ಫ್ಯಾಕ್ಟ್‌ ಚೆಕ್‌: ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವ ಕೆಂಪು ಕಾರಿನ ವೈರಲ್‌ ವಿಡಿಯೋ ಹಳೆಯದು

ಕೆಂಪು ಬಣ್ಣದ ಕಾರೊಂದು ನಗರದ ರಸ್ತೆಗಳಲ್ಲಿ ಉಂಟಾದ ಪ್ರವಾಹದಲ್ಲಿ ತೇಲಿ ಹೋಗುತ್ತಿರುವ ವಿಡಿಯೋವೊಂದನ್ನು @bjp_telangana01 ಟ್ವಿಟರ್‍‌ ಹ್ಯಾಂಡಲ್‌ ಹಂಚಿಕೊಂಡಿದೆ. ಇದು ನಿಜವೆ?

Update: 2023-07-28 14:10 GMT

ಕೆಂಪು ಬಣ್ಣದ ಕಾರೊಂದು ನಗರದ ರಸ್ತೆಗಳಲ್ಲಿ ಉಂಟಾದ ಪ್ರವಾಹದಲ್ಲಿ ತೇಲಿ ಹೋಗುತ್ತಿರುವ ವಿಡಿಯೋವೊಂದನ್ನು @bjp_telangana01 ಟ್ವಿಟರ್‍‌ ಹ್ಯಾಂಡಲ್‌ ಹಂಚಿಕೊಂಡಿದೆ. ಈ ಟ್ವೀಟನ್ನು 63000ಕ್ಕೂ ಹೆಚ್ಚು ಮಂದಿ ನೋಡಿದ್ದು, ಹಲವರು ರೀಟ್ವೀಟ್‌ ಮಾಡಿದ್ದಾರೆ.

ವಿಡಿಯೋದ ಆರ್ಕೈವ್‌ ಲಿಂಕ್‌ : https://web.archive.org/web/20230721063207/https:/twitter.com/BJP_TELANGANA01/status/1681905300780232705

ಫ್ಯಾಕ್ಟ್‌ಚೆಕ್‌

ಮೊದಲನೆಯದಾಗಿ ಈ ಟ್ವಿಟರ್‍‌ ಹ್ಯಾಂಡಲ್‌ಅನ್ನು ಸೂಕ್ಷ್ಮವಾಗಿ ಗಮನಿಸಿದಾಗ ತಿಳಿದು ಬಂದಿದ್ದು, ಇದು ತೆಲಂಗಾಣ ಬಿಜೆಪಿಯ ಅಧಿಕೃತ ಖಾತೆಯಲ್ಲ ಎಂಬುದು. @bjp_telangana01 ಖಾತೆಗೆ ಕೇವಲ 278 ಫಾಲೋವರ್‍‌ಗಳಿದ್ದು, ಆಗಸ್ಟ್‌ 2021ರಲ್ಲಿ ಈ ಖಾತೆಯನ್ನು ಆರಂಭಿಸಲಾಗಿದೆ. ಖಾತೆಯೂ ಮೀಡಿಯಾ ಪರ್ಸನಾಲಿಟಿಗೆ ಸಂಬಂಧಿಸಿದ್ದು ಎಂದು ಪರಿಚಯದಲ್ಲಿ ನೀಡಲಾಗಿದೆ. ಇದು ತೆಲಂಗಾಣ ಬಿಜೆಪಿಯ ಅಧಿಕೃತ ಖಾತೆಯಲ್ಲ ಎಂಬುದು ಇದರಿಂದ ಸ್ಪಷ್ಟ.

ಬಿಜೆಪಿಯ ಅಧಿಕೃತ ಖಾತೆಯು @BJP4Telangana ಎಂದಿದ್ದು 256,000 ಫಾಲೋವರ್‍‌ಗಳಿದ್ದಾರೆ. ಈ ಖಾತೆಯು ಬಿಜೆಪಿಯ ಅಧಿಕೃತ ವೆಬ್‌ ತಾಣದ ವಿಳಾಸ, http://telangana.bjp.org ಹೊಂದಿದೆ. ಈ ಖಾತೆಯಲ್ಲಿ 32,000 ಟ್ವೀಟ್‌ಗಳಿವೆ. 2016ರಿಂದ ಈ ಖಾತೆಯು ಸಕ್ರಿಯವಾಗಿದೆ.

ಎರಡು ಖಾತೆಗಳ ಹೋಲಿಕೆಯನ್ನು ನೀವು ಗಮನಿಸಬಹುದು.

 

ಯಾಂಡೆಕ್ಸ್‌ ತಾಣದಲ್ಲಿ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ 2020ರಲ್ಲಿ ವ್ಯಕ್ತಿಗತ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿರುವುದನ್ನು ಗಮನಿಸಿದೆವು.

ಐಯಾಮ್‌ ಕೂಲ್‌ ಹೆಸರಿನ ಯೂಟ್ಯೂಬ್‌ ಖಾತೆಯಲ್ಲಿ 2020ರ ಅಕ್ಟೋಬರ್‍‌ 14ರಂದು "ಫ್ಲೋಟಿಂಗ್ ಕಾರ್‍‌ (ತೇಲುವ ಕಾರು)ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

Full View

ಇದೇ ಜಾಡಿನಲ್ಲಿ "Cars float in rainwater" ಕೀ ವರ್ಡ್‌ಗಳನ್ನು ಬಳಸಿ ಯೂಟ್ಯೂಬ್‌ನಲ್ಲಿ ಮತ್ತಷ್ಟು ಹುಡುಕಾಟ ನಡೆಸಿದಾಗ ಅದೇ ವಿಡಿಯೋವನ್ನು ಶಾರ್ಟ್‌ ವಿಡಿಯೋ ರೂಪದಲ್ಲಿ "ಕಾರ್ಸ್‌ ಫ್ಲೋಟ್‌ ಇನ್‌ ಹೈದರಾಬಾದ್‌ ರೈನ್‌ ವಾಟರ್‍‌" ಶೀರ್ಷಿಕೆಯಲ್ಲಿ2020ರ ಅಕ್ಟೋಬರ್ 15ರಂದು ಪ್ರಕಟವಾಗಿತ್ತು.

ಇನ್ನೊಂದು ವಿಡಿಯೋ 'ಸಮಯಂ ತೆಲುಗು' ಸುದ್ದಿ ಸಂಸ್ಥೆಯ ಖಾತೆಯಲ್ಲಿ, ರಸ್ತೆಯಲ್ಲಿ ಪ್ರವಾಹದ ರೂಪದಲ್ಲಿ ಹರಿಯುತ್ತಿರುವ ನೀರಿನಲ್ಲಿ ತೇಲುತ್ತಿರುವ ಕೆಂಪು ವಿಡಿಯೋ ವೈರಲ್‌ ಆಗಿದೆ ಎಂದು ಪ್ರಕಟಿಸಲಾಗಿತ್ತು.

Full View

2020ರ ಅಕ್ಟೋಬರ್‍‌ 14ರಂದು, ಸಿಕಂದರಾಬಾದಿನ ನೀರಿನಿಂದ ತುಂಬಿದ ರಸ್ತೆಯಲ್ಲಿ, ಒಂದರ ಮೇಲೊಂದು ನಿಂತಿದ್ದ ಕಾರುಗಳತ್ತ ಕೆಂಪು ಕಾರು ತೇಲಿ ಹೋಗುತ್ತಿರುವುದಾಗಿ ಎನ್‌ಡಿಟಿವಿ ವರದಿ ಮಾಡಿತ್ತು.

ಹಾಗಾಗಿ ಹೈದರಾಬಾದ್‌ ಬೀದಿಯಲ್ಲಿ ಹರಿಯುತ್ತಿರುವ ನೀರಿನಲ್ಲಿ ತೇಲುತ್ತಿರುವ ಕಾರಿನ ವಿಡಿಯೋ 2020ರದ್ದು ಎಂಬುದು ಸ್ಪಷ್ಟ. ಹೈದರಾಬಾದ್ ಈ ವರ್ಷವೂ ಭಾರಿ ಪ್ರಮಾಣದ ಮಳೆಯನ್ನು ಕಂಡಿದೆ. ಆದರೆ ವೈರಲ್‌ ಆಗಿರುವ ವಿಡಿಯೋ ಹಳೆಯದಾಗಿದ್ದು, ಇದು ತಪ್ಪು ಮಾಹಿತಿಯಾಗಿದೆ.

Claim :  viral video showing red colored car in floodwater is old one
Claimed By :  Twitter users
Fact Check :  False
Tags:    

Similar News