ಫ್ಯಾಕ್ಟ್ ಚೆಕ್: ಗಾಜಾಕ್ಕೆ ಸಹಾಯವನ್ನು ಸಾಗಿಸುವ ಟ್ರಕ್‌ಗಳನ್ನು ತೋರಿಸುವ ವೀಡಿಯೊ ಬೆಂಗಾವಲು ಪಡೆಗೆ ಅಡ್ಡಿಯಾಗಿದೆ ಎಂದು ಸುಳ್ಳು ಹೇಳಿಕೆಯನ್ನು ನೀಡುತ್ತದೆ, ಇದು ಇತ್ತೀಚಿನದಲ್ಲ
ಗಾಜಾಕ್ಕೆ ಸಹಾಯವನ್ನು ಸಾಗಿಸುವ ಟ್ರಕ್‌ಗಳನ್ನು ತೋರಿಸುವ ವೀಡಿಯೊ ಬೆಂಗಾವಲು ಪಡೆಗೆ ಅಡ್ಡಿಯಾಗಿದೆ ಎಂದು ಸುಳ್ಳು ಹೇಳಿಕೆಯನ್ನು ನೀಡುತ್ತದೆ, ಇದು ಇತ್ತೀಚಿನದಲ್ಲ
ಈಜಿಪ್ಟ್ - ಗಾಜಾ ಗಡಿಯಲ್ಲಿ ಡಜನ್‌ಗಟ್ಟಲೆ ಟ್ರಕ್‌ಗಳು, ಗಾಜಾದ ಜನರಿಗೆ ಸಹಾಯ ಮಾಡುಲು ಕೆಲವು ದಿನಸಿ ಸಾಮಾಗ್ರಿಗಳನ್ನು ಸಾಗಿಸುತ್ತಿರುವ ಟ್ರಕ್‌ಗಳನ್ನು ಇಸ್ರೇಲಿಗಳು ಗಾಜಾಕ್ಕೆ ಪ್ರವೇಶಿಸಲು ನಿರಾಕರಿಸುತ್ತಿರುವುದನ್ನು ಈ ವೀಡಿಯೋದಲ್ಲಿ ನೋಡಬಹುದು.
ಸಾಕಷ್ಟು ವೀಡಿಯೋಗಳು X ಜಾಲತಾಣದಲ್ಲಿ ವಿವಿಧ ಹೇಳಿಕೆಯೊಂದಿಗಿರುವುದನ್ನ ನೋಡಬಹುದು. ರಿಪೋಟರ್ ಎಂಬ X ಖಾತೆದಾರ “BREAKING: AID VEHICLES AT RAFAH, EGYPT BORDER REFUSED ENTRY INTO GAZA BY ISRAEL.” ಎಂಬ ಕ್ಯಾಪ್ಷನ್‌ನೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಇನ್ನು ಕೆಲವು ಫೇಸ್‌ಬುಕ್ ಬಳಕೆದಾರರು "ಈಜಿಪ್ಟ್ ಮತ್ತು ಇಸ್ರೇಲ್‌ನಲ್ಲಿ ಆಂಬುಲನ್ಸ್‌ಗಳನ್ನು ನೀಡಿ ಮಾನವೀಯತೆಯನ್ನು ಮರೆದಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಗಾಜಾದಲ್ಲಿ ನಡೆದ ದುರಂತಕ್ಕೆ ನೆರವಾಗಲೆಂದು ಯುಎನ್ ಮತ್ತು ಇತರ ಪಾಶ್ಚಿಮಾತ್ಯ ದೇಶಗಳು ಸೇರಿದಂತೆ ಸಾಮಾನ್ಯ ಮುಸ್ಲಿಮರು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಜೊತೆಗೆ ಟರ್ಕಿಯಿಂದ ದೊಡ್ಡ ಸರಕುಗಳನ್ನು ಸಂಗ್ರಹಿಸಿದ ನೆರವು ನೀಡಿದ್ದಾರೆ.
ಫ್ಯಾಕ್ಟ್ ಚೆಕ್
ವೈರಲ್ ಆದ ವೀಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ವೀಡಿಯೋದಲ್ಲಿ ಕಾಣುವ ಟ್ರಕ್ 2021 ವರ್ಷದ್ದು.
ವೀಡಿಯೋದಲ್ಲಿ ನಿಜಾಂಶವೇನಾದರೂ ಇದೆಯಾ ಎಂದು ಹುಡುಕಲು, Google ರಿವರ್ಸ್ ಇಮೇಜ್ ಮೂಲಕ ವೀಡಿಯೋದಲ್ಲಿ ಬರುವ ವಿವಿಧ ಫ್ರೇಮ್‌ಗಳನ್ನು ಬಳಸಿಕೊಂಡು ಹುಡುಕಾಟ ನಡೆಸಿದಾಗ ನಮಗೆ ಹಂಡುಬಂದಿದ್ದು ಈ ವೀಡಿಯೋವನ್ನು 2021ರಲ್ಲಿ ಚಿತ್ರೀಕರಿಸಲಾಗಿರುವುದು ಎಂದು.
ಈಜಿಪ್ಟ್‌ನ ನ್ಯೂಸ್ ಚಾನೆಲ್ ಅಲ್ ನಹರ್ ಎಂಬ ಖಾತೆದಾರ ಮೇ 31,2021ರಂದು ತನ್ನ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದನು. ಈ ಪೋಸ್ಟ್‌ಗೆ ಶೀರ್ಷಿಕೆಯಾಗಿ ಅರೇಬಿಯನ್ ಭಾಷೆಯಲ್ಲಿ "مصر ترسل أضخم قوافل الدعم والمساعدات إلى الفلسطينيين" ಎಂದು ಬರೆದಿತ್ತು
ಈ ಮೇಲ್ಕಂಡ ಶೀರ್ಷಿಕೆಯನ್ನು ಅನುವಾದಿಸಿದಾಗ ನಮಗೆ ತಿಳಿದು ಬಂದಿದ್ದು "ಮೂರನೇ ಬಾರಿ ಈಜಿಪ್ಟ್‌ನವರು ಪ್ಯಾಲೆಸ್ತಾನದ ಗಾಜಾದಲ್ಲಿರುವವರಿಗೆ ನೆರವಾಗಲು ದೊಡ್ಡ ಮೊತ್ತದ ಸಹಾಯವನ್ನು ಕಳಿಸುತ್ತಿದೆ ಎಂದು ಪೋಸ್ಟ್ ಮಾಡಿದ್ದರು.
ಮೇ 24,2021 ರಲ್ಲಿ ಪ್ರಕಟನೆಯಾದ ಲೇಖನದಲ್ಲಿ ವೈರಲ್ ಆದ ವೀಡಿಯೋವನ್ನು ಹಂಚಿಕೊಂಡು "ಈಜಿಪ್ಟ್‌ನರು ಗಾಜಾವಿನಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ" ಎಂಬ ಸೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದರು.
ಮೇ 24, 2021 ರಂದು arabnews.com ನಲ್ಲಿ ಪ್ರಕಟವಾದ ಲೇಖನದಲ್ಲಿ , ಈಜಿಪ್ಟ್‌ನ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಗಾಜಾದಲ್ಲಿರುವ ಸಂತ್ರಸ್ತರಿಗೆ ನೆರವಾಗಲು ದೊಡ್ಡ ಸಹಾಯದ ಬೆಂಗಾವಲು ಪಡೆಯನ್ನು ಕಳುಹಿಸಲಿದ್ದಾರೆ. ಸಂತ್ರಸ್ತರಿಗೆ ನೀಡುವ ಸಾಮಾಗ್ರಿಗಳಲ್ಲಿ 2,500 ಟನ್ ಆಹಾರ, ಔಷಧಿ, ಮಗುವಿನ ಹಾಲು, ಬಟ್ಟೆ, ಪೀಠೋಪಕರಣಗಳು, ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಇತರ ವಸ್ತುಗಳನ್ನು ತುಂಬಿದ 130 ಟ್ರಕ್‌ಗಳನ್ನು ಈಜಿಪ್ಟ್‌ನ ಅಧ್ಯಕ್ಷರು ಕಳಿಸಿದ್ದಾರೆಂಬ ವರದಿಯಿದೆ. ಹೀಗಾಗಿ ಅಲ್ಲಿನ ಜನ
'ಲಾಂಗ್ ಲಿವ್ ಈಜಿಪ್ಟ್' (ತಹ್ಯಾ ಮಾಸ್ರ್) ಎಂದು ಹಾಡಿ ಹೊಗಳಿದ್ದಾರೆಂದು ವಕ್ತಾರ ಬಸ್ಸಮ್ ರಾಡಿ ಹೇಳಿದ್ದಾರೆ.
ಆದ್ದರಿಂದ, ವೈರಲ್ ಆದ ವೀಡಿಯೊದಲ್ಲಿ ಯಾವುದೇ ಸತ್ಯಾಂಶವಿಲ್ಲ. 2021 ರಲ್ಲಿ ಗಾಜಾಕ್ಕೆ ಈಜಿಪ್ಟ್ ಕಳುಹಿಸಿದ ಸಹಾಯದ ಬೆಂಗಾವಲು ಪಡೆಯನ್ನು ವೀಡಿಯೊದಲ್ಲಿ ಕಾಣಬಹುದು.