ಫ್ಯಾಕ್ಟ್‌ಚೆಕ್‌: ತೆಲುಗು ನಟ ಶೋಭನಬಾಬು ಮರುಜನ್ಮ ಪಡೆದಿದ್ದಾರೆ ಎಂಬ ವೈರಲ್‌ ಆದ ಸುದ್ದಿಯ ಅಸಲಿಯತ್ತೇನು?

ತೆಲುಗು ನಟ ಶೋಭನಬಾಬು ಮರುಜನ್ಮ ಪಡೆದಿದ್ದಾರೆ ಎಂಬ ವೈರಲ್‌ ಆದ ಸುದ್ದಿಯ ಅಸಲಿಯತ್ತೇನು?

Update: 2024-01-22 06:00 GMT

Shobhan babu

ತೆಲುಗಿನ ಹಿರಿಯ ನಟ ದಿವಂಗತ ಶೋಭನ್‌ ಬಾಬುರಂತೆ ಕಾಣುವ ವಿಡಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವೈರಲ್‌ ಆದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬೀಚ್‌ನಲ್ಲಿ ನಡೆದುಕೊಂಡು ಬರುತ್ತಿರುವ ದೃಶ್ಯವನ್ನು ನಾವು ಕಾಣಬಹುದು.

ವೈರಲ್‌ ಆದ ವಿಡಿಯೋವಿಗೆ ಶೀರ್ಷಿಕೆಯಾಗಿ "ಶೋಭನ್‌ ಬಾಬುನವರು ಮತ್ತೆ ಹುಟ್ಟಿ ಬಂದಿದ್ದಾರೆ" ಎಂದು ಬರೆದು ಪೊಸ್ಟ್‌ ಮಾಡಿದ್ದಾರೆ.

Full View

ಯೂಟ್ಯೂಬ್‌ನಲ್ಲಿ ಮತ್ತೊಬ್ಬರು " ಮಾರ್ಡನ್‌ ಶೋಭನ್‌ ಬಾಬು " ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಪೋಸ್ಟ್‌ ಮಾಡಿದ್ದರು.

Full View

ಫ್ಯಾಕ್ಟ್‌ಚೆಕ್‌

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ವಿಡಿಯೋವನ್ನು ಎಐ ಮೂಲಕ ಮುಖವನ್ನು ಮಾರ್ಫಿಂಗ್‌ ಮಾಡಲಾಗಿದೆ.

ವೈರಲ್‌ ಆದ ವಿಡಿಯೋವಿನ ಅಸಲಿಯತ್ತನ್ನು ತಿಳಿಯಲು ನಾವು ವಿಡಿಯೋವಿನಲ್ಲಿ ಕಾಣುವ ಕೆಲವು ಪ್ರಮುಖ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಟ ನಡೆಸಿದೆವು. ಫಲಿತಾಂಶವಾಗಿ ನಮಗೆ ಸ್ಕಿಲ್ಸ್‌ಮೋಟಿವ್‌ ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿರುವಂತಹ ವಿಡಿಯೋವೊಂದು ಕಂಡುಬಂದಿತು. ಆ ವಿಡಿಯೋದಲ್ಲಿ 0.50-0.58 ಸೆಕೆಂಡುಗಳವರೆಗೆ ವೈರಲ್‌ ಆಗಿರುವ ವ್ಯಕ್ತಿಯ ರೀತಿಯೇ ಕಾಣುವ ವ್ಯಕ್ತಿಯೊಬ್ಬರ ವಿಡಿಯೋ ಕಂಡುಬಂದಿತು. ಆದರೆ ವಿಡಿಯೋದಲ್ಲಿ ಕಾಣಿಸುವ ವ್ಯಕ್ತಿ ಟಾಲಿವುಡ್‌ ನಟಿ ಶೋಭನ್‌ ಬಾಬು ಅಲ್ಲ.

Full View

ಇದೇ ರೀತಿಯ ಕಿರುಚಿತ್ರವನ್ನು ಅನೇಕರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಅವರೆಲ್ಲರೂ ಹಂಚಿಕೊಂಡಿರುವ ವಿಡಿಯೋದಲ್ಲಿ ಕಾಣಿಸುವ ವ್ಯಕ್ತಿಯ ಮುಖ ಶೋಭನಬಾಬುರಂತಿಲ್ಲ ಬದಲಿಗೆ ಭಿನ್ನವಾಗಿದೆ.

Full View

Full View

Full View 

ವೈರಲ್‌ ಆದ ವಿಡಿಯೋವನ್ನು ಫೋಟೋಲ್ಯಾಬ್‌ ಮೂಲಕ ರಚಿಸಲಾಗಿದೆ. ಈ ವಿಡಿಯೋ ಡಿಸಂಬರ್‌ 26,2023ರಂದು ಯೂಟ್ಯೂಬ್‌ನಲ್ಲಿ #photolab ಎನ್ನುವ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ವೈರಲ್‌ ಆದ ವಿಡಿಯೋವನ್ನು ತೀಕ್ಷ್ಣವಾಗಿ ಗಮನಿಸಿದರೆ ವಿಡಿಯೋ ಮೇಲೆ ಫೋಟೋಲ್ಯಾಬ್‌.ಮೀ ಎಂಬ ವಾಟರ್‌ಮಾರ್ಕ್‌ ಸಹ ಕಾಣುತ್ತದೆ.

Full View

ಏನಿದು ಫೋಟೋಲ್ಯಾಬ್‌.ಮೀ ಎಂದು ಹುಡುಕಿದಾಗ ನಮಗೆ ತಿಳಿದದ್ದೇನೆಂದರೆ ಫೋಟೋಲ್ಯಾಬ್‌.ಮೀ ಎಂಬ ಮೊಬೈಲ್‌ ಆಪ್‌ನಲ್ಲಿ ಸಾಕಷ್ಟು ಫೋಟೋ ಎಫೆಕ್ಟ್‌ಗಳು, ಫೇಸ್‌ ಫಿಲ್ಟರ್‌ಗಳಿ, ಫೋಟೋ ಎಡಿಟಿಂಗ್‌ನಿಂದ ಕೂಡಿದೆ.

ಫೋಟೋಲ್ಯಾಬ್‌ ಮೊಬೈಲ್‌ ಆಪ್‌ ಸಹ ಎಐನ ಫೋಟೋ ಎಡಿಟರ್‌ ಅಪ್ಲಿಕೇಷನ್‌ನಂತೆಯೇ ಸೆಲ್ಫಿಗಳಿಗೆ ಮತ್ತು ವಿಡಿಯೋಗಳನ್ನು ಮತ್ತಷ್ಟು ಅಂದವಾಗಿ ಎಡಿಟ್‌ ಮಾಡಲು ಸಹಾಯ ಮಾಡುತ್ತದೆ.

ಈ ಮೊಬೈಲ್‌ ಅಪ್ಲಿಕೇಶನ್‌ನಲ್ಲಿ ಚಿತ್ರಗಳಿಗೆ ಫ್ರೇಮ್‌ಗಳು, ರಿಯಲಿಸ್ಟಿಕ್‌ ಫೋಟೋ ಎಫೆಕ್ಟ್‌ಗಳು, ಫೇಸ್‌ ಫೋಟೋ ಮಾಂಟೇಜ್‌ಗಳು ಮುಂತಾದವುಗಳನ್ನು ರಚಿಸಬಹುದು, ಅಷ್ಟೇ ಅಲ್ಲ, ಈ ಅಪ್ಲಿಕೇಷನ್‌ನಲ್ಲಿ ಕಾರ್ಟೂನ್‌ನ್ನು ಸಹ ಮಾಡಬಹುದು, ಇದರಲ್ಲಿರುವ ವಿಶೇಷ ಆಲ್ಗರಿದಮ್‌ನಿಂದಾಗಿ ಸಾಕಷ್ಟು ಬಗೆಬಗೆ ರೀತಿಯ ಸೆಲ್ಫಿಗಳನ್ನು ಸಹ ರಚಿಸಬಹುದು.

ಹೀಗಾಗಿ ವೈರಲ್‌ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ವಿಡಿಯೋದಲ್ಲಿ ಕಾಣಿಸುವ ವ್ಯಕ್ತಿ ತೆಲುಗು ಹಿರಿಯ ದಿವಂಗತ ನಟ ಶೋಭನಬಾಬುರವರಲ್ಲ. ವೈರಲ್‌ ಆದ ವಿಡಿಯೋದಲ್ಲಿ ಕಾಣಿಸುವ ವ್ಯಕ್ತಿಯನ್ನು ಎಐನ ಮೊಬೈಲ್‌ ಅಪ್ಲಿಕೇಷನ್‌ ಮೂಲಕ ರಚಿಸಲಾಗಿದೆ.

Claim :  Viral video shows Telugu veteran actor late Shobhan Babu’s doppleganger
Claimed By :  Social Media Users
Fact Check :  False
Tags:    

Similar News