ಫ್ಯಾಕ್ಟ್‌ಚೆಕ್: ವೈರಲ್ ಆದ ವಿಡಿಯೋದಲ್ಲಿ ಕಾಣಿಸುತ್ತಿರುವುದು ಆಂಧ್ರಪ್ರದೇಶದ ಮೈನರ್‌ಗಳಲ್ಲ.
ವೈರಲ್ ಆದ ವಿಡಿಯೋದಲ್ಲಿ ಕಾಣಿಸುತ್ತಿರುವುದು ಆಂಧ್ರಪ್ರದೇಶದ ಮೈನರ್‌ಗಳಲ್ಲ.
ಡ್ರಗ್ಸ್ ಸೇವನೆ ಯಾವುದೇ ವಯಸ್ಸನವರಿಗಾಗಲಿ ಹಾನಿ ಉಂಟು ಮಾಡುತ್ತದೆ. ಅದರಲ್ಲೂ ಚಿಕ್ಕ ಮಕ್ಕಳ ಮೇಲೆ ಭಾರಿ ಪರಿಣಾಮ ಉಂಟು ಮಾಡುತ್ತದೆ, ಸಾಕಷ್ಟು ದೇಶಗಳಲ್ಲಿ ಡ್ರಗ್ಸ್ ಸೇವನೆಯನ್ನು ನಿಷೇಧಿಸಿದ್ದಾರೆ ಆದರೂ ಕೆಲವು ಕಡೆ ಕಳ್ಳಸಾಗಣೆ ಮಾಡುತ್ತಿದ್ದಾರೆ. ಡ್ರಗ್ಸ್‌ನ್ನು ನಿಯಂತ್ರಿಸಲು ಸರ್ಕಾರ ಎಷ್ಟು ಮುನ್ನಚ್ಚರಿಕಾ ಕ್ರಮವನ್ನು ತೆಗೆದುಕೊಂಡರು ಯಾವುದೇ ಉಪಯೋಗವಾಗುತ್ತಿಲ್ಲ.
ಇದೀಗ ಎಕ್ಸ್ ಖಾತೆಯಲ್ಲಿ ಚಿಕ್ಕ ಮಕ್ಕಳು ಡ್ರಗ್ಸ್ ಸೇವಿಸುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋವಿಗೆ ಶೀರ್ಷಿಕೆಯಾಗಿ ಆಂಧ್ರಪ್ರದೇಶದ ಮಕ್ಕಳು ಡ್ರಗ್ಸ್ ಸೇವಿಸುತ್ತಿರುಗ ದೃಶ್ಯವಿದು ಎಂದು ಕ್ಯಾಪ್ಷನ್ ನೀಡಿ ಪೋಸ್ಟ್ ಮಾಡಿದ್ದಾರೆ.
ಬಾಬು ಕೊಸಂ ಎಂಬ ಎಕ್ಸ್ ಖಾತೆದಾರ ತನ್ನ ಎಕ್ಸ್ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿ "ಅಯ್ಯೋ ಚಿಕ್ಕ ಮಕ್ಕಳು ವ್ಯಸನಿಯರಾಗುತ್ತಿರುವುದನ್ನು ನೋಡಿ ಬಹಳ ಬೇಸರವಾಗುತ್ತಿದೆ" ಎಂದು ಬರೆದು ಪೋಸ್ಟ್ ಮಾಡಿದ್ದರು.
ಫ್ಯಾಕ್ಟ್‌ಚೆಕ್
ವೈರಲ್ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋದಲ್ಲಿ ಕಂಡುಬರುವ ದೃಶ್ಯ ಆಂಧ್ರಪ್ರದೇಶದಲ್ಲ, ಬದಲಿಗೆ ವೈರಲ್ ವಿಡಿಯೋದಲ್ಲಿ ಕಂಡುಬರುವ ಮಕ್ಕಳು ಬಿಹಾರದ ಪಾಟ್ನಾದವರು.
ವೈರಲ್ ಆದ ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಫ್ರೇಮ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಕಾಣಿಸಿತು. ವಿಡಿಯೋವಿಗೆ ಶೀರ್ಷಿಕೆಯಾಗಿ "ಪಾಟ್ನಾ ಜಂಕ್ಷನ್ ಮೆ ನಶಾ ಕರ್ತೆ ಚೋಟಾ ಬಚ್ಚೆ" ಎಂದು ಬರೆದುಬ ಪೋಸ್ಟ್ ಮಾಡಿದ್ದರು.ಶೀರ್ಷಿಕೆಯನ್ನು ಅನುವಾದಿಸಿದಾಗ ನಮಗೆ ತಿಳಿದು ಬಂದಿದ್ದೇಬೆಂದರೆ, ʼಪಾಟ್ನಾ ಜಂಕ್ಷನ್‌ನಲ್ಲಿ ಚಿಕ್ಕ ಮಕ್ಕಳು ಡ್ರಗ್ಸ್ ಸೇವಿಸಿ ವ್ಯಸನಿಯರಾಗುತ್ತಿದ್ದಾರೆʼ ಎಂದು ಬರೆದಿತ್ತು.
ಬಿಹಾರಿಲಾರ್ಕಾ ಎಂಬ ಇನ್‌ಸ್ಟಾಗ್ರಾಮ್ ಖಾತೆದಾರ ತನ್ನ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿ ʼಪಾಟ್ನಾ ಜಂಕ್ಷನ್‌ನಲ್ಲಿ ವ್ಯಸನಿಯರಾಗುತ್ತಿರುವ ಚಿಕ್ಕ ಮಕ್ಕಳುʼ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದರು.
ಹಿಂದಿ.ನ್ಯೂಸ್18.ಕಾಂ ವರದಿಯ ಪ್ರಕಾರ, ಬಿಹಾರ್‌ನ ಬ್ಲಾಕ್‌ನಲ್ಲಿ ಮಧ್ಯವನ್ನು ಖರೀದಿಸಿ ಮಾರಾಟ ಮಾಡುವ ಪ್ರಕರನವನ್ನು ಭೇದಿಸಲು ಹೋದಾಗ ಅಲ್ಲಿ ಕೆಲವು ಮಕ್ಕಳು ಪಾಟ್ನಾ ಜಂಕ್ಷನ್‌ನಲ್ಲಿ ಮಾದಕ ದ್ರವ್ಯವನ್ನು ನೀಡುತ್ತಿರುವುದನ್ನು ನೋಡಬಹುದು. ಈ ದೃಶ್ಯವನ್ನು ವಿಡಿಯೋ ಮಾಡಿ ಸೆರೆಹಿಡಿಯಲಾಗಿದೆ.
ವೈರಲ್ ಆದ ವಿಡಿಯೋವನ್ನು ಪಾಟ್ನಾದ ಹೊರವಲಯದಲ್ಲಿ ಚಿತ್ರೀಕರಿಸಲಾಗಿದ್ದು, ವಿಡಿಯೋದಲ್ಲಿ ನಮಗೆ ನಾಲ್ಕು ಜನ ಮಕ್ಕಳು ಕಾಣಸಿಗುತ್ತಾರೆ. ವಿಡಿಯೋದಲ್ಲಿ ನೋಡುವುದಾದರೆ ವಿಡಿಯೋದಲಲಿ ಕಾಣಿಸುವ ಕೆಲವು ಮಕ್ಕಳು ಕವರ್‌ನಲ್ಲಿ ಗಾಳಿ ಊದುತ್ತಿರುವುದನ್ನು ನೋಡಬಹುದು. ಇನ್ನು ಕೆಲವು ಮಕ್ಕಳು ಕ್ಯಾಮರಾ ನೋಡಿ ಮುಖ ಮರೆಸಿಕೊಂಡಿದ್ದರು, ಆದರೆ ಅದರಲ್ಲಿರುವ ಒಬ್ಬ ಮಾತ್ರ ಕ್ಯಾಮರಾಗಳಿಗೆ ಅಶ್ಲೀಲ ಸನ್ನೆಯನ್ನು ಮಾಡುತ್ತಿದ್ದ.
ಮತ್ತಷ್ಟು ಸತ್ಯಾಂಶವನ್ನು ಕಂಡುಹಿಡಿಯಲು ನಾವು ಹುಡುಕುತ್ತಿರುವಾಗ ನಮಗೆ ಫ್ಯಾಕ್ಟ್‌ಚೆಕ್.ಏಪಿ.ಗವ್.ಇನ್ ಎಂಬ ವೆಬ್‌ಸೈಟ್‌ನಲ್ಲಿ ಈ ಕುರಿತಾದಂತಹ ಮಾಹಿತಿಯೊಂದು ಕಾಣಿಸಿತು. ಕೆಲವು ಕಿಡಿಗೇಡಿಗಳು ಬಿಹಾರದ ಮಕ್ಕಳ ವಿಡಿಯೋವನ್ನು ಆಂಧ್ರಪ್ರದೇಶಕ್ಕೆ ಸೇರಿದ ಮಕ್ಕಳಿವರು ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ, ಸುಳ್ಳು ಮಾಹಿತಿಗಳಿಂದ ದೂರವಿರಿ ಎಂದು ಕ್ಯಾಪ್ಷನ್ ನೀಡಿ ವಿಡಿಯೋವನ್ನು ಪೋಸ್ಟ್ ಮಾಡಿದ್ದರು.
#FactCheck A video of some children from Patna, Bihar is wrongly being circulated as a video from Andhra Pradesh.
— FactCheck.AP.Gov.in (@FactCheckAPGov) January 10, 2024
The original video from Patna Junction is added in the below video.
Be aware of fake news peddlers. Check the video's authenticity before sharing in your circles. pic.twitter.com/B7WuWUihus
ಹೀಗಾಗಿ ವೈರಲ್ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲವೆಂಬುದು ಸಾಭೀತಾಗಿದೆ, ವಿಡಿಯೋದಲ್ಲಿ ಡ್ರಗ್ಸ್ ಸೇವಿಸುತ್ತಿರುವ ಮಕ್ಕಳು ಆಂಧ್ರಪ್ರದೇಶದ ಮಕ್ಕಳಲ್ಲ, ಬದಲಿಗೆ ಈ ಮಕ್ಕಳು ಬಿಹಾರದ ಪಾಟ್ನಾಗೆ ಸೇರಿದವರು ಎಂದು ಸಾಭೀತಾಗಿದೆ.