ಫ್ಯಾಕ್ಟ್‌ಚೆಕ್ : ಬೆಂಗಳೂರಿನ ರಸ್ತೆ ಬಂದ್ ಮಾಡಿದ ಆಟೋ ಮತ್ತು ಡ್ರೈವರ್‍ಗಳ ಫೋಟೋ ಹಳೆಯದು
ಹಳೆಯ ಫೋಟೋವನ್ನು ಇತ್ತೀಚೆಗೆ ನಡೆದ ಬೆಂಗಳೂರು ಬಂದ್‌ಗೆ ತಳುಕು ಹಾಕಿ ವೈರಲ್ ಮಾಡಲಾಗಿದೆ.
ಸೆಪ್ಟೆಂಬರ್ `ರಂದು ಬೆಂಗಳೂರಿನಲ್ಲಿ ಖಾಸಗಿ ಸಾರಿಗೆಯವರು ಬಂದ್ ನಡೆಸಿದರು. ಈ ಹಿನ್ನೆಲೆಯಲ್ಲಿ ಆಟೋ ರಿಕ್ಷಾಗಳು ಮತ್ತು ಅದರ ಡ್ರೈವರ್‍ಗಳು ಬೆಂಗಳೂರಿನ ರಸ್ತೆಗಳನ್ನು ಬಂದ್ ಮಾಡಿದ ಫೋಟೋವೊಂದು ವೈರಲ್ ಆಯಿತು. ಡ್ರೈವರ್‍ಗಳು ಕೆಂಪು ಬಾವುಟ ಹಿಡಿದಿರುವುದನ್ನು ಚಿತ್ರದಲ್ಲಿ ಕಾಣಬಹುದು. ನೆಟಿಜನ್‌ಗಳು ಖಾಸಗಿ ಸಾರಿಗೆ ಮಾಲೀಕರು ನಡೆಸಿದ ಬಂದ್ ವೇಳೆ ತೆಗೆದ ಫೋಟೋ ಎಂದು ಪ್ರತಿಪಾದಿಸಿದ್ದಾರೆ.
ಈ ಫೋಟೋವನ್ನು, "ದಿನದ ಚಿತ್ರ: ಬೆಂಗಳೂರಿನಲ್ಲಿ ಸಾರಿಗೆ ಪ್ರತಿಭಟನೆ, ಕೆಂಪು ಭಾವುಟದೊಂದಿಗೆ ಹೋರಾಟಗಾರರು" ಎಂಬ ಅಡಿಶೀರ್ಷಿಕೆಯೊಂದಿಗೆ ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ ( ಆರ್ಕೈವ್) .
ಸಾರಿಗೆ ಸಂಘಟನೆಗಳ ಬೇಡಿಕೆಗಳನ್ನು ಈಡೇರಿಸುವಲ್ಲಿ ಕರ್ನಾಟಕ ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ ಬಂದ್‌ಗೆ ಕರೆ ನೀಡಲಾಗಿತ್ತು.
ಫ್ಯಾಕ್ಟ್ ಚೆಕ್
ವೈರಲ್ ಆಗಿರುವ ಫೋಟೋ ವಾಸ್ತವದಲ್ಲಿ ಹಳೆಯದಾಗಿದ್ದು, ಇತ್ತೀಚೆಗೆ ನಡೆದ ಬಂದ್‌ಗೆ ಬೆಂಗಳೂರು ಸಂಬಂಧಿಸಿದ್ದಲ್ಲ.
ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ 2014ರ ಲೇಖನವೊಂದು ನಮಗೆ ದೊರೆಯಿತು. ಇದರಲ್ಲಿ ಜನವರಿ 2014ರಲ್ಲಿ ಆಟೋ ರಿಕ್ಷ ಡ್ರೈವರ್‍ಗಳ ಒಕ್ಕೂಟವು ಇಂಧನ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದಾಗ ಸೆರೆ ಹಿಡಿದ ಚಿತ್ರ ಪ್ರಕಟವಾಗಿತ್ತು.
ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಕೂಟಗಳ ಫೆಡರೇಷನ್ 24 ಗಂಟೆಗಳ ಬಂದ್‌ಗೆ ಕರೆ ನೀಡಿತ್ತು. ಆದರೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯ ದಿನದ ಮಧ್ಯಾಹ್ನವೇ ಬಂದ್ ಹಿಂತೆಗೆದುಕೊಳ್ಳಲಾಯಿತು. (ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ).
ಹಾಗಾಗಿ ಹಳೆಯ ಫೋಟೋವನ್ನು, ಇತ್ತೀಚಿಗೆ ನಡೆದ ಬೆಂಗಳೂರು ಬಂದ್‌ಗೆ ತಪ್ಪಾಗಿ ತಳುಕು ಹಾಕಲಾಗಿದೆ.