ಫ್ಯಾಕ್ಟ್‌ಚೆಕ್: ರಾಜ್ಯದ ಹಲವು ಕಡೆ ರಾತ್ರಿ ಹೊತ್ತು ಸಿಂಹಗಳು ಓಡಾಡುತ್ತಿದೆ ಎಂಬ ಸುದ್ದಿಯಲ್ಲಿ ನಿಜಾಂಶವಿಲ್ಲ
ರಾಜ್ಯದ ಹಲವು ಕಡೆ ರಾತ್ರಿ ಹೊತ್ತು ಸಿಂಹಗಳು ಓಡಾಡುತ್ತಿದೆ ಎಂಬ ಸುದ್ದಿಯಲ್ಲಿ ನಿಜಾಂಶವಿಲ್ಲ
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸಿಂಹವೊಂದು ಬೆಂಗಳೂರಿನ ರಾಜಾಜಿನಗರದಲ್ಲಿನ ದೇವಸ್ಥಾನದ ಮುಂದೆ ಹಾಗೂ ಕರ್ನಾಟಕದ ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ತಿರುಗಾಡುತ್ತಿದೆ ಎಂಬ ಎರಡು ವಿಡಿಯೋಗಳು ಹರಿದಾಡುತ್ತಿದೆ.
ವಿಡಿಯೋ-1
ಬೆಂಗಳೂರಿನ ರಾಜಾಜಿನಗರದ ದೇವಸ್ಥಾನದ ಮುಂದೆ ಇತ್ತಿಚಿಗೆ ಸಿಂಹವೊಂದು ತಿರುಗಾಡುತ್ತಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಘು ಎನ್ ಮೂರ್ತಿ ಎಂಬ ಎಕ್ಸ್ ಖಾತೆದಾರ ದೇವಸ್ಥಾನದ ಮುಂದೆ ಸಿಂಹವೊಂದು ನಡೆದುಕೊಂಡು ಹೋಗುತ್ತಿರುವ ವಿಡಿಯೋವನ್ನು ಶೇರಿ ಮಾಡಿ ವಿಡಿಯೋವಿಗೆ ಕ್ಯಾಪ್ಷನ್ ಆಗಿ "ಬೆಂಗಳೂರು ರಾಜಾಜಿನಗರ ಮಧ್ಯರಾತ್ರಿ 11 ಘಂಟೆ" ಎಂದು ಬರೆದು ಹಂಚಿಕೊಂಡಿದ್ದಾರೆ
ಇದೇ ವಿಡಿಯೋವನ್ನು ಸಾಯಿ ಮೋಹನ್ ಎನ್ನುವ ಮತ್ತೊಬ್ಬ ಎಕ್ಸ್ ಖಾತೆದಾರ ಹಂಚಿಕೊಂಡು ವಿಡಿಯೋವಿಗೆ ಶೀರ್ಷಿಕೆಯಾಗಿ ಇಂದು ಕರ್ನಾಟಕದಲ್ಲಿ ಹುಲಿಯೊಂದು ಭಯವಿಲ್ಲದೆ ಓಡಾಡುತ್ತಿದೆ ಎಂದು ಕ್ಯಾಪ್ಷನ್‌ನ್ನು ನೀಡಿ ತೆಲುಗು ಸ್ಟಾರ್ ನಟ ಎನ್‌ಟಿಆರ್‌ನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಿರುವುದನ್ನು ನಾವು ನೋಡಬಹುದು.
ವಿಡಿಯೋ-2
ವಾಟ್ಸಾಪ್, ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ ಪೆಟ್ರೋಲ್ ಬಂಕ್ ಬಳಿ ಸಿಂಹವೊಂಡು ಓಡಾಡುತ್ತಿದೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
ಸೆಪ್ಟಂಬರ್ 10, 2024ರಂದು ನಮ್ಮ ಕೂಡ್ಲ ನ್ಯೂಸ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ವೈರಲ್ ಆದ ವಿಡಿಯೋವನ್ನು ಹಂಚಿಕೊಂಡು, ವಿಡಿಯೋವಿಗೆ ಶೀರ್ಷಿಕೆಯಾಗಿ "ಪೆಟ್ರೋಲ್ ಪಂಪ್‌ಗೆ ತಡರಾತ್ರಿ ಎಂಟ್ರಿ ಕೊಟ್ಟ ಸಿಂಹ. ಕಾಡು ಬಿಟ್ಟು ನಾಡಿಗೆ ಬಂದ ಕಾಡಿನ ರಾಜ! ವಿಡಿಯೋ ವೈರಲ್!" ಎಂದು ಬರೆದು ಪೋಸ್ಟ್ ಮಾಡಿರುವುದನ್ನು ನಾವು ಕಾಣಬಹುದು.
ಕನ್ನಡ ಮಾಧ್ಯಮ ಸಂಸ್ಥೆಯಲ್ಲಿ ಒಂದಾದ ಝೀ ಕನ್ನಡ ನ್ಯೂಸ್‌ನ ಫೇಸ್‌ಬುಕ್ ಖಾತೆಯಲ್ಲಿ ಸಿಂಹ ಪೆಟ್ರೋಲ್ ಬಂಕ್ನಲ್ಲಿ ಓಡಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡು "ಪಾವಗಡ ಪೆಟ್ರೋಲ್ ಬಂಕ್‌ನಲ್ಲಿ ಅಡ್ಡಾಡಿದ ಸಿಂಹ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಸೆಪ್ಟಂಬರ್ 12, 2024ರಂದು ವಿಜಯ ವಿಶ್ವವಾಣಿ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸುವ ಸಿಂಹ "ಪಾವಗಡ ಪೆಟ್ರೋಲ್ ಬಂಕ್‌ನಲ್ಲಿ ಅಡ್ಡಾಡಿದೆ" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ನಾವು ನೋಡಬಹುದು
ಸೆಪ್ಟಂಬರ್ 13, 2024ರಂದು ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಇದೇ ವಿಡಿಯೋವಿಗೆ "ಹೊಸದುರ್ಗ ಹ್ಯಾಂಡ್ ಪಾಸ್ಟ್ ಹತ್ತಿರ ರಾತ್ರಿ ಸಿಂಹ ದರ್ಶನ" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಹೀಗೆ ಕರ್ನಾಟಕದ ಸಾಕಷ್ಟು ಸ್ಥಳಗಳಲ್ಲಿ ಸಿಂಹವೊಂದು ತಿರುಗಾಡಿದೆ ಎಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದ ಬಳಕೆದಾರರು ಹಂಚಿಕೊಂಡಿದ್ದಾರೆ
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವಿಡಿಯೋ-01ರಲ್ಲಿ ದೇವಸ್ಥಾನದ ಮುಂದೆ ಕಾಣುವ ಸಿಂಹ ಬೆಂಗಳೂರಿನಲ್ಲಿರುವ ರಾಜಾಜಿನಗರದಲ್ಲಿ ಕಾಣಿಸಿಕೊಂಡಿಲ್ಲ. ವೈರಲ್ ಆದ ವಿಡಿಯೋದಲ್ಲಿ ಕಾಣುವ ಸಿಂಹ ಗುಜರಾತ್‌ನ ರಾಜುಲಾದಲ್ಲಿನ ಲಕ್ಷ್ಮಿ ನಾರಾಯಣ ದೇವಸ್ಥಾನದ ಮುಂದೆ ಓಡಾಡಿರುವುದು ಹಾಗೆ ಪೆಟ್ರೋಲ್ ಬಂಕ್‌ನಲ್ಲಿ ಕಾಣಿಸುವ ಸಿಂಹ ಕರ್ನಾಟಕದಲ್ಲಿನ ವಿವಿಧ ಪ್ರದೇಶಗಳಲ್ಲಿ ಕಾಣಿಸಿಲ್ಲ ಬದಲಿಗೆ ಗುಜರಾತ್‌ನ ಅಮ್ರೇಲಿಯ ಗಿರ್ ಗ್ರಾಮದಲ್ಲಿ ಕಾಣಿಸಿರುವುದು.
ವಿಡಿಯೋ-01
ನಾವು ವೈರಲ್ ಆದ ಮೊದಲ ವಿಡಿಯೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್ ಆದ ವಿಡಿಯೋದಲ್ಲಿ ಕಾಣಿಸುವ ದೇವಸ್ಥಾನ ಜರಾತ್‌ನ ಅಮ್ರೇಲಿ ಜಿಲ್ಲೆಯ ರಾಜೌಲಾದ ಲಕ್ಷ್ಮೀ ನಾರಾಯಣ ಮಂದಿರದ ಮುಂಭಾಗದ್ದು ಎಂದು ಖಚಿತವಾಯಿತು. ನಮಗೆ ದೊರೆತ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಲು ವೈರಲ್ ಆದ ವಿಡಿಯೋಗೆ ಸಂಬಂಧಿಸಿದ ಕೀವರ್ಡ್‌ನ್ನು ಬಳಸಿ ನಾವು ಗೂಗಲ್ ಮ್ಯಾಪ್‌ನಲ್ಲಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್ ವಿಡಿಯೋದಲ್ಲಿ ಕಾಣುವ ದೇವಸ್ಥಾನ ಮತ್ತು ಗೂಗಲ್ ಮ್ಯಾಪ್‌ನಲ್ಲಿರುವ ದೇವಸ್ಥಾನದ ಮುಂಭಾಗ ಒಂದೇ ಎಂದು ಸಾಭೀತಾಯಿತು.
ಮಾರ್ಚ್ 9,2024ರಂದು ಟಿವಿ9 ಗುಜರಾತಿ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ವೈರಲ್ ಆದ ವಿಡಿಯೋ ಬಗ್ಗೆ ವರದಿ ಮಾಡಿರುವುದನ್ನು ನಾವು ನೋಡಬಹುದು. "Lion spotted near Laxminarayan Temple, Rajula | Amreli | Gujarat | TV9Gujarati" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ
ಮಾರ್ಚ್ 26,2024ರಂದು ಕ್ರೇಟಲೆ ಮಿಡಿಯಾ ಎಂಬ ಎಕ್ಸ್ ಖಾತೆದಾರರು ಇಮ್ಮ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡು "ಗುಜರಾತಿನ ರಾಜುಲಾದಲ್ಲಿನ ಕೋವಾಯಾದಲ್ಲಿರುವ ಲಕ್ಷ್ಮೀನಾರಾಯಣ ದೇವಸ್ಥಾನ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು.
ಈ ಹಿಂದೆ ಇದೇ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ಆಂಧ್ರಪ್ರದೇಶದಲ್ಲಿನ ವಿಜಯವಾಡದಲ್ಲಿರುವ ಪ್ರಸಿದ್ಧ ದುರ್ಗಾ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಬಳಿ ಸಿಂಹ ತಿರುಗುತ್ತಿದೆ ಎಂಬ ಸುದ್ದಿ ಹರಿದಾಡಿತ್ತು. ಆಗಲೂ ಸಹ ನಾವು ಈ ಸುದ್ದಿಗೆ ಸಂಬಂಧಿಸಿದ ಫ್ಯಾಕ್ಟ್‌ಚೆಕ್‌ನ್ನು ಮಾಡೆದ್ದೆವು.
ವಿಡಿಯೋ-02
ಇನ್ನು ಪೆಟ್ರೋಲ್ ಬಂಕ್‌ನಲ್ಲಿ ಕಾಣಿಸಿಕೊಂಡ ಸಿಂಹದ ಬಗ್ಗೆ ಮಾಹಿತಿ ಏನಾದರೂ ಸಿಗುತ್ತಾ ಎಂದು ವೈರಲ್ ವಿಡಿಯೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್‌ನ ಮೂಲಕ ಹುಡುಕಾಟ ನಡೆಸಿದಾಗ ನಮಗೆ ನ್ಯೂಸ್18 ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದ ವಿಡಿಯೋವೊಂದು ಕಾಣಿಸಿತು. ವೈರಲ್ ಆದ ವಿಡಿಯೋವಿಗೆ "ಗುಜರಾತ್‌ನ ಅಮ್ರೇಲಿಯಾದ ಧರಿ-ವಿಸಾವದರ್ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ಸಿಂಹವೊಂದು ಬಂಕ್‌ನ ಸಿಸಿ ಕ್ಯಾಮರಾದಲ್ಲಿ ಕಾಣಿಸಿದೆ" ಎಂದು ಬರೆದು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಮಿರರ್ ನೌ ಎನ್ನುವ ಇನ್‌ಸ್ಟಾಗ್ರಾಮ್ ಖಾತೆಯಲ್ಲೂ ವೈರಲ್ ಆದ ವಿಡಿಯೋವಿಗೆ "#Watch: A #lion was spotted at a #petrolpump, reportedly in a village in #Gujarat's #Gir. At least a week old video has now gone #viral on social media. #Trending #Animal #India" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಎರಡೂ ವಿಡಿಯೋವಿನಲ್ಲೂ ಸತ್ಯಾಂಶವಿಲ್ಲ. ವೈರಲ್ ಆದ ಮೊದಲ ವಿಡಿಯೋದಲ್ಲಿ ಕಾಣುವ ಸಿಂಹ ಗುಜರಾತ್‌ನ ರಾಜುಲಾದಲ್ಲಿನ ಲಕ್ಷ್ಮಿ ನಾರಾಯಣ ದೇವಸ್ಥಾನದ ಮುಂದೆ ಓಡಾಡಿರುವುದು ಹಾಗೆ ಪೆಟ್ರೋಲ್ ಬಂಕ್‌ನಲ್ಲಿ ಕಾಣಿಸುವ ಸಿಂಹ ಗುಜರಾತ್‌ನ ಅಮ್ರೇಲಿಯ ಗಿರ್ ಗ್ರಾಮದಲ್ಲಿ ಕಾಣಿಸಿರುವುದು ಎಂದು ಸಾಭೀತಾಗಿದೆ