ಫ್ಯಾಕ್ಟ್‌ಚೆಕ್: ವೈಎಸ್‌ಆರ್‌ಸಿಪಿ ಶಾಸಕಿ ಪುಷ್ಪಾ ಶ್ರೀವಾಣಿ ವೈಎಸ್‌ಆರ್‌ಸಿಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ ಎಂಬ ಸುದ್ದಿಯ ಅಸಲಿಯತ್ತೇನು?
ವೈಎಸ್‌ಆರ್‌ಸಿಪಿ ಶಾಸಕಿ ಪುಷ್ಪಾ ಶ್ರೀವಾಣಿ ವೈಎಸ್‌ಆರ್‌ಸಿಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ ಎಂಬ ಸುದ್ದಿಯ ಅಸಲಿಯತ್ತೇನು?;
ವೈಎಸ್ ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿ ನಾಲ್ಕು ವರ್ಷ ಪೂರ್ಣಗೊಂಡಿದೆ. ಇನ್ನೇನು ಚುನಾವಣೆ ಸಮೀಪಿಸುತ್ತಿದ್ದಂತೆ ವೈಎಸ್‌ಆರ್‌ಸಿಪಿ ಮತ್ತು ತೆಲುಗು ದೇಶಂ ಪಾರ್ಟಿ ಪಕ್ಷಗಳೆರಡೂ ತಮ್ಮ ತಮ್ಮ ಪ್ರಚಾರವನ್ನು ತೀವ್ರಗೊಳಿಸಿದೆ.
ಇತ್ತೀಚೆಗೆ ವೈಎಸ್‌ಆರ್‌ಪಿಸಿ ಶಾಸಕಿಯ ಒಂದು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವಿಡಿಯೋದಲ್ಲಿ ವೈಎಸ್‌ಆರ್‌ಸಿಪಿ ಶಾಸಕಿ ಪುಷ್ಪಾ ಶ್ರೀವಾಣಿ "ವಿಜಯನಗರದ ಆದಿವಾಸಿ ಮಹಿಳೆಯರಿಗೆ ಸರಿಯಾದ ವೈದ್ಯಕೀಯ ಸೇವೆಗಳು ಲಭಿಸುತ್ತಿಲ್ಲ, ಇದರಿಂದ ಹೆಣ್ಣು ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಚಿತ್ರೀಕರಿಸಿದ ವಿಡಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಡಿಸಂಬರ್ 14,2023ರಲ್ಲಿ ಸರನ್ಯಾ ಎಂಬ ಖಾತೆದಾರ ಎಕ್ಸ್ ಖಾತೆಯಲ್ಲಿ ಪುಷ್ಪ ಶ್ರೀವಾಣಿಯ ವಿಡಿಯೋವನ್ನು ಪೋಸ್ಟ್ ಮಾಡಿ ಅದಕ್ಕೆ ಶೀರ್ಷಿಕೆಯಾಗಿ "ವಿಜಯನಗರ ಜಿಲ್ಲೆಯ ಆದಿವಾಸಿಗಳಿಗೆ ವೈದ್ಯಕೀಯ ಸೇವೆ ಸಿಗುತ್ತಿಲ್ಲ, ಬೈಕ್ ಆಂಬುಲನ್ಸ್ ಸೇವೆಗೂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ, ಸರಿಯಾದ ಸಮಯದಲ್ಲಿ ವೈದ್ಯಕೀಯ ಸೇವೆ ದೊರೆಯದೆ ಆದಿವಾಸಿ ಮಹಿಳೆಯರು ಮತ್ತು ಗರ್ಭಿಣಿಯರಿಗೆ ಬಹಳ ಕಷ್ಟವಾಗುತ್ತಿದೆ. ಇಲ್ಲಿನ ಜನರು ಕಷ್ಟಗಳನ್ನು ಎದುರಿಸುತ್ತಾ ತಮ್ಮ ತಮ್ಮ ಪ್ರಾಣವನ್ನು ಕೈಯಲ್ಲಿಟ್ಟುಕೊಂಡು ಬದುಕುತ್ತಿದ್ದಾರೆ" ಎಂಬ ಶೀರ್ಷಿಕೆಯನ್ನೀಡಿ ಪೋಸ್ಟ್ ಮಾಡಿದ್ದರು.
విజయనగరం జిల్లాలో గిరిజనులకి వైద్య సేవలు అందడం లేదు,బైక్ అంబులెన్సు లు పని చెయ్యట్లేదు, సకాలంలో వైద్య సేవలు అందక ఎందరో బాలికలు, గర్భిణీ మహిళలు చాలా ఇబ్బందులు ఎదురుకుంటూ ప్రాణాలను సైతం పణంగా పెడుతున్నారు అని @PushpaSreevani గారు ఆవేదన వ్యక్తం చేస్తున్నారు...@VidadalaRajini ఇదేనా… pic.twitter.com/A6Ytu1lo5i
— Saranya (@Saranya_abburi) December 14, 2023
ಫ್ಯಾಕ್ಟ್‌ಚೆಕ್
ವೈರಲ್ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈಎಸ್‌ಆರ್‌ಸಿಪಿ ಶಾಸಕಿ ಪುಷ್ಟಾ ಶ್ರೀವಾಣಿ ವಿಡಿಯೋ ಚಿತ್ರೀಕರಿಸಿದ ವಿಡಯೋ ಇತ್ತೀಚಿನದಲ್ಲ. ವೈರಲ್ ಆದ ವಿಡಿಯೋದಲ್ಲಿ ಶಾಸಕಿ ವೈಎಸ್‌ಆರ್‌ಸಿಪಿ ಪಕ್ಷದ ನಾಯಕ ವೈಎಸ್ ಜಗನ್ ಮೋಹನ್ ರೆಡ್ಡಿಯನ್ನು ದೂಶಿಸುತ್ತಿಲ್ಲ, 2018ರಲ್ಲಿ ಅಧಿಕಾರದಲ್ಲಿದ್ದ ಟಿಡಿಪಿ ಆಡಳಿತವನ್ನು ಶಾಸಕಿ ಪುಷ್ಪ ಶ್ರೀವಾಣಿ ದೂಶಿಸುತ್ತಿದ್ದಾರೆ
ನಾವು ವಿಡಿಯೋವಿನಲ್ಲಿರುವ ಕೆಲವು ಕೀವರ್ಡ್‌ಗಳನ್ನು ಉಪಯೋಗಿಸಿ ವಿಡಿಯೋವಿನ ಅಸಲಿಯತ್ತನ್ನು ಹುಡುಕಲು ಪ್ರಯತ್ನಿಸಿದೆವು. ನಮಗೆ ಹುಡುಕಾಟದಲ್ಲಿ 2ಡೇ 2ಮಾರೋ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ "ಕರುಪಂ ಎಂಎಲೈ ಪುಷ್ಪ ಶ್ರೀವಾಣಿ ಎಮೋಷನಲ್ ಸ್ಪೀಚ್ ಎಬೋಟ್ ಗಿರಿಜನ ಪೀಪಲ್" ಎಂಬ ಶೀರ್ಷಿಕೆಯೊಂದಿಗಿನ ವಿಡಿಯೋವನ್ನು ಕಂಡುಕೊಂಡೆವು. ಈ ವಿಡಿಯೋ ಸೆಪ್ಟಂಬರ್ 5,2018ರಂದು ಅಪ್‌ಲೋಡ್ ಮಾಡಲಾಗಿದೆ. ಅಂದರೆ ಆಗಿನ ಆಡಳಿತಾ ಸರ್ಕಾರ ಇದ್ದದ್ದು ಟಿಡಿಪಿಯದ್ದು ಈಗಾಗಿ ಶ್ರೀವಾಣಿ ದೂಶಿಸುತ್ತಿರುವುದು ಟಿಡಿಪಿಯನ್ನು ವೈಎಸ್‌ಆರ್‌ಸಿಪಿ ಪಕ್ಷದ ನಾಯಕ ವೈಎಸ್ ಜಗನ್ ಮೋಹನ್ ರೆಡ್ಡಿಯನ್ನಲ್ಲ ಎಂದು ಸಾಭಿತಾಗಿದೆ.
ಶ್ರೀವಾಣಿಯ ಸಾಮಾಜಿಕ ಮಾಧ್ಯಮಗಳನ್ನು ಹುಡುಕಿದಾಗ ನಮಗೆ ಇತ್ತೀಚೆಗೆ ಅಪ್‌ಲೋಡ್ ಮಾಡಿದಂತಹ ಯಾವುದೇ ವಿಡಿಯೋ ಕಂಡುಬಂದಿಲ್ಲ.
ಹಳೆಯ ವಿಡಿಯೋವನ್ನು ಟಿಡಿಪಿಯವರು ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ನಾನು ಚಿತ್ರೀಕರಿಸಿದ ಮೂಲ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಮೂಲ ವಿಡಿಯೋವನ್ನು ಶ್ರೀವಾಣಿ ತನ್ನ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
2018ರಲ್ಲಿ ವಿಜಯನಗರದ ಸಾಲೂರಿನ 15 ಬುಡಕಟ್ಟು ವಿದ್ಯಾರ್ಥಿನಿಯರಿಗೆ ಆಸ್ಪತ್ರೆಯಲ್ಲಿ ಕೂರಿಸಿ ಚಿಕಿತ್ಸೆಯನ್ನು ನೀಡಲಾಗಿದೆ. ಈ ಘಟನೆಯಿಂದ ಅಸಮಧಾನಗೊಂಡ ಪುಷ್ಟು ಶ್ರೀವಾಣಿ ತನ್ನ ಖಾತೆಯಲ್ಲಿ ಟಿಡಿಪಿ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇದೇ ವಿಡಿಯೋವನ್ನು ಟಿಡಿಪಿಯವರು ವಿಡಿಯೋವಿನಲ್ಲಿರುವ ಸುದ್ದಿಯನ್ನು ತಿರುಚಿ ವೈಎಸ್‌ಆರ್‌ಸಿಪಿ ಪಕ್ಷದ ಬಗ್ಗೆ ನನಗೆ ಅಸಮಧಾನವಿದೆ ಎಂದು ಶ್ರೀವಾಣಿ ಹೇಳುವ ಹಾಗೆ ಸುಳ್ಳು ಪ್ರಚಾರವನನ್ನು ಮಾಡುತ್ತಿದ್ದಾರೆ ಎಂದು ಖುದ್ದು ಶ್ರೀವಾಣಿ ವಿಡಿಯೋ ಮಾಡಿ ಹೇಳಿದ್ದಾರೆ.
ಆರ್‌ಟಿವಿಲೈವ್.ಕಾಂ ವರದಿಯ ಪ್ರಕಾರ 2018ರಲ್ಲಿ ವೈಎಸ್‌ಆರ್‌ಸಿಪಿ ಪಕ್ಷದ ಶಾಸಕಿ ಪುಷ್ಪ ಶ್ರೀವಾಣಿ ಟಿಆರ್‌ಪಿ ಪಕ್ಷದ ವಿರುದ್ದ ಅಸಮಧಾನವನ್ನು ವ್ಯಕ್ತಪಡಿಸಿದ್ದರು, ವೈಎಸ್‌ಆರ್‌ಸಿಪಿ ಪಕ್ಷದ ಮೇಲೆ ದೂಶಿಸಿಲ್ಲ.
ಹೀಗಾಗಿ ವೈರಲ್ ಆದ ವಿಡಿಯೋ ಮತ್ತು ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋ ಇತ್ತೀಚಿನದಲ್ಲ, ವೈರಲ್ ಆದ ವಿಡಿಯೋ 2018ರದ್ದು. ವಿಡಿಯೋದಲ್ಲಿ ಕಾಣುತ್ತಿರುವ ಮಹಿಳೆ ವೈಎಸ್‌ಆರ್‌ಸಿಪಿ ನಾಯಕ ಸಿಎಂ ಜಗನ್ ಮೋಹನ್ ರೆಡ್ಡಿಯನ್ನು ದೂಶಿಸುತ್ತಿಲ್ಲ, 2018ರಲ್ಲಿ ಅಧಿಕಾರದಲ್ಲಿದ್ದ ಟಿಡಿಪಿ ಆಡಳಿತವನ್ನು ಶಾಸಕಿ ಪುಷ್ಪ ಶ್ರೀವಾಣಿ ದೂಶಿಸುತ್ತಿದ್ದಾರೆ.