ಫ್ಯಾಕ್ಟ್‌ಚೆಕ್‌: ಸುಪ್ರೀಂ ಕೋರ್ಟ್‌ ಇವಿಎಂಗಳನ್ನು ನಿಷೇಧಿಸಿದೆ ಎಂಬ ಸುದ್ದಿಯ ಅಸಲಿಯತ್ತೇನು?

ಸುಪ್ರೀಂ ಕೋರ್ಟ್‌ ಇವಿಎಂಗಳನ್ನು ನಿಷೇಧಿಸಿದೆ ಎಂಬ ಸುದ್ದಿಯ ಅಸಲಿಯತ್ತೇನು?

Update: 2024-03-07 18:00 GMT

ಫೆಬ್ರವರಿ 15, 2024 ರಂದು, ಸುಪ್ರೀಂ ಕೋರ್ಟ್‌ನ ಐದು ನ್ಯಾಯಾಧೀಶರ ಸಂವಿಧಾನ ಪೀಠವು ಕೇಂದ್ರ ಸರ್ಕಾರ ತಂದಿರುವ ಎಲೆಕ್ಟೋರಲ್ ಬಾಂಡ್ ಯೋಜನೆಯನ್ನು ರದ್ದುಗೊಳಿಸಬೇಕು ಎಂದು ಆದೇಶ ನೀಡಿತ್ತು. ಎಲೆಕ್ಟೋರಲ್ ಬಾಂಡ್ ವಿತರಣೆಯನ್ನು ಕೂಡಲೇ ಇಲ್ಲಿಸಬೇಕು ಮತ್ತು ಎಲ್ಲಿಯೂ ವಿತರಿಸಬಾರದೆಂದು, ಆರ್ಟಿಕಲ್‌ 19(1) ಎಡಿಯಲ್ಲಿ ಮಾಹಿತಿ ಹಕ್ಕು ಉಲ್ಲಂಘನೆಗೆ ಒಳಪಡುತ್ತದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅಭಿಪ್ರಾಯಪಟ್ಟಿದ್ದಾರೆ.

ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತ ಮಾಹಿತಿಯನ್ನು ಹಂಚಿಕೊಂಡು ಈದರ ಹಿಂದಿನ ಯಶಸ್ಸು ವಕೀಲರದ್ದು ಎಂದು ನೆಟ್ಟಿಗರು ಪೋಸ್ಟ್‌ ಮಾಡುತ್ತಿದ್ದಾರೆ.

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ.

ನಾವು ಈ ಕುರಿತು ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ಗೂಗಲ್‌ನಲ್ಲಿ ಇವಿಎಂ ಎಂಬ ಕೀವರ್ಡ್‌ನ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಸುಪ್ರೀಂ ಕೋರ್ಟ್‌ ಇವಿಎಂ ಬಳಕೆಯ ಮೇಲೆ ನಿಷೇಧವನ್ನು ಹೇರಿರುವ ಬಗ್ಗೆ ಯಾವುದೇ ವರದಿಗಳು ನಮಗೆ ಕಂಡುಬಂದಿಲ್ಲ.

ನಿಜಕ್ಕೂ ಸುಪ್ರೀಂ ಕೋರ್ಟ್‌ ಇಂತಹ ನಿರ್ಧಾರ ತೆಗೆದುಕೊಂಡಿದ್ದರೆ, ಸಾಮಾಜಿಕ ಜಾಲತಾಣದಲ್ಲಿ ಅಲ್ಲವಾದರೂ ಮಾಧ್ಯಮಗಳಲ್ಲಿ ಈ ಕುರಿತು ಸುದ್ದಿ ಅಥವಾ ವರದಿಗಳು ಕಂಡುಬರುತ್ತಿತ್ತು. ಆದರೆ ನಮಗೆ ಹುಡುಕಾಟದಲ್ಲಿ ಯಾವುದೇ ಮಾಹಿತಿ ಸಿಗಲಿಲ್ಲ. ಫೆಬ್ರವರಿ 15,2024ರಂದು ಭಾರತದಲ್ಲಿ ಇವಿಎಂಗಳನ್ನು ನಿಷೇಧಿಸಿದೆ ಎಂಬ ಸುದ್ದಿಯ ಬಗ್ಗೆ ಪಿಐಬಿ ಫ್ಯಾಕ್ಟ್‌ ಚೆಕ್‌ ಮಾಡಿ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಟ್ವಿಟ್‌ ಮಾಡಿತ್ತು.

ಇವಿಯಂಗಳಿಗೆ ಸಂಬಂಧಿಸಿದ ಸಾಕಷ್ಟು ಪಿಐಎಲ್‌ ಪ್ರಶ್ನೆಗಳನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿರುವುದನ್ನು ನಾವು ಕಂಡುಕೊಂಡೆವು. ನವೆಂಬರ್ 2019 ರಲ್ಲಿ, ಲೋಕಸಭೆ ಚುನಾವಣೆಯಲ್ಲಿ ಇವಿಎಂಗಳ ಬದಲಿಗೆ ಬ್ಯಾಲೆಟ್ ಪೇಪರ್‌ಗಳನ್ನು ಬಳಸಬೇಕೆಂದು ವಾದಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತು.

ಇವಿಎಂ ದುರ್ಬಳಕೆಯಾಗುವ ಸಾಧ್ಯತೆಗಳು ಹೆಚ್ಚಾಗಿದ್ದರಿಂದ, ಚುನಾವಣೆಯಲ್ಲಿ ಬಳಸಬಾರದು ಎಂದು ವಾದಿಸಿದ ನ್ಯಾಯ ಭೂಮಿ ಎಂಬ ಚಾರಿಟಿ ಟ್ರಸ್ಟ್‌ ಪರವಾಗಿ ಎ.ಸುಬ್ಬರಾವ್ ಪಿಐಎಲ್ ಸಲ್ಲಿಸಿದ್ದರು. ಆದರೆ, ಸುಪ್ರೀಂ ಕೋರ್ಟ್ ಇವಿಎಂಗಳನ್ನು ನಿಷೇಧಿಸುವ ಬಗ್ಗೆ ಯಾವುದೇ ನಿರ್ದಾರವನ್ನು ತೆಗೆದುಕೊಂಡಿಲ್ಲ.

ಫೆಬ್ರವರಿ 15, 2024 ರಂದು ನಾವು ಬಹು YouTube ಚಾನಲ್‌ಗಳಲ್ಲಿ ಒಂದು ವೀಡಿಯೊವನ್ನು ಕಂಡುಕೊಂಡೆವು. ಈ ವಿಡಿಯೋದಲ್ಲಿ ಸುಪ್ರೀಂ ಕೋರ್ಟ್ ವಕೀಲ ಮೆಹಮೂದ್ ಪ್ರಾಚಾ ಚುನಾವಣಾ ಬಾಂಡ್‌ಗಳ ಕುರಿತು ಸರ್ಕಾರವನ್ನು ಟೀಕಿಸಿದ್ದನ್ನು ನಾವು ನೋಡಬಹುದು.

ಮೆಹಮೂದ್ ಪ್ರಾಚಾ ಅವರ ನೇತೃತ್ವದಲ್ಲಿ ಕೆಲವು ವಕೀಲರು "ಇವಿಎಂ ಹಟಾವೋ ಸಂಯುಕ್ತ ಮೋರ್ಚಾ" ಎಂಬ ಹೆಸರಿನ ಗುಂಪನ್ನು ರಚಿಸಿ ಆ ಚಾನೆಲ್‌ನಲ್ಲಿ ಇವಿಎಂಗಳ ವಿರುದ್ದ ಸಾಕಷ್ಟು ವಿಡಿಯೋವನ್ನು ಅಪ್‌ಲೋಡ್‌ ಮಾಡಿದ್ದರು.

Full View

ಹೀಗಾಗಿ ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಸುಪ್ರೀಂ ಕೋರ್ಟ್‌ ಇವಿಎಂನ್ನು ನಿಷೇಧಿಸಲಾಗುತ್ತಿದೆ ಎಂದು ಯಾವುದೇ ಪ್ರಕಟಣೆಯನ್ನು ನೀಡಲಿಲ್ಲ

Claim :  The Supreme Court of India has prohibited the use of electronic voting machines (EVMs)
Claimed By :  Social Media Users
Fact Check :  False
Tags:    

Similar News