ಫ್ಯಾಕ್ಟ್‌ಚೆಕ್: 2025 ಮಾರ್ಚ್ 01ರಿಂದ ಸಂಚಾರ ನಿಯಮ ಉಲ್ಲಂಘನೆಯ ದಂಡ ಹೆಚ್ಚಾಗಿದೆ ಎಂದು ತಪ್ಪು ಸುದ್ದಿ ಹಂಚಿಕೆ
2025 ಮಾರ್ಚ್ 01ರಿಂದ ಸಂಚಾರ ನಿಯಮ ಉಲ್ಲಂಘನೆಯ ದಂಡ ಹೆಚ್ಚಾಗಿದೆ ಎಂದು ತಪ್ಪು ಸುದ್ದಿ ಹಂಚಿಕೆ;

ರಸ್ತೆ ಸಂಚಾರವು ಸುರಕ್ಷಿತವಾಗಿರಲು, ಪ್ರಯಾಣಿಕರು ಹಾಗೂ ವಾಹನ ಸವಾರರು ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಸರ್ಕಾರ ಮತ್ತು ಸಂಚಾರ ಇಲಾಖೆಯು ಸಂಚಾರ ನಿಯಮ ಉಲ್ಲಂಘನೆಗಳನ್ನು ತಡೆಹಿಡಿಯಲು ಮತ್ತು ಸಾರ್ವಜನಿಕರ ಸುರಕ್ಷತೆ ಕಾಪಾಡಿಕೊಳ್ಳಲು ಕಾನೂನು ಕ್ರಮಗಳನ್ನು ಜಾರಿಗೆ ತಂದಿದೆ. ಇನ್ನು, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ವಾಹನ ಸವಾರರು ತಮ್ಮ ಹಾಗೂ ಇತರರ ಜೀವವನ್ನು ಅಪಾಯಕ್ಕೆ ಒಳಪಡಿಸದೇ, ಸಂಚಾರ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಪ್ರಾಧಿಕಾರಗಳು ಬಲವಾದ ಕಾನೂನುಗಳನ್ನು ಜಾರಿಗೊಳಿಸಿದ್ದಾವೆ. ಆದರೆ, ಕೆಲವು ಸವಾರರು ನಿರ್ಲಕ್ಷ್ಯದಿಂದ ಅಥವಾ ಜಾಣತನದಿಂದ ಈ ನಿಯಮಗಳನ್ನು ಉಲ್ಲಂಘಿಸುತ್ತಾರೆ. ಟ್ರಾಫಿಕ್ ನಿಯಮಗಳ ಉಲ್ಲಂಘನೆಗೆ ದಂಡದ ಪ್ರಮಾಣವನ್ನು ಈ ಹಿಂದೆ ಸರ್ಕಾರ ಪರಿಷ್ಕರಣೆಗೊಳಿಸಿತ್ತು. ಆದರೆ, ದೇಶದಲ್ಲಿ ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ಆ ಹಿನ್ನೆಲೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಟ್ರಾಫಿಕ್ ನಿಯಮಗಳ ಉಲ್ಲಂಘನೆಯ ದಂಡದ ಪ್ರಮಾಣವನ್ನು 10 ಪಟ್ಟು ಏರಿಕೆ ಮಾಡಿದೆ. ಹೊಸ ಪರಿಷ್ಕತ ದರಗಳು ಮಾ. 1ರಿಂದ ಜಾರಿಗೊಳ್ಳಲಿವೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಇದೀಗ ಹರಿದಾಡುತ್ತಿದೆ. ಇದರಲ್ಲಿ ದೆಹಲಿಯಲ್ಲಿ ಟ್ರಾಫಿಕ್ ಚಲನ್‌ಗಳ ದರಗಳು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಇದೇ ರೀತಿಯ ದಂಡದ ನಿಯಮ ಇನ್ನು ಮುಂದೆ ದೇಶಾದ್ಯಂತ ಜಾರಿಯಾಗಲಿದೆ ಎಂಬ ಬರಹಗಳೊಂದಿಗೆ ಹಲವರು ವೈರಲ್ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಇನ್ನು ಸಾಕಷ್ಟು ಮಂದಿ ಈ ಕುರಿತು ಟೀಕೆಗಳನ್ನು ಮಾಡಿದರೆ, ಇನ್ನು ವೈರಲ್ ಪ್ರಕಟಣೆಯಲ್ಲಿ ಕೂಡ ಯಾವ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಎಷ್ಟು ದಂಡ ವಿಧಿಸಲಾಗುತ್ತದೆ ಎಂಬುದರ ಕುರಿತು ಮಾಹಿತಿಯನ್ನು ಕೂಡ ನೀಡಿರುವುದರಿಂದ, ಇದನ್ನು ನಿಜವೆಂದು ಸಾಕಷ್ಟು ಮಂದಿ ನಂಬಿದ್ದಾರೆ. ಹೀಗಾಗಿ ಹಲವರು ಫೇಸ್‌ಬುಕ್, ವಾಟ್ಸ್‌ಪ್, ಇನ್‌ಸ್ಟಾಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮಾರ್ಚ್ 18, 2025ರಂದು ಇನ್‌ಸ್ಟಾಗ್ರಾಮ್ ಖಾತೆದಾರರರೊಬ್ಬರು ʼThe Indian government has tightened traffic regulations with stiffer fines and penalties from March 1, 2025, to improve road safety and curb reckless driving. With road fatalities rising, especially in states like Maharashtra, the amendments aim to discourage violations and promote responsible driving.
The new penalties include:
> Drunk driving: ₹10,000 fine and/or 6 months imprisonment; repeat offenders face ₹15,000 fine and 2 years in prison.
> Riding without a helmet: ₹1,000 fine and a 3-month license suspension.
Using a mobile while driving: ₹5,000 fine.
> Driving without a valid license or insurance: ₹2,000 fine, with repeat violations attracting higher fines.
> Pollution certificate violations: ₹10,000 fine or imprisonment up to 6 months.
Dangerous driving and failing to yield to emergency vehicles: ₹5,000 and ₹10,000 fines, respectively.
> Juvenile offenses: ₹25,000 fine, 3 years imprisonment, license cancellation for 1 year, and ineligibility for a license until age 25. With millions of vehicles on Indian roads, enforcing strict penalties is a critical step toward reducing road accidents and saving lives. Stay safe, follow traffic rules, and be a responsible driver or riderʼ ಎಂಬ ಶೀರ್ಷಿಕೆಯೊಂದಿಗೆ ಫೈನ್‌ನ ಹಣದ ಮೊತ್ತವನ್ನು ಉಲ್ಲೇಖಿಸಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼರಸ್ತೆ ಸುರಕ್ಷತೆಯನ್ನು ಸುಧಾರಿಸಲು ಮತ್ತು ಅಜಾಗರೂಕ ಚಾಲನೆಯನ್ನು ತಡೆಯಲು ಭಾರತ ಸರ್ಕಾರವು ಮಾರ್ಚ್ 1, 2025 ರಿಂದ ಕಠಿಣ ದಂಡ ಮತ್ತು ದಂಡಗಳೊಂದಿಗೆ ಸಂಚಾರ ನಿಯಮಗಳನ್ನು ಬಿಗಿಗೊಳಿಸಿದೆ. ವಿಶೇಷವಾಗಿ ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚುತ್ತಿರುವುದರಿಂದ, ತಿದ್ದುಪಡಿಗಳು ಉಲ್ಲಂಘನೆಗಳನ್ನು ನಿರುತ್ಸಾಹಗೊಳಿಸುವುದು ಮತ್ತು ಜವಾಬ್ದಾರಿಯುತ ಚಾಲನೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ.
ಹೊಸ ದಂಡಗಳು ಸೇರಿವೆ:
> ಕುಡಿದು ವಾಹನ ಚಲಾಯಿಸಿದರೆ: ₹10,000 ದಂಡ ಮತ್ತು/ಅಥವಾ 6 ತಿಂಗಳ ಜೈಲು ಶಿಕ್ಷೆ; ಪದೇ ಪದೇ ಅಪರಾಧ ಎಸಗಿದರೆ ₹15,000 ದಂಡ ಮತ್ತು 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
> ಹೆಲ್ಮೆಟ್ ಇಲ್ಲದೆ ಸವಾರಿ: ₹1,000 ದಂಡ ಮತ್ತು 3 ತಿಂಗಳ ಪರವಾನಗಿ ಅಮಾನತು. ವಾಹನ ಚಲಾಯಿಸುವಾಗ ಮೊಬೈಲ್ ಬಳಸಿದರೆ: ₹5,000 ದಂಡ.
> ಮಾನ್ಯ ಪರವಾನಗಿ ಅಥವಾ ವಿಮೆ ಇಲ್ಲದೆ ವಾಹನ ಚಲಾಯಿಸಿದರೆ ₹2,000 ದಂಡ, ಪುನರಾವರ್ತಿತ ಉಲ್ಲಂಘನೆಗಳಿಗೆ ಹೆಚ್ಚಿನ ದಂಡ ವಿಧಿಸಲಾಗುತ್ತದೆ.
> ಮಾಲಿನ್ಯ ಪ್ರಮಾಣಪತ್ರ ಉಲ್ಲಂಘನೆ: ₹10,000 ದಂಡ ಅಥವಾ 6 ತಿಂಗಳವರೆಗೆ ಜೈಲು ಶಿಕ್ಷೆ. ಅಪಾಯಕಾರಿ ಚಾಲನೆ ಮತ್ತು ತುರ್ತು ವಾಹನಗಳಿಗೆ ಮಣಿಯದಿದ್ದರೆ ಕ್ರಮವಾಗಿ ₹5,000 ಮತ್ತು ₹10,000 ದಂಡ.
> ಬಾಲಾಪರಾಧಿಗಳು: ₹25,000 ದಂಡ, 3 ವರ್ಷ ಜೈಲು ಶಿಕ್ಷೆ, 1 ವರ್ಷ ಪರವಾನಗಿ ರದ್ದತಿ ಮತ್ತು 25 ವರ್ಷ ವಯಸ್ಸಿನವರೆಗೆ ಪರವಾನಗಿಗೆ ಅನರ್ಹತೆ.
ಭಾರತೀಯ ರಸ್ತೆಗಳಲ್ಲಿ ಲಕ್ಷಾಂತರ ವಾಹನಗಳು ಓಡಾಡುತ್ತಿರುವುದರಿಂದ, ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ಮತ್ತು ಜೀವಗಳನ್ನು ಉಳಿಸುವ ನಿಟ್ಟಿನಲ್ಲಿ ಕಠಿಣ ದಂಡಗಳನ್ನು ಜಾರಿಗೊಳಿಸುವುದು ಒಂದು ನಿರ್ಣಾಯಕ ಹೆಜ್ಜೆಯಾಗಿದೆ. ಸುರಕ್ಷಿತವಾಗಿರಿ, ಸಂಚಾರ ನಿಯಮಗಳನ್ನು ಅನುಸರಿಸಿ ಮತ್ತು ಜವಾಬ್ದಾರಿಯುತ ಚಾಲಕ ಅಥವಾ ಸವಾರರಾಗಿರಿʼ ಎಂದು ಬರೆದಿರುವುದನ್ನು ನೋಡಬಹುದು.
ವೈರಲ್ ಆದ ಪೋಸ್ಟ್‌ನ ಸ್ಕ್ರೀನ್‌ಶಾಟ್ ನೀವಿಲ್ಲಿ ನೋಡಬಹುದು.
ಮಾರ್ಚ್ 18, 2025ರಂದು ʼNew Traffic Fines: ವಾಹನ ಸವಾರರೇ ಗಮನಿಸಿ; ಟ್ರಾಫಿಕ್ ನಿಯಮದಲ್ಲಿ ಮಹತ್ವದ ಬದಲಾವಣೆʼ ಎಂಬ ಶೀರ್ಷಿಕೆಯೊಂದಿಗೆ ಒನ್ ಇಂಡಿಯಾ ಎಂಬ ವೆಬ್‌ಸೈಟ್‌ನಲ್ಲಿ ವರದಿ ಮಾಡಲಾಗಿದೆ. ವರದಿಯಲ್ಲಿ ʼಸಂಚಾರ ನಿಯಮ ಉಲ್ಲಂಘನೆ ಮಾಡುವವರ ಸಂಖ್ಯೆ ಹೆಚ್ಚಾಗಿಬಿಟ್ಟಿದೆ. ಈ ಹಿನ್ನೆಲೆ ಸರ್ಕಾರವು ಈ ಸಂಬಂಧ ದೊಡ್ಡ ಬದಲಾವಣೆಗಳನ್ನು ಜಾರಿ ಮಾಡಿದೆ. ಒಂದು ವೇಳೆ ಇವುಗಳನ್ನು ಉಲ್ಲಂಘಿಸಿದಲ್ಲಿ ಕಠಿಣ ಶಿಕ್ಷೆ ಗ್ಯಾರಂಟಿ. ಹಾಗಾದ್ರೆ ಯಾವೆಲ್ಲಾ ಬದಲಾವಣೆಗಳನ್ನು ತಂದಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿʼ ಎಂದು ಫೈನ್‌ನ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಮಾರ್ಚ್ 18, 2025ರಂದು ʼನಮ್ಮ ಕೂಡ್ಲುʼ ವೆಬ್‌ಸೈಟ್‌ನಲ್ಲಿ ʼಟ್ರಾಫಿಕ್ ನಿಯಮಗಳ ಉಲ್ಲಂಘನೆಗೆ ದಂಡದ ಪ್ರಮಾಣ ಹೆಚ್ಚಳ; ಇಲ್ಲಿದೆ ಮಾಹಿತಿʼ ಎಂಬ ಶೀರ್ಷಿಕೆಯೊಂದಿಗೆ ವರಿ ಮಾಡಿರುವುದನ್ನು ನೋಡಬಹುದು.
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ, ಮಾರ್ಚ್ 1 ರಿಂದ ದೆಹಲಿಯಲ್ಲಿ ಸಂಚಾರ ದಂಡವನ್ನು ಹೆಚ್ಚಿಸಲಾಗಿಲ್ಲ. 2019 ರಲ್ಲಿ ಮೋಟಾರು ವಾಹನ ಕಾಯ್ದೆಯಲ್ಲಿ ಬದಲಾವಣೆ ತರಲಾಯಿತು. ಅದೇ ಸಮಯದಲ್ಲಿ ದಂಡವನ್ನು ಹೆಚ್ಚಿಸಲಾಯಿತು. ಅದಾದ ನಂತರ ದೇಶದಲ್ಲಿ ಯಾವುದೇ ರೀತಿಯಲ್ಲಿ ದಂಡವನ್ನು ಹೆಚ್ಚಳ ಮಾಡಲಾಗಿಲ್ಲ.
ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ನಾವು ಕೆಲವು ಪ್ರಮುಖ ಕೀವರ್ಡ್‌ಗಳನ್ನು ಉಪಯೋಗಿಸಿ ಗೂಗಲ್‌ನಲ್ಲಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಇತ್ತೀಚಿಗೆ ಹಂಚಿಕೊಂಡಿರುವ ಯಾವುದೇ ಅಧಿಕೃತ ಮಾಹಿತಿ ಸಿಗಲಿಲ್ಲ ಬದಲಿಗೆ, ಆಗಸ್ಟ್ 28,2019 ರಂದು ಪ್ರಕಟಿಸಲಾಗಿದ್ದ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ, 2019 ರ ನಿಬಂಧನೆಗಳನ್ನು ಜಾರಿಗೆ ತರಲು ಉದ್ದೇಶಿಸಿದ್ದು, ಇದು 1 ಸೆಪ್ಟೆಂಬರ್ 2019 ರಿಂದ ಜಾರಿಗೆ ಬರಲಿದೆ ಎಂದು ಹೇಳಲಾಗಿರುವ ಪೊಸ್ಟ್‌ವೊಂದು ಕಂಡುಬಂದಿತು.. ಇವು ಕೇಂದ್ರ ಮೋಟಾರು ವಾಹನ ನಿಯಮಗಳು, 1989 ರಲ್ಲಿ ಯಾವುದೇ ತಿದ್ದುಪಡಿ ಅಗತ್ಯವಿಲ್ಲದ ನಿಬಂಧನೆಗಳಾಗಿವೆ ಎಂದು ಉಲ್ಲೇಖಸಿರುವುದು ಸಹ ನಾವು ನೋಡಬಹುದು.
ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ನಾವು ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ ʼದೈನಿಕ್ ಭಾಸ್ಕರ್ʼ ಎಂಬ ವೆಬ್‌ಸೈಟ್‌ನಲ್ಲಿ ಆರು ವರ್ಷಗಳ ಹಿಂದಿನ ವರದಿಯೊಂದು ದೊರಕಿತು. ಸೆಪ್ಟೆಂಬರ್ 01, 2019ರಂದು ಕೇಂದ್ರ ಸರ್ಕಾರವು ಮೋಟಾರು ವಾಹನ ತಿದ್ದುಪಡಿ ಕಾಯ್ದೆ, 2019ರ 63 ನಿಬಂಧನೆಗಳನ್ನು ಜಾರಿಗೆ ತಂದಿದೆ ಎಂದು ಆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗೆ ಆ ಸಮಯದಲ್ಲಿ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬ್ ಹಾಗೂ ಪಶ್ಚಿಮ ಬಂಗಾಳ ಹಾಗೂ ತೆಲಂಗಾಣ ರಾಜ್ಯ ಸರ್ಕಾರಗಳು ಹೊಸ ಕಾನೂನನ್ನು ಜಾರಿಗೆ ತಂದಿಲ್ಲ ಎಂಬುದನ್ನು ಕೂಡ ವರದಿಯಲ್ಲಿ ಉಲ್ಲೇಖವಾಗಿದೆ.
ಸೆಪ್ಟಂಬರ್ 1, 2019ರಲದಲಿ ʼಡಿಡಿ ನ್ಯೂಸ್ʼ ಎಂಬ ಎಕ್ಸ್ ಖಾತೆಯಲ್ಲಿ ʼमोटर व्हीकल संशोधन एक्ट 2019 आज से लागू हो गया है, अब रेड लाइट तोड़ने पर देना होगा 5000 रूपए का जुर्माना, नशे में गाड़ी चलाने पर 10 हजार का जुर्माना और बिना ड्राइविंग लाइसेंस के गाड़ी चलाने पर भरने होंगे 5000 रूपएʼ ಎಂಬ ಶೀರ್ಷಿಕೆಯೊಂದಿಗೆ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019 ಇಂದಿನಿಂದ ಜಾರಿಗೆ ಬಂದಿದ್ದು, ಈಗ ಸಿಗ್ನಿಲ್ ಜಂಪ್ ಮಾಡಿದರೆ, 5000 ರೂ. ದಂಡ, ಕುಡಿದು ವಾಹನ ಚಲಾಯಿಸಿದರೆ 10 ಸಾವಿರ ರೂ. ದಂಡ ಮತ್ತು ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸಿದರೆ 5000 ರೂ. ದಂಡ ಪಾವತಿಸಬೇಕಾಗುತ್ತದೆ ಎಂದು ದಂಡದ ವಿವಿರ ಸಹಿತ ಪೋಸ್ಟ್ ಮಾಡಿರುವುದು ಕಂಡು ಬಂದಿದೆ. ಈ ಮೂಲಕ 2019 ರ ನಂತರ ಮೋಟಾರು ವಾಹನ ಕಾಯ್ದೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಎಂಬುದು ಸ್ಪಷ್ಟವಾಗಿದೆ
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ, ಮಾರ್ಚ್ 1 ರಿಂದ ದೆಹಲಿಯಲ್ಲಿ ಸಂಚಾರ ದಂಡವನ್ನು ಹೆಚ್ಚಿಸಲಾಗಿಲ್ಲ. 2019 ರಲ್ಲಿ ಮೋಟಾರು ವಾಹನ ಕಾಯ್ದೆಯಲ್ಲಿ ಬದಲಾವಣೆ ತರಲಾಯಿತು. ಅದೇ ಸಮಯದಲ್ಲಿ ದಂಡವನ್ನು ಹೆಚ್ಚಿಸಲಾಯಿತು. ಅದಾದ ನಂತರ ದೇಶದಲ್ಲಿ ಯಾವುದೇ ರೀತಿಯಲ್ಲಿ ದಂಡವನ್ನು ಹೆಚ್ಚಳ ಮಾಡಲಾಗಿಲ್ಲ.