ಫ್ಯಾಕ್ಟ್‌ಚೆಕ್‌: ಗುಂಡಿಗಳಿರುವ ರಸ್ತೆ ಆಂಧ್ರಪ್ರದೇಶಕ್ಕೆ ಸಂಬಂಧಿಸಿದ್ದಲ್ಲ, ಚೀನಾಗೆ ಸಂಬಂಧಿಸಿದ್ದು.

ಗುಂಡಿಗಳಿರುವ ರಸ್ತೆ ಆಂಧ್ರಪ್ರದೇಶಕ್ಕೆ ಸಂಬಂಧಿಸಿದ್ದಲ್ಲ, ಚೀನಾಗೆ ಸಂಬಂಧಿಸಿದ್ದು.

Update: 2023-12-18 13:00 GMT

Roads of Andhra Pradesh

ಆಂಧ್ರ ಪ್ರದೇಶದ ವಿರೋಧ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಮೈಚಾಂಗ್‌ ಚಂಡಮಾರುತದಿಂದಾಗಿ ಆದ ರಾಷ್ಟ್ರೀಯ ವಿಪತ್ತಿಗೆ ಪರಿಹಾರವನ್ನು ಸೂಚಿಸಿ ಎಂದು ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದರು. ಅಷ್ಟೇ ಅಲ್ಲ ಈ ಮೈಚಾಂಗ್‌ ಚಂಡಮಾರುತದಿಂದಾಗಿ 22ಲಕ್ಷ ಎಕರೆಯಲ್ಲಿ ಹತ್ತು ಸಾವಿರ ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ ಇದಕ್ಕೆ ಪರಿಹಾರವನ್ನು ಘೋಷಿಸಿ ಎಂದು ಮನವಿ ಮಾಡಿದ್ದಾರೆ. ಆದರೆ ಇನ್ನು ಚಂಡಮಾರುತದಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಸೂಕ್ತ ನೆರವು ನೀಡಲು

ಸರ್ಕಾರ ವಿಫಲವಾಗಿದೆ ಎಂದು ದೂಷಿಸುತ್ತಿದ್ದಾರೆ.

ಮೋನಿಕಾ ನಾಯ್ಡು ಎಂಬ ಎಕ್ಸ್‌ ಖಾತೆದಾರ ತನ್ನ ಖಾತೆಯಲ್ಲಿ ರಸ್ತೆಯಲ್ಲಿ ಗುಂಡಿಗಳಿರುವ ವಿಡಿಯೋವೊಂದನ್ನು ಹಂಚಿಕೊಂಡು ವಿಡಿಯೋಗೆ ಶೀರ್ಷಿಕೆಯಾಗಿ "ಹೇ ಪ್ರಭು ಹರಿರಾಮ್‌ ಕೃಷ್ಣನಾಧಂ ಜನನ್ಮೋಹನ್‌ ರೆಡ್ಡಿ ಕ್ಯಾಹುವಾ" #aproads #potatocm #andhrapradesh ಎಂಬ ಟ್ಯಾಗ್‌ಗಳೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ವಿಡಿಯೋದಲ್ಲಿ ಕಾಣಿಸುವುದು ಆಂಧ್ರಪ್ರದೇಶದ ರಸ್ತೆಯಲ್ಲ.

ವೈರಲ್‌ ಆದ ವಿಡಿಯೋವಿನಲ್ಲಿರುವ ಪ್ರಮುಖ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ ಮಾಡಿದೆವು. ಹುಡುಕಾಟದಲ್ಲಿ ನಮಗೆ ಸಾಕಷ್ಟು ಹಳೆಯ ವಿಡಿಯೋಗಳು ಕಂಡುಬಂದವು.

ರೇಡಿಯೋ ಎಲ್ಷಿಂಟಾ ಎಂಬ ಎಕ್ಸ್‌ ಖಾತೆದಾರ ತನ್ನ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡು ಇಂಡೋನೇಷಿಯನ್‌ ಭಾಷೆಯಲ್ಲಿ "ಮಳೆಯಿಂದಾಗಿ ರಸ್ತೆಗಳಲ್ಲಿ ಗುಂಡಿಗಳಾಗಿವೆ. ಹೀಗಾಗಿ ಎಚ್ಚರದಿಂದಿರಿ. ಮಳೆಯಿಂದಾಗಿ ರಸ್ತೆಗಳಲ್ಲಿರುವ ಗುಂಡಿಗಳಲ್ಲಿ ನೀರು ತುಂಬಿ ರಸ್ತೆಯಲ್ಲಿನ ಗುಂಡಿಗಳು ಕಾಣುವುದಿಲ್ಲ. ಹೀಗಾಗಿ ತುಂಬಾ ಜಾಗರೂಗಕತೆಯಿಂದ ಓಡಾಡಿ" ಎಂಬ ಶೀರ್ಷಿಕೆಯೊಂದಿಗೆ ಫೋಸ್ಟ್‌ ಮಾಡಿದ್ದರು.

“The struggle to drive over20kmph is real #potholes #pothole #mumbai #mumbairoads #maharashtra #roads #rains #TMC #BMC #aamchimumbai #mumbairain” ಎಂಬ ಶೀರ್ಷಿಕೆಯೊಂದಿಗೆ ಫೇಸ್‌ಬುಕ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದರು.

Full View

ಯೂಟ್ಯೂಬ್‌ನಲ್ಲಿ ಕಾರ್ಸ್‌ ಹಿಟ್ಟಿಂಗ್‌ ಮ್ಯಾಸಿವ್‌ ಫಥ್ಹೋಲ್ಸ್‌ ಎಂಬ ಶೀರ್ಷಿಕೆಯಡಿಯಲ್ಲಿ ಕಾರ್ಸ್‌ ವಿತ್‌ ಪಾಥ್ಹೋಲ್ಸ್‌ ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಕ್ಟೋಬರ್‌ 25,2020ರಂದು ವಿಡಿಯೋವೊಂದು ಅಪ್‌ಲೋಡ್‌ ಮಾಡಲಾಗಿತ್ತು.

Full View

ಚೀನಾದಲ್ಲಿ ಭಾರಿ ಮಳೆಯ ನಂತರ ರಸ್ತೆಯಲ್ಲಿನ ಗುಂಡಿಗಳು ಎಂಬ ಶೀರ್ಷಿಕೆಯಡಿಯಲ್ಲಿ ಸಿನಿಮಾ ಟಿವಿ ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ ಜುಲೈ 12, 2020ರಂದು ವಿಡಿಯೋವೊಂದ ಅಪ್‌ಲೋಡ್‌ ಮಾಡಲಾಗಿತ್ತು.

Full View

ಹೀಗಾಗಿ ವೈರಲ್‌ ಆದ ವಿಡಿಯೋ ಆಂದ್ರಪ್ರದೇಶದಲ್ಲಿ ಮೈಚಾಂಗ್‌ ಚಂಡಮಾರುತದಿಂದಾಗಿ ಆದ ಅವಾಂತರವಲ್ಲ. ವೈರಲ್‌ ಆದ ವಿಡಿಯೋ 2020ರಲ್ಲಿ ಅಪ್‌ಲೋಡ್‌ ಮಾಡಿರುವ ಚೀನಾದಲ್ಲಿನ ವಿಡಿಯೋ.

Claim :  Video shows potholes in Andhra Pradesh during the tenure of Chief Minister Jaganmohan Reddy
Claimed By :  X users
Fact Check :  False
Tags:    

Similar News