ಫ್ಯಾಕ್ಟ್‌ಚೆಕ್‌: ವೈರಲ್ ಆಗಿರುವ ವಿಡಿಯೋದಲ್ಲಿ ಗಾಜಾದ ಶಾಲೆಯೊಂದಕ್ಕೆ ಅಪ್ಪಳಿಸಿದ್ದು ಕ್ಷಿಪಣಿಯ ಅವಶೇಷಗಳಲ್ಲ, ವೈದ್ಯಕೀಯ ಉಪಕರಣಗಳು

ವೈರಲ್ ಆಗಿರುವ ವಿಡಿಯೋದಲ್ಲಿ ಗಾಜಾದ ಶಾಲೆಯೊಂದಕ್ಕೆ ಅಪ್ಪಳಿಸಿದ್ದು ಕ್ಷಿಪಣಿಯ ಅವಶೇಷಗಳಲ್ಲ, ವೈದ್ಯಕೀಯ ಉಪಕರಣಗಳು

Update: 2024-06-27 22:47 GMT

missile dropped on UN-run school in Gaza

ಜೂನ್ 8, 2024ರ ಬೆಳಿಗ್ಗೆ, ಇಸ್ರೇಲಿ ಪಡೆಗಳು ಗಾಜಾ ಪಟ್ಟಿಯಲ್ಲಿರುವ ಅಲ್-ನುಸಿರಾತ್ ನಿರಾಶ್ರಿತರ ಶಿಬಿರ ಪ್ರದೇಶದ ಮೇಲೆ ಬಾಂಬ್ ದಾಳಿ ನಡೆಸಿತ್ತು. ಈ ಮಾರಣಾಂತಿಕ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 700 ಜನರು ಗಾಯಗೊಂಡಿದ್ದಲ್ಲದೇ, 270 ಜನರು ಸಾವನ್ನಪ್ಪಿದ್ದರೆಂದು ವರದಿಯಾಗಿತ್ತು.

ದಾಳಿಯ ನಂತರ, ಇಸ್ರೇಲಿ ಸೇನೆಯು ಗಾಜಾದ ನಿರಾಶ್ರಿತರ ಶಿಬಿರದ ಮೇಲೆ ಗುಂಡು ಹಾರಿಸಿದ ಕ್ಷಿಪಣಿಯ ಅವಶೇಷಗಳನ್ನು ತೋರಿಸುವ ದೃಶ್ಯಗಳು ಹಾಗೂ ಕೆಲವು ಉಪಕರಣಗಳನ್ನು ತೋರಿಸುವ ವೀಡಿಯೊ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲ, ಕ್ಷಿಪಣಿಯ ಮೇಲೆ 'ಮೇಡ್ ಇನ್ ಇಂಡಿಯಾ' ಎಂದು ಬರೆದಿದೆ.

ಹೀಗಾಗಿ ಕ್ಷಿಪಣಿ ದಾಳಿಯಲ್ಲಿ ಭಾರತದ ಕೈವಾಡವಿದೆ ಎಂಬ ವಾದವೂ ಶುರುವಾಗಿದೆ. ನೂರಾರು ನಾಗರಿಕರ ಸಾವಿಗೆ ಕಾರಣವಾದ ದಾಳಿಯಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಿಸಿ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತಿದೆ ಎಂಬ ವದಂತಿಗಳನ್ನೂ ಹರಡುತ್ತಿದ್ದಾರೆ.

ವೈರಲ್‌ ವೀಡಿಯೋಗೆ ಶೀರ್ಷಿಕೆಯಾಗಿ "ಮೇಡ್ ಇನ್ ಇಂಡಿಯಾ" ಎಂದು ಬರೆದು ಪೋಸ್ಟ್‌ ಮಾಡಲಾಗಿದೆ. ಹಾಗೆ ನುಸಿರತ್ ನಿರಾಶ್ರಿತರ ಶಿಬಿರದಲ್ಲಿರುವ ಯುಎನ್ ಶಿಬಿರದಲ್ಲಿ ಇಸ್ರೇಲಿ ಯುದ್ಧವಿಮಾನಗಳಿಂದ ಕಳಚಿರುವ ಕ್ಷಿಪಣಿಯ ಅವಶೇಷಗಳ ಮೇಲೆ ಮೇಡ್ ಇನ್ ಇಂಡಿಯಾ ಲೇಬಲ್ ಕೂಡ ನೋಡಬಹುದಾಗಿದೆ.



ಫ್ಯಾಕ್ಟ್‌ಚೆಕ್‌

ವೈರಲ್ ಆದ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ವೀಡಿಯೋದಲ್ಲಿ ಇರುವುದು ನುಸಿರತ್ ನಿರಾಶ್ರಿತರ ಶಿಬಿರದ ಮೇಲೆ ದಾಳಿ ನಡೆಸಲು ಬಳಸಿದ ಕ್ಷಿಪಣಿಯ ಅವಶೇಷಗಳಲ್ಲ.

ವೈರಲ್‌ ಸುದ್ದಿಯಲ್ಲಿರುವ ಸತ್ಯಾಂಶವನ್ನು ತಿಳಿಯಲು ನಾವು ವೀಡಿಯೊದಿಂದ ತೆಗೆದ ಕೆಲವು ಪ್ರಮುಖ ಕೀಫ್ರೇಮ್‌ಗಳ ಮೂಲಕ ಹುಡುಕಾಟ ನಡೆಸಿದಾಗ ನಮಗೆ ಯುಎಲ್‌ ಇಂಡಿಯಾ (ವೈದ್ಯಕೀಯ ಸಾಧನ ಪ್ರಮಾಣೀಕರಣ ಸಂಸ್ಥೆ)ಯ ಲೋಗೋವನ್ನು ನೋಡಬಹುದು ಎಂದು ಹೇಳುವ ಪೋಸ್ಟ್‌ವೊಂದು ನಾವು X ಖಾತೆಯಲ್ಲಿ ಖಾತೆದಾರರರೊಬ್ಬರು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಈ ಅವಶೇಷಗಳು ಗಾಜಾಕ್ಕೆ ನೀಡಿದ ವೈದ್ಯಕೀಯ ಉಪಕರಣಗಳು, ಕ್ಷಿಪಣಿಗಳಲ್ಲ ಎಂದು ಶೀರ್ಷಿಕೆಯನ್ನೀಡಿ ವಿಡಿಯೋವನ್ನು ಪೋಸ್ಟ್‌ ಮಾಡಿದ್ದರು. 

ವೈರಲ್ ವೀಡಿಯೊದಿಂದ ತೆಗೆದ ಸ್ಕ್ರೀನ್‌ಶಾಟ್‌ಗಳನ್ನು ಸೂಕ್ಷ್ಮವಾಗಿ ಗಮನಿಸಿದ ನಂತರ, ಸಿಕ್ಕ ಅವಶೇ಼ಗಳಲ್ಲಿ ಯುಎಸ್ ಮತ್ತು ಯುಎಲ್‌ನ ಲೋಗೋವಿರುವುದನ್ನು ನೋಡಬಹುದು. ಹೆಚ್ಚಿನ ತನಿಖೆಯ ನಂತರ, ಯುಎಲ್‌ ಒಂದು ಥರ್ಡ್‌ ಪಾರ್ಟಿ ಪ್ರಮಾಣೀಕರಣ ಕಂಪನಿಯಾದ ಅಂಡರ್‌ರೈಟರ್ ಲ್ಯಾಬೊರೇಟರೀಸ್ ಎಂದು ನಾವು ಕಂಡುಹಿಡಿದಿದ್ದೇವೆ. ಯುಎಲ್‌ ಎಂಬುದು ಭಾರತೀಯ ವೈದ್ಯಕೀಯ ಸಾಧನಗಳ ಪ್ರಮಾಣೀಕರಣ (ICMED) 13485 ಯೋಜನೆಯಡಿಯಲ್ಲಿ ಪ್ರಮಾಣೀಕರಣ ಸಂಸ್ಥೆಯಾಗಿದ್ದು, ಭಾರತದಲ್ಲಿ ಗುಣಮಟ್ಟದ ವೈದ್ಯಕೀಯ ಸಾಧನಗಳನ್ನು ಒದಗಿಸುವಲ್ಲಿ ನಿರತವಾಗಿದೆ. ಯುಎಲ್‌ ಪರಿಹಾರಗಳು ವೈದ್ಯಕೀಯ ಸಾಧನ ತಯಾರಕರಿಗೆ ಥರ್ಡ್‌ ಪಾರ್ಟಿ ನಿಯಂತ್ರಕ ಅನುಮೋದನೆಗಳನ್ನು, ಉತ್ಪನ್ನ ಸಂಬಂಧಿತ ಪರೀಕ್ಷೆಗಳನ್ನು, ಪ್ರಮಾಣೀಕರಣವನ್ನು, ಆಡಿಟಿಂಗ್, ಸೈಬರ್ ಭದ್ರತಾ ಪರೀಕ್ಷೆ, ಉಪಯುಕ್ತತೆ ಪರೀಕ್ಷೆ ಸೇರಿದಂತೆ ಹಲವಾರು ಸೇವೆಗಳನ್ನು ಯುಎಲ್‌ ಒದಗಿಸುತ್ತದೆ.

ವೈದ್ಯಕೀಯ ಸಾಧನ ಪ್ರಮಾಣೀಕರಣ ಪ್ರಕ್ರಿಯೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಯುಎಲ್‌ ಮೂಲಕ ನಾವು ನೋಡಬಹುದು. ಕ್ಷಿಪಣಿಯನ್ನು ಭಾರತದಿಂದ ಆಮದು ಮಾಡಿಕೊಳ್ಳಲಾಗಿದೆ ಎಂಬ ವರದಿಗಳನ್ನು ಭಾರತ ಅಥವಾ ಇಸ್ರೇಲ್ ಅಧಿಕಾರಿಗಳು ನಿರಾಕರಿಸಿಲ್ಲ ಅಥವಾ ಖಚಿತಪಡಿಸಿಲ್ಲ. ನಮಗೆ ಈ ಕುರಿತು ಯಾವುದೇ ವರದಿಗಳು ಕಂಡುಬಂದಿಲ್ಲ.

ಆದ್ದರಿಂದ, ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ವೀಡಿಯೊ ಗಾಜಾದಲ್ಲಿ ಕ್ಷಿಪಣಿ ಅವಶೇಷಗಳ ಬಗ್ಗೆ ಅಲ್ಲ. ಅವಶೇಷಗಳು ಭಾರತದ ಮೂಲದ ಕಂಪನಿಯಾದ UL ನಿಂದ ಪ್ರಮಾಣೀಕರಿಸಲ್ಪಟ್ಟ ವೈದ್ಯಕೀಯ ಸಾಧನಗಳು.

Claim :  ವೈರಲ್ ಆಗಿರುವ ವಿಡಿಯೋದಲ್ಲಿ ಗಾಜಾದ ಶಾಲೆಯೊಂದಕ್ಕೆ ಅಪ್ಪಳಿಸಿದ್ದು ಕ್ಷಿಪಣಿಯ ಅವಶೇಷಗಳಲ್ಲ, ವೈದ್ಯಕೀಯ ಉಪಕರಣಗಳು
Claimed By :  Social Media Users
Fact Check :  False
Tags:    

Similar News