ಫ್ಯಾಕ್ಟ್‌ಚೆಕ್: ಬಿಜೆಪಿ ಪಕ್ಷದ ಕಾರ್ಯಕರ್ತರು ಇವಿಎಂಗಳನ್ನು ಹೊಂದಿರುವ ಟ್ರಕ್‌ನ ಮೇಲೆ ಹತ್ತುತ್ತಿರುವ ವಿಡಿಯೋವಿನ ಅಸಲಿಯತ್ತೇನು?
ಬಿಜೆಪಿ ಪಕ್ಷದ ಕಾರ್ಯಕರ್ತರು ಇವಿಎಂಗಳನ್ನು ಹೊಂದಿರುವ ಟ್ರಕ್‌ನ ಮೇಲೆ ಹತ್ತುತ್ತಿರುವ ವಿಡಿಯೋವಿನ ಅಸಲಿಯತ್ತೇನು?
2024ರ ಲೋಕಸಭೆ ಚುನಾವಣೆಯ ಮೊದಲ ನಾಲ್ಕು ಹಂತಗಳು ಇಲ್ಲಿಯವರೆಗೆ ವಿವಿಧ ರಾಜ್ಯಗಳಲ್ಲಿ ಪೂರ್ಣಗೊಂಡಿವೆ. ಮೇ 20, 2024 ರಂದು ಐದನೇ ಹಂತದ ಚುನಾವಣೆಯೂ ನಡೆಯುತ್ತಿದೆ. ಈ ಹಂತದ ಅಡಿಯಲ್ಲಿ, ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ನಡೆಯಲಿದೆ.
ವೈರಲ್ ವಿಡಿಯೋವಿನಲ್ಲಿ ಜನರ ಗುಂಪೊಂದು ಕೈಯಲ್ಲಿ ಇವಿಎಂ ಯಂತ್ರಗಳನ್ನು ಹಿಡಿದುಕೊಂಡು ಟ್ರಕ್ ಮೇಲೆ ಹತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋವಿನಲ್ಲಿ ಕಾಣುವ ಜನರು ಚುನಾವಣೆಯ ನಂತರ ಇವಿಎಂ ಯಂತ್ರಗಳನ್ನು ತೆಗೆದುಕೊಂಡು
ಜನಸಮೂಹವೊಂದು ಕೈಯಲ್ಲಿ ಇವಿಎಂ ಯಂತ್ರಗಳನ್ನು ಹಿಡಿದುಕೊಂಡು ಟ್ರಕ್ ಮೇಲೆ ಹತ್ತಿದ ವಿಡಿಯೋವೊಂದು ಚಲಾವಣೆಯಲ್ಲಿದ್ದು, ಚುನಾವಣೆಯ ನಂತರ ಇವಿಎಂ ಯಂತ್ರಗಳನ್ನು ತೆಗೆದುಕೊಂಡು ಹೋದವರು ಬಿಜೆಪಿ ಕಾರ್ಯಕರ್ತರು ಎಂದು ಸಾಮಾಜಿಕ ಮಾದ್ಯಮದ ಬಳಕೆದಾರರು ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಮೊಂಡಿದ್ದರು. ಇಂಗ್ಲೀಷ್‌ನಲ್ಲಿ “BJP wale EVM lut liya”, the narrator in the video claims that the EVMs are being taken away by the BJP and shows workers in broad daylight. He also abuses the party that this is the way it wants to win the seats and form the government" ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದರು.
ಇದೇ ವಿಡಿಯೋವನ್ನು ಕೆಲವು ಯೂಟ್ಯೂಬ್, ಮತ್ತು ಎಕ್ಸ್ ಖಾತೆದಾರರು ಹಂಚಿಕೊಂಡಿದ್ದಾರೆ
ಕೆಲವು ಎಕ್ಸ್ ಬಳಕೆದಾರರು ಇದೇ ವೀಡಿಯೊವನ್ನು “I guess @ECISVEEP @SpokespersonECI will say their truck broke down, and fortunately, BJPEEE had their trucks readily available and helped transport the EVM. @LiveLawIndia” ಎಂಬ ಶೀರ್ಷಿಕೆಗಳೊಂದಿಗೆ ಹಂಚಿಕೊಂಡಿದ್ದಾರೆ.
ಕನ್ನಡದಲ್ಲಿ ಅನುವಾದಿಸಿದಾಗ “ನನಗೆ ತಿಳಿದಿರುವ ಹಾಗೆ, @ECISVEEP @ SpokespersonECI ಹೇಳೋದು ಏನಂದರೆ,ಟ್ರಕ್ ಕೆಟ್ಟುಹೋಗಿದೆ, ಹೀಗಾಗಿ BJPEE ಅವರ ಟ್ರಕ್‌ಗಳು ಸುಲಭವಾಗಿ ಲಭ್ಯವಾಗಿದ್ದವು ಇದರಿಂದ ನಮಗೆ EVM ಅನ್ನು ಸಾಗಿಸಲು ಸುಲಭವಾಯಿತು @LiveLawIndia ” ಎಂದು ಪೋಸ್ಟ್ ಮಾಡಿದ್ದರು.
I guess @ECISVEEP @SpokespersonECI will say their truck broke down, and fortunately, BJPEEE had their trucks readily available and helped transport the EVM. @LiveLawIndia pic.twitter.com/49HQKKhg4v
— Sarah Riyaz (@Sarah_Riyaz1) May 14, 2024
ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು, “Free and Fair ಎಲೆಕ್ಷನ್ಸ್ ಇನ್ ಲಾರ್ಜೆಸ್ಟ್ Democracy ರಾಜೀವ್ ಕುಮಾರ್ ಅವರು ದೊಡ್ಡ ಪ್ರಜಾಪ್ರಭುತ್ವದ ಕೊಲೆಗಾರ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಯಾವುದೇ ನಾಗರಿಕ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ #ರಾಜೀವ್ ಕುಮಾರ್ ಅವರನ್ನು ಕೆಲಸದಿಂದ ತೆಗೆದುಹಾಕಲಾಗುತ್ತಿತ್ತು. ಮತ್ತು #ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ಚುನಾವಣೆಗಳನ್ನು ನಡೆಸಲಾಗುವುದು. # ಲೋಕಸಭಾ ಚುನಾವಣೆ 2024 # ಕಾಂಗ್ರೆಸ್‌ಆರಾಹಿಹೈ # ರಾಹುಲ್‌ಗಾಂಧಿ ಪ್ರಧಾನಿಗಾಗಿ ”
F̶r̶e̶e̶ ̶&̶ ̶F̶a̶i̶r̶ ̶ Elections In Largest D̶e̶m̶o̶c̶r̶a̶c̶y̶
— তন্ময় l T͞anmoy l (@tanmoyofc) May 15, 2024
Rajeev Kumar is the Murderer of Largest Democracy.
In any other Civilized Democratic country #RajivKumar would have been removed from office. And Elections were conducted under the supervision of the… pic.twitter.com/azOZDzvmT9
ಫ್ಯಾಕ್ಟ್‌ಚೆಕ್
ವೈರಲ್ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ವಿಡಿಯೋ ಇತ್ತೀಚಿನದಲ್ಲ, 2022ರದ್ದು. ವೀಡಿಯೊದಲ್ಲಿ ಕಂಡುಬರುವ ಇವಿಎಂಗಳನ್ನು ತರಬೇತಿ ಉದ್ದೇಶಗಳಿಗಾಗಿ ಬಳಸಲಾಗುತ್ತಿತ್ತು.
ನಾವು ವೈರಲ್ ಸುದ್ದಿಯಲ್ಲಿ ಸತ್ಯಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದಿಂದ ಹೊರತೆಗೆಯಲಾದ ಕೆಲವು ಕೀಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದಾಗ, ನಮಗೆ
ಮಾರ್ಚ್ 2022ರಲ್ಲಿ ಮೋಜೋ ಸ್ಟೋರಿ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟಿಸಿದ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. ವೀಡಿಯೊದ ಶೀರ್ಷಿಕೆಯಾಗಿ “UP election I Akhilesh Yadav alleges EVM theft, party workers protest after spotting trucks with EVMs” ಬರೆದು ಹಂಚಿಕೊಂಡಿದ್ದರು.
2022 ರಲ್ಲಿ ವೀಡಿಯೊ ವೈರಲ್ ಆದ ನಂತರ, ಉತ್ತರ ಪ್ರದೇಶದ ಮುಖ್ಯ ಚುನಾವಣಾ ಆಯುಕ್ತರು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದರು, ವೈರಲ್ ವೀಡಿಯೊದಲ್ಲಿ ಕಂಡುಬರುವ ಇವಿಎಂಗಳನ್ನು ತರಬೇತಿ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ, ಅವು ನಿಜವಾದ ಇವಿಎಂಗಳಲ್ಲ, ಎಣಿಕೆ ಅಧಿಕಾರಿಗಳ ತರಬೇತಿ ನಡೆಯುತ್ತಿದ್ದ ಕಾಲೇಜಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಸಾಗಾಟದ ವೇಳೆ ರಾಜಕೀಯ ಪಕ್ಷಗಳ ಕೆಲವರು ವಾಹನ ನಿಲ್ಲಿಸಿ ಇವಿಎಂಗಳ ಕುರಿತು ತಪ್ಪು ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂಬ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿತ್ತು.
ನಿಜವಾದ ಇವಿಎಂಗಳನ್ನು ಸ್ಟ್ರಾಂಗ್ ರೂಮ್‌ನಲ್ಲಿ ಸೀಲ್ ಮಾಡಲಾಗಿದೆ ಮತ್ತು ಮಿಲಿಟರಿ ಪಡೆಗಳ ಇವಿಎಂಗಳನ್ನು ಸುರಕ್ಷಿತವಾಗಿಡಲು ಸಹಾಯ ಮಾಡುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದರು.
उत्तर प्रदेश विधानसभा सामान्य निर्वाचन - 2022
— CEO UP #IVote4Sure (@ceoup) March 8, 2022
जनपद वाराणसी में आज 8 मार्च 2022 को कुछ इलेक्ट्रॉनिक वोटिंग मशीनों को गाड़ी में ले जाने के संबंध में प्रेस विज्ञप्ति जारी...#ECI#AssemblyElections2022 pic.twitter.com/O854nZT6QE
ಹೀಗಾಗಿ, ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ವಿಡಿಯೋ ಇತ್ತೀಚಿನದಲ್ಲ, 2022ರದ್ದು. ವೀಡಿಯೊದಲ್ಲಿ ಕಂಡುಬರುವ ಇವಿಎಂಗಳನ್ನು ತರಬೇತಿ ಉದ್ದೇಶಗಳಿಗಾಗಿ ಬಳಸಲಾಗುತ್ತಿತ್ತು.