ಫ್ಯಾಕ್ಟ್‌ಚೆಕ್: ಗ್ಯಾಸ್ ಸಿಲಿಂಡರ್‌ನಿಂದ ಬೆಂಕಿಯನ್ನು ನಂದಿಸಲು ಗೋಧಿ ಹಿಟ್ಟನ್ನು ಬಳಸಲಾಗುವುದಿಲ್ಲ
ಗ್ಯಾಸ್ ಸಿಲಿಂಡರ್‌ನಿಂದ ಬೆಂಕಿಯನ್ನು ನಂದಿಸಲು ಗೋಧಿ ಹಿಟ್ಟನ್ನು ಬಳಸಲಾಗುವುದಿಲ್ಲ
ಗೃಹಬಳಕೆಗೆ ಬಳಸುವ ಎಲ್ ಪಿಜಿ ಸಿಲಿಂಡರ್ ಬಳಕೆ ಸರಿಯಾಗಿ ಮಾಡದಿದ್ದರೆ, ಅನಿರೀಕ್ಷಿತ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚು. ಸಿಲಿಂಡರ್ ಸ್ಫೋಟದಿಂದ ಸಾಕಷ್ಟು ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಸಿಲಿಂಡರ್ ನಿಂದ ಗ್ಯಾಸ್ ಗ್ಯಾಸ್ ಸೋರಿಕೆಗೆ ಸಂಬಂಧಿಸಿದಂತೆ ಕೆಲವು ಸುರಕ್ಷತಾ ಸಲಹೆಗಳನ್ನು ಮುಂಚಿತವಾಗಿ ತಿಳಿದುಕೊಳ್ಳುವ ಮೂಲಕ, ನಿಮ್ಮ ಮತ್ತು ನಿಮ್ಮ ಕುಟುಂಬದ ಸದಸ್ಯರ ಜೀವವನ್ನು ನೀವು ಸುಲಭವಾಗಿ ಕಾಪಾಡಬಹುದು. ಅಡುಗೆಮನೆಯಲ್ಲಿ ಹಠಾತ್ ಅನಿಲ ಸೋರಿಕೆಯನ್ನು ಕಂಡಾಗ ಜನರು ಭಯಭೀತರಾಗುತ್ತಾರೆ. ನೀವು ಅನಿಲದ ವಾಸನೆ ಕಂಡಾಗ ಭಯಪಡಬೇಡಿ ಏಕೆಂದರೆ, ಸಿಲಿಂಡರ್ ಅಥವಾ ನಿಯಂತ್ರಕದಿಂದ ಅನಿಲ ಸೋರಿಕೆಯಾದರೇ ತಕ್ಷಣವೇ ಸ್ಫೋಟಗೊಳ್ಳುವುದಿಲ್ಲ.
ಅನಿಲ ಸೋರಿಕೆಯ ಸಂದರ್ಭದಲ್ಲಿ ನಿಮ್ಮ ಕಣ್ಣು ಮತ್ತು ಮೂಗನ್ನು ಮುಚ್ಚಿಕೊಳ್ಳಲು ಮರೆಯಬೇಡಿ. ಬಾಯಿಗೆ ಬಟ್ಟೆ ಕಟ್ಟಿಕೊಂಡರೆ ಗ್ಯಾಸ್ ದೇಹಕ್ಕೆ ಸೇರದಂತೆ ತಡೆಯಬಹುದು. ಸಿಲಿಂಡರ್‌ಗೆ ಬೆಂಕಿ ಬಿದ್ದರೆ ಗಾಬರಿಯಾಗಬೇಡಿ. ದಪ್ಪ ಕಂಬಳಿಯನ್ನು ನೀರಿನಲ್ಲಿ ನೆನೆಸಿ ಮತ್ತು ಸಾಧ್ಯವಾದಷ್ಟು ಬೇಗ ಸಿಲಿಂಡರ್ ಮೇಲೆ ಸುತ್ತಿಕೊಳ್ಳಿ. ಆದರೆ ಗೋಧಿ ಹಿಟ್ಟಿನಿಂದ ಗ್ಯಾಸ್ ಸೋರಿಕೆ ತಡೆಯಬಹುದು ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ.
ಕೆಲವರು ವಿಡಿಯೋವನ್ನು ಹಂಚಿಕೊಂಡು ತೆಲುಗಿನಲ್ಲಿ ಶೀರ್ಷಿಕೆಯಾಗಿ గుప్పెడు గోధుమ పిండి తో మండుతున్న సిలిండర్ ను ఇట్టే అర్పేయొచ్చు, ఎక్కువ మందికి చేరేలా షేర్ చేయండి. ಬರೆದು ಪೋಸ್ಟ್ ಮಾಡಿದ್ದಾರೆ.
ಕನ್ನಡಕ್ಕೆ ಶೀರ್ಷಿಕೆಯನ್ನು ಅನುವಾದಿಸಿದಾಗ "ಒಂದು ಹಿಡಿ ಗೋಧಿ ಹಿಟ್ಟಿನನೊಂದಿಗೆ ಉರಿಯುತ್ತಿರುವ ಬೆಂಕಿಯನ್ನು ಆರಿಸಬಹುದು,ಈ ಮಾಹಿತಿಯನ್ನು ಹೆಚ್ಚು ಜನರಿಗೆ ತಲುಪಿಸಿ ಎಂದು ಬರೆದು ಪೋಸ್ಟ್ ಮಾಡಿದ್ದರು"
ವಿಡಿಯೋ ಸೆಪ್ಟಂಬರ್ 2023ರಂದು ಯೂಟ್ಯೂಬ್‌ನಲ್ಲಿ “గుప్పెడు గోధుమ పిండి తో మంటని ఎలా ఆర్పచ్చో చూడండి.” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗಿದೆ.
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಗೋಧಿ ಹಿಟ್ಟುನಿಂದ ಗ್ಯಾಸ್ ಸಿಲಿಂಡರ್ ಬೆಂಕಿಯನ್ನು ನಂದಿಸಲು ಸಾಧ್ಯವಿಲ್ಲ.
ಬೆಂಕಿಯನ್ನು ನಂದಿಸಲು ನಾವು ಸುರಕ್ಷಿತ ವಿಧಾನಗಳನ್ನು ಹುಡುಕಿದಾಗ, ಗೋಧಿ ಹಿಟ್ಟು ಬೆಂಕಿಯನ್ನು ನಂದಿಸುವುದಿಲ್ಲ, ಮತ್ತಷ್ಟು ಬೆಂಕಿಯನ್ನು ಹೆಚ್ಚಿಸುತ್ತದೆ ಎಂಬುವುದನ್ನು ನಾವು ಕಂಡುಕೊಂಡೆವು. ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ಆಫ್ ಯುಕೆ ಪ್ರಕಟಿಸಿದ ವೀಡಿಯೊವನ್ನು ನೀವು ವೀಕ್ಷಿಸಬಹುದು. ಗೋಧಿ ಹಿಟ್ಟನ್ನು ಬೆಂಕಿಯಲ್ಲಿ ಸುರಿದಾಗ ಅದು ಮತ್ತಷ್ಟು ಚೆನ್ನಾಗಿ ಉರಿಯುತ್ತದೆ ಎಂದು ಸಾಬೀತಾಗಿದೆ.
ಬೆಂಕಿಯ ಮೇಲೆ ಹಿಟ್ಟು ಸುರಿಯುವ ಅಪಾಯಕಾರಿ ಎಂದು ಮತ್ತೊಂದು ವಿಡಿಯೋವಿನಲ್ಲಿ ನಾವು ಕಾಣಬಹುದು.
firefighternow.com ನಲ್ಲಿನ ಪ್ರಕಟವಾದ ಲೇಖನದ ಪ್ರಕಾರ , ಹಿಟ್ಟು ಯಾವುದೇ ಬೆಂಕಿಯನ್ನು ನಂದಿಸಲಿಲ್ಲ , ಯಾವುದೇ ಸಂದರ್ಭದಲ್ಲೂ ಸಹ ಹಿಟ್ಟನ್ನು ಬೆಂಕಿಗೆ ಎಸೆಯದಂತೆ ಸಲಹೆಯನ್ನು ನೀಡಲಾಗಿದೆ. ಇವುಗಳಲ್ಲಿ ಉರಿಯುವ ಕಣಗಳ ಗುಣ ಅತಿ ಹೆಚ್ಚಾಗಿರುತ್ತದೆ. ಇದು ಬೆಂಕಿಯನ್ನು ನಿಗ್ರಹಿಸದಿದ್ದರೂ, ಅದನ್ನು ಹೆಚ್ಚಿಸುವ ಸಾಧ್ಯತೆಯಿದೆ ಹೆಚ್ಚಾಗಿರುತ್ತದೆ.
ಹಿಟ್ಟು ಸುಡುವ ಸ್ವಭಾವವನ್ನು ಹೊಂದಿರುತ್ತದೆ, ಹಾಗೂ ಹೆಚ್ಚಿನ ಶಾಖಕ್ಕೆ ವೇಗವಾಗಿ ಪ್ರತಿಕ್ರಿಯಿಸುತ್ತದೆ.
ಆದ್ದರಿಂದ, ಗ್ಯಾಸ್ ಸಿಲಿಂಡರ್‌ನಿಂದ ಬೆಂಕಿಯ ಜ್ವಾಲೆಯನ್ನು ನಿಲ್ಲಿಸಲು ಹಿಟ್ಟನ್ನು ಬಳಸಲಾಗುವುದಿಲ್ಲ. ಹಿಟ್ಟು ಬೆಂಕಿಯನ್ನು ಮತ್ತಷ್ಟು ಹರಡಬಹುದು ಎಂದು ಸಾಭೀತಾಗಿದೆ.