ಫ್ಯಾಕ್ಟ್‌ಚೆಕ್‌: ಬಿಜೆಪಿ ಐಟಿ ಸೆಲ್ ಕಾರ್ಯದರ್ಶಿ ರಾಜೇಶ್ ಬಿಜು ಮೇಲೆ ಹಲ್ಲೆ ಮಾಡಿರುವ ವಿಡಿಯೋ ಇತ್ತೀಚಿನದ್ದಲ್ಲ

ಬಿಜೆಪಿ ಐಟಿ ಸೆಲ್ ಕಾರ್ಯದರ್ಶಿ ರಾಜೇಶ್ ಬಿಜು ಮೇಲೆ ಹಲ್ಲೆ ಮಾಡಿರುವ ವಿಡಿಯೋ ಇತ್ತೀಚಿನದ್ದಲ್ಲ

Update: 2024-04-21 19:45 GMT

ಇತ್ತೀಚಿಗೆ ಎರಡು ನಿಮಿಷಗಳ ಸಿಸಿಟಿವಿ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೃಶ್ಯಗಳಲ್ಲಿ, ಹಸಿರು ಟಿ-ಶರ್ಟ್ ಧರಿಸಿದ್ದ ವ್ಯಕ್ತಿಯನ್ನು ಬಿಳಿ ಶರ್ಟ್ ಧರಿಸಿದ್ದ ಇಬ್ಬರು ಹೊಡೆಯುತ್ತಿರುವುದನ್ನು ನಾವು ಕಾಣಬಹುದು. ಗಲಾಟೆ ನಡೆಯುವ ಸ್ಥಳದಲ್ಲಿ ಮತ್ತೊಬ್ಬ ವ್ಯಕ್ತಿ ಮೌನವಾಗಿ ಗಲಾಟೆಯನ್ನು ನೋಡುತ್ತಿದ್ದಾನೆ. ವಿಡಿಯೋ ಕೊನೆಯಲ್ಲಿ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದರು.

ಇದೇ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೀಡಿಯೊವನ್ನು ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ “ಇಂದು ಸಂಜೆ ಬಿಜೆಪಿ ಐಟಿ ಮತ್ತು ಸಾಮಾಜಿಕ ಮಾಧ್ಯಮದ ಮುಂದೆ ಜಿಲ್ಲಾ ಕಾರ್ಯದರ್ಶಿ ರಾಜೇಶ್ ಬಿಜು ಮೇಲೆ ಬಿಜೆಪಿ ಕಾರ್ಯಕರ್ತನ ಮನೆಯ ಮುಂದೆ ಅಮಾನುಷ ಹಲ್ಲೆ ನಡೆದಿದೆ. ಈಗ ರಾಜೇಶ್ ಚೆನ್ನೈನಲ್ಲಿರುವ ನಂಗನಲ್ಲೂರಿನ ಶ್ರೀ ಚಕ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಶೀಘ್ರ ಗುಣಮುಖರಾಗಲೆಂದು ನಾವು ಪ್ರಾರ್ಥಿಸುತ್ತಿದ್ದೇವೆ” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್‌ ಮಾಡಿದ್ದರು.

ಫ್ಯಾಕ್ಟ್‌ಚೆಕ್‌

ವೈರಲ್ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ವೀಡಿಯೊ ಇತ್ತೀಚಿನದಲ್ಲ. ವೈರಲ್‌ ವಿಡಿಯೋವಿನಲ್ಲಿ ಇಬ್ಬರು ಬಿಜೆಪಿ ನಾಯಕರ ನಡುವಿನ ಜಗಳಕ್ಕೆ ಸಂಬಂಧಿಸಿದ್ದು ಎಂದು ಸಾಭೀತಾಗಿದೆ.

ವಿಡಿಯೋವನ್ನು ತೀಕ್ಷ್ಣವಾಗಿ ಗಮನಿಸಿದರೆ, ವಿಡಿಯೋವಿನಲ್ಲಿ 31.07.2023 ದಿನಾಂಕವನ್ನು ನಾವು ಗಮನಿಸ ಬಹುದು.ಇದರಿಂದ ಸಾಭೀತಾಗಿದ್ದೇನೆಂದರೆ, ಈ ಘಟನೆ ನಡೆದಿದ್ದು ಕಳೆದ ವರ್ಷ ಇದು ಇತ್ತೀಚಿನ ವಿಡಿಯೋವಲ್ಲ.

ನಾವು ಈ ಸುದ್ದಿಯ ಕುರಿತು ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ಗೂಗಲ್‌ನಲ್ಲಿ ರಿವರ್ಸ್ ಇಮೇಜ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ “சொந்த கட்சி உறுப்பினரையே தாக்கிய சென்னை கிழக்கு மாவட்ட பாஜக பொதுச்செயலாளர் எஸ்.எஸ்.சுப்பையா மீது வழக்குப்பதிவு!”

ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು.

ಇನ್ನ ಸ್ವಂತ ಪಾರ್ಟಿ ಸದಸ್ಯನ ಮೇಲೆ ಬಿಜೆಪಿ ಕಾರ್ಯಕಾರಿಣಿಗಳು ದಾಳಿ ನಡೆಸಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಹಲವು ಮಾಧ್ಯಮ ಸಂಸ್ಥೆಗಳು ಈ ವಿಡಿಯೋವನ್ನು ಹಂಚಿಕೊಂಡಿತ್ತು.

ಚೆನ್ನೈನಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್.ಸುಬ್ಬಯ್ಯ ಮದ್ಯಪಾನ ನಿರ್ಮೂಲನೆಯ ಕುರಿತು ಸಾರ್ವಜನಿಕವಾಗಿ ಮಾತನಾಡಿದ ನಂತರ ರೆಸ್ಟೋರೆಂಟ್‌ನಲ್ಲಿ ಮದ್ಯ ಸೇವಿಸುತ್ತಿದ್ದ ವಿಡಿಯೋ ವೈರಲ್‌ ಆಗಿತ್ತು.

ಈ ವಿಡಿಯೋ ವೈರಲ್ ಮಾಡಿದ್ದಕ್ಕೆ ಎಸ್.ಸುಬ್ಬಯ್ಯ ಬೆಂಬಲಿಗರು ಅದೇ ಜಿಲ್ಲೆಯ ಬಿಜೆಪಿ ಐಟಿ ವಿಭಾಗದ ಕಾರ್ಯದರ್ಶಿ ರಾಜೇಶ್ ಬಿಜು ಮನೆ ಮೇಲೆ ದಾಳಿ ನಡೆಸಿದ್ದಾರೆ. ರಾಜೇಶ್ ಈಗ ಕ್ರೋಂಪೇಟ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸರು ಸುಬ್ಬಯ್ಯನ ವಿರುದ್ಧ ಮಾನನಷ್ಟ ಮುಖದಮೆ, ಹಲ್ಲೆ ಮತ್ತು ಬೆದರಿಕೆ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಅಷ್ಟೇ ಅಲ್ಲ ನಮಗೆ ಆಗಸ್ಟ್ 1, 2023 ರಲ್ಲಿ ಈಟಿವಿ ವರದಿ ಮಾಡಿದ್ದ ಲೇಖನವೂ ಕಂಡುಬಂದಿತು. ಈಟಿವಿ ತಮಿಳುನಾಡು ಅದೇ ವಿಡಿಯೋಗೆ ಶೀರ್ಷಿಕೆಯಾಗಿ “பாஜக பொதுச் செயலாளர் மது அருந்திய வீடியோ விவகாரம்;வெளியிட்ட நபரைத் தாக்கும் சிசிடிவி காட்சிகள்!” ಶೀರ್ಷಿಕೆಯನ್ನೀಡಿ ಸುದ್ದಿಯನ್ನು ವರದಿ ಂಆಡಿರುವುದನ್ನು ನಾವು ಇಲ್ಲಿ ನೋಡಬಹುದು.

''ಬಿಜೆಪಿ ಪ್ರಧಾನ ಕಾರ್ಯದರ್ಶಿ ಮದ್ಯಪಾನ ಮಾಡುತ್ತಿರುವ ವಿಡಿಯೋ ಆದ್ದರಿಂದ ಈ ವಿಡಿಯೋವನ್ನು ಬಿಡುಗಡೆ ಮಾಡಿದ ವ್ಯಕ್ತಿಯ ಮೇಲೆ ನಡೆದ ದಾಳಿಯನ್ನು ಈ ಸಿಸಿಟಿವಿ ದೃಶ್ಯಗಳಲ್ಲಿ ನೋಡಬಹುದು.

ತನ್ನ ಸ್ವಂತ ಪಕ್ಷದ ಸದಸ್ಯನ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಚೆನ್ನೈ ಜಿಲ್ಲೆಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿರುದ್ಧ ಪ್ರಕರಣ ದಾಖಲುಲಾಗಿದೆ.

“சொந்த கட்சி உறுப்பினரையே தாக்கிய சென்னை கிழக்கு மாவட்ட பாஜக பொதுச்செயலாளர் மீது வழக்குப்பதிவு!” ೆಂದು ತಮಿಳಿನ ಪತ್ರಿಕೆಯೊಂದು ದಿನಕರನ್‌ ಸುದ್ದಿಯನ್ನು ಪ್ರಕಟಿಸಿತ್ತು. "ತಮ್ಮದೇ ಪಕ್ಷದ ಸದಸ್ಯನ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಚೆನ್ನೈ ಪೂರ್ವ ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಪ್ರಕರಣ ದಾಖಲಾಗಿದೆ" ಎಂದು ದಿನಕರನ್ ಹೇಳಿದ್ದಾರೆ.

ಏಪ್ರಿಲ್ 15, 2024 ರಂದು, ಗ್ರೇಟರ್ ಚೆನ್ನೈ ಪೊಲೀಸರು ವೈರಲ್ ವೀಡಿಯೊ ಸ್ಕ್ರೀನ್‌ಶಾಟ್‌ಗಳನ್ನು ಬಳಸಿಕೊಂಡು ಸುಳ್ಳು ಸುದ್ದಿಗಳನ್ನು ಹರಡುವವರಿಗೆ ಎಚ್ಚರಿಕೆಯನ್ನು ಸಹ ನೀಡಿದ್ದರು. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಹಳೆಯ ವೀಡಿಯೊಗಳನ್ನು ಹಂಚಿಕೊಂಡಿರುವುದನ್ನು ನಾವು ಕಾಣುತ್ತಿದ್ದೇವೆ ಎಂದು ತಮ್ಮ ಪೋಸ್ಟ್‌ನಲ್ಲಿ, “ವೈಯಕ್ತಿಕ ವಿವಾದದಿಂದಾಗಿ ರಾಜಕೀಯ ಪಕ್ಷದ ನಂಗನಲ್ಲೂರಿನ ಇಬ್ಬರು ನಾಯಕರ ನಡುವೆ ನಡೆದ ಜಗಳದ ವಿಡಿಯೋವಿದು. ಈ ಘಟನೆ 31.07.2023 ರಂದು ನಡೆದಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ, ಆರೋಪಿಗಳ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳಲಾಗಿದೆ. ಯಾವುದೇ ಪರಿಶೀಲನೆ ಇಲ್ಲದೆ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ಸುಳ್ಳು ಮಾಹಿತಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದರು.

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ, ವೈರಲ್‌ ವಿಡಿಯೋ ಇತ್ತೀಚಿನದಲ್ಲ. ಈ ವಿಡಿಯೋ ಇಬ್ಬರು ಬಿಜೆಪಿ ನಾಯಕರ ವೈಯಕ್ತಿಕ ದ್ವೇಷಕ್ಕೆ ಸಂಬಂಧಿಸಿದ್ದು ಎಂದು ಸಾಭೀತಾಗಿದೆ

Claim :  ಬಿಜೆಪಿ ಐಟಿ ಸೆಲ್ ಕಾರ್ಯದರ್ಶಿ ರಾಜೇಶ್ ಬಿಜು ಮೇಲೆ ಹಲ್ಲೆ ಮಾಡಿರುವ ವಿಡಿಯೋ ಇತ್ತೀಚಿನದ್ದಲ್ಲ
Claimed By :  Social Media Users
Fact Check :  False
Tags:    

Similar News