ಫ್ಯಾಕ್ಟ್‌ಚೆಕ್‌ : ಚೆನ್ನೈ ಸೈಕ್ಲೋನಿಂದಾಗಿ ಅಲ್ಲಿನ ಸೂಪರ್‌ ಮಾರ್ಕೆಟ್‌ನಲ್ಲಿ ಜೀವಂತವಾಗಿರುವ ಮೀನುಗಳು ಕಂಡುಬಂದಿದ್ದು ನಿಜವೇ?

ಚೆನ್ನೈ ಸೈಕ್ಲೋನಿಂದಾಗಿ ಅಲ್ಲಿನ ಸೂಪರ್‌ ಮಾರ್ಕೆಟ್‌ನಲ್ಲಿ ಜೀವಂತವಾಗಿರುವ ಮೀನುಗಳು ಕಂಡುಬಂದಿದ್ದು ನಿಜವೇ?

Update: 2023-12-14 13:38 GMT

fish in supermarket

ತಮಿಳುನಾಡು ಮತ್ತು ಚೆನ್ನೈನ ಹಲವು ಪ್ರಾಂತಗಳು ಮೈಚಾಂಗ್ ಚಂಡಮಾರುತದ ಕಾರಣದಿಂದ ಬಹಳ ಸಂಕಷ್ಟವನ್ನು ಎದುರಿಸುವಂತಾಗಿತ್ತು. 18000ಕ್ಕೂ ಹೆಚ್ಚು ಸ್ಥಳೀಯರನ್ನೂ ಅಲ್ಲಿನ ಸುತ್ತಮುತ್ತಲಿನ ಶಿಬಿರಗಳಿಗೆ ಸ್ಥಳಾಂತರಿಸಲಾಯಿತು. ಎಡೆಬಿಡದೆ ಸುರಿಯುತ್ತಿದ್ದ ಮಳೆಯಿಂದಾಗಿ ಚೆನ್ನೈನ ವಿಮಾನ ನಿಲ್ದಾಣದಲ್ಲಿ ಹಲವು ವಿಮಾನಗಳು ಸ್ಥಗಿತಗೊಳಿಸಲಾಗಿತ್ತು. ರೈಲು ಮಾರ್ಗಗಳಲ್ಲೂ ಸಹ ನೀರುನಿಂತು ಪ್ರಯಾಣಿಕರು ಅಸ್ಥವ್ಯಸ್ಥಗೊಳ್ಳುವಂತಾಗಿತ್ತು.

ಈ ನಡುವೆ ಮೈಚಾಂಗ್ ಚಂಡಮಾರುತಕ್ಕೆ ಸಂಬಂಧ ಪಟ್ಟಂತಹ ವಿಡಿಯೋವೊಂದು ವೈರಲ್‌ ಆಗಿತ್ತು. ವೈರಲ್‌ ಆದ ವಿಡಿಯೋದಲ್ಲಿ ಚೆನ್ನೈನ ಸೂಪರ್‌ ಮಾರ್ಕೆಟ್‌ನಲ್ಲಿ ಜೀವಂತ ಮೀನುಗಳು ನೆಲದಲ್ಲಿ ನಿಂತ ನೀರಿನಲ್ಲಿ ಈಜುತ್ತಿರುವುದನ್ನು ನೋಡಬಹುದು. ಇದೇ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Full View

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿ ಸುಳ್ಳು. ವೈರಲ್‌ ಆದ ವಿಡಿಯೋಗೂ ಚೆನ್ನೈಗೂ ಯಾವುದೇ ಸಂಬಂಧವಿಲ್ಲ. ವೈರಲ್‌ ಆದ ವಿಡಿಯೋ 2018ರದ್ದು.

ವಿಡಿಯೋವಿನ ಕೆಲವು ಪ್ರಮುಖ ಫ್ರೇಮ್‌ಗಳನ್ನು ಬಳಸಿ ರಿವರ್ಸ್‌ ಇಮೇಜ್‌ ರಿಸರ್ಚ್‌ ನಡೆಸಿದಾ ನಮಗೆ ಈ ವಿಡಿಯೋ 2018ರದ್ದು ಎಂದು ತಿಳಿದುಬಂದಿತು. ಸಾಕಷ್ಟು ಯೂಟ್ಯೂಬ್‌ ಖಾತೆಯಲ್ಲಿ ಈ ವಿಡಿಯೋವನ್ನು ಅಪ್‌ಲೋಡ್‌ ಮಾಡಲಾಗಿತ್ತು.

ಜಾರ್ಜಿಯನ್‌ಬೊರಟ್‌ ಎಂಬ ಯೂಟ್ಯೂಬ್‌ ಬಳಕೆದಾರ ಫೆಬ್ರವರಿ 3 2018ರಲ್ಲಿ ಅಪ್‌ಲೋಡ್‌ ಮಾಡಿರುವಂತಹ ವಿಡಿಯೋವೊಂದು ಕಂಡುಕೊಂಡೆವು. ಈ ವಿಡಿಯೋಗೆ ಶೀರ್ಷಿಕೆಯಾಗಿ "ಕ್ಯಾರಿಫೋರ್‌ ಸೂಪರ್‌ ಮಾರ್ಕೇಟ್‌ನಲ್ಲಿ ಮೀನುಗಳು ತೇಲುತ್ತಿರುವುದನ್ನು ನೋಡಬಹುದು, ಜಾರ್ಜ್‌ನ ವೈರಲ್‌ ವಿಡಿಯೋ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು.

Full View

upi.com ವರದಿಯ ಪ್ರಕಾರ ಜಾರ್ಜಿಯನ್‌ ಸೂಪರ್‌ ಮಾರ್ಕೆಟ್‌ನಲ್ಲಿ ಅಕ್ವೇರಿಯಂ ಸಿಡಿದ ನಂತರ ಚಿತ್ರೀಕರಿಸಿರುವ ವಿಡಿಯೋವಿದು ಎಂದು ಬರೆಯಲಾಗಿತ್ತು.

mirror.co.uk ವರದಿಯಲ್ಲಿ ಉಲ್ಲೇಖಿಸಿದಂತೆ "ಅಕ್ವೇರಿಯಂ ಹೇಗೆ ಹೊಡೆದೊಯಿತು ಎಂಬುದು ಗೊತ್ತಿಲ್ಲ. ಸಿಸಿ ಕ್ಯಾಮಾರಾದಲ್ಲೂ ಸಹ ಈ ಕುರಿತು ಯಾವುದೇ ದೃಶ್ಯಾವಳಿಗಳು ಸೆರೆಯಾಗಲಿಲ್ಲ. ಕ್ಯಾಲಿಫೋರ್‌ನ ಶಾಖೆಯಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಸಿಬ್ಬಂದಿ ಮೀನುಗಳನ್ನು ಹಿಡಿಯಲು ಯತ್ನಿಸಿದರು ಎಂದು ವರದಿಯಾಗಿದೆ.

ಹೀಗಾಗಿ ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. 2018ರಲ್ಲಿ ಚಿತ್ರೀಕರಿಸಿದ ವಿಡಿಯೋವನ್ನು 2023ರ ಚೆನ್ನೈನ ಮೈಚಾಂಗ್ ಚಂಡಮಾರುತದ ಕಾರಣದಿಂದ ಎಂದು ತಪ್ಪು ಕಲ್ಪನೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

Claim :  Viral video shows fish afloat in a supermarket in Chennai due to floods
Claimed By :  Social Media Users
Fact Check :  False
Tags:    

Similar News