ಫ್ಯಾಕ್ಟ್‌ಚೆಕ್‌: ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ 500 ರೂಪಾಯಿಯ ಮುಖ ಬೆಲೆಯ ನೋಟಿನ ಅಸಲಿಯತ್ತೇನು?

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ 500 ರೂಪಾಯಿಯ ಮುಖ ಬೆಲೆಯ ನೋಟಿನ ಅಸಲಿಯತ್ತೇನು?

Update: 2024-01-31 05:00 GMT

Ram mandir 500 rupee

ಜನವರಿ 22,2024ರಂದು ಅಯೋಧ್ಯೆಯಲ್ಲಿ ಶ್ರೀರಾಮನಿಗಾಗಿ ಭವ್ಯ ರಾಮಮಂದಿರವನ್ನು ನಿರ್ಮಿಸಲಾಯಿತು. ಅಂದೇ ರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವೂ ಜರುಗಿತು. ಈ ಕಾರ್ಯಕ್ರಮಕ್ಕೆ ದೇಶದ ಹಲವು ರಾಜಕಾರಣಿಗಳು, ಸೆಲಬ್ರೆಟಿಗಳು ಮತ್ತು ಗಣ್ಯಾತಿಗಣ್ಯರು ಆಗಮಿಸಿದ್ದರು. ಹೀಗಿರುವಾಗಲೇ ಶ್ರೀರಾಮಮಂದಿರ ಮತ್ತು ಶ್ರೀರಾಮನ ಕುರಿತು ಹಲವು ತಪ್ಪು ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ.

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಸುದ್ದಿಯೇನೆಂದರೆ, ಆರ್‌ಬಿಐ 500 ರೂಪಾಯಿಯ ಹೊಸ ಮುಖಬೆಲಯ ನೋಟನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಈ 500 ರೂಪಾಯಿ ನೋಟಿನಲ್ಲಿ ಗಾಂಧಿಯ ಬದಲು ಶ್ರೀರಾಮನ ಚಿತ್ರ ಮತ್ತು ಕೆಂಪು ಕೋಟೆಯ ಬದಲು ಶ್ರೀರಾಮ ಮಂದಿರವನ್ನು ಪ್ರಿಂಟ್‌ ಮಾಡಲಾಗುವುದು ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಅಮಿತ್‌ ದಾಸ್‌ ಎಂಬ ಖಾತೆದಾರ ತನ್ನ ಖಾತೆಯಲ್ಲಿ ಫೋಟೋವನ್ನು ಪೋಸ್ಟ್‌ ಮಾಡಿ ಚಿತ್ರಕ್ಕೆ ಶೀರ್ಷಿಕೆಯಾಗಿ “Major Braking: Now the 500 code note, will have a picture of Sriram Mandir instead of Red Fort. JAY SHREE RAM " ಎಂದು ಬರೆದಿದ್ದರು. ಶೀರ್ಷಿಕೆಯನ್ನು ನಾವು ಅನುವಾದಿಸಿದಾಗ "ಬಿಗ್‌ ಬ್ರೆಕಿಂಗ್‌: 500 ರೂಪಾಯಿಯ ಮುಖ ಬೆಲೆಯ ನೋಟಿನ ಮೇಲೆ ಇನ್ನು ಮುಂದೆ ಶ್ರೀರಾಮ ಮತ್ತು ಶ್ರೀರಾಮ ಮಂದಿರವನ್ನು ನಾವು ನೋಡಬಹುದು" ಎಂದು ಬರೆದು ಪೊಸ್ಟ್‌ ಮಾಡಿದ್ದರು.

Full View 

“वोट के लिए? NEW 500 NOTES WILL BE ISSUED ON 22/01/2024” ಎಂದು ಬರೆದು ನೋಟಿನ ಚಿತ್ರವನ್ನು ಪೋಸ್ಟ್‌ ಮಾಡಿದ್ದರು.

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಚಿತ್ರದಲ್ಲಿ ಯಾವುದೇ ಸತ್ಯಾಂಶವಿಲ್ಲ. 500ರೂ ಮುಖ ಬೆಲೆಯ ನೋಟಿನ ಮೇಲೆ ಶ್ರೀರಾಮನ ಮತ್ತು ರಾಮಮಂದಿರದ ಚಿತ್ರವನ್ನು ಮಾರ್ಫಿಂಗ್‌ ಮಾಡಲಾಗಿದೆ.

ನಾವು ಸತ್ಯಾಂಶವನ್ನು ತಿಳಿಯಲು ಕೆಲವೊಂದು ಕೀವರ್ಡ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದಾಗ ನಮಗೆ ಯಾವುದೇ ಫಲಿತಾಂಶ ಸಿಗಲಿಲ್ಲ.

ನಾವು ಪಿಐಬಿ ಮತ್ತು ಪಿಎಂಒ ಸಾಮಾಜಿಕ ಮಾಧ್ಯಮದ ಅಧಿಕೃತ ಖಾತೆಯಲ್ಲಿ ನಾವು ಹುಡುಕಾಟ ನಡೆಸಿದೆವು. ಖಾತೆಯಲ್ಲಿ ಎಲ್ಲೂ ಶ್ರೀರಾಮ ಮಂದಿರದಾಗಲಿ, ಶ್ರೀರಾಮನ ಚಿತ್ರವನ್ನಾಗಲಿ 500ರೂ ನೋಟಿನ ಮೇಲೆ ಮುದ್ರಣ ಮಾಡಲಿರುವೆವು ಎಂಬ ಸುದ್ದಿ ಎಲ್ಲೂ ಕಾಣಿಸಲಿಲ್ಲ.

ನಾವು ಆರ್‌ಬಿಐನ ಅಧಿಕೃತ ವೆಬ್‌ಸೈಟ್‌ನಲ್ಲೂ ಹುಡುಕಿದೆವು. ಅಲ್ಲಿ ನಮಗೆ ಯಾವುದೇ ರೀತಿಯ ಫಲಿತಾಂಶ ಸಿಗಲಿಲ್ಲ, ಬದಲಿಗೆ 2016ರಲ್ಲಿ 500 ರೂಪಾಯಿಯ ಹೊಸ ನೋಟು ಬಿಡುಗಡೆಯಾಗಿತು ಎಂಬ ಸುದ್ದಿ ಮಾತ್ರ ನಮಗೆ ಸಿಕ್ಕಿತು.

ಆರ್‌ಬಿಐ ವೆಬ್‌ಸೈಟ್‌ನಲ್ಲಿ ಹೊಸ ನೋಟು ಬಿಡುಗಡೆಯಾದಾಗ ಆ ನೋಟಿನಲ್ಲಿರುವ ವೈಶಿಷ್ಟತೆಯನ್ನು ನಮೋದಿಸುತ್ತಾರೆ. ಹೊಸ ನೋಟಿನ ಹಿಂಬಾಗದಲ್ಲಿ ಕೆಂಪು ಕೋಟೆ ಮತ್ತು ಭಾರತ ಧ್ವಜವನ್ನು ನಾವು ನೋಡಬಹುದು. ಹೊಸ ನೋಟು ಬಿಡುಗಡೆ ಮಾಡಿದ ಪ್ರತಿಸಲ ನೋಡಿನ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ನೀಡುತ್ತಾರೆ. ಆದರೆ ನಮಗೆ ವೈರಲ್‌ ಆದ ನೋಟಿಗೆ ಸೇರಿದ ಯಾವುದೇ ಸುದ್ದಿ ಕಂಡುಬಂದಿಲ್ಲ.


ಹೀಗಾಗಿ ವೈರಲ್‌ ಆದ ಚಿತ್ರದಲ್ಲಿ ಯಾವುದೇ ಸತ್ಯಾಂಶವಿಲ್ಲ. 500 ರೂ ಮುಖ ಬೆಲಯ ನೋಟಿನ ಮೇಲೆ ಶ್ರೀರಾಮ ಮಂದಿರದಾಗಲೀ, ಶ್ರೀ ರಾಮನ ಚಿತ್ರವನ್ನು ಪ್ರಿಂಟ್‌ ಮಾಡಿಲ್ಲ ಎಂಬುದು ಸಾಭೀತಾಗಿದೆ.

Claim :  Viral image shows new 500 rupee notes with Red Fort replaced with Ram Mandir and image of Gandhi replaced with Lord Ram, to be issued on 22/01/2024
Claimed By :  Social Media Users
Fact Check :  False
Tags:    

Similar News