ಫ್ಯಾಕ್ಟ್ ಚೆಕ್: ಅಯೋಧ್ಯೆ ರೈಲು ನಿಲ್ದಾಣದಂತೆ ಗೋಚರಿಸುತ್ತಿರುವ ದೃಶ್ಯವನ್ನು AI ಮೂಲಕ ರಚಿಸಲಾಗಿದೆ
ಅಯೋಧ್ಯೆ ರೈಲು ನಿಲ್ದಾಣದಂತೆ ಗೋಚರಿಸುತ್ತಿರುವ ದೃಶ್ಯವನ್ನು AI ಮೂಲಕ ರಚಿಸಲಾಗಿದೆ
ಶ್ರೀರಾಮನ ಜನ್ಮ ಭೂಮಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. 2024 ಜನವರಿಯಷ್ಟರಲ್ಲಿ ದೇವಸ್ಥಾನದ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲು ದೇವಸ್ಥಾನದ ಟ್ರಸ್ಟ್ ತಯಾರಿಯನ್ನು ನಡೆಸುತ್ತಿದೆ. ಇದೇ ಸಮಯದಲ್ಲಿ ಭಾರತೀಯ ರೈಲ್ವೇ ಇಲಾಖೆ ಜನವರಿ 15,2024ರೊಳಗೆ ಅಯೋಧ್ಯೆಯಲ್ಲಿ ರೈಲು ನಿಲ್ದಾಣದ ಪುನರಾಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲು ಸಜ್ಜಾಗಿದೆ.
ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಅಯೋಧ್ಯೆ ರೈಲ್ವೆ ನಿಲ್ದಾಣಕ್ಕೆ ಸಂಬಂಧಿಸಿರುವ ಕೆಲವೊಂದು ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆದ ವೀಡಿಯೋವಿನಲ್ಲಿ ರೈಲ್ವೇ ನಿಲ್ದಾಣ ಶ್ರೀರಾಮನ ಚಿತ್ರಗಳು , ಶಿಲ್ಪಾಕೃತಿಗಳಿಂದ ಕೂಡಿರುವ ಆಧ್ಯಾತ್ಮಿಕ ಕೇಂದ್ರದಂತೆ ಕಾಣುತ್ತದೆ. ವೈರಲ್ ಆದ ವೀಡಿಯೋ ಮತ್ತು ಫೋಟೋವಿನಲ್ಲಿ ಕಾಣುವ ಅಯೋಧ್ಯ ಎಂದು ಬರೆದಿರುವ ಪದದಲ್ಲಿ ಕೆಲವು ವ್ಯಾಕರಣ ಮತ್ತು ಅಕ್ಷರ ಲೋಪಗಳಿವೆ.
ಶ್ರೀನಿವಾಸ್ ಕೆ ಎನ್ನುವ ಖಾತೆದಾರ ತನ್ನ ಪೋಸ್ಟ್‌ನಲ್ಲಿ "ಮುಂದಿನ ವರ್ಷ ಜನವರಿಯಷ್ಟರಲ್ಲಿ ರಾಮಮಂದಿರ ಉದ್ಘಾಟನೆಯಾಗಲಿದೆ. 200 ಕೋಟಿ ರೂ.ಗಳ ವೆಚ್ಚದಲ್ಲಿ ತಯಾರಾಗುತ್ತಿರು ಅಭಿವೃದ್ಧಿ ಕಾಮಗಾರಿ ಕೆಲ ದಿನಗಳಿಂದ ಶರವೇಗದಲ್ಲಿ ನಡೆಯುತ್ತಿದೆ. ನೋಡಲು ರೈಲ್ವೇ ನಿಲ್ದಾಣ ಆಧ್ಯಾತ್ಮಿಕ ಕೇಂದ್ರದಂತೆ ಕಾಣಲಿದೆ" ಎಂದು ಪೋಸ್ಟ್ ಮಾಡಿದ್ದರು.
ಫ್ಯಾಕ್ಟ್ ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ಚಿತ್ರ ರೈಲು ನಿಲ್ದಾಣಕ್ಕೆ ಸಂಬಂಧಿಸಿದಲ್ಲ AI ಮೂಲಕ ರಚಿಸಲಾಗಿದೆ.
ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಉತ್ತರ ಪ್ರದೇಶದ ಅಯೋಧ್ಯೆ ರೈಲು ನಿಲ್ದಾಣದ ಪುನರಾಭಿವೃದ್ಧಿ ಕಾರ್ಯವು ತ್ವರಿತ ಗತಿಯಲ್ಲಿ ಸಾಗುತ್ತಿದೆ. ನಗರಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡುವ ಕಾರಣ ಪ್ರಯಾಣಿಕರ ಅಗತ್ಯತೆಗಳನ್ನು ಪೂರೈಸಲು ಭಾರತೀಯ ರೈಲ್ವೇ ಅಯೋಧ್ಯೆಗೆ ಹಲವಾರು ರೈಲುಗಳನ್ನು ಶುರು ಮಾಡಲಿದೆ.
ರೈಲ್ವೆ ಸಚಿವಾಲಯವು ಅಯೋಧ್ಯೆ ರೈಲು ನಿಲ್ದಾಣದ ಕೆಲವು ಫೋಟೋಗಳನ್ನು ಸರ್ಕಾರ ಹಂಚಿಕೊಂಡಿದೆ. "ಅಯೋಧ್ಯೆ ರೈಲು ನಿಲ್ದಾಣದ ಪುನರಾಭಿವೃದ್ಧಿ" ಕಾರ್ಯ ಭರದಿಂದ ಸಾಗುತ್ತಿದೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ರೈಲ್ವೇ ನಿಲ್ದಾಣದಲ್ಲಿ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಿಂದ ಪ್ರೇರಿತವಾದ ಕೆಲವು ಶಿಲ್ಪಗಳನ್ನು ನೋಡಬಹುದು. ಈಗಾಗಲೇ ಬಹುತೇಕ ರೈಲ್ವೇ ಕಾಮಗಾರಿ ಪೂರ್ಣಗೊಂಡಿವೆ ಜೊತೆಗೆ ನಿಲ್ದಾಣದ ಬಳಿ ಪಾರ್ಕಿಂಗ್ ಪ್ರದೇಶದ ಕಾಮಗಾರಿಯೋ ಪೋರ್ತಿಗೊಂಡಿದೆ ಎಂದು ಅಯೋಧ್ಯ ರೈಲ್ವೇ ನಿಲ್ದಾಣದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಜುಲೈ 20, 2023 ರಂದು ಸಾಮಾಜಿಕ ಮಾಧ್ಯಮದಲ್ಲಿ ಅಧಿಕಾರಿಗಳು ಹಂಚಿಕೊಂಡಿರುವ ಚಿತ್ರಗಳು ಮತ್ತು ವೈರಲ್ ಆದ ಚಿತ್ರಗಳಲ್ಲಿ ಸಂಪೂರ್ಣವಾಗಿ ಭಿನ್ನವಾಗಿವೆ.
ಜನವರಿ 2023 ರಲ್ಲಿ ರೈಲ್ವೆ ಸಚಿವಾಲಯವು ತಮ್ಮ X ಖಾತೆಯಲ್ಲಿ ಹಂಚಿಕೊಂಡ ಕೆಲವು ಚಿತ್ರಗಳನ್ನು ಸಹ ಕಂಡುಕೊಂಡೆವು.
ದಿ ಮಧ್ಯಪ್ರದೇಶ್ ಇಂಡೆಕ್ಸ್ X ಖಾತೆದಾರರು ಎರಡು ಫೋಟೋಗಳನ್ನು 27 ಅಕ್ಟೋಬರ್ 2023 ರಂದು ಹಂಚಿಕೊಂಡು "ಇದು ಅಯೋಧ್ಯೆ ರೈಲು ನಿಲ್ದಾಣ, ನಿಲ್ದಾಣ ಹೇಗಿರಬೇಕಿತ್ತು ಆದರೆ ಹೇಗಿದೆ ಎಂಬ" ಶೀರ್ಷಿಕೆಯೊಂದಿಗೆ ಪೋಸ್ಟ್‌ನ್ನು ಪೋಸ್ಟ್ ಮಾಡಿದ್ದರು.
ದಿ ಮಧ್ಯಪ್ರದೇಶ್ ಇಂಡೆಕ್ಸ್ X ಖಾತೆದಾರನೇ ತನ್ನ ಖಾತೆಯಲ್ಲಿ ಮತ್ತಷ್ಟು ಚಿತ್ರಗಳನ್ನು ಪೋಸ್ಟ್ ಮಾಡಿದ್ದರು. ಈ ಪೋಸ್ಟ್‌ಗಳಿಗೆ ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ಲೈಕ್ಸ್ ಬಂದಿವೆ. ಆತನೇ ತನ್ನ ಖಾತೆಯಲ್ಲಿ ಈ ಮೇಲ್ಕಂಡ ಚಿತ್ರಗಳು AI ಮೂಲಕ ರೂಪಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಯೋಧ್ಯೆಯ ರೈಲ್ವೇ ನಿಲ್ದಾಣವನ್ನು ಮತ್ತಷ್ಟು ಮೆರುಗುಗೊಳಿಸಲು ಇನ್ನು ಸಮಯವಿದೆ ಎಂದು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇದರಿಂದ ಸಾಭೀತಾಗಿರುವುದೇನೆಂದರೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಚಿತ್ರಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಈವೆಲ್ಲಾ ಚಿತ್ರಗಳು AI ನಿಂದ ರಚಿಸಲಾಗಿದೆ.