ಫ್ಯಾಕ್ಟ್‌ಚೆಕ್‌: ಪ್ರಧಾನಿ ನರೇಂದ್ರ ಮೋದಿ ಪ್ರಚಾರ ರ್ಯಾಲಿಯಲ್ಲಿ ರವೀಂದ್ರನಾಥ ಟ್ಯಾಗೋರ್ ಅವರ ಭಾವಚಿತ್ರವನ್ನು ತಲೆಕೆಳಗಾಗಿ ಸ್ವೀಕರಿಸುತ್ತಿರುವ ವಿಡಿಯೋ ವೈರಲ್‌

ಪ್ರಧಾನಿ ನರೇಂದ್ರ ಮೋದಿ ಪ್ರಚಾರ ರ್ಯಾಲಿಯಲ್ಲಿ ರವೀಂದ್ರನಾಥ ಟ್ಯಾಗೋರ್ ಅವರ ಭಾವಚಿತ್ರವನ್ನು ತಲೆಕೆಳಗಾಗಿ ಸ್ವೀಕರಿಸುತ್ತಿರುವ ವಿಡಿಯೋ ವೈರಲ್‌

Update: 2024-05-20 21:13 GMT

ಮೇ 12, 2024 ರಂದು ಭಾಟ್ಪಾರಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಚಾರ ರ್ಯಾಲಿಯಲ್ಲಿ ಬಿಜೆಪಿಯ ಬ್ಯಾರಕ್‌ಪುರದ ಅಭ್ಯರ್ಥಿ ಅರ್ಜುನ್ ಸಿಂಗ್ ಪುತ್ರ ಮತ್ತು ಭಟ್ಪಾರಾ ಶಾಸಕ ಪವನ್ ಸಿಂಗ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಉಡುಗೊರೆಯಾಗಿ ರವೀಂದ್ರನಾಥ ಟ್ಯಾಗೋರ್ ಭಾವಚಿತ್ರವನ್ನು ತಲೆಕೆಳಗೆ ನೀಡಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಎಐಟಿಸಿ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಸಾಮಾಜಿಕ ಖಾತೆದಾರರು "“The PM received an UPSIDE DOWN PORTRAIT of Kabiguru Rabindranath Tagore from Bhatpara BJP MLA Pawan Singh” ಎಂಬ ಶೀರ್ಷಿಕೆಯೊಂದಿಗೆ ಪೇಂಟಿಂಗ್‌ನ್ನು ಹಂಚಿಕೊಂಡಿದ್ದರು.

Full View

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ, ವಿಡಿಯೋವನ್ನು ಟ್ರಿಮ್‌ ಮಾಡಿ ತಪ್ಪು ಹೇಳಿಕೆಯೊಂದಿಗೆ ಚಿತ್ರವನ್ನು ಹಂಚಿಕೊಳ್ಳಲಾಗಿದೆ.

ಎಐಟಿಸಿ ಹಂಚಿಕೊಂಡಿದ್ದ ಚಿತ್ರಕ್ಕೆ ಕಮಾಂಟ್‌ ವಿಭಾಗದಲ್ಲಿ ಹಲವಾರು ಬಳಕೆದಾರರು ವೈರಲ್‌ ವಿಡಿಯೋವಿನ ಮೂಲ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು.

ವೈರಲ್‌ ಸುದ್ದಿಯ ಅಸಲಿಯತ್ತನ್ನು ತಿಳಿಯಲು ನಾವು ಚಿತ್ರವನ್ನು ಗೂಗಲ್‌ ರಿವರ್ಸ್‌ನಲ್ಲಿ ಹುಡುಕಾಟ ನಡೆಸಿದಾಗ ನಮಗೆ ಈವೆಂಟ್‌ನ ಮೇ 12, 2024 ರಂದು ನರೇಂದ್ರ ಮೋದಿ ಅಧಿಕೃತ ಯೋಟ್ಯೂಬ್‌ ಚಾನಲ್‌ನಲ್ಲಿ ಮೂಲ ವಿಡಿಯೋವನ್ನು ನಾವು ಕಂಡುಕೊಂಡೆವು. ಮೂಲ ವಿಡಿಯೋವಿನಲ್ಲಿ ಬರುವ 2:50 ಟೈಮ್‌ಸ್ಟ್ಯಾಂಪ್‌ಗೆ, ಪ್ರಧಾನ ಮಂತ್ರಿ ರವೀಂದ್ರನಾಥ ಟ್ಯಾಗೋರ್ ಅವರ ಭಾವಚಿತ್ರವನ್ನು ತಲೆಕೆಳಗಾಗಿ ಸ್ವೀಕರಿಸಿದ್ದನ್ನು ಕಾಣಬಹುದು.

Full View

3:02 ಟೈಮ್‌ಸ್ಟ್ಯಾಂಪ್‌ನಲ್ಲಿ, ವೇದಿಕೆಯಲ್ಲಿದ್ದ ಬಿಜೆಪಿ ನಾಯಕ ಸುಕಾಂತ ಮಜುಂದಾರ್, ಭಾವಚಿತ್ರವನ್ನು ತಲೆಕೆಳಗಾಗಿ ಹಿಡಿದಿದ್ದನ್ನು ನೋಡಿ ಸರಿಪಡಿಸಿದ್ದನ್ನು ನಾವು ಕಾಣಬಹುದು.

Full View

ಹುಡುಕಾಟದ ಸಮಯದಲ್ಲಿ ನಮಗೆ, ಪಿಎಂ ನರೇಂದ್ರ ಮೋದಿ ಭಾವಚಿತ್ರವನ್ನು ನೇರವಾಗಿ ಹಿಡಿದು ಪೋಸ್ ನೀಡುತ್ತಿರುವ ಹಲವಾರು ಪೋಸ್ಟ್‌ಗಳನ್ನು ನಾವು ಕಂಡುಕೊಂಡೆವು.

Full View

ಇದರಿಂದ ಸಾಭೀತಾಗಿದ್ದೇನೆಂದರೆ, ಪ್ರಧಾನಿ ನರೇಂದ್ರ ಮೋದಿ ರವೀಂದ್ರನಾಥ ಟ್ಯಾಗೋರ್ ಅವರ ಭಾವಚಿತ್ರವನ್ನು ತಲೆಕೆಳಗಾಗಿ ಸ್ವೀಕರಿಸಲಿಲ್ಲ, ವೈರಲ್‌ ವಿಡಿಯೋವನ್ನು ಟ್ರಿಮ್‌ ಮಾಡಿ ತಪ್ಪು ಹೇಳಿಕೆಯೊಂದಿಗೆ ಚಿತ್ರವನ್ನು ಹಂಚಿಕೊಳ್ಳಲಾಗಿದೆ.

Claim :  ಪ್ರಧಾನಿ ನರೇಂದ್ರ ಮೋದಿ ಪ್ರಚಾರ ರ್ಯಾಲಿಯಲ್ಲಿ ರವೀಂದ್ರನಾಥ ಟ್ಯಾಗೋರ್ ಅವರ ಚಿತ್ರವನ್ನು ತಲೆಕೆಳಗಾಗಿ ಸ್ವೀಕರಿಸುತ್ತಿದ್ದರಾ?
Claimed By :  Social Media Users
Fact Check :  False
Tags:    

Similar News