ಫ್ಯಾಕ್ಟ್‌ಚೆಕ್‌: ಟಿಡಿಪಿ ಮೈತ್ರಿ ಸರ್ಕಾರ ಎಪಿಯಲ್ಲಿ ಸ್ವಯಂಸೇವಕ ವ್ಯವಸ್ಥೆಯಲ್ಲಿ ಬದಲಾವಣೆ ತರಲಿದೆ.

ಟಿಡಿಪಿ ಮೈತ್ರಿ ಸರ್ಕಾರ ಎಪಿಯಲ್ಲಿ ಸ್ವಯಂಸೇವಕ ವ್ಯವಸ್ಥೆಯಲ್ಲಿ ಬದಲಾವಣೆ ತರಲಿದೆ

Update: 2024-06-22 17:39 GMT

Volunteer

ಹಿಂದಿನ ಆಡಳಿತ ಪಕ್ಷ YSRC 2019ರಲ್ಲಿ ಸ್ವಯಂಸೇವಕ ವ್ಯವಸ್ಥೆಯನ್ನು ಪರಿಚಯಿಸಿತು, ಫಲಾನುಭವಿಗಳ ಮನೆ ಬಾಗಿಲಿಗೆ ಕಲ್ಯಾಣ ಪಿಂಚಣಿ ಮತ್ತು ಇತರ ಯೋಜನೆಗಳನ್ನು ತಲುಪಿಸಲು 50 ಮನೆಗಳ ಮೇಲ್ವಿಚಾರಣೆಗೆ ಪಕ್ಷವು ತಲಾ 1 ಸ್ವಯಂಸೇವಕರನ್ನು ನೇಮಕಮಾಡಿತ್ತು. ವೈಎಸ್‌ಆರ್‌ಸಿಪಿ ಈ ಸ್ವಯಂಸೇವಕ ವ್ಯವಸ್ಥೆಯನ್ನು ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿತ್ತು ಎಂದು ಪ್ರತಿಪಕ್ಷ ಪಾರ್ಟಿ ಎನ್‌ಡಿಎ ಮೈತ್ರಿಕೂಟವು ಚುನಾವಣೆಗೆ ಮುನ್ನ ಆರೋಪಿಸಿತ್ತು.

ಆಂಧ್ರಪ್ರದೇಶದಲ್ಲಿ 2024 ರ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ-ಜನಸೇನಾ ಮತ್ತು ಬಿಜೆಪಿ ಮೈತ್ರಿಯ ಗೆಲುವಿನ ನಂತರ, ಇನ್ನೂ ರಚನೆಯಾಗದ ಸರ್ಕಾರವು ವೈಎಸ್‌ಆರ್‌ಸಿಪಿ ಸರ್ಕಾರ ಸ್ಥಾಪಿಸಿದ ಸ್ವಯಂಸೇವಕ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡಲಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ.

ತೆಲುಗಿನಲ್ಲಿ “*వాలంటరీ వ్యవస్థలో మార్పులు* *ప్రతి గ్రామంలో ఐదుగురు మాత్రమే వాలంటరీలు* * ఇప్పుడున్న 5000 జీతాన్ని పదివేల రూపాయలకు పెంపు * కొత్తగా నోటిఫికేషన్ ఇవ్వనున్న ఆంధ్రప్రదేశ్ ప్రభుత్వం * డిగ్రీ ఉత్తీర్ణత చెంది 1994నుండి 2003 వరకు వయసు వయోపరిమితి * గ్రామ పరిధిలోనే కాకుండా మండల పరిధిలో విధులుకు హాజరు అవ్వవలెను * వాలంటరీ సచివాలయ సిబ్బంది వ్యవస్థ గ్రామ సర్పంచుల ఆధీనంలో పూర్తి అధికారం * ప్రతి గ్రామానికి సంక్షేమ నిధి * ప్రతి నెల ఇచ్చే పెన్షన్ దారులకు నేరుగా బ్యాంక్ ఖాతాలో జమ చేయబడును * సచివాలయ సిబ్బంది ప్రతి ఇంటికి ప్రాతినిధ్యం వహించడం జరుగును. #TDP" ಎಂಬ ಕ್ಯಾಪ್ಷನ್‌ನೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತಿದೆ.

ಕ್ಯಾಪ್ಷನ್‌ನನ್ನು ಕನ್ನಡಕ್ಕೆ ಅನುವಾದಿಸಿದಾಗ "ಸ್ವಯಂಸೇವಕ ವ್ಯವಸ್ಥೆಯಲ್ಲಿನ ಬದಲಾವಣೆಗಳು* *ಪ್ರತಿ ಹಳ್ಳಿಯಲ್ಲಿ ಕೇವಲ ಐದು ಸ್ವಯಂಸೇವಕರು* *ಪ್ರಸ್ತುತ 5000 ರಿಂದ ಹತ್ತು ಸಾವಿರ ರೂಪಾಯಿಗಳ ಸಂಬಳವನ್ನು ಹೆಚ್ಚಿಸಲಾಗಿದೆ *ಹೊಸ ಅಧಿಸೂಚನೆಯನ್ನು ಹೊರಡಿಸಲಿರುವ ಆಂಧ್ರಪ್ರದೇಶ ಸರ್ಕಾರ *1994 ಮತ್ತು 2003ರಲ್ಲಿ ಜನಿಸಿ ಪದವಿಯಲ್ಲಿ ಉತ್ತೀರ್ಣರಾವವರು ಅರ್ಹರು * ಗ್ರಾಮದೊಳಗೆ ಮಾತ್ರವಲ್ಲದೆ ಮಂಡಲದಲ್ಲಿಯೂ ಕರ್ತವ್ಯಕ್ಕೆ ಹಾಜರಾಗಬೇಕು * ಸ್ವಯಂಸೇವಕರು ಮತ್ತು ಸಚಿವಾಲಯದ ಸಿಬ್ಬಂದಿ ಸಂಪೂರ್ಣವಾಗಿ ಗ್ರಾಮದ ಸರಪಂಚ್‌ಗಳ ಅಧಿಕಾರದಲ್ಲಿರುತ್ತಾರೆ * ಪ್ರತಿ ಗ್ರಾಮಕ್ಕೆ ಕಲ್ಯಾಣ ನಿಧಿ * ಪ್ರತಿ ತಿಂಗಳು ಪಿಂಚಣಿಯನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಫಲಾನುಭವಿಗಳು * ಸಚಿವಾಲಯದ ಸಿಬ್ಬಂದಿ ಪ್ರತಿ ಮನೆಯನ್ನು ಪ್ರತಿನಿಧಿಸುತ್ತಾರೆ. #ಟಿಡಿಪಿ" ಎಂದು ಬರೆದು ಪೋಸ್ಟ್‌ ಮಾಡಿತ್ತು.

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಆಂಧ್ರಪ್ರದೇಶದಲ್ಲಿ ಸ್ವಯಂಸೇವಕ ವ್ಯವಸ್ಥೆಯಲ್ಲಿ ಬದಲಾವಣೆಗಳ ಬಗ್ಗೆ ಯಾವುದೇ ಪ್ರಕಟಣೆಯನ್ನೂ ಹೊರಡಿಸಿಲ್ಲ.

ಎಲ್ಲಾ ಮುಖ್ಯವಾಹಿನಿಯ ಮಾಧ್ಯಮ ವೆಬ್‌ಸೈಟ್‌ಗಳಲ್ಲಿ ಹುಡುಕಿದಾಗ, ಆಂಧ್ರಪ್ರದೇಶದ ಸ್ವಯಂಸೇವಕ ವ್ಯವಸ್ಥೆಯಲ್ಲಿನ ಬದಲಾವಣೆಗಳ ಬಗ್ಗೆ ನಮಗೆ ಯಾವುದೇ ವರದಿಗಳು ಸಿಗಲಿಲ್ಲ. ಆದರೆ ವೈರಲ್‌ ಸುದ್ದಿ ಸುಳ್ಳು ಎಂದು ಹೇಳುವ ಕೆಲವು ವರದಿಗಳನ್ನು ನಾವು ಕಂಡುಕೊಂಡಿದ್ದೇವೆ.

ದಿಶಾ ದಿನಪತ್ರಿಕೆಯ ಪ್ರಕಾರ , ಸ್ವಯಂಸೇವಕ ವ್ಯವಸ್ಥೆಯಲ್ಲಿ ತೊಡಗಿರುವ ಉನ್ನತ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಮತ್ತು ಸ್ವಯಂಸೇವಕ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ನಡೆಯುತ್ತಿರುವ ಅಭಿಯಾನದಲ್ಲಿ ಯಾವುದೇ ಸತ್ಯವಿಲ್ಲ ಎಂದು ಅಧಿಕೃತವಾಗಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆಂದು ವರದಿ ಮಾಡಿದ್ದಾರೆ. ಈ ಬಗ್ಗೆ ತಮ್ಮ ಬಳಿ ಯಾವುದೇ ಅಧಿಕೃತ ಮಾಹಿತಿ ಇಲ್ಲ ಮತ್ತು ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಹೇಳಿದ್ದಾರೆ. ಹೊಸದಾಗಿ ರಚನೆಯಾದ ಸರ್ಕಾರವು ಸ್ವಯಂಸೇವಕರ ನೇಮಕಾತಿಗೆ ಮಾನದಂಡವಾಗಿ ತೆಗೆದುಕೊಳ್ಳಲು 1994 ರಿಂದ 2003 ರವರೆಗೆ ವಯಸ್ಸಿನ ಮಿತಿಯನ್ನು ನವೀಕರಿಸಬೇಕೆ ಎಂದು ಚರ್ಚಿಸುತ್ತಿದೆ ಎಂದು ವರದಿಯಾಗಿದೆ.

ವೇ2ನ್ಯೂಸ್ ಕೂಡ ಅಧಿಕಾರಿಗಳ ಹೇಳಿಕೆಯನ್ನು ನಿರಾಕರಿಸಿದ ಸುದ್ದಿಯನ್ನು ಪ್ರಕಟಿಸಿದೆ.

ಆದ್ದರಿಂದ ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸಾಭೀತಾಗಿದೆ. ಆಂಧ್ರಪ್ರದೇಶದಲ್ಲಿ ಟಿಡಿಪಿ ಮೈತ್ರಿಕೂಟವು ಸ್ವಯಂಸೇವಕ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಗಳನ್ನು ತರುವುದಾಗಿ ಘೋಷಿಸಿಲ್ಲ

Claim :  ಟಿಡಿಪಿ ಮೈತ್ರಿ ಸರ್ಕಾರ ಎಪಿಯಲ್ಲಿ ಸ್ವಯಂಸೇವಕ ವ್ಯವಸ್ಥೆಯಲ್ಲಿ ಬದಲಾವಣೆ ತರಲಿದೆ
Claimed By :  Social Media Users
Fact Check :  False
Tags:    

Similar News