ಫ್ಯಾಕ್ಟ್‌ಚೆಕ್‌: 'ರಾಹುಲ್ ಗಾಂಧಿ ಗೋ ಬ್ಯಾಕ್' ಘೋಷಣೆಗಳ ವಿಡಿಯೋ ಮಣಿಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲ

'ರಾಹುಲ್ ಗಾಂಧಿ ಗೋ ಬ್ಯಾಕ್' ಘೋಷಣೆಗಳ ವಿಡಿಯೋ ಮಣಿಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲ

Update: 2024-07-11 22:34 GMT

ಜುಲೈ 8, 2024 ರಂದು, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಣಿಪುರಕ್ಕೆ ಮೂರನೇ ಬಾರಿ ಭೇಟಿ ನೀಡಿದ್ದರು. ಲೋಕಸಭೆ ಚುನಾವಣೆಯ ನಂತರ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷವು ಹಿಂಸಾಚಾರ-ಪೀಡಿತ ರಾಜ್ಯದಲ್ಲಿ ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ಗೆದ್ದುಕೊಂಡಿತು. ಭೇಟಿ ನೀಡಿದ ಸಂದರ್ಭದಲ್ಲಿ, ರಾಹುಲ್‌ ರಾಜ್ಯದಲ್ಲಿನ ಜನಾಂಗೀಯ ಹಿಂಸಾಚಾರದಿಂದ ನಿರಾಶ್ರಿತರಾದ ಪರಿಹಾರ ಶಿಬಿರಗಳಲ್ಲಿ ಜನರನ್ನು ಭೇಟಿ ಮಾಡಿದರು. ಅವರು ಶಿಬಿರದ ಹೊರಗೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಮತ್ತು ಸ್ವಯಂಸೇವಕರೊಂದಿಗೆ ಮಾತನಾಡಿದ್ದರು.

ಸಾಮಾಜಿಕ ಜಾಲತಾಣದಲ್ಲಿ ನಮಗೆ 2 ನಿಮಿಷ ಮತ್ತು 19 ಸೆಕೆಂಡುಗಳ ವೀಡಿಯೊ ಹರಿದಾಡುತ್ತಿದ್ದನ್ನು ಕಂಡುಕೊಂಡೆವು. ವಿಡಿಯೋವಿನಲ್ಲಿ ಅಲ್ಲಿದ್ದ ಜನರು "ರಾಹುಲ್ ಗಾಂಧಿ ಗೋ ಬ್ಯಾಕ್" ಎಂದು ಘೋಷಣೆ ಕೂಗುತ್ತಿದ್ದಾರೆ. ರಾಹುಲ್ ಗಾಂಧಿಯವರು ಇತ್ತೀಚೆಗೆ ಮಣಿಪುರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಸಾಕಷ್ಟು ಬಳಕೆದಾರರು ಕಮೆಂಟ್‌ ಮಾಡಿರುವುದನ್ನು ನಾವು ಕಂಡುಕೊಂಡೆವು.ಆದರೆ ಆ ವಿಡಿಯೋವನ್ನು 2024 ರಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಮಯದಲ್ಲಿ ಅಸ್ಸಾಂನಿಂದಲ್ಲಿ ರೆಕಾರ್ಡ್ ಮಾಡಲಾದ ವೀಡಿಯೊ.

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ವೀಡಿಯೋ ಜನವರಿ 2024ರದ್ದು ಮತ್ತು ಅಸ್ಸಾಂನ ಜನರು ರಾಹುಲ್ ಗಾಂಧಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವುದನ್ನು ನಾವು ನೋಡಬಹುದು.

ವೈರಲ್‌ ವಿಡಿಯೋ ಕುರಿತು ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ನಾವು ಗೂಗಲ್‌ ರಿವರ್ಸ್ ಇಮೇಜ್ ಹುಡುಕಾಟದ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಜನವರಿ 21, 2024 ರಂದು IBC 24 ಪ್ರಕಟಿಸಿದ ಲೇಖನವೊಂದು ಕಂಡುಬಂದಿತು,“Bharat Jodo Nyay yatra: लोगों ने लगाए ‘राहुल गांधी गो बैक’ के नारे, असम में अब इस जगह हुआ भारत जोड़ो न्याय यात्रा का विरोध," ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದರು.

ಕನ್ನಡಕ್ಕೆ ಅನುವಾದಿಸಿದಾಗ, "ಅಸ್ಸಾಂನಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ವಿರುದ್ಧ ಜನರು ಪ್ರತಿಭಟನೆಯನ್ನು ನಡೆಸಿದರು" ಎಂದು ಬರೆದಿರುವುದನ್ನು ನಾವು ಕಂಡುಕೊಂಡೆವು.

ಜನವರಿ 22, 2024 ರಂದು, O TV ನ್ಯೂಸ್ ಇಂಗ್ಲಿಷ್ ಅದೇ ವೀಡಿಯೊವನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ “With ‘Anyaya Yatra’ Slogans, People Protest Against Rahul Gandhi In Nagaon, Assam” ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಿದ್ದನ್ನು ನಾವು ಕಂಡುಕೊಂಡೆವು.

Full View

"ಭಾರತ್ ಜೋಡೋ ನ್ಯಾಯ್ ಯಾತ್ರಾ ಇನ್ ಅಸ್ಸಾಂ" ಎಂಬ ಕೀವರ್ಡ್‌ನೊಂದಿಗೆ ನಾವು ಗೂಗಲ್‌ನಲ್ಲಿ ಹುಡುಕಿದಾಗ, ನಮಗೆ ಜನವರಿ 22, 2024 ರಂದು ಡೆಕ್ಕನ್ ಹೆರ್ಲಾಡ್‌ನಲ್ಲಿ ಪ್ರಕಟಿಸಿದ್ದ ಲೇಖನವೊಂದು ಕಂಡುಬಂದಿತು ಲೇಖನದಲ್ಲಿ, “The incident took place when Gandhi and some other leaders stopped at the restaurant in Ambagan on way to their night halt in Rupohi, about 10 km from the site. ಎಂದು ಡೆಕನ್‌ ಹೆರ್ಲಾಡ್‌ ಪ್ರಕಟಿಸಿರುವುದನ್ನು ನಾವು ಕಂಡುಕೊಂಡೆವು. ಅಲ್ಲಿ ನೆರೆದಿದ್ದ ಜನಸಮೂಹವು ಸಂಸದರ ವಿರುದ್ಧ ಘೋಷಣೆಗಳನ್ನು ಕೂಗುತ್ತಿತ್ತು. ಸಮಗುರಿ ಕಾಂಗ್ರೆಸ್ ಶಾಸಕ ರಾಕಿಬುಲ್ ಹುಸೇನ್ ಅವರನ್ನು ಉದ್ದೇಶಿಸಿ 'ಅನ್ಯಾಯ ಯಾತ್ರೆ' ಮತ್ತು 'ರಾಕಿಬುಲ್ ಗೋ ಬ್ಯಾಕ್' ಎಂಬ ಸಂದೇಶಗಳಿರುವ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಿದ್ದರು. ಭದ್ರತಾ ಸಿಬ್ಬಂದಿಗಳು ಗಾಂಧಿ ಮತ್ತು ಇತರ ನಾಯಕರನ್ನು ಉಪಾಹಾರ ಗೃಹದಿಂದ ಹೊರಗೆ ಕರೆದೊಯ್ದರು.

ಜುಲೈ8 ರಂದು, ಕಾಂಗ್ರೆಸ್ ನಾಯಕ ಮತ್ತು ಅಸ್ಸಾಂ ಕಾಂಗ್ರೆಸ್‌ನ ಹಿರಿಯ ವಕ್ತಾರ ರತುಲ್ ಕಲಿತಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ “@RahulGandhi Ji did not face 'Go Back' slogans in Manipur on July 8" ಘೋಷಣೆಗಳನ್ನು ಎದುರಿಸಲಿಲ್ಲ.

ಪಿಟಿಐ ವರದಿಯ ಪ್ರಕಾರ “Crowd raises slogans against Rahul Gandhi outside eatery in Assam's Nagaon” ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಲಾಗಿದೆ

ಎನ್‌ಡಿಟಿವಿ “Crowd Raises Slogans Against Rahul Gandhi Outside Eatery In Assam”ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಪ್ರಕಟಿಸಿದೆ

ಆದ್ದರಿಂದ, ಹಕ್ಕು ಸುಳ್ಳು ಎಂದು ನಾವು ಕಂಡುಕೊಂಡಿದ್ದೇವೆ. ವೈರಲ್ ಆಗಿರುವ ವೀಡಿಯೋ ಇತ್ತೀಚಿನದಲ್ಲ ಮತ್ತು ಲೋಕಸಭೆ ಚುನಾವಣೆಯ ನಂತರ ರಾಹುಲ್ ಗಾಂಧಿ ಅವರ ಇತ್ತೀಚಿನ ಮಣಿಪುರ ಭೇಟಿಗೆ ಸಂಬಂಧವಿಲ್ಲ. ಜನವರಿ 2024 ರಲ್ಲಿ ಅಸ್ಸಾಂನಲ್ಲಿ ನಡೆದ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಮಯದಲ್ಲಿ ವೀಡಿಯೊವನ್ನು ರೆಕಾರ್ಡ್ ಮಾಡಲಾಗಿದೆ.

Claim :  'ರಾಹುಲ್ ಗಾಂಧಿ ಗೋ ಬ್ಯಾಕ್' ಘೋಷಣೆಗಳ ವಿಡಿಯೋ ಮಣಿಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲ
Claimed By :  Social Media Users
Fact Check :  False
Tags:    

Similar News