ಫ್ಯಾಕ್ಟ್‌ಚೆಕ್‌: ಇಂಡಿಯಾ ಪೋಸ್ಟ್‌ ಆನ್‌ಲೈನ್‌ ಪ್ರಶ್ನಾವಳಿಯನ್ನು ಉತ್ತರಿಸಿದರೆ ನಗದು ಬಹುಮಾನವನ್ನು ಪಡೆಯಬಹುದು ಎಂಬ ಸುದ್ದಿಯ ಅಸಲಿಯತ್ತೇನು?

ಇಂಡಿಯಾ ಪೋಸ್ಟ್‌ ಆನ್‌ಲೈನ್‌ ಪ್ರಶ್ನಾವಳಿಯನ್ನು ಉತ್ತರಿಸಿದರೆ ನಗದು ಬಹುಮಾನವನ್ನು ಪಡೆಯಬಹುದು ಎಂಬ ಸುದ್ದಿಯ ಅಸಲಿಯತ್ತೇನು?

Update: 2024-03-06 19:42 GMT

"ಇಂಡಿಯನ್‌ ಪೋಸ್ಟ್‌ ಗೌರ್ನ್ಮೆಂಟ್‌ ಸಬ್ಸೀಡಿ"ಯು ಲಕ್ಕಿ ಡ್ರಾ ಮೂಲಕ ನಗದು ಗೆಲ್ಲುವ ಅವಕಾಶವನ್ನು ಮಾಡಿಕೊಟ್ಟಿದೆ ಎಂದು ವಾಟ್ಸ್‌ಪ್‌ ಮತ್ತು ಇತರ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ವೈರಲ್‌ ಆದ ಪೋಸ್ಟ್‌ಗೆ ಈ ಕೆಳಗಿನ ಶೀರ್ಷಿಕೆಯನ್ನು ನೀಡಿದ್ದರು.

ಭಾರತ ಪೋಸ್ಟ್‌ ರಾಷ್ಟ್ರೀಯ ಸರ್ಕಾರದ ಸಬ್ಸೀಡಿಯನ್ನು ಪಡೆದುಕೊಳ್ಳಬಹುದು.

ನೀವು ಪ್ರಶ್ನಾವಳಿಗೆ ಉತ್ತರಿಸಿದರೆ ನೀವು ಬರೋಬ್ಬರಿ ₹65,402.40ನ್ನು ಬಹುಮಾನವಾಗಿ ಪಡೆದುಕೊಳ್ಳಬಹುದು.

ಬಹುಮಾನವನ್ನು ಪಡೆದುಕೊಳ್ಳಲು ನೀವು ಈ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ವಿವರಿಸಲಾಗಿತ್ತು.

ಪ್ರಶ್ನೆ: ನಿಮಗೆ ಇಂಡಿಯಾ ಪೋಸ್ಟ್‌ ಗೊತ್ತಾ? ಇಲ್ಲವಾ?

ನೀವು ಆಯ್ಕೆ ಮಾಡಿದ ಉತ್ತರವನ್ನು ಕ್ಲಿಕ್‌ ಮಾಡಿದ ಮೇಲೆ ಆ ಟ್ಯಾಬ್‌ ಮುಂದಿನ ಟ್ಯಾಬ್‌ಗೆ ಚಲಿಸುತ್ತದೆ.

3 ಪ್ರಶ್ನೆಯನ್ನು ಉತ್ತರಿಸಿದ ಕೊನೆಯಲ್ಲಿ, ಅಭಿನಂದನೆಗಳು ಎಂಬ ಸಂದೇಶವು ಕಾಣಿಸುತ್ತದೆ.ಆದರೆ ಣೀವು ಈ ಬಹುಮಾನವನ್ನು ಪಡೆದುಕೊಳ್ಳಬೇಕು ಎಂದರೆ ನೀವು 5 ವಾಟ್ಸ್‌ಪ್‌ ಅಥವಾ 20 ಜನರಿಗೆ ಈ ಲಿಂಕನ್ನು ಶೇರ್‌ ಮಾಡಬೇಕು. ಮಾಡಿದವರಿಗೆ 5ರಿಂದ 7 ದಿನಗಳಲ್ಲಿ ನಿಮ್ಮ ಮನೆಗೆ ನಿಮ್ಮ ಉಡುಗರೆ ದೊರೆಯುತ್ತದೆ ಎಂಬ ಪೋಸ್ಟ್‌ ವೈರಲ್‌ ಆಗಿತ್ತು.


ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ.

ನಾವು ಇಂಡಿಯಾ ಪೊಸ್ಟ್‌ನ ಅಧಿಕೃತ ವೆಬ್‌ಸೈಟ್‌ನ್ನು ಪರಿಶೀಲಿಸಿದೆವು. ಈ ಕುರಿತು ಯಾವುದೇ ಹಕ್ಕುಗಳು ನಮಗೆ ಕಾಣಸಿಗಲಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಲಿಂಕ್‌ ಕಳೆದ ಒಂದು ವರ್ಷದಿಂದ ಚಲಾವಣೆಯಲ್ಲಿರುವ ಕಾರಣ ಇಂಡಿಯಾ ಪೋಸ್ಟ್‌ಇನ್ನ ಎಕ್ಸ್‌ ಖಾತೆಯಲ್ಲಿ ಫೆಬ್ರವರಿ 28,2024ರಂದು ವೈರಲ್‌ ಆದ ಹೇಳಿಕೆ ಸುಳ್ಳು, ಯಾರೂ ಈ ಲಿಂಕನ್ನು ಕ್ಲಿಕ್‌ ಮಾಡಿ ಮೋಸ ಹೋಗಬೇಡಿ ಎಂದು ಅಧಿಕೃತವಾಗಿ ಹೇಳಿಕೆಯನ್ನು ನೀಡಿತು.

Be alert, Be safe. India Post is not organising any such contests with cash prizes. Don’t click on these scam links. ಎಂದು ಇಂಗ್ಲೀಷ್‌ ಶೀರ್ಷಿಕೆಯೊಂದಿಗೆ ಇಂಡಿಯಾ ಪೋಸ್ಟ್‌ ತನ್ನ ಎಕ್ಸ್‌ ಖಾತೆಯಲ್ಲಿ ಅಧಿಕೃತವಾಗಿ ಹೇಳಿಕೆಯನ್ನೀಡಿತು.

ವೈರಲ್‌ ಆದ ಪೋಸ್ಟ್‌ನ್ನು ತೀಕ್ಷ್ಣವಾಗಿ ಗಮನಿಸಿದರೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ URL ಲಿಂಕ್‌ಗಳು ಇಂಡಿಯಾ ಪೋಸ್ಟ್‌ನ ಅಧಿಕೃತ ವೆಬ್‌ಸೈಟ್ indiapost.gov.in ನೊಂದಿಗೆ ಶುರುವಾಗುವುದಿಲ್ಲ. ಅಷ್ಟೇ ಅಲ್ಲ ಸರ್ಕಾರಿ ವೆಬ್‌ಸೈಟ್‌ಗಳು gov.in ಡೊಮೈನ್‌ನೊಂದಿಗೆ ಕೊನೆಗೊಳ್ಳುತ್ತದೆ. ಆದರೆ ವೈರಲ್‌ ಆದ ಸೈಟ್‌ ಮಾತ್ರ .buzz ನ ಮೂಲಕ ಕೊನೆಗೊಳ್ಳುತ್ತದೆ.

ಅಷ್ಟೇ ಅಲ್ಲ ನಾವು ವೈರಲ್‌ ಆದ ಪೋಸ್ಟ್‌ನ್ನು ಗೂಗಲ್‌ ರಿವರ್ಸ್‌ ಇಮೇಜ್‌ ಮೂಲಕ ಹುಡುಕಾಟ ನಡೆಸಿದಾಗ ನಮಗೆ ಮಾರ್ಚ್‌ 2,2024ರಂದು ಪಿಐಬಿ ವೆಬ್‌ಸೈಟ್‌ನ ಫ್ಯಾಕ್ಟ್‌ಚೆಕ್‌ನ ಂಊಲಕ ಹಂಚಿಕೊಳ್ಳಲಾಗಿದೆ ಎಂದು ನಾವು ಕಂಡುಕೊಂಡೆವು. A #FAKE lucky draw in the name of

@Indiapostoffice is viral on social media and is offering a chance to win ₹6,000 after seeking one's personal details #PIBFactCheck. It's a scam & is not related with India Post. Join us on #Telegram for quick updates: http://t.me/PIB_FactCheck ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್‌ ಮಾಡಿದ್ದರು.

A #FAKE lucky draw in the name of @IndiaPostOffice

ಡೆಂಕನಲ್‌ ಅಬ್‌ಡ್ಡೇಟ್‌ನ ವರದಿಯಲ್ಲಿ " @indiaPostOfficeನ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದಾರೆ. ವೈರಲ್‌ ಆದ ಪೋಸ್ಟ್‌ ಭಾರತದ ಪೋಸ್ಟ್‌ ಆಫೀಸ್‌ ಇಲಾಖೆಗೆ ಸಂಬಂಧಿಸಿದಲ್ಲವೆಂದು ಎಕ್ಸ್‌ ಖಾತೆಯಲ್ಲಿ ಪೊಸ್ಟ್‌ ಮಾಡುವ ಮೂಲಕ ಧೃಡೀಕರಿಸಿದೆ.

ಹೀಗಾಗಿ ವೈರಲ್‌ ಆದ ಪೋಸ್ಟ್‌ನಲ್ಲಿ ಯಾವುದೇ ಸತ್ಯಾಂಶವಿಲ್ಲ. ಭಾರತೀಯ ಪೋಸ್ಟ್‌ ಆಫೀಸ್‌ನವು ಯಾವುದೇ ಸಬ್ಸೀಡಿಯನ್ನು ನೀಡುತ್ತಿಲ್ಲ. ವೈರಲ್‌ ಆದ ಪೋಸ್ಟ್‌ ನಕಲಿಯದ್ದು ಜನರನ್ನು ವಂಚಿಸಲು ಇಂತಹ ನಕಲಿ ಪೋಸ್ಟ್‌ಗಳನ್ನು ಹರಿಬಿಟ್ಟಿದ್ದಾರೆ. 

Claim :  Viral claims about India Post’s online questionnaire is fake
Claimed By :  X users
Fact Check :  False
Tags:    

Similar News