ಫ್ಯಾಕ್ಟ್‌ಚೆಕ್: ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತೊಮ್ಮೆ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ ಎಂದು ಸಚಿವೆ ರೋಜಾ ಹೇಳಿದ್ದಾರೆಯೇ?
ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತೊಮ್ಮೆ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ ಎಂದು ಸಚಿವೆ ರೋಜಾ ಹೇಳಿದ್ದಾರೆಯೇ?
ವೈಎಸ್‌ಆರ್‌ಸಿಪಿ ಶಾಸಕಿ ರೋಜಾ ಸೆಲ್ವಮಣಿ ಸಾಕಷ್ಟು ಮಾಧ್ಯಮಗಳಲ್ಲಿ ಮತ್ತು ಚುನಾವಣಾ ಪ್ರಚಾರದಲ್ಲಿ ಭಾಷಣ ಮಾಡಿದಾಗ ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಹಲವು ಬಾರಿ ಭರವಸೆಯನ್ನು ನೀಡಿದ್ದಾರೆ. ಅಷ್ಟೇ ಅಲ್ಲ ಅವರದೃ ಶೈಲಿಯಲ್ಲಿ ಪ್ರತಿಪಕ್ಷದ ನಾಯಕರನ್ನು ಮತ್ತು ಸದಸ್ಯರನ್ನು ಟೀಕಿಸುತ್ತಿದ್ದರು. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ರೋಜಾಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗುತ್ತಿದೆ.
15 ಸೆಕೆಂಡಿರುವ ವೈರಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೈರಲ್ ಆದ ವಿಡಿಯೋದಲ್ಲಿ ರೋಜಾ ಚುನಾವಣೆಯಲ್ಲಿ ಎಂಎಲ್‌ಎ ಟಿಕೇಟ್ ಸಿಗದಿರುವ ಕಾರಣರೊಚ್ಚಿಗೆದ್ದು ಮಾತನಾಡಿದ್ದಾರೆ. ವಿಡಿಯೋದಲ್ಲಿ ರೊಜಾ "ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿ ಆಗುವುದಿಲ್ಲ ಇದೇ ನನ್ನ ಶಾಸನ" ಎಂದು ಹೇಳುತ್ತಿದ್ದಾರೆ.
ವೈರಲ್ ಆದ ವಿಡಿಯೋವನ್ನು ಸಾಮಾಜಿಕ ಮಾಧ್ಯಮದ ಬಳಕೆದಾರರು ತಮ್ಮ ಖಾತೆಯಲ್ಲಿ ಹಂಚಿಕೊಂಡು ವಿವಿಧ ರೀತಿಯ ಶೀರ್ಷಿಕೆಯನ್ನೀಡಿ ಪೊಸ್ಟ್ ಮಾಡುತ್ತಿದ್ದಾರೆ. ಸಂಧ್ಯಾ ರೆಡ್ಡಿ ವೆಎಸ್‌ಸಿಆರ್‌ಪಿ ಎಂಬ ಎಕ್ಸ್ ಖಾತೆದಾರ ತನ್ನ ಖಾತೆಯಲ್ಲಿ ವಿಡಿಯೋವನ್ನು ಪೊಸ್ಟ್ ಮಾಡಿ ವಿಡಿಯೋಗೆ ಶೀರ್ಷಿಕೆಯಾಗಿ "ನಮ್ಮ ರೊಜಾ ಆಂಟಿಗೆ ಎಂಎಲ್‌ಎ ಟಿಕೇಟ್ ಕೊಡಲಿಲ್ಲವೆಂದರೆ ಸರಿ ಇರುವುದಿಲ್ಲ" ಎಂದು ಬರೆದು ಪೊಸ್ಟ್ ಮಾಡಿದ್ದಾರೆ.
ಫ್ಯಾಕ್ಟ್‌ಚೆಕ್
ವೈರಲ್ ಆದ ವಿಡಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ವಿಡಿಯೋವನ್ನು ಎಡಿಟ್ ಮಾಡಲಾಗಿದೆ.
ವೈರಲ್ ವಿಡಿಯೋವಿನಲ್ಲಿರುವ ಅಸಲಿಯತ್ತನ್ನು ತಿಳಿಯಲು ನಾವು ವಿಡಿಯೋವನಲ್ಲಿರುವ ಕೆಲವು ಪ್ರಮುಖ ಕೀ ಫ್ರೇಮ್‌ಗಳನ್ನು ಉಪಯೋಗಿಸಿ ಗೂಗಲ್‌ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಹುಡುಕಾಟದಲ್ಲಿ ನಮಗೆ ಅಕ್ಟೋಬರ್ 16,2023ರಂದು ಅಪ್‌ಲೋಡ್ ಆಗಿದ್ದ ವಿಡಿಯೋ ಸಾಕ್ಷಿ ಟಿವಿ ಲೈವ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ "మంత్రి ఆర్కె రోజా పవర్ఫుల్ స్పీచ్" (“Minister RK Roja Powerful Speech | Janasena Pawan Kalyan | Chandrababu @SakshiTVLIVE”)" ಅನುವಾದಿಸಿದಾಗ "ಮಂತ್ರಿ ಆರ್‌ಕೆ ರೋಜಾ ಪವರ್‌ಫುಲ್ ಸ್ಪಿಚ್" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು. ಅಸಲಿ ವಿಡಿಯೋದಲ್ಲಿ ರೋಜಾ ಆಂಧ್ರಪ್ರದೇಶಕ್ಕೆ ಸಿಎಂ ಜಗನ್ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗುವುದಿಲ್ಲವೆಂದು ಪವನ್ ಕಲ್ಯಾಣ್ ಹೇಳಿದ್ದಾರೆ ಆದರೆ ರಾಜ್ಯಸಭೆಗೆ ಪವನ್‌ಕಲ್ಯಾಣ್‌ರನ್ನು ನಾವು ಪ್ರವೇಶಿಸಲು ಬಿಡುವುದಿಲ್ಲ ಎಂದು ಪ್ರಚಾರದಲ್ಲಿ ಹೇಳುವುದನ್ನು ಣಾವು ಅಸಲಿ ವಿಡಿಯೋದಲ್ಲಿ ನೋಡಬಹುದಾಗಿದೆ. ಈ ಹೇಳಿಕೆಯನ್ನು ವಿಡಿಯೋವಿನ ಆವೃತ್ತಿ 1.25 ನಿಮಿಷದಲ್ಲಿ ನೋಡಬಹುದು.
ಮತ್ತಷ್ಟು ನಿಜಾಂಶವನ್ನು ತಿಳಿಯಲು ನಾವು ಗೂಗಲ್‌ನಲ್ಲಿ ಹುಡುಕಿದೆವು. ಹುಡುಕಾಟದಲ್ಲಿ ನಮಗೆ ಸಾಕ್ಟಿ, ಕೃಷ್ಣಾ ಜಿಲ್ಲಾ ಆವೃತ್ತಿಯ ಇ-ಪೇಪರ್‌ನಲ್ಲಿ "ವೈಎಸ್‌ಆರ್ ಅಣ್ಣ ಮನೆಗೆ, ಚಂದ್ರಬಾಬು ಜೈಲಿಗೆ" ಎಂಬ ಲೇಖನವನ್ನು ನೋಡಬಹುದು. ಲೇಖನದ ಪ್ರಕಾರ ಶಾಸಕಿ ರೋಜಾ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಬಂಟುಮಿಲ್ಲಿಯಲ್ಲಿ ಪವನ್ ಕಲ್ಯಾಣ್‌ರನ್ನು ಟೀಕಿಸಿರುವುದನ್ನು ನೋಡಬಹುದು.
ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಯಲ್ಲೂ ಯಾವುದೇ ಸತ್ಯಾಂಶವಿಲ್ಲ. ಶಾಸಕಿ ರೋಜಾ ಎಪಿ ಸಿಎಂ ಜಗನ್ ಮೋಹನ್ ರೆಡ್ಡಿ ವಿರುದ್ದ ಯಾವುದೇ ಸೆನ್ಸೇಷನಲ್ ಹೇಳಿಕೆಯನ್ನು ನೀಡಲಿಲ್ಲ.