ಫ್ಯಾಕ್ಟ್‌ಚೆಕ್: ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ಸೇತುವೆ ಮಟ್ಟಕ್ಕೆ ಹರಿಯುತ್ತಿದೆ
ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ಸೇತುವೆ ಮಟ್ಟಕ್ಕೆ ಹರಿಯುತ್ತಿದೆ
ಕರ್ನಾಟಕದ ಕರಾವಳಿ ಜಿಲ್ಲೆಯಲ್ಲಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಸತತ ಮಳೆಯಿಂದಾಗಿ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳೆರಡು ಉಕ್ಕಿ ಹರಿಯುತ್ತಿದೆ. ಈ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ಉಪ್ಪಿನಂಗಡಿ ಬಳಿ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ಸೇತುವೆ ಮಟ್ಟಕ್ಕೆ ಹರಿಯುತ್ತಿದೆ ಎಂದು ಬಳಕೆದಾರರು ಶೇರ್ ಮಾಡುತ್ತಿದ್ದಾರೆ.
ಇದೇ ವಿಡಿಯೋವನ್ನು ಜುಲೈ 30, 2024ರಂದು ವಾಗ್ದೇವಿ ಕ್ರಿಯೇಷನ್ಸ್ ಅಫಿಷಿಯಲ್ ಎಂಬ ಯೂಟ್ಯೂಬ್ ಖಾತೆಯಲ್ಲಿ "ಉಪ್ಪಿನಂಗಡಿಯಲ್ಲಿ ಮಳೆಯ ರೌದ್ರ ನರ್ತನ #mustwatch #viralvideo #trending #highlights" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಶೇರ್ ಮಾಡಿದ್ದರು.
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋವಿನಲ್ಲಿ ಕಾಣುವುದು ಪಾಲಕ್ಕಾಡ್‌ನಲ್ಲಿರುವ ಪಟ್ಟಾಂಬಿ ಸೇತುವೆ,ಉಪ್ಪಿನಂಗಡಿಯಲ್ಲಿರುವ ನೇತ್ರಾವತಿ ಸೇತುವೆಯಲ್ಲ.
ನಾವು ವೈರಲ್ ಆದ ಸುದ್ದಿಯಲ್ಲಿ ಸತ್ಯಾಂಶವನ್ನು ತಿಳಿಯಲು ನಾವು ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಯೂಟ್ಯೂಬ್‌ನಲ್ಲಿರುವ ಕೆಲವು ವಿಡಿಯೋಗಳು ಕಂಡುಬಂದಿತು.
ಜುಲೈ 30, 2024ರಂದು ಯೂಟ್ಯೂಬ್‌ನಲ್ಲಿ "current situation in pattambi bridge" ಎಂಬ ಶೀರ್ಷಿಕೆಯೊಂದಿಗೆ ವೈರಲ್ ಆದ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿತ್ತು.
ಜುಲೈ 30, 2024ರಂದು ಯೂಟ್ಯೂಬ್‌ನಲ್ಲಿ "Kerala pattambi ಸೇತುವೆ ರೋಡ್.#nature #rainyseason #rain #mangalore #kerala#rain" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವೊಂದನ್ನು ಶೇರ್ ಮಾಡಿದ್ದರು.
ಇದೇ ವಿಡಿಯೋವನ್ನು ಹಲವು ಖಾತೆದಾರರು ಹಂಚಿಕೊಂಡಿರುವುದನ್ನು ನಾವು ಕಾಣಬಹುದು.
ಮತ್ತಷ್ಟು ಮಾಹಿತಿಗಾಗಿ ನಾವು ಹುಡುಕಾಟ ನಡೆಸಿದಾಗ ನಮಗೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಜುಲೈ,30, 2024ರಂದು ವರದಿಯಾಗಿದ್ದ ಲೇಖನವೊಂಡು ಕಂಡುಬಂದಿತು. ವರದಿಯಲ್ಲಿ "ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪಾಲಕ್ಕಡ್ ನಿವಾಸಿಗಳ ಜೀವನ ಅಸ್ಥವ್ಯಸ್ಥವಾಗಿದೆ. ಇಲ್ಲಿನ ಹಲವು ಸ್ಥಳಗಳು ಹಾಗೂ ಪ್ರಮುಖ ರಸ್ತೆಗಳು ಮುಚ್ಚಿಹೋಗಿದೆ. ಹೀಗಾಗಿ, ಪಾಲಕ್ಕಾಡ್ ಮತ್ತು ತ್ರಿಶೂರ್ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪಟ್ಟಾಂಬಿ ಸೇತುವೆಯನ್ನು ಬೆಳಗ್ಗೆ 11.30ಕ್ಕೆ ಮುಚ್ಚಲಾಗಿದೆ. ಹೆಚ್ಚಿನ ಮಾಹಿತಿ ಬರುವವರೆಗೆ ಜಿಲ್ಲೆಯ ಎಲ್ಲಾ ಪ್ರವಾಸೋದ್ಯಮ ಕೇಂದ್ರಗಳನ್ನು ಕಡ್ಡಾಯವಾಗಿ ಮುಚ್ಚುವುದಾಗಿ ಜಿಲ್ಲಾಧಿಕಾರಿಗಳು ಘೋಷಿಸಿದರು" ಎಂದು ವರದಿಯಾಗಿರುವುದನ್ನು ಕಂಡುಕೊಂಡೆವು.
ಇದೇ ಸುದ್ದಿಯನ್ನು ಹಲವಾರು ಮಾಧ್ಯಮ ಸಂಸ್ಥೆಗಳು ಸಹ ವರದಿ ಮಾಡಿರುವುದನ್ನು ನಾವು ನೋಡಬಹುದು.
ನಾವು ಈ ಜಾಗದ ಬಗ್ಗೆ ಮತ್ತಷ್ಟು ಖಚಿತ ಪಡಿಸಿಕೊಳ್ಳಲು, ಗೂಗಲ್ ಮ್ಯಾಪ್‌ನಲ್ಲಿ ಸ್ಟ್ರೀಟ್ ವ್ಯೂನಲ್ಲಿ ಲೊಕೇಶನ್ ಬಗ್ಗೆ ಹುಡುಕಾಡಿದೆವು ಮಾಡಿದೆವು.
ವೈರಲ್ ಆದ ವಿಡಿಯೋ ಮತ್ತು ಗೂಗಲ್‌ನಲ್ಲಿ ಸಿಕ್ಕ ವಿಡಿಯೋವಿನಲ್ಲಿರುವ ಸಾಮ್ಯತೆಗಳನ್ನು ನಾವು ಇಲ್ಲಿ ನೋಡಬಹುದು.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ವಿಡಿಯೋ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿರುವ ನೇತ್ರಾವತಿ ಸೇತುವೆಯದಲ್ಲ, ಈ ವಿಡಿಯೋ ಪಾಲಕ್ಕಾಡ್ ಮತ್ತು ತ್ರಿಶೂರ್ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪಟ್ಟಾಂಬಿ ಸೇತುವೆಯದ್ದು.