ಫ್ಯಾಕ್ಟ್‌ಚೆಕ್‌: ವೈರಲ್ ಆದ ವಿಡಿಯೋದಲ್ಲಿರುವ ಕಾಣುವ ಮಹಿಳೆ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪತ್ನಿ ಅಲ್ಲ

ವೈರಲ್ ಆದ ವಿಡಿಯೋದಲ್ಲಿರುವ ಕಾಣುವ ಮಹಿಳೆ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪತ್ನಿ ಅಲ್ಲ

Update: 2024-07-29 18:51 GMT

26 ಪಂಜಾಬ್ ರೆಜಿಮೆಂಟ್‌ನಲ್ಲಿ ವೈದ್ಯಕೀಯ ಅಧಿಕಾರಿಯಾಗಿದ್ದ ಕ್ಯಾಪ್ಟನ್ ಅಂಶುಮಾನ್ ಸಿಂಗ್, ಸಿಯಾಚಿನ್ ಗ್ಲೇಸಿಯರ್ ಪ್ರದೇಶದಲ್ಲಿನ ಭಾರತೀಯ ಸೇನಾ ಶಿಬಿರದಲ್ಲಿ ಬೆಂಕಿ ಅವಘಡದಲ್ಲಿ ಇತರರನ್ನು ರಕ್ಷಿಸುವ ಸಮಯದಲ್ಲಿ ತನ್ನ ಪ್ರಾಣವನ್ನು ಕಳೆದುಕೊಂಡರು. ಜೂನ್ 19, 2023 ರಂದು ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿತು. ಬೆಂಕಿಯಲ್ಲಿ ಸಿಲುಕಿದವರನ್ನು ರಕ್ಷಿಸಲು ಅಂಶುಮಾನ್ ಸಿಂಗ್ ಪ್ರಯತ್ನಿಸಿದ್ದರು. ಪ್ರಯತ್ನದಲ್ಲಿ ಐದು ಜನರ ಪ್ರಾಣವನ್ನೂ ಸಹ ಕಾಪಾಡಿದ್ದರು ಎಲ್ಲರ ಪ್ರಾಣವನ್ನು ಕಾಪಾಡುವ ಸಮಯದಲ್ಲಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದರು.

5 ಜುಲೈ 2023 ರಂದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹುತಾತ್ಮ ಅಂಶುಮಾನ್‌ರ ಮರಣದ ನಂತರ ಆತನಿಗೆ ಭಾರತದ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಕೀರ್ತಿ ಚಕ್ರವನ್ನು ಕ್ಯಾಪ್ಟನ್ ಅಂಶುಮಾನ್ ಸಿಂಗ್‌ರಿಗೆ ನೀಡಿ ಗೌರವಿಸಿದ್ದರು.

ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ತಂದೆ ರವಿ ಪ್ರತಾಪ್ ಸಿಂಗ್ ಮತ್ತು ತಾಯಿ ಮಂಜು ಸಿಂಗ್ ಅವರು ಭಾರತೀಯ ಸೇನೆಯಲ್ಲಿನ ನೆಕ್ಸ್ಟ್ ಆಫ್ ದಿ ಕಿನ್ (ಎನ್‌ಒಕೆ) ನೀತಿಗೆ ತಿದ್ದುಪಡಿ ಮಾಡಲು ಕೋರಿದ್ದಾರೆ. ಅಷ್ಟೇ ಅಲ್ಲ, ಸೇನೆಯ ಸಿಬ್ಬಂದಿ ಮೃತಪಟ್ಟರೆ ಕುಟುಂಬದವರಿಗೆ ಆರ್ಥಿಕ ನೆರವು ನೀಡಬೇಕು ಏಕೆಂದರೆ ಅಂಶುಮಾನ್‌ ಸಾವಿನ ನಂತರ ತನ್ನ ಸೊಸೆ ಸ್ಮೃತಿ ಸಿಂಗ್‌ ಎಲ್ಲಾ ಹಣವನ್ನು ತೆಗೆದುಕೊಂಡು ಹೋಗುತ್ತಾಳೆ ಏಕೆಂದರೆ ಆಕೆ ನಮ್ಮೋಂದಿಗೆ ವಾಸಿಸುವುದಿಲ್ಲ ಎಂದು ಅಂಶುಮಾನ್‌ ಪೋಷಕರು ತಿಳಿಸಿದ್ದಾರೆ.

ಈ ನಡುವೆ ಮಹಿಳೆಯೊಬ್ಬಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವೈರಲ್‌ ವಿಡಿಯೋದಲ್ಲಿ ಕಾಣುವ ಮಹಿಳೆ ಬಿಳಿ ಬಣ್ಣದ ಸೀರೆಯನ್ನುಟ್ಟಿರುವುದನ್ನು ನಾವು ಕಾಣಬಹುದು. ಆ ವಿಡಿಯೋವಿಗೆ ಶೀರ್ಷಿಕೆಯಾಗಿ "ಅಂಶುಮಾನ್‌ ಪತ್ನಿ ಸ್ಮೃತಿಯ ಇನ್ಸ್ಟಾಗ್ರಾಮ್‌ ರೀಲ್ಸ್‌ ವೈರಲ್‌" ಎಂಬ ಶೀರ್ಷಿಕೆಯೊಂದಿಗೆ ವೈರಲ್‌ ನೇಷನ್‌ ಎಂಬ ಯೂಟ್ಯೂಬ್‌ ಚಾನೆಲ್‌ ಅಪ್‌ಲೋಡ್‌ ಮಾಡಿದೆ.

Full View 

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ವಿಡಿಯೋವಿನಲ್ಲಿ ಕಾಣಿವ ಮಹಿಳೆ ಹುತಾತ್ಮ ಅಂಶುಮಾನ್‌ರ ಪತ್ನಿ ಸ್ಮೃತಿಯಲ್ಲ.

ನಾವು ವೈರಲ್‌ ವಿಡಿಯೋವಿನಲ್ಲಿ ಕಾಣುವ ಪ್ರಮುಖ ಕೀಫ್ರೇಮ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದಾಗ ನಮಗೆ ವೈರಲ್‌ ಆದ ವಿಡಿಯೋದಲ್ಲಿ ಕಾಣುವ ಮಹಿಳೆಯ ಫೋಟೋಗಳು ಕಂಡುಬಂದವು. mogra.in ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ನಾವು ಈ ವಿಡಿಯೋವನ್ನು ನೋಡಬಹುದು. ಆದರೆ mogra @reshsebu ಎಂದು ಮೂರು ಇನ್‌ಸ್ಟಾಗ್ರಾಮ್‌ ಖಾತೆಯನ್ನು ನಾವು ನೋಡಬಹುದು.

Full View

ಮತ್ತಷ್ಟು ನಿಜಾಂಶವನ್ನು ತಿಳಿಯಲು ನಾವು ಮತ್ತಷ್ಟು ಹುಡುಕಾಟ ನಡೆಸಿದೆವು. ವೈರಲ್‌ ರೀಲ್‌ನಲ್ಲಿ ಕಾಣುವ ಮಹಿಳೆ ರೇಷ್ಮಾ ಸೆಬಾಸ್ಟಿಯನ್‌ ಎಂದು ನಾವು ಕಂಡುಹಿಡಿದೆವು. ಈಕೆ ವೈರಲ್‌ ಆದ ವಿಡಿಯೋವನ್ನು 24 ಏಪ್ರಿಲ್‌ 2024ರಂದು ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಈಕೆಗೆ ಮೂರು ಲಕ್ಷಕ್ಕೂ ಅಧಿಕ ಫಾಲೋವರ್ಸ್‌ ಇರುವುದನ್ನು ನಾವು ಕಂಡುಕೊಂಡೆವು. ರೇಷ್ಮಾರನ್ನು ಅಂಶುಮಾನ್‌ ಪತ್ನಿ ಸ್ಮೃತಿಗೆ ಹೋಲಿಸಿ ತಪ್ಪು ಸುದ್ದಿಯನ್ನು ಹಂಚಿಕೊಳ್ಳಲಾಗುತ್ತಿದೆ.

Full View

ಅಷ್ಟೇ ಅಲ್ಲ ನಾವು ರೇಷ್ಮಾರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿವಾದವನ್ನು ವಿವರಿಸುವ ಪೋಸ್ಟ್ ಅನ್ನು ಸಹ ನಾವು ಕಂಡುಕೊಂಡಿದ್ದೇವೆ. "ಇದು ಸ್ಮೃತಿ ಸಿಂಗ್ (ಭಾರತೀಯ ಸೇನಾ ಯೋಧ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪತ್ನಿ) ಪೇಜ್‌/ಐಜಿ ಖಾತೆಯಲ್ಲ" ಎಂದು ವಿವರಿಸಿದ್ದಾರೆ. ದಯವಿಟ್ಟು ಮೊದಲು ಪ್ರೊಫೈಲ್ ವಿವರಗಳು ಮತ್ತು ಬಯೋವನ್ನು ಓದಿ. ದಯವಿಟ್ಟು ತಪ್ಪು ಮಾಹಿತಿ ಮತ್ತು ದ್ವೇಷಪೂರಿತ ಕಾಮೆಂಟ್‌ಗಳಿಂದ ಮಾಡಬೇಡಿ ಎಂದು ತನ್ನ ಪೋಸ್ಟ್‌ಗೆ ಕಮೆಂಟ್‌ ಮಾಡಿದ್ದರು.

Full View

ಫಸ್ಟ್ ಪೋಸ್ಟ್ ತನ್ನ ಲೇಖನದಲ್ಲಿ "ವೈರಲ್‌ ಆದ ವಿಡಿಯೋವಿನಲ್ಲಿ ಕಾಣಿಸುವ ವ್ಯಕ್ತಿ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪತ್ನಿ ಎಂದು ಭಾವಿಸಿ ಕೆಲವು ಸಾಮಾಜಿಕ ಬಳಕೆದಾರರು ಟ್ರೋಲ್ ಮಾಡುತ್ತಿದ್ದಾರೆ ಏಕೆಂದರೆ ಆಕೆ ಅಂಶುಮಾನ್‌ ಪತ್ನಿ ಸ್ಮೃತಿರಂತೆ ಕಾಣುತ್ತಿದ್ದಾರೆ ಆದರೆ ವೈರಲ್‌ ವಿಡಿಯೋವಿನಲ್ಲಿ ಕಾಣಿಸುವ ಮಹಿಳೆ ರೇಷ್ಮಾ ಸ್ಮೃತಿ ಅಲ್ಲ" ಎಂದು ಲೇಖನದಲ್ಲಿ ಬರೆದಿದ್ದಾರೆ,

ಲೈವ್ ಮಿಂಟ್‌ನಲ್ಲಿ ಬರೆದ ಲೇಖನದಲ್ಲೂ "ವಿಡಿಯೋವಿನಲ್ಲಿ ಕಾಣುವ ಮಹಿಳೆ ಇನ್ಸ್ಟಾಗ್ರಾಮ್ ಪ್ರಭಾವಿ ರೇಷ್ಮಾ ಸೆಬಾಸ್ಟಿಯನ್, ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪತ್ನಿ ಸ್ಮೃತಿ ಸಿಂಗ್ ಅಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಹೀಗಾಗಿ ವೈರಲ್‌ ವಿಡಿಯೋವಿನಲ್ಲಿ ಕಾಣುವ ಮಹಿಳೆ ಇನ್ಸ್ಟಾಗ್ರಾಮ್ ಇನ್‌ಫ್ಲೂಂಸರ್‌ ರೇಷ್ಮಾ ಸೆಬಾಸ್ಟಿಯನ್, ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪತ್ನಿ ಸ್ಮೃತಿ ಸಿಂಗ್ ಅಲ್ಲ ಎಂದು ಸಾಭೀತಾಗಿದೆ

Claim :  ವೈರಲ್ ಆದ ವಿಡಿಯೋದಲ್ಲಿರುವ ಕಾಣುವ ಮಹಿಳೆ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪತ್ನಿ ಅಲ್ಲ
Claimed By :  Social Media Users
Fact Check :  False
Tags:    

Similar News