ಫ್ಯಾಕ್ಟ್‌ಚೆಕ್: ಉತ್ತರ ಪ್ರದೇಶದ ವೃದ್ದನ ಮುಖಕ್ಕೆ ಮುಸ್ಲಿಂ ಯುವಕನೊಬ್ಬ ಸ್ಪ್ರೇ ಮಾಡಿದ್ದಾರೆ ಎಂಬ ಸುದ್ದಿಯಲ್ಲಿ ಯಾವ ಸತ್ಯಾಂಶವಿಲ್ಲ
ಉತ್ತರ ಪ್ರದೇಶದ ವೃದ್ದನ ಮುಖಕ್ಕೆ ಮುಸ್ಲಿಂ ಯುವಕನೊಬ್ಬ ಸ್ಪ್ರೇ ಮಾಡಿದ್ದಾರೆ ಎಂಬ ಸುದ್ದಿಯಲ್ಲಿ ಯಾವ ಸತ್ಯಾಂಶವಿಲ್ಲ
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಲೈಕ್ಸ್ ಮತ್ತು ಫಾಲೋವರ್ಸ್‌ನ್ನು ಹೆಚ್ಚಿಸಿಕೊಳ್ಳಲು ಯೂಟ್ಯೂಬರ್‌ಗಳು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ ಎಂಬುದು ಮತ್ತೋಮ್ಮೆ ಸಾಭೀತಾಗಿದೆ. ಇತ್ತೀಚಿಗೆ ಉತ್ತರ ಪ್ರದೇಶದ ಲಖನೌದಲ್ಲಿ ಯೂಟ್ಯೂಬರ್ ಮಾಡಿದ ಫ್ರಾಂಕ್ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ವಿಡಿಯೋವನ್ನು ನೋಡುವುದಾದರೆ, ಒಬ್ಬ ವೃದ್ದ ವ್ಯಕ್ತಿ ಸೈಕಲ್ ತುಳಿಯುತ್ತಾ ರಸ್ತೆಯಲ್ಲಿ ಹೋಗುತ್ತಿರುತ್ತಾನೆ. ಸೈಕಲ್‌ನ ಹಿಂದೆ ಬೈಕ್‌ನಲ್ಲಿ ಬಂದಂತಹ ವ್ಯಕ್ತಿಯೊಬ್ಬ ಆ ವೃದ್ದನ ಮೇಲೆ ಶೇವಿಂಗ್ ಕ್ರೀಮ್ ಎರಚುತ್ತಾನೆ. ದಿಢೀರ್ ಆಗಿ ದಾಳಿಯಿಂದಾಗಿ ಆ ವೃದ್ದನ ಬಾಯಿ, ಕಣ್ಣು ಮೇಲೆಲ್ಲಾ ಶೇವಿಂಗ್ ಕ್ರೀಮ್‌ನಿಂದ ಮುಚ್ಚಿ ಹೋಗುತ್ತದೆ. ಆ ವೃದ್ದ ವ್ಯಕ್ಸತಿ ಸೈಕಲ್ ಸಹ ತುಳಿಯಲು ಆಗದೆ ಪರದಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಹಾಗೆ ಪೊಲೀಸರು ವಿಡಿಯೋದಲ್ಲಿ ಕಾಣುವ ಯುವಕನ್ನು ಕರೆದುಕೊಂಡು ಹೋಗುತ್ತಿರುವುದನ್ನು ಸಹ ನೋಡಬಹುದು.
ಸೆಪ್ಟಂಬರ್ 26,2024ರಂದು ಅರುಣ್ ಕುಮಾರ್ ಹಿಂದೂ ಎಂಬ ಎಕ್ಸ್ ಖಾತೆದಾರ ತನ್ನ ಖಾತೆಯಲ್ಲಿ ವೃದ್ದ ವ್ಯಕ್ತಿಯ ಮೇಲೆ ಸ್ಪ್ರೇ ಮಾಡಿದ ವಿಡಿಯೋವನ್ನು ಶೇರ್ ಮಾಡಿ "ತನ್ನ ಪಾಡಿಗೆ ಹೋಗುತ್ತಿದ್ದ ಅಮಾಯಕ ವೃದ್ಧನಿಗೆ ಪುಂಡ ಮುಸ್ಲಿಂ ಯುವಕರಿಂದ ಅನುಚಿತ ವರ್ತನೆ. ಆದರೆ ನಂತರ ನಡೆದಿದ್ದು ಯುಪಿ ಪೊಲೀಸರ ಕಾರ್ಯಾಚರಣೆ. ಈ ರೀತಿ ಕರ್ನಾಟಕದಲ್ಲೂ ಆಗಬೇಕು. ಆಗ ಈ ವೀಲಿಂಗ್ ಮಾಡುವ ಮುಸ್ಲಿಂ ಯುವಕರಿಗೆ ಬಿಸಿ ಮುಟ್ಟುತ್ತದೆ." ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇದೇ ವಿಡಿಯೋವನ್ನು ನಾಗೇಶ್ ಪ್ರೀತಮ್ ಎನ್ನುವ ಎಕ್ಸ್ ಖಾತೆದಾರ ತನ್ನ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡು "ಸೈಕಲ್ ಅಲ್ಲಿ ಹೋಗುತ್ತಿದ್ದ ಅಮಾಯಕ ವೃದ್ಧನಿಗೆ ಮುಸ್ಲಿಂ ಯುವಕ ಅನುಚಿತ ವರ್ತನೆ ಯುಪಿ ಪೊಲೀಸರಿಂದ ಭರ್ಜರಿ ಬ್ಯಾಟಿಂಗ್" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿ ಎಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ ವಿಡಿಯೋದಲ್ಲಿ ಸ್ಪ್ರೇ ಹಾಕುತ್ತಾ ಕಾಣುವ ವ್ಯಕ್ತಿ ವಿನಯ್ ಯಾದವ್ ಆದ ಮುಸ್ಲಿಂ ಅಲ್ಲ ಹಿಂದೂ ಎಂದು ಸಾಭಿತಾಗಿದೆ.
ನಾವು ವೈರಲ್ ಆದ ವಿಡಿಯೋದಿಂದ ಕೆಲವು ಪ್ರಮುಖ ಕೀಫ್ರೇಮ್‌ಗಲನ್ನು ಉಪಯೋಗಿಸಿಕೊಂಡು ಗೂಗಲ್ ರಿವರ್ಸ್ ಸರ್ಚ್‌ನಲ್ಲಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಸಾಕಷ್ಟು ವರದಿಗಳು ಕಂಡುಬಂದವು. ಕನ್ನಡ ಮಾDಯಮ ಸಂಸ್ಥೆ ಸುವರ್ಣ ನ್ಯೂಸ್.ಕಾಂ ವೆಬ್‌ಸೈಟ್‌ನಲ್ಲಿ "ಪ್ರಾಂಕ್ ವಿಡಿಯೋಗೆ ಹಿರಿಯ ವ್ಯಕ್ತಿ ಮೇಲೆ ಶೇವಿಂಗ್ ಕ್ರೀಮ್ ಸ್ಪ್ರೇ ಮಾಡಿದ ಯೂಟ್ಯೂಬರ್ ಅರೆಸ್ಟ್!" ಎಂಬ ಹೆಡ್‌ಲೈನ್‌ನೊಂದಿಗೆ ವರದಿಯೊಂದನ್ನು ಹಂಚಿಕೊಂಡಿದ್ದರು. ವರದಿಯನ್ನು ನೋಡುವುದಾದರೆ,
ಪ್ರಾಂಕ್ ವಿಡಿಯೋಗಾಗಿ ಸೈಕಲ್ ತುಳಿದು ಸಾಗುತ್ತಿದ್ದ ಹಿರಿಯ ವ್ಯಕ್ತಿ ಮೇಲೆ ಶೇವಿಂಗ್ ಕ್ರೀಮ್ ಎರಚಿ ವಿಕೃತಿ ಮೆರೆದ ಯೂಟ್ಯೂಬರ್ ವಿನಯ್ ಯಾದವ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಒಂದು ಸುತ್ತಿನ ಕಜ್ಜಾಯವನ್ನೂ ನೀಡಲಾಗಿದ್ದು, ಇದೀಗ ದಮ್ಮಯಾ ಬಿಟ್ಟುಬಿಡಿ ಎಂದು ಅಂಗಲಾಚುತ್ತಿದ್ದಾನೆ.ಪ್ರಾಂಕ್ ವಿಡಿಯೋಗಾಗಿ ಅತೀರೇಖದಿಂದ ವರ್ತಿಸಿದ ಯೂಟ್ಯೂಬರ್ ವಿರುದ್ಧ ಪ್ರಕರಣ ದಾಖಿಲಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
23 ಸೆಪ್ಟಂಬರ್ 2024ರಂದು ʼದಿ ಇಂಡಿಯನ್ ಸರ್ಕಾಸಮ್ʼ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡು "YouTuber apprehended for spraying foam on an elderly man on a busy lane for making reels. Later YouTuber Vinay Yadav was seen struggling to walk outside the police station" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದರು.
ಸೆಪ್ಟಂಬರ್ 24, 2024ರಂದು ನ್ಯೂಸ್ 18 ವೆಬ್‌ಸೈಟ್‌ನಲ್ಲಿ "ಝಾನ್ಸಿಯ ನವಾಬಾದ್ ಪ್ರದೇಶದಲ್ಲಿನ ಎಲೈಟ್-ಚಿತ್ರಾ ರಸ್ತೆಯ ಫ್ಲೈ ಓವರ್‌ನಲ್ಲಿ ಹೋಗುತ್ತಿದ್ದ ವೃದ್ದರೊಬ್ಬರ ಮುಖಕ್ಕೆ ಇಬ್ಬರು ಬೈಕ್ ಸವಾರರು ಸ್ಪ್ರೇ ಎರಚಿ ತಮ್ಮ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡು ತನ್ನ ಖಾತೆಯಲ್ಲಿ ಹೆಚ್ಚು ಲೈಕ್ಸ್‌ಗೋಸ್ಕರ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ನೋಡಿದ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ವಿಡಿಯೋ ಚಿತ್ರೀಕರಿಸಿದ ಯೂಟ್ಯೂಬರ್ ವಿನಯ್ ಯಾದವ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ” ಎಂದು ಪೊಲೀಸರು ಹೇಳಿರುವುದಾಗಿ ವರದಿ ಮಾಡಿದ್ದರು.
ಮತ್ತಷ್ಟು ಮಾಹಿತಿಯನ್ನು ಸಂಗ್ರಹಿಸಲು ನಾವು ಝಾನ್ಸಿಯ ಪೊಲೀಸರ ಅಧಿಕೃತ ಖಾತೆಯಲ್ಲಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಝಾನ್ಸಿಯ ಪೊಲೀಸರ ಖಾತೆಯಲ್ಲಿ "सड़क पर साइकिल से चलते बुजुर्ग व्यक्ति के चेहरे पर स्प्रे करने वाले युवक को पुलिस द्वारा गिरफ्तार कर की जा रही कार्यवाही के संबंध में पुलिस अधीक्षक नगर की वीडियो बाइट" ಎಂದು ಹಿಂದಿಯಲ್ಲಿ ಶೀರ್ಷಿಕೆಯನ್ನೀಡಿ ಪೊಸ್ಟ್ ಮಾಡಿರುವುದನ್ನು ಕಂಡುಹಿಡಿದೆವು.
ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ರಸ್ತೆಯಲ್ಲಿ ವಯಸ್ಸಾದ ವ್ಯಕ್ತಿಯ ಮುಖದ ಮೇಲೆ ಸ್ಪ್ರೇ ಹಾಕಿದ ವೀಡಿಯೊ ನಮ್ಮ ಗಮನಕ್ಕೆ ಬಂದಿದ್ದು , ನವಾಬಾದ್ ಪೊಲೀಸರು ಯೂಟ್ಯೂಬರ್ ವಿನಯ್ ಯಾದವ್ ಅವರನ್ನು ಬಂಧಿಸಿದ್ದಾರೆ. ಹಾಗೆ ಆತನ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಝಾನ್ಸಿಯ ಪೊಲೀಸರು ಹೇಳಿಕೆಯನ್ನು ನೀಡಿರುವುದನ್ನು ನಾವು ಪೋಸ್ಟ್‌ನಲ್ಲಿ ನೋಡಬಹುದು.
ಹೀಗಾಗಿ ವೈರಲ್ ಆದ ಸುದ್ದಿಯನ್ನು ಸಾಮಾಜಿಕ ಬಳಕೆದಾರದನ್ನು ತಪ್ಪುದಾರಿ ಎಳೆಯುವ ಕೆಲಸ ಮಾಡುತ್ತಿದೆ. ರಸ್ತೆಯಲ್ಲಿ ಹೋಗುತ್ತಿದ್ದ ವೃದ್ದನ ಮೇಲೆ ಸ್ನೋ ಸ್ಪ್ರೇ ಮಾಡಿದ ವ್ಯಕ್ತಿ ವಿನಯ್ ಯಾದವ್ ಆತ ಮುಸ್ಲಿಂ ಅಲ್ಲ ಹಿಂದೂ