ಫ್ಯಾಕ್ಟ್‌ಚೆಕ್: ಇತ್ತೀಚೆಗೆ ಕ್ಯಾಬಿನೆಟ್ ಸಂಪುಟದ ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸಂತ ಪ್ರೇಮಾನಂದ ವಿಡಿಯೋಗಳನ್ನು ವೀಕ್ಷಿಸಿದರಾ?
ಇತ್ತೀಚೆಗೆ ಕ್ಯಾಬಿನೆಟ್ ಸಂಪುಟದ ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸಂತ ಪ್ರೇಮಾನಂದ ವಿಡಿಯೋಗಳನ್ನು ವೀಕ್ಷಿಸಿದರಾ?
ಇತ್ತೀಚೆಗೆ ಕ್ಯಾಬಿನೆಟ್ ಸಚಿವರೊಂದಿಗೆ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂತ ಪ್ರೇಮಾನಂದರ ಭಾಷಣದ ವಿಡಿಯೋವನ್ನು ವಿಕ್ಷಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವಿಡಿಯೋದಲ್ಲಿ ಮೋದಿ ಕ್ಯಾಬಿನೆಟ್ ಸಭೆಯಲ್ಲಿರುವ ಮೇಜಿನ ಮೇಲೆ ಕುಳಿತುಕೊಂಡು ವಿಡಿಯೋವನ್ನು ವೀಕ್ಷಿಸುತ್ತಿರುವ ಎರಡು ವಿಭಿನ್ನ ವೈರಲ್ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ನೋಡಬಹುದು. ವೈರಲ್ ವಿಡಿಯೋದಲ್ಲಿ ಮೋದಿಯ ಜೊತೆಗೆ ಕೆಲವು ರಾಜ್ಯಗಳ ಮಂತ್ರಿಗಳೂ ಸಹ ವಿಡಿಯೋವನ್ನು ನೋಡುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಮೋದಿ ವಿಡಿಯೋವನ್ನು ನೋಡುತ್ತಿರುವಾಗ ಪಕ್ಕದಲ್ಲಿ ಇಸ್ರೋ ಅಧ್ಯಕ್ಷ ಸೋಮನಾಥ್ ಟಿವಿ ನಿಂತು ಏನೋ ವಿವರಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ವೀಡಿಯೊ-1
ವೈರಲ್ ಆದ ಇನ್ನೊಂದು ವಿಡಿಯೋದಲ್ಲಿ ಮೋದಿ ಮತ್ತು ಸಂಪುಟದಲ್ಲಿನ ಮಂತ್ರಿಗಳು ಪ್ರೇಮಾನಂದ್ ಮಹಾರಾಜರ ಭಾಷಣವನ್ನು ನೋಡುತ್ತಿರುವುದನ್ನು ನೋಡಬಹುದು.
ವೀಡಿಯೊ - 2
ಫ್ಯಾಕ್ಟ್‌ಚೆಕ್
ವೈರಲ್ ಆದ ವಿಡಿಯೋದಲ್ಲಾಗಲಿ ಸುದ್ದಿಯಲ್ಲಾಗಲಿ ಯಾವುದೇ ಸತ್ಯಾಂಶವಿಲ್ಲ. ಮೂಲ ವಿಡಿಯೋವನ್ನು ಮಾರ್ಫಿಂಗ್ ಮಾಡಿ ವೈರಲ್ ಮಾಡಲಾಗಿದೆ.
ವಿಡಿಯೋ-01
ವಿಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ನಮಗೆ ವೈರಲ್ ವಿಡಿಯೋದಲ್ಲಿ ಕಾಣಿಸಿದ ಹಾಗೆ ಸಭೆಗೂ ಪ್ರೇಮಾನಂದರ ವಿಡಿಯೋಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿದು ಬಂದಿತು. ಕ್ಯಾಬಿನೆಟ್‌ನಲ್ಲಿ ಕಾಣಿಸುತ್ತಿರುವ ಪ್ರೇಮಾನಂದರ ವಿಡಿಯೋವಿನಲ್ಲೂ ಸಾಕಷ್ಟು ತಪ್ಪುಗಳಿವೆ.
ವೈರಲ್ ಆದ ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಫ್ರೇಮ್‌ಗಳನ್ನು ಬಳಸಿಕೊಂಡು ನಾವು ಗೂಗಲ್‌ನ ಮೂಲಕ ರಿವರ್ಸ್ ಇಮೇಜ್ ರಿಸರ್ಚ್ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಅಕ್ಟೊಬರ್ 17,2023ರಂದು ಗಗನ್‌ಯಾನ್ ಮಿಷನ್‌ಗೆ ಸಂಬಂಧಿಸಿದ ಒಂದು ಮಿಟಿಂಗ್‌ನ ವಿಡಿಯೊವೊಂದು ನಮಗೆ ಕಾಣಿಸಿತು. ಈ ಮಿಟಿಂಗ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆ ವಹಿಸಿಕೊಂಡಿರುವುದನ್ನು ನಾವು ಕಾಣಬಹುದು. ವಿಡಿಯೋಗೆ ಶೀರ್ಷಿಕೆಯಾಗಿ "PM Modi chairs high-level meeting on the progress of Gaganyaan Mission | ISRO | S. Somanath" ಎಂದು ನೀಡಿ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾಗಿತ್ತು. ಭಾರತದಲ್ಲಿ ಮತ್ತಷ್ಟು ಬಾಹ್ಯಾಕಾಸದಲ್ಲಿ ಪ್ರಗತಿಯನ್ನು ಸಾಧಿಸಲು ಮತ್ತು ಗಗನ್‌ಯಾನ್ ಮಿಷನ್ ಪ್ರಗತಿಯನ್ನು ಪರಿಶೀಲಿಸಲು ಹಾಗೆ ಮುಂದಿನ ಗಗನಯಾನ್ ಮಿಷನ್ ಯೋಜನೆಗೆ ಸಂಬಂಧಿಸಿದ ಮಾಹಿತಿಯನ್ನು ತಿಳಿಯಲು ಈ ಮೀಟಿಂಗ್ ನಡೆಸಲಾಗಿತ್ತು.
ಈಟಿಸರ್ಕಾರಿ.ಕಾಂ ಪ್ರಕಟಿಸಿದ ವರದಿಯ ಪ್ರಕಾರ ನಡೆದ ಮೀಡಿಂಗ್‌ನಲ್ಲಿ ಬಾಹ್ಯಾಕಾಶ ಸಂಸ್ಥೆ ಇಲ್ಲಿಯವರೆಗೆ ಅಭಿವೃದ್ದಿ ಪಡಿಸಿದ ಹಾಗೆ ಮುಂಬುರುವ ಯೋಜನೆಗಳ ಮಾಹಿತಿಯನ್ನು ಪಡೆಯಲು ಗಗನ್‌ಯಾನ್ ಮಿಷನ್ ಮಿಟಿಂಗ್ ನಡೆಸಲಾಗಿತ್ತು.
ಏಎನ್‌ಐನಲ್ಲೂ ಸಹ ಮಿಟಿಂಗ್‌ನಲ್ಲಿ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಹೇಳಲಾಗಿತ್ತು.
ಇದೇ ವಿಡಿಯೋವನ್ನು ಪಿಎಂಒ ಯೂಟ್ಯೂಬ್ ಚಾನೆಲ್‌ನಲ್ಲೂ ಪ್ರಕಟಿಸಲಾಗಿದೆ.
ವಿಡಿಯೋ-02
ಗೂಗಲ್ ರಿವರ್ಸ್ ಸರ್ಚ್ ಮಾಡಿದಾಗ ನಮಗೆ ಕೆಲವು ಪ್ರಮುಖ ಫ್ರೇಮ್‌ಗಳನ್ನು ಬಳಸಿಕೊಂಡು ಹುಡುಕಾಟ ನಡೆಸಿದಾಗ ನಮಗೆ ಜೂನ್ 3, 2023ರಂದು ಅಪ್‌ಲೋಡ್ ಮಾಡಿದಂತಹ ವಿಡಿಯೋ ಕಂಡುಬಂದಿತು. ಇತ್ತೀಚೆಗೆ ಒಡಿಶಾದಲ್ಲಿ ಸಂಬಂಧಿಸಿದ ಸರಣಿ ರೈಲು ಅಪಘಾತವಾದ ಬಾಲಸೋರು ರೈಲು ಅಪಘಾತದ ಕುರಿತು ಕ್ಯಾಬಿನೆಟ್ ಸಭೆ ನಡೆಸಲಾಗಿತ್ತು. ಈ ಸಭೆಯ ಪೋರ್ತಿ ವಿಡಿಯೋವನ್ನು ಪ್ರಧಾನಿ ಮೋದಿಯವರ ಯೂಟ್ಯೂಬ್ ಚಾನೆಲ್‌ನಲ್ಲಿ ನೋಡಬಹುದಾಗಿದೆ.
ಝೀ ನ್ಯೂಸ್‌ನಲ್ಲೂ ಸಹ ವಿಡಿಯೋವನ್ನು ಶೇರ್ ಮಾಡಿ "Odisha Train Accident: PM Narendra Modi Chairs High-Level Meeting To Review Balasore Train Accident" ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಿದ್ದರು.
ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಕಾಬಿನೇಟ್ ಮಿಡಿಂಗ್‌ನಲ್ಲಿ ಸಂತ ಪ್ರೇಮಾನಂದರ ನೋಡುತ್ತಿರಲಿಲ್ಲ ಬದಲಿಗೆ ಒಡಿಶಾದ ರೈಲು ದುರಂತದ ಬಗ್ಗೆ ಚರ್ಚೆಯನ್ನು ಮಾಡಲಾಗುತ್ತಿತ್ತು