ಫ್ಯಾಕ್ಟ್‌ಚೆಕ್‌: 2024ರ ಚುನಾವಣೆ ಗೆದ್ದ ನಂತರ ಟ್ರಂಪ್‌ ನಾನು ಹಿಂದೂಗಳ ದೊಡ್ಡ ಅಭಿಮಾನಿ ಎಂದು ಹೇಳಲಿಲ್ಲ

2024ರ ಚುನಾವಣೆ ಗೆದ್ದ ನಂತರ ಟ್ರಂಪ್‌ ನಾನು ಹಿಂದೂಗಳ ದೊಡ್ಡ ಅಭಿಮಾನಿ ಎಂದು ಹೇಳಲಿಲ್ಲ

Update: 2024-11-14 05:30 GMT

ಅಮೇರಿಕಾ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದ ನಂತರ ಡೊನಾಲ್ಡ್‌ ಟ್ರಂಪ್‌ ಹೇಳಿರುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ʼನಾನು ಹಿಂದೂಗಳು ಮತ್ತು ಭಾರತದ ದೊಡ್ಡ ಅಭಿಮಾನಿ ಹೀಗೆಂದು ಹೇಳಿದ್ದು ಬೇರೆ ಯಾರು ಅಲ್ಲ ಅಮೇರಿಕಾದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್‌ ಟ್ರಂಪ್‌. ನಾನು ಅಧ್ಯಕ್ಷನಾಗಿ ಆಯ್ಕೆಯಾದರೆ ವೈಟ್‌ಹೌಸ್‌ನಲ್ಲಿ ಭಾರತದ ನಿಜವಾದ ಸ್ನೇಹಿತನನ್ನ ಹೊಂದಿರುತ್ತಾರೆ ಎಂದು ಹೇಳಿ ಡೊನಾಲ್ಡ್‌ ಟ್ರಂಪ್‌ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇದೇ ಕ್ಯಾಪ್ಷನ್‌ ಹೊಂದಿರುವ ವಿಡಿಯೋವನ್ನು ಅಧ್ಯಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಹಂಚಿಕೊಂಡಿರುವುದನ್ನು ನಾವು ನೋಡಬಹುದು. ಚುನಾವಣಾ ಫಲಿತಾಂಶದ ನಂತರ ಟ್ರಂಪ್ ಅವರ ಮೊದಲ ವಿಜಯೋತ್ಸವ ಭಾಷಣ ಇದಾಗಿದೆ ಎಂದು ಹೇಳಲಾಗುತ್ತಿದೆ.

ನವಂಬರ್‌ 07, 2024ರಂದು ʼಕಹಳೆ ನ್ಯೂಸ್‌ʼ ಫೇಸ್‌ಬುಕ್‌ ಖಾತೆಯಲ್ಲಿ "ಬಿಗ್ ಫ್ಯಾನ್ ಆಫ್ ಹಿಂದೂ, ಎಂದು ಹೇಳಿದ ಡೊನಾಲ್ಡ್ ಟ್ರಂಪ್!" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ

Full View

ನವಂಬರ್‌ 07, 2024ರಂದು ಸಂವಾದ ರಾಮನಗರ ಎಂಬ ಫೇಸ್‌ಬುಕ್‌ ಖಾತೆದಾರ ತನ್ನ ಖಾತೆಯಲ್ಲಿ “ನಾನು ಹಿಂದೂವಿನ ದೊಡ್ಡ ಅಭಿಮಾನಿ. ನಾನು ಭಾರತದ ದೊಡ್ಡ ಅಭಿಮಾನಿ. ಅಮೇರಿಕಾದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಮಾತು" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದರು. ಹಾಗೆ ʼ@ALL MOVIES AND VIDEOSʼ ಎಂಬ ಯೂಟ್ಯೂಬ್‌ ಖಾತೆದಾರ ತಮ್ಮ ಖಾತೆಯಲ್ಲಿ ʼI am a big fan of Hindu said US new President Donald Trumpʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ

Full View


Full View


Full View

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತದೆ. ಡೊನಾಲ್ಡ್‌ ಟ್ರಂಪ್‌ ʼನಾನು ಹಿಂದೂಗಳು ಮತ್ತು ಭಾರತದ ದೊಡ್ಡ ಅಭಿಮಾನಿʼ ಎಂದು ಇತ್ತೀಚಿಗೆ ನಡೆದ ಚುನಾವಣಾ ಪ್ರಚಾರದಲ್ಲಿ ಹೇಳಿರುವುದಲ್ಲ. 2016 ರ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ನ್ಯೂಜೆರ್ಸಿಯಲ್ಲಿ ಹಿಂದೂ ರಿಪಬ್ಲಿಕನ್ ಒಕ್ಕೂಟ ಆಯೋಜಿಸಿದ್ದ ನಿಧಿಸಂಗ್ರಹ ಅಭಿಯಾನದಲ್ಲಿ ಹೇಳಿದ ಮಾತು.

ನಲತ್ತೆಂಟು ಸೆಕೆಂಡ್‌ಗಳ ವಿಡಿಯೋವಿನಲ್ಲಿ ʼನಾನು ಹಿಂದೂಗಳು ಮತ್ತು ಭಾರತದ ದೊಡ್ಡ ಅಭಿಮಾನಿ ಹೀಗೆಂದು ಹೇಳಿದ್ದು ಬೇರೆ ಯಾರು ಅಲ್ಲ ಅಮೇರಿಕಾದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್‌ ಟ್ರಂಪ್‌. ನಾನು ಅಧ್ಯಕ್ಷನಾಗಿ ಆಯ್ಕೆಯಾದರೆ ವೈಟ್‌ಹೌಸ್‌ನಲ್ಲಿ ಭಾರತದ ನಿಜವಾದ ಸ್ನೇಹಿತನನ್ನ ಹೊಂದಿರುತ್ತಾರೆ, ಜೊತೆಗೆ ವಿಡಿಯೋವಿನಲ್ಲಿ ಟ್ರಂಪ್‌ ಭಾರತೀಯ ಮತ್ತು ಹಿಂದೂ ಅಮೆರಿಕನ್ನರ ತಲೆಮಾರುಗಳು ನಮ್ಮ ದೇಶವನ್ನು ಬಲಪಡಿಸಿವೆ. ನಿಮ್ಮ ಶ್ರಮ, ಶಿಕ್ಷಣ ಮತ್ತು ಉದ್ಯಮದ ಮೌಲ್ಯಗಳು ನಮ್ಮ ರಾಷ್ಟ್ರವನ್ನು ನಿಜವಾಗಿಯೂ ಶ್ರೀಮಂತಗೊಳಿಸಿವೆ. ಆದರೆ ನಮಗೆಲ್ಲರಿಗೂ ತಿಳಿದಿರುವಂತೆ, ಭದ್ರತೆಯಿಲ್ಲದೆ ನಾವು ಸಮೃದ್ಧಿಯನ್ನು ಹೊಂದಲು ಸಾಧ್ಯವಿಲ್ಲ ಮತ್ತು ಅದಕ್ಕಾಗಿಯೇ ಇಸ್ಲಾಮಿಕ್ ಭಯೋತ್ಪಾದನೆಯ ವಿರುದ್ದದ ಹೋರಾಟದಲ್ಲಿ ಯುನೈಟೆಡ್ ಸ್ಟೇಟ್‌ನ ಮಹಾನ್ ಮಿತ್ರರಾಷ್ಟ್ರವಾಗಿ ಭಾರತವನ್ನು ಪ್ರಶಂಸಿಸುತ್ತೇವೆ." ಎಂದು ಡೊನಾಲ್ಡ್‌ ಟ್ರಂಪ್‌ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇದೇ ಕ್ಯಾಪ್ಷನ್‌ ಹೊಂದಿರುವ ವಿಡಿಯೋವನ್ನು ಅಧ್ಯಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಹಂಚಿಕೊಂಡಿರುವುದನ್ನು ನಾವು ನೋಡಬಹುದು. ಈಗ ಅಭೂತ ಪೂರ್ವ ಗೆಲುವು ಸಾಧಿಸಿದ ನಂತರ ಮತ್ತೆ ಈ ವಿಡಿಯೋ ವೈರಲ್‌ ಆಗುತ್ತಿದೆ. ಯುಎಸ್‌ ಅಧ್ಯಕ್ಷೀಯ ಚುನಾವಣೆಗೂ ಮುನ್ನವೇ ಡೊನಾಲ್ಡ್‌ ಟ್ರಂಪ್‌ ತಾನೊಬ್ಬ ಹಿಂದೂ ಮತ್ತು ಭಾರತದ ದೊಡ್ಡ ಅಭಿಮಾನಿ ಎಂದು ಹೇಳಿದ್ದರು. ಈ ಮೂಲಕ ಭಾರತೀಯರ ಮನಸ್ಸನ್ನೂ ಸಹ ಗೆಲ್ಲುವ ಪ್ರಯತ್ನವನ್ನು ಮಾಡಲಾಗಿತ್ತು.

ನಾವು ವೈರಲ್‌ ಆದ ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ ಮಾಡಿದೆವು. ಜೊತೆಗೆ ವಿಡಿಯೋಗೆ ಸಂಬಂಧಿಸಿದ ಕೆಲವು ಕೀವರ್ಡ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು ಹುಡುಕಾಟದಲ್ಲಿ ನಮಗೆ ಅಕ್ಟೋಬರ್‌ 16, 2016ರಂದು ಏಷಿಯನ್‌ ನ್ಯೂಸ್‌ ಇಂಟರ್‌ ನ್ಯಾಷನಲ್‌ (ANI) ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ #WATCH US Elections 2016: Republican presidential nominee Donald Trump ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ಗಮನಿಸಬಹುದು.

Full View

ಅಕ್ಟೊಬರ್‌ 20, 2016ರಂದು ʼREPUBLICAN HINDU COALITIONʼ ಎಂಬ ಯೂಟ್ಯೂಬ್‌ ಖಾತೆಯಲ್ಲಿ "FULL Donald Trump Speech At Hindus United Against Terror Event 10 15 2016 Hindus For Trump" ಎಂಬ ಶೀರ್ಷಿಕೆಯನ್ನೊಳಗೊಂಡಿರುವ 13.55 ಸೆಕೆಂಡ್‌ಗಳ ವಿಡಿಯೋವನ್ನು ನಾವು ನೋಡಬಹುದು

Full View

ನವಂಬರ್‌ 07,2024ರಂದು ʼನ್ಯೂಸ್‌18 ಕನ್ನಡʼ ಯೂಟ್ಯೂಬ್‌ ಚಾನೆಲ್‌ನಲ್ಲಿ "Big fan of Hindus” Donald Trump | ಟ್ರಂಪ್ ಗೆಲುವಿನ ಬಳಿಕ ಮತ್ತೆ ವೈರಲ್ ಆದ ಹಳೇ ವಿಡಿಯೋ | N18G" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ಕಾಣಬಹುದು.

Full View

ಅಕ್ಟೊಬರ್‌ 16,20216ರಂದು ʼಇಂಡಿಯನ್‌ ಎಕ್ಸ್‌ಪ್ರೆಸ್‌ʼ ಪ್ರಕಟಿಸಿದ ವರದಿಯಲ್ಲಿ "ನ್ಯೂಜೆರ್ಸಿಯ ಹಿಂದೂ ರಿಪಬ್ಲಿಕನ್ ಒಕ್ಕೂಟವು ನಿಧಿಸಂಗ್ರಹ ಕಾರ್ಯಕ್ರಮವನ್ನು ಆಯೋಜಿಸಿದ್ದು, ಡೊನಾಲ್ಡ್ ಟ್ರಂಪ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಭಾರತೀಯ ಮನರಂಜನಾ ಸ್ಕಿಟ್‌ಗಳು ಮತ್ತು ನೃತ್ಯ ಪ್ರದರ್ಶನಗಳನ್ನು ಒಳಗೊಂಡಿರುವ ಈವೆಂಟ್‌ನಲ್ಲಿ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿಯು 'ಹಿಂದೂ' ಮತ್ತು ಭಾರತದ ಮೇಲೆ ಅವರಿಗಿರುವ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. ದೀಪ ಬೆಳಗುವ ಕಾರ್ಯಕ್ರಮದ ನಂತರ ಮಾತನಾಡಿದ ಟ್ರಂಪ್‌ "ನಾನು ಹಿಂದೂಗಳ ದೊಡ್ಡ ಅಭಿಮಾನಿ ಮತ್ತು ನಾನು ಹಿಂದೂಗಳ ದೊಡ್ಡ ಅಭಿಮಾನಿ ಮತ್ತು ನಾನು ಭಾರತದ ದೊಡ್ಡ ಅಭಿಮಾನಿ" ಎಂದು ಹೇಳಿದರು ಎಂದು ವರದಿಯಾಗಿದೆ.


ನಾವು 2024ರ ಚುನಾವಣೆಯ ಫಲಿತಾಂಶದ ನಂತರ ಟ್ರಂಪ್‌ ತನ್ನ ಮೊದಲ ಭಾಷಣದಲ್ಲಿ ಏನು ಮಾತನಾಡಿದ್ದಾರೆ ಎಂದು ತಿಳಿಯಲು ಗೂಗಲ್‌ನಲ್ಲಿ ಹುಡುಕಾಟಿದೆವು ಹುಡುಕಾಟದಲ್ಲಿ ನಮಗೆ ʼಫಾಕ್ಸ್‌ ಬಿಸಿನೆಸ್‌ʼ ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ ಟ್ರಂಪ್‌ ಭಾಷಣವನ್ನು ಕಂಡುಕೊಂಡೆವು. ಟ್ರಂಪ್‌ ತನ್ನ ಮೊದಲ ಭಾಷಣದಲ್ಲಿ ಅಮೇರಿಕಾ ಜನರಿಗೆ ಮತ್ತು ಅವರ ತಂಡದ ಸದಸ್ಯರಿಗೆ ಧನ್ಯವಾದ ಹೇಳಿದರು. ಫ್ಲೋರಿಡಾದ ಪಾಮ್ ಬೀಚ್ ಕಂಟ್ರಿ ಕನ್ವೆನ್ಷನ್ ಸೆಂಟರ್‌ನಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್‌, “ಅಮೆರಿಕ ನಮಗೆ ಅಭೂತಪೂರ್ವ ಮತ್ತು ಶಕ್ತಿಯುತ ಆದೇಶವನ್ನು ನೀಡಿದೆ” ಎಂದು ಹೇಳಿರುವುದನ್ನು ನಾವು ನೋಡಬಹುದು. ಅಷ್ಟೇಅಲ್ಲ ಈ ಭಾಷಣದಲ್ಲಿ, ಅವರ ಬೆಂಬಲಿಗರ ಬೇಡಿಕೆಯ ಮೇರೆಗೆ, ಎಲೋನ್ ಮಸ್ಕ್ ಅವರನ್ನು ಉದಯೋನ್ಮುಖ ತಾರೆ ಎಂದು ಬಣ್ಣಿಸಿದರು. ಟ್ರಂಪ್‌ 2024ರ ಚುನಾವಣೆ ಗೆದ್ದ ನಂತರ ಯಾವುದೇ ದೇಶದ ಬಗ್ಗೆ ಪ್ರಸ್ತಾಪಿಸಿಲ್ಲ.

Full View

ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್‌ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತದೆ. ಡೊನಾಲ್ಡ್‌ ಟ್ರಂಪ್‌ ʼನಾನು ಹಿಂದೂಗಳು ಮತ್ತು ಭಾರತದ ದೊಡ್ಡ ಅಭಿಮಾನಿʼ ಎಂದು 2024ರ ಚುನಾವಣಾ ಪ್ರಚಾರದಲ್ಲಿ ಹೇಳಿರುವುದಲ್ಲ. 2016 ರ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ನ್ಯೂಜೆರ್ಸಿಯಲ್ಲಿ ಹಿಂದೂ ರಿಪಬ್ಲಿಕನ್ ಒಕ್ಕೂಟ ಆಯೋಜಿಸಿದ್ದ ನಿಧಿಸಂಗ್ರಹ ಅಭಿಯಾನದಲ್ಲಿ ಹೇಳಿದ ಮಾತು.

Claim :  2024ರ ಚುನಾವಣೆ ಗೆದ್ದ ನಂತರ ಟ್ರಂಪ್‌ ನಾನು ಹಿಂದೂಗಳ ದೊಡ್ಡ ಅಭಿಮಾನಿ ಎಂದು ಹೇಳಲಿಲ್ಲ
Claimed By :  Social Media Users
Fact Check :  False
Tags:    

Similar News