ಫ್ಯಾಕ್ಟ್‌ಚೆಕ್: ರೈಲಿನಲ್ಲಿ ನೀರು ಸೋರಿಕೆಯಾಗುತ್ತಿರುವುದನ್ನು ತೋರಿಸುವ ವೈರಲ್ ವಿಡಿಯೋ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಸಂಬಂಧಿಸಿಲ್ಲ
ರೈಲಿನಲ್ಲಿ ನೀರು ಸೋರಿಕೆಯಾಗುತ್ತಿರುವುದನ್ನು ತೋರಿಸುವ ವೈರಲ್ ವಿಡಿಯೋ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಸಂಬಂಧಿಸಿಲ್ಲ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಗುಜರಾತ್ ಮತ್ತು ಇತರ ರಾಜ್ಯಗಳಲ್ಲಿರುವ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ಹರಿಯುತ್ತಿದೆ, ಹಲವು ಕಡೆ ಭಾರಿ ಮಳೆಯಿಂದಾಗಿ ವಿದ್ಯುತ್ ತಂತಿಗಳಿಗೆ ಹಾನಿಯಾಗಿದೆ, ರಸ್ತೆಗಳು ಕೊಚ್ಚಿ ಹೋಗಿವೆ, ದೆಹಲಿಯಲ್ಲಿ ವಿಮಾನ ನಿಲ್ದಾಣದ ಟರ್ಮಿನಲ್‌ನ ಮೇಲ್ಛಾವಣಿ ಕುಸಿದು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲ, ಉತ್ತರ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ನೀರಿನ ಟ್ಯಾಂಕ್ ಕುಸಿದು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ.
ಈ ಪರಿಸ್ಥಿತಿಗಳ ನಡುವೆ, ರೈಲು ಕ್ಯಾಬಿನ್‌ನೊಳಗೆ ನೀರು ಸೋರಿಕೆಯಾಗುತ್ತಿರುವುದನ್ನು ತೋರಿಸುವ ವೀಡಿಯೊ ಎಕ್ಸ್‌ನಲ್ಲಿ ವೈರಲ್ ಆಗಿದೆ. ವಂದೇ ಭಾರತ್ ರೈಲಿನಲ್ಲಿ ಮಳೆಯಿಂದಾಗಿ ನೀರು ಸೋರುತ್ತಿದೆ. ಪ್ರಯಾಣಿಕರಿಗೆ ಉಚಿತ ಶವರ್ ಪಡೆದುಕೊಳ್ಳಬಹುದು. ಈ ಸನ್ನಿವೇಷವನ್ನು ಪರೋಕ್ಷವಾಗಿ NEET-UG ಮತ್ತು UGC-NET ಪ್ರಶ್ನೆ ಪತ್ರಿಕೆಗಳ ಸೋರಿಕೆಯ ಬಗ್ಗೆ ಟೀಕಿಸಿದ್ದಾರೆ.
“Abki baar #Leakage Sarkar. After Temple, Bridge & Airports…. Here is the video from Vande Bharat Train. The roof of the WORLD CLASS #VandeBharat train is leaking. Passengers on the train get free SHOWER FACILITY. Thank you @AshwiniVaishnaw & @narendramodi” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ನಿಮ್ಮ ಆಶೀರ್ವಾದದೊಂದಿಗೆ ದೇವಸ್ಥಾನ, ಸೇತುವೆ ಮತ್ತು ವಿಮಾನ ನಿಲ್ದಾಣಗಳೇ ಅಲ್ಲ, ಇದೀಗ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲ್‌ನಲ್ಲೂ ಸಹ ನೀರು ಸೋರಿಕೆಯಾಗುತ್ತಿದೆ. “ಅಬ್ಕಿ ಬಾರ್ #ಲೀಕೇಜ್ ಸರ್ಕಾರ್ ಎಂದು ಟೀಕಿಸಿದ್ದಾರೆ.
Abki baar #Leakage Sarkar.
— Rakesh Madiga (@RakeshMadigaBRS) June 30, 2024
After Temple, Bridge & Airports…. Here comes the video from Vande Bharat Train.
Roof of WORLD CLASS #VandeBharat train is leaking. Passengers in train gets free SHOWER FACILITY.
Thank you Narendra Modi 👏🏻👏🏻🙏🏻 pic.twitter.com/0zWZ5AoFRg
Abki baar #Leakage Sarkar.
— Deep Mondal (@DeepMon40974208) June 29, 2024
After Temple, Bridge & Airports…. Here comes the video from Vande Bharat Train.
Roof of WORLD CLASS #VandeBharat train is leaking. Passengers in train gets free SHOWER FACILITY.
Thank you @AshwiniVaishnaw & @narendramodi 👏🏻👏🏻🙏🏻 pic.twitter.com/ON9fgQZlse
Abki baar #Leakage Sarkar.
— Dr C S Prasad (@DrCSPrasad31) June 29, 2024
After Temple, Bridge & Airports…. Here comes the video from Vande Bharat Train.
Roof of WORLD CLASS #VandeBharat train is leaking. Passengers in train gets free SHOWER FACILITY.
Thank you @AshwiniVaishnaw & @narendramodi
👏🏻 👏👏🏳️ pic.twitter.com/xv58fNdXRZ
Abki baar #Leakage Sarkar.
— Mahua Moitra Fans (@MahuaMoitraFans) June 28, 2024
After Temple, Bridge & Airports…. Here comes the video from Vande Bharat Train.
Roof of WORLD CLASS #VandeBharat train is leaking. Passengers in train gets free SHOWER FACILITY.
Thank you @AshwiniVaishnaw & @narendramodi 👏🏻👏🏻🙏🏻 pic.twitter.com/mgapdg5R9J
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಮಳೆಯಿಂದಾಗಿ ಗರೀಬ್ ರಥ ಎಕ್ಸ್‌ಪ್ರೆಸ್‌ನ ಕೋಚ್‌ನಲ್ಲಿ ಸೋರಿಕೆಯಾಗುತ್ತಿದೆ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಅಲ್ಲ.
ವಿಡಿಯೋವನ್ನು ನಾವು ಸೂಕ್ಷ್ಮವಾಗಿ ಗಮನಿಸಿದರೆ, ವೀಡಿಯೊದಲ್ಲಿ ನಾವು ರೈಲು ಸಂಖ್ಯೆಯನ್ನು ನೋಡಬಹುದು. ರೈಲು ಸಂಖ್ಯೆ 12215/12216 ಮತ್ತು ಕೋಚ್ ಸಂಖ್ಯೆ G-12ನ್ನು ನಾವು ವಿಡಿಯೋವಿನಲ್ಲಿ ನೋಡಬಹುದು. ಇದೇ ರೈಲು ಸಂಖ್ಯೆಯನ್ನು ನಾವು ಗೂಗಲ್‌ನಲ್ಲಿ ಹುಡುಕಿದಾಗ ಈ ರೈಲು ನಾವು ಈ ರೈಲು ಬಾಂದ್ರಾ ಟರ್ಮಿನಸ್ ಗರೀಬ್ ರಥ ಎಕ್ಸ್‌ಪ್ರೆಸ್ ಎಂಬುದು ನಮಗೆ ತಿಳಿಯಿತು.
indiarailinfo.com ವೆಬ್‌ಸೈಟ್‌ನಲ್ಲಿ ಹುಡುಕಿದಾಗ , 12215 ಸಂಖ್ಯೆಯ ರೈಲು ದೆಹಲಿ ಸರಾಯ್ ರೋಹಿಲ್ಲಾ - ಬಾಂದ್ರಾ ಟರ್ಮಿನಸ್ ಗರೀಬ್ ರಥ ಎಕ್ಸ್‌ಪ್ರೆಸ್ ರೈಲೆಂದು ನಾವು ಕಂಡುಕೊಂಡೆವು.
ವೈರಲ್ ವಿಡಿಯೋವಿನ ಬಗ್ಗೆ ಮತ್ತಷ್ಟು ಸತ್ಯಾಂಶವನ್ನು ತಿಳಿಯಲು ನಾವು ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಇದೇ ವೀಡಿಯೊವನ್ನು ಜೂನ್ 29, 2024 ರಂದು Zee ಬ್ಯುಸಿನೆಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ '‘Rain Water Leaks in 3 AC Garib Rath train. Train no. 12215/12216’ ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಿರುವುದನ್ನು ನಾವು ಕಂಡುಕೊಂಡೆವು. ಹಾಗೆ “एक वीडियो सोशल मीडिया पर वायरल हो रहा है, जिसमें एक ट्रेन में बारिश का पानी झरने की तरह गिरता दिखाई दे रहा है. लोग सोशल मीडिया पर इस घटना को लेकर शिकायत कर रहे हैं. यह घटना गरीब रथ ट्रेन नंबर 12215/12216 में घटी है. यह ट्रेन 3 एसी क्लास की है.”ಎಂದು ವಿಡಿಯೋವಿಗೆ ಕ್ಯಾಪ್ಷನ್ ನೀಡಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಪಶ್ಚಿಮ ರೈಲ್ವೆಯ ಅಧಿಕಾರಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ನಿಜಾಂಶವಿಲ್ಲ ಎಂದು ಖಚಿತಪಡಿಸಿದರು,ವೈರಲ್ ಆದ ವಿಡಿಯೋದಲ್ಲಿ ಕಂಡುಬರುವ ರೈಲು ರೈಲು ಸಂಖ್ಯೆ 12215, ಬಾಂದ್ರಾ ಟರ್ಮಿನಸ್ - ದೆಹಲಿ ಸರೈ ರೋಹಿಲ್ಲಾ ಗರೀಬ್ ರಥ ಎಕ್ಸ್‌ಪ್ರೆಸ್‌ನ ಅಜ್ಮೀರ್ ಮತ್ತು ಫಲ್ನಾ ನಿಲ್ದಾಣಗಳ ನಡುವೆ ಪ್ರಯಾಣಿಸುವ ರೈಲು. ಇದು ವಂದೇ ಭಾರತ್ ಎಕ್ಸ್‌ಪ್ರೆಸ್ ಅಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
Abki baar #Leakage Sarkar.
— Mahua Moitra Fans (@MahuaMoitraFans) June 28, 2024
After Temple, Bridge & Airports…. Here comes the video from Vande Bharat Train.
Roof of WORLD CLASS #VandeBharat train is leaking. Passengers in train gets free SHOWER FACILITY.
Thank you @AshwiniVaishnaw & @narendramodi 👏🏻👏🏻🙏🏻 pic.twitter.com/mgapdg5R9J
ಆದ್ದರಿಂದ,ರೈಲಿನ ಕೋಚ್‌ನಲ್ಲಿ ನೀರು ಸೋರಿಕೆಯಾಗುತ್ತಿರುವ ವಿಡಿಯೋ ಗರೀಬ್ ರಥ ಎಕ್ಸ್‌ಪ್ರೆಸ್‌ನ ಜಿ-12 ಕೋಚ್‌ನಲ್ಲಿ. ವಂದೇ ಭಾರತ್ ಅಲ್ಲ ಎಂದು ಖಚಿತವಾಗಿದೆ.