ಫ್ಯಾಕ್ಟ್‌ಚೆಕ್: ನೀತಾ ಅಂಬಾನಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪೋಸ್ಟ್‌ನ ಅಸಲಿಯತ್ತೇನು?
ನೀತಾ ಅಂಬಾನಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪೋಸ್ಟ್‌ನ ಅಸಲಿಯತ್ತೇನು?
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಎಂಡಿ ಮುಖೇಶ್ ಅಂಬಾನಿಯ ಪತ್ನಿ ನೀತಾ ಅಂಬಾನಿ ಇತ್ತೀಚೆಗೆ ಇಮ್ಮ 60ನೇ ಹುಟ್ಟುಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಂಡಿದ್ದರು. ಅದಾನಿ ಫೌಂಡೇಶನ್‌ನ ಅಧ್ಯಕ್ಷೆ ಪ್ರೀತಿ ಅದಾನಿ ಮತ್ತು ಲಕ್ಷ್ಮಿ ಮಿತ್ತಲ್ ಅವರ ಪತ್ನಿ ಉಷಾ ಮಿತ್ತಲ್ ಸಹ ಭಾರತೀಯ ಪ್ರಮುಖ ಇಂಡಸ್ಟ್ರೀಯಲಿಸ್ಟ್ .
ಇತ್ತೀಚೆಗೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಅಂಬಾನಿ-ಅದಾನಿ ಪತ್ನಿಯರ ಕುರಿತು ಸುದ್ದಿಯೊಂದು ವೈರಲ್ ಆಗುತ್ತಿದೆ. ವೈರಲ್ ಆದ ಸುದ್ದಿಯಲ್ಲೇನಿದೆಯೆಂದರೆ ಬನಾರಸ್ ಹಿಂದೂ ವಿಶ್ವವಿದ್ಯಾಲಕ್ಕೆ ಅಂಬಾನಿ ಮತ್ತು ಅದಾನಿ ಪತ್ನಿಯರನ್ನು ಪ್ರಾಧ್ಯಾಪಕರನ್ನಾಗಿ ನೇಮಿಸುವ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ನಡೆಯುತ್ತಿದೆ ಎಂದು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆದ ಚಿತ್ರಕ್ಕೆ ಹಿಂದಿಯಲ್ಲಿ ಈ ರೀತಿ ಶೀರ್ಷಿಕೆಯನ್ನು ನೀಡಿದ್ದರು."यही दिखना और बिकना बाक़ी रह गया था .अब @DrLaxman_Yadav जी जैसे शिक्षक की ज़रूरत नहीं होगी. नालायक छात्र को समझ नहीं है .पहले किसान को किसान बिल और जवान को orop की समझ नहीं थी“
ವೈರಲ್ ಪೋಸ್ಟ್‌ನ್ನು ಅನುವಾದಿಸಿದಾಗ ನಮಗೆ ತಿಳಿದುಬಂದಿದ್ದು ಏನೆಂದರೆ "ಇದೊಂದು ನೋಡುವುದು ಬಾಕಿ ಇತ್ತು. ಶಕ್ಷಕರನ್ನು ಮಾರಾಟ ಮಾಡುವ ಪರಿಸ್ಥಿತಿ ಬಂದಿದೆ. @DrLaxman Yadavರವರೆ ನಿಮ್ಮಂತಹ ಶಿಕ್ಷಕರು ಅಸಮರ್ಥ ವಿದ್ಯಾರ್ಥಿಗಳಿಗೆ ಅವಶ್ಯಯಕತೆಯಿಲ್ಲ. ಮೊದಲು ಕಿಸಾನ್ ಮಸೂದೆಯನ್ನು ಅರ್ಥ ಮಾಟಿಕೊಳ್ಳಲಿ ಮತ್ತು ಸೈನಿಕರಿಗೆ ನೀಡುವ orop ನ್ನು ಅರ್ಥಮಾಡಿಕೊಳ್ಳಲಿ ಎಂದು ಪೋಸ್ಟ್ ಮಾಡಿದ್ದರು.
यही दिखना और बिकना बाक़ी रह गया था 😃
— Sergeant Englesh Ranjan (Air Veteran) 🇮🇳 100K (@englesh_ranjan) December 14, 2023
अब @DrLaxman_Yadav जी जैसे शिक्षक की ज़रूरत नहीं होगी
नालायक छात्र को समझ नहीं है 😃😃😃😃
पहले किसान को किसान बिल और
जवान को orop की समझ नहीं थी 😃😃😃😃 pic.twitter.com/iH3JtKIHNG
ಇನ್ನು ಕೆಲವು ಫೇಸ್‌ಬುಕ್ ಖಾತೆದಾರರು ತಮ್ಮ ಖಾತೆಯಲ್ಲಿ ಈ ರೀತಿಯ ಪೋಸ್ಟ್‌ಗಳನ್ನು ವಿಭಿನ್ನ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದರು.
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಸುದ್ದಿಯೂ ಇತ್ತೀಚಿನದಲ್ಲ.
ವೈರಲ್ ಆದ ಸುದ್ದಿಯ ಸತ್ಯಾಂಶವನ್ನು ತಿಳಿಯಲು ನಾವು ಪೋಸ್ಟ್‌ನ್ನು ಗೂಗಲ್‌ನ ಮೂಲಕ ರಿವರ್ಸ್ ಸರ್ಚ್ ಮಾಡಿದೆವು ಹಾಗೆ ಕೆಲವು ಸಂಬಂಧಿತ ಕೀವರ್ಡ್‌ಗಳ ಮೂಲಕ ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ ನಮಗೆ ಹಲವು ವೆಬ್‌ಸೈಟ್‌ಗಳಲ್ಲಿ ವಿಭಿನ್ನ ರೀತಿಯ ಸುದ್ದಿಗಳು ಕಂಡುಬಂದಿತು.
ನೀತಾ ಅಂಬಾನಿ, ಪ್ರೀತಿ ಅದಾನಿ ಮತ್ತು ಬಿಹೆಚ್‌ಯು ಎನ್ನುವ ಕೀವರ್ಡ್‌ಗಳನ್ನು ಉಪಯೋಗಿಸಿ ಕುಡುಕಾಡಿದಾಗ ನಮಗೆ ಸಾಕಷ್ಟು ಸುದ್ದಿಗಳಿರುವುದು ಕಂಡುಬಂದಿತು.
ಮಾರ್ಚ್ 17, 2023ರಂದು ಟೈಮ್ಸ್ ನೌನಲ್ಲಿ ಪ್ರಕಟಿಸಿದಂದಹ ಸುದ್ದಿಯನ್ನು ನಾವು ಕಂಡುಕೊಂಡೆವು. ನೀತಾ ಅಂಬಾನಿ ಅವರನ್ನು ಬಿಎಚ್‌ಯುನಲ್ಲಿ ಸಂದರ್ಶಕ ಪ್ರಾಧ್ಯಾಪಕರನ್ನಾಗಿ ಮಹಿಳಾ ಅಧ್ಯಯನ ಕೇಂದ್ರಕ್ಕೆ ಸೇರಿದರೆ ಅಲ್ಲಿನ ವಿದ್ಯಾರ್ಥಿಗಳಿಗೆ ಉಪಯೋಗವಾಗಬಹುದು ಎಂದು ಸೂಚಿಸಿದ್ದರಂತೆ. ರಿಲಯನ್ಸ್ ಇಂಡಸ್ಟ್ರೀಸ್ ಎಷ್ಟೋ ಮಹಿಳಾ ಸಬಲೀಕರಣ ಮಾಡಿರುವುದರಿಂದ ಅವರನ್ನು ನೇಮಕ ಮಾಡಲು ಮೌಖಿಕವಾಗಿ ಘೋಷಣೆ ಮಾಡಲಾಗಿತ್ತು.
ಮಾರ್ಚ್ 17, 2023ರಂದು ಜಾಗರನ್.ಕಾಂ ನಲ್ಲಿ ಪ್ರಕಟಿಸಿದಂದಹ ಸುದ್ದಿಯನ್ನು ನಾವು ಕಂಡುಕೊಂಡೆವು. ನೀತಾ ಅಂಬಾನಿ ಅವರನ್ನು ಬಿಎಚ್‌ಯುನಲ್ಲಿ ಸಂದರ್ಶಕ ಪ್ರಾಧ್ಯಾಪಕರನ್ನಾಗಿ ನೇಮಕ ಮಾಡಲಾಗಿದೆ ಎಂಬ ಮಾಹಿತಿ ಹೊರಬಂದ ನಂತರ ವೈರಲ್ ಆದ ಸುದ್ದಿಯನ್ನು ನಿರಾಕರಿಸಿದ್ದರು. ಎಎಸ್‌ಐ ಪ್ರಕಾರ ನಿತಾ ಅಂಬಾನಿ ಬಿಹೆಚ್‌ಯುನಿಂದ ಯಾವುದೇ ಆಹ್ವಾನವನ್ನು ಸ್ವೀಕರಿಸಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಮತ್ತಷ್ಟು ಹುಡುಕಾಡುವ ಸಮಯದಲ್ಲಿ ಎಎನ್‌ಐನ ಎಕ್ಸ್ ಖಾತೆಯಲ್ಲಿ ಮಾರ್ಚ್ 17, 2021ರಂದು ರಿಲಯನ್ಸ್ ಇಂಡಸ್ಟ್ರೀ ಲಿಮಿಟೆಡ್‌ನ ವಕ್ತಾರ ನೀತಾ ಅಂಬಾನಿ ಬಿಎಚ್‌ಯುನಲ್ಲಿ ಸಂದರ್ಶಕ ಪ್ರೋಫೆಸರ್ ಎಂಬ ಸುದ್ದಿ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.
ಮಾರ್ಚ್ 17,2021ರಂದು ಬಿಹೆಚ್‌ಯುನ ಎಕ್ಸ್ ಖಾತೆಯಲ್ಲಿ ನಿತಾ ಅಂಬಾನಿಯವರನ್ನು ಸಂದರ್ಶಕ ಪ್ರಾಧ್ಯಾಪಕರನ್ನಾಗಿ ನೇಮಿಸುವ ಕುರಿತು ನಾವು ಯಾವುದೇ ಅಧಿಕೃತ ನಿರ್ಧಾರವನ್ನು ನಾವು ತೆಗೆದುಕೊಂಡಿಲ್ಲ ಹಾಗೂ ಯಾವುದೇ ರಿತಿಯ ಆದೇಶವನ್ನು ಇನ್ನು ಹೊರಡಿಸಿಲ್ಲ ಜೊತೆಗೆ ಸಂದರ್ಶಕ ಪ್ರಾಧ್ಯಾಪಕರ ನೇಮಕವಾಗಲು ಅಕಾಡೆಮಿಕ್ ಕೌನ್ಸಿಲ್‌ನ ಅನುಮತಿ ಕಡ್ಡಾಯ. ನಾವಿನ್ನು ಯಾವುದೇ ಪ್ರಸ್ತಾವನೆಯನ್ನು ಅಕಾಡೆಮಿಕ್ ಕೌನ್ಸಿಲ್‌ನ ಎದುರು ಮಂಡಿಸಿಲ್ಲ ಎಂದು ಪೋಸ್ಟ್ ಮಾಡಿದ್ದರು.
2021ರಲ್ಲಿ ಬಿಹೆಚ್‌ಯು ಸಂದರ್ಶಕ ಪ್ರಾಧ್ಯಾಪಕರನ್ನ ಕುರಿತು ಪ್ರಕಟವಾಗಿರುವ ಲೇಖನಗಳು ಇಲ್ಲಿವೆ
ಮತ್ತಷ್ಟು ಮಾಹಿತಿಗೊಸ್ಕಾರ ನಾವು ಬಿಹೆಚ್‌ಯುನ ಸಾಮಾಜಿಕ ಜಾಲತಾಣವನ್ನು ಹುಡುಕಿದೆವು. ಮಾರ್ಚ್ 17,2021ರಲ್ಲಿ ಪ್ರಕಟಿಸಿರುವ ಪೋಸ್ಟ್‌ವೊಂದು ನಮಗೆ ಕಾಣಿಸಿತು.ನೀತಾ ಅಂಬಾನಿ ಅವರನ್ನು ಸೆಂಟರ್ ಫಾರ್ ವುಮೆನ್ಸ್ ಸ್ಟಡೀಸ್, ಸಮಾಜ ವಿಜ್ಞಾನ ವಿಭಾಗ, BHU ನಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ನೇಮಕ ಆಗಲಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳು ವರದಿ ಮಾಡಿತ್ತು. ಆದರೆ ಬಿಹೆಚ್‌ಯು ಅಧಿಕೃತವಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಖಚಿತಪಡಿಸಿದರು. ಸಂದರ್ಶಕ ಪ್ರಾಧ್ಯಾಪಕರ ನೇಮಕಾತಿಗೆ ಅಕಾಡೆಮಿಕ್ ಕೌನ್ಸಿಲ್‌ನ ಅನುಮೋದನೆ ಕಡ್ಡಾಯವಾಗಿದೆ ಆದರೆ ಅಧಿಕಾರಿಗಳು ನೀತಾ ಅಂಬಾನಿ ಅವರ ನೇಮಕಾತಿಯ ಕುರಿತು ಯಾವುದೇ ಪ್ರಸ್ತಾಪನೆಯನ್ನು ಸ್ವೀಕರಿಸಲಿಲ್ಲ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಹಳೆಯ ದಿನಪತ್ರಿಕೆಯ ಕಡಿಂಗ್‌ನ್ನು ಇತ್ತೀಚನದ್ದು ಎಂದು ಬಿಂಬಿಸಿ ಪೋಸ್ಟ್‌ನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗುತ್ತಿದೆ