಿದಂತಹ ವಿಷಯ. ಇದರ ಬೆನ್ನಲ್ಲೇ ಕರ್ನಾಟಕ ಸರ್ಕಾರ ನಾಮಫಲಕದಲ್ಲಿ 60% ಕನ್ನಡವಿರಬೇಕು ಎಂದು ಆದೇಶವೂ ಹೊರಡಿಸಿತ್ತು.

ಕರ್ನಾಟಕ ಬಾವುಟದಲ್ಲಿ ಕಂಡುಬರುವ ಹರಿಶಿಣ ಮತ್ತು ಕೆಂಪು ಶಾಲು ಹಾಕಿಕೊಂಡಿರುವ ಕೆಲವು ಕನ್ನಡಪರ ಹೋರಾಟಗಾರರು ಬೀದಿಗಳಲ್ಲಿರುವ ಅಂಗಡಿ ಮುಗ್ಗಟ್ಟುಗಳಲ್ಲಿ, ಪೋಸ್ಟ್‌ರ್‌ಗಳಲ್ಲಿ, ಬ್ಯಾನರ್‌ಗಳಲ್ಲಿ ಕನ್ನಡ ಭಾಷೆಯನ್ನು ಬಳಸುವಂತೆ ಘೋಷಣೆಯನ್ನು ಕೂಗಿ ಹಾಗೆ ಪ್ರತಿಭಟಿಸಿತ್ತಿರುವುದು ಇದೀಗ ಹಾಟ್‌ ಟಾಪಿಕ್‌ ಆಗಿ ಕರ್ನಾಟಕದಲ್ಲಿ ಬದಲಾಗಿದೆ.

ಮಿಸ್ಟರ್‌ ಸಿನ್ಹಾ ಎಂಬ ಎಕ್ಸ್‌ ಖಾತೆದಾರರ ತನ್ನ ಖಾತೆಯಲ್ಲಿ ಕರ್ನಾಟಕದಲ್ಲಿರುವ ಜಾಮಿಯಾ ಮಸೀದ್‌ನ ಮೇಲೆ ಕನ್ನಡದಲ್ಲಿ ನಾಮಫಲಕವಿಲ್ಲ ಎಂದು ಫೋಟೋದೊಂದಿಗೆ ಪೊಸ್ಟ್‌ ಮಾಡಿದ್ದಾರೆ. ಫೋಟೋವಿಗೆ ಶೀರ್ಷಿಕೆಯಾಗಿ “Jamia Masjid, Bangalore, Karnataka. The signboard has no #Kannada text. Let's see if "save our language/culture warrior" protests against it or not... Kannada warriors? #Karnataka" ಎಂದು ಬರೆದು ಪೋಸ್ಟ್‌ ಮಾಡಿದ್ದಾರೆ.


ಫ್ಯಾಕ್ಟ್‌ಚೆಕ್‌:

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ.

ವೈರಲ್‌ ಆದ ಚಿತ್ರ ಬೆಂಗಳೂರಿನ ಜಾಮಿಯಾ ಮಸೀದ್‌ದಲ್ಲ, ವೈರಲ್‌ ಆದ ಚಿತ್ರ ಜುಮ್ಮಾ ಮಸೀದಿಯದ್ದು. ವೈರಲ್‌ ಆದ ಚಿತ್ರವನ್ನು ಎಡಿಟ್‌ ಮಾಡಲಾಗಿದೆ.

ನಾವು ಫೋಟೋವಿನ್ಲಲಿರುವ ಸತ್ಯಾಂಶವನ್ನು ತಿಳಿಯಲು ಪೋಸ್ಟ್‌ಗೆ ಸಂಬಂಧಿಸಿದದ ಕೆಲವು ಕೀವರ್ಡ್‌ಗಳನ್ನು ಹುಡುಕಲು ಪ್ರಯತ್ನಿಸಿದೆವು. ಗೂಗಲ್‌ನಲ್ಲಿ ಹುಡುಕಿದಾಗ ನಮಗೆ ಜಾಮಿಯಾ ಮಸೀದ್‌ಗೆ ಸಂಬಂಧಿಸಿದಂತಹ ಕೆಲವು ಫೋಟೋಗಳನ್ನು ವಿಡಿಯೋಗಳು ನಮಗೆ ಕಂಡುಬಂದಿತು. ಪೋಸ್ಟ್‌ನಲ್ಲಿ ಕಂಡುಬರುವ ಮಸೀದಿಗೂ ಗೂಗಲ್‌ನಲ್ಲಿ ನಮಗೆ ಸಿಕ್ಕಂತಹ ಸಮಸೀದಿಗೂ ಅಜಗಜಾಂತರ ವ್ಯತ್ಯಾಸವಿತ್ತು. ಫ್ಲಿಕರ್‌.ಕಾಂ ಎಂಬ ವೆಬ್‌ಸೈಟ್‌ನಲ್ಲಿ ವೈರಲ್‌ ಆದಂತಹ ಚಿತ್ರವನ್ನು ನಾವು ಕಂಡುಕೊಂಡೆವು. 1970ರಲ್ಲಿ ನಿರಆಣವದಂತಹ ಈ ಮಸೀದಿಯನ್ನು ಆಗ ಸಂಗಿಯಾನ್‌ ಜಾಮಿಯಾ ಮಸೀದ್‌ ಎಂದು ಕರೆಯಲಾಗುತ್ತಿತ್ತು.

ಆದಿಲ್‌ ಹುಸೇನ್‌ ಎನ್ನುವ ಫೇಸ್‌ಬುಕ್‌ ಬಳಕೆದಾರರ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್‌ ಮಾಡಿದ್ದರು. ಪೋಸ್ಟ್‌ ಮಾಡಿದಂತಹ ವಿಡಿಯೋವಿನಲ್ಲಿ ಕನ್ನಡದಲ್ಲಿರುವ ನಾಮಫಲಕವನ್ನು ನೋಡಬಹುದು.

Full View

ಮತ್ತಷ್ಟು ವಿವರಗಳಿಗಾಗಿ ನಾವು ಉಡುಕಾಟ ನಡೆಸಿದಾಗ ಡಿಸಂಬರ್‌ 2022ರಲ್ಲಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಆದಂತಹ ವಿಡಿಯೋವೊಂದು ಕಂಡುಕೊಂಡೆವು, "bangalore Jamiya maszid|Jamia Masjid Bangalore|Kr market Jamiya masxid| Jamiya Maszid" ಎಂಬ ಶೀರ್ಷಿಕೆಯಡಿಯಲ್ಲಿ ವಿಡಿಯೋವನ್ನು ಪೋಸ್ಟ್‌ ಮಾಡಲಾಗಿತ್ತು.


ಈ ವಿಡಿಯೋದಲ್ಲಿ ಮಸೀದಿಯ ನಾಮಫಲಕವನ್ನು ಕನ್ನಡ, ಇಂಗ್ಲೀಷ್‌ ಹಾಗೂ ಉರ್ದುವಿನಲ್ಲೂ ನೋಡಬಹುದು

 Full View

ವೈರಲ್‌ ಆದ ಚಿತ್ರವನ್ನು ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ ಮಾಡಿದಾಗ ನಮಗೆ ಈ ಫೋಟೊ ಬೆಂಗಳೂರಿನ ಜುಮ್ಮಾ ಮಸೀದಿಯದ್ದು ಎಂದು ತಿಳಿದುಕೊಂಡೆವು

ಎಲೆಕ್ಟ್ರಾನಿಕ್‌ ಸಿಟಿ.ಇನ್‌ ವರದಿಯ ಪ್ರಕಾರ ಈ ಚಿತ್ರ ಬೆಂಗಳೂರಿನ ಶಿವಾಜಿನಗರದ ಒಪಿಹೆಚ್‌ ರೋಡ್ಡುನಲ್ಲಿರುವ ಮಸೀದಿರನ್ನು ತೋಸಿಸುತ್ತಿತ್ತು.

ಗೂಗಲ್‌ ಮ್ಯಾಪ್‌ ಮೂಲಕ ಹುಡುಕಾಟ ನಡೆಸಿದಾಗ , ಮಸೀದಿಯ ನಾಮಫಲಕವು ಕನ್ನಡ, ಇಂಗ್ಲೀಷ್‌ ಮತ್ತು ಉರ್ದುವಿನಲ್ಲಿರುವ ಫೋಟೋಗಳನ್ನು ಕಂಡುಕೊಂಡೆವು.

Full View

ಹೀಗಾಗಿ ವೈರಲ್‌ ಆದ ಚಿತ್ರದಲ್ಲಿ ಯಾವುದೇ ಸತ್ಯಾಂಶವಿಲ್ಲ.ವೈರಲ್‌ ಆದ ಚಿತ್ರ ಬೆಂಗಳೂರಿನ ಜಾಮಿಯಾ ಮಸೀದ್‌ದಲ್ಲ, ವೈರಲ್‌ ಆದ ಚಿತ್ರ ಜುಮ್ಮಾ ಮಸೀದಿಯದ್ದು. ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಎಡಿಟ್‌ ಮಾಡಿ ಪೋಸ್ಟ್‌ ಮಾಡಲಾಗಿದೆ.

Claim :  The image of Jamia Masjid in Bengaluru, Karnataka has no Kannada language on the signboard
Claimed By :  Twitter users
Fact Check :  False
Tags:    

Similar News