ಫ್ಯಾಕ್ಟ್‌ಚೆಕ್‌: ರಾಹುಲ್ ಗಾಂಧಿಯ ರಹಸ್ಯ ಕುಟುಂಬದ ಚಿತ್ರವೆಂದು ವೈರಲ್‌ ಆಗುತ್ತಿರುವ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ

ರಾಹುಲ್ ಗಾಂಧಿಯ ರಹಸ್ಯ ಕುಟುಂಬದ ಚಿತ್ರವೆಂದು ವೈರಲ್‌ ಆಗುತ್ತಿರುವ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ

Update: 2024-05-09 18:47 GMT

Rahul Gandhi

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ 2024 ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿಲ್ಲ, ಹೀಗಾಗಿ ಮುಂಬರುವ ಚುನಾವಣೆಗೆ ಅವರು ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಪರವಾಗಿ ವಯನಾಡ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಪರವಾಗಿ ಯಾರು ಸ್ಪರ್ಧಿಸುತ್ತಾರೆ ಎಂಬ ಚರ್ಚೆಯೂ ಒಂದೆಡೆ ನಡೆಯುತ್ತಿದೆ. 2019 ರ ಲೋಕಸಭೆ ಚುನಾವಣೆಯಲ್ಲಿ ವಯನಾಡ್ ಮತ್ತು ಅಮೇಥಿ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ರಾಹುಲ್ ಗಾಂಧಿ, ವಯನಾಡಿನಲ್ಲಿ ಪಿಪಿ ಸುನೀರ್ ವಿರುದ್ಧ ಗೆದ್ದಿದ್ದರು. ಅಮೇಥಿಯಲ್ಲಿ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿರನ್ನು ಸೋಲಿಸಿದ್ದರು.

ಇದೀಗ, ರಾಹುಲ್ ಗಾಂಧಿ ಒಂದು ಹುಡುಗಿ ಮತ್ತು 3 ಮಕ್ಕಳೊಂದಿಗೆ ಇರುವ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ವೈರಲ್‌ ಚಿತ್ರದಲ್ಲಿ ರಾಹುಲ್ ಗಾಂಧಿ ಮತ್ತು ಮಕ್ಕಳು ಹೆಲಿಕಾಪ್ಟರ್ ಮುಂದೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಬಳಕೆದಾರರು ಚಿತ್ರವನ್ನು ತೆಲುಗಿನಲ್ಲಿ “దాచేస్తే దాగుతాయా నిజాలు.? ఎప్పటికైనా విత్తనం భూమిని చీల్చుకుంటూ... బయటకు వచ్చినట్లు, అలా అలా బయటకు వచ్చేస్తాయి.!” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದರು.

ಕನ್ನಡಕ್ಕೆ ಅನುವಾದಿಸಿದಾಗ, “ಸತ್ಯವನ್ನು ಮರೆಮಾಚಬಹುದೇ? ಒಂದು ಸಸ್ಯ ಬೆಳೆಯಲು ಭೂಮಿಯಲ್ಲಿ ಹಾಕಿರುವ ಬೀಜದಿಂದ ನೆಲವನ್ನು ಒಡೆದುಕೊಂಡು ಬಂದಂತೆ, ಸತ್ಯವೂ ಕತ್ತಲೆಯಿಂದ ಹೊರಬರುತ್ತದೆ" ಎಂಬ ಶೀರ್ಷಿಕೆಯೊಂದಿಂಗೆ ಫೋಟೋವನ್ನು ಹಂಚಿಕೊಂಡಿದ್ದರು.

Full View

Full View

ಇನ್ನು ಕೆಲವು ಬಳಕೆದಾರರು “బహిరంగ భ్రహ్మచారి... ఇక మీ కామెంట్ నాకైతే తెలియదు..మీకు ఏమైనా ఎరుకనా...?? ఎరుక అయితే కాస్తా బంధం కోసం చెప్పారా..??!” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದರು.

ಅದೇ ಚಿತ್ರವು ಜನವರಿ 2024 ರಲ್ಲೂ ಹಿಂದಿಯಲ್ಲಿ ಇದೇ ಹಕ್ಕುಗಳೊಂದಿಗೆ ಹಂಚಿಕೊಳ್ಳಲಾಗಿತ್ತು.

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಚಿತ್ರದಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ಚಿತ್ರದಲ್ಲಿ ಕಾಣುತ್ತಿರುವುದು ರಾಹುಲ್‌ ಗಾಂಧಿಯ ಕುಟುಂಬದ ಸದಸ್ಯರಲ್ಲ.

ವೈರಲ್‌ ಚಿತ್ರದಲ್ಲಿರುವ ನಿಜಾಂಶವನ್ನು ತಿಳಿಯಲು ನಾವು ಗೂಗಲ್‌ ರಿವರ್ಸ್ ಇಮೇಜ್ ಮೂಲಕ ಹುಡುಕಾಟವನ್ನು ನಡೆಸಿದೆವು. ಹುಡುಕಾಟದಲ್ಲಿ ನಮಗೆ ಕೆಲವು ವರದಿಗಳು ಕಂಡುಬಂದಿತು. ಫಸ್ಟ್ ಖಬರ್ ಎಂಬ ಯೂಟ್ಯೂಬ್‌ ಚಾನಲ್‌ನಲ್ಲಿ ʼमहिला कांग्रेस बारां जिलाध्यक्ष प्रियंका नंदवाना की पुत्री को राहुल गांधी ने करवाई हेलीकॉप्टर शेयरʼ ಎಂಬ ಶೀರ್ಷಿಕೆಯೊಂದಿಗಿರುವ ವಿಡಿಯೋವನ್ನು ನಾವು ಕಂಡುಕೊಂಡೆವು.

ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼ'ರಾಹುಲ್ ಗಾಂಧಿ ಹೆಲಿಕಾಪ್ಟರ್ ಬಳಿ 2 ನೇ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಪ್ರಿಯಾಂಕಾ ನಂದವನ ಅವರ ಪುತ್ರಿಯೊಂದಿಗೆ ಫೋಟೋವನ್ನು ಕ್ಲಿಕ್ಕೆಸಿಕೊಂಡಿದ್ದಾರೆʼ ಎಂಬ ಬರೆದು ಪೋಸ್ಟ್‌ ಮಾಡಲಾಗಿತ್ತು. ಪ್ರಿಯಾಂಕಳ ಹಿರಿ ಮಗಳ ಹುಟ್ಟು ಹಬ್ಬದಂದು ರಾಹುಲ್‌ ಗಾಂಧಿ ಆಕೆಯ ಕುಟುಂಬದೊಂದಿಗೆ ಹೆಲಿಕಾಪ್ಟರ್ ರೈಡ್‌ಗೆ ಕರೆದುಕೊಂಡು ಹೋಗಿದ್ದರು.

Full View

ಕನಕ್ ನ್ಯೂಸ್ ಎಂಬ ಯೂಟ್ಯೂಬ್ ಚಾನೆಲ್ ಸಹ ಇದೇ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು. 'ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಮಾತನ್ನು ಉಳಿಸಿಕೊಳ್ಳುತ್ತಾರೆ, ವಿದ್ಯಾರ್ಥಿಯನ್ನು ಹೆಲಿಕಾಪ್ಟರ್ ರೈಡ್‌ಗೆ ಕರೆದೊಯ್ಯುತ್ತಾರೆ' ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದರು.

Full View

ರಾಜಸ್ಥಾನ ತಕ್ ಸುದ್ದಿ ವೆಬ್‌ಸೈಟ್‌ನಲ್ಲೂ ನಮಗೆ ಈ ವರದಿಯ ಕುರಿತ ಫೋಟೋ ಲೇಖನ ಕಂಡುಬಂದಿತು ,ಅದರಲ್ಲಿ ರಾಹುಲ್ ಗಾಂಧಿ ಸೋನಿಯಾ ಗಾಂಧಿಯ ಹುಟ್ಟುಹಬ್ಬವನ್ನು ಆಚರಿಸಲು ಸವಾಯಿ ಮಾಧವಪುರಕ್ಕೆ ಹೋಗುತ್ತಿದ್ದಾರೆ ಹಾಗೆ ಕಾಮಾಕ್ಷಿ ನಂದವನ ಅವರು ತಮ್ಮ 14 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ ಎಂದು ಸುದ್ದಿಯನ್ನು ಕಂಡುಕೊಂಡೆವು.

ಹೀಗಾಗಿ ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ರಾಜಸ್ಥಾನದ ಬರಾನ್ ಜಿಲ್ಲೆಯ ಮಹಿಳಾ ಜಿಲ್ಲಾಧ್ಯಕ್ಷರ ಕುಟುಂಬ ಸದಸ್ಯರೊಂದಿಗೆ ರಾಹುಲ್ ಗಾಂಧಿ ಇರುವ ಚಿತ್ರವನ್ನು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. 

Claim :  ರಾಹುಲ್ ಗಾಂಧಿಯ ರಹಸ್ಯ ಕುಟುಂಬದ ಚಿತ್ರವೆಂದು ವೈರಲ್‌ ಆಗುತ್ತಿರುವ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ
Claimed By :  Social Media Users
Fact Check :  False
Tags:    

Similar News