ಫ್ಯಾಕ್ಟ್‌ಚೆಕ್‌: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ನೀಡಿದ ಹಿಂದೂ ವಿಗ್ರಹವನ್ನು ಸ್ವೀಕರಿಸಲು ರಾಹುಲ್‌ ನಿರಾಕರಿಸಿದರೇ?

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ನೀಡಿದ ಹಿಂದೂ ವಿಗ್ರಹವನ್ನು ಸ್ವೀಕರಿಸಲು ರಾಹುಲ್‌ ನಿರಾಕರಿಸಿದರೇ?

Update: 2024-03-24 10:00 GMT

ಭಾರತ್ ಜೋಡೋ ನ್ಯಾಯ್ ಯಾತ್ರೆಯ ಅಂಗವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಹಾರಾಷ್ಟ್ರದಲ್ಲಿನ ನಾಸಿಕ್‌ನಲ್ಲಿ ಜನರನ್ನು ಉದ್ದೇಶಿಸಿ ಸಭೆಯಲ್ಲಿ ಮಾತನಾಡಿದರು. ಸಭೆ ಮುಗಿದ ಮೇಲೆ ಸನ್ಮಾನಿಸಿದ ಗಣ್ಯರು ರಾಹುಲ್ ಗಾಂಧಿಯವರಿಗೆ ಹಿಂದೂ ದೇವರ ವಿಗ್ರಹವನ್ನು ಉಡುಗೊರೆಯಾಗಿ ನೀಡಿದಾಗ ಪಕ್ಷದ ಕಾರ್ಯಕರ್ತರೊಬ್ಬರು ನಿರಾಕರಿಸಿದ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಮಾಧ್ಯಮ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ

ವೈರಲ್‌ ಆದ ವಿಡಿಯೋ ಲಕ್ಷಾಂತರ ಹಿಂದೂ ಭಕ್ತರನ್ನು ಅವಮಾನಿಸಲಾಗುತ್ತಿದೆ ಎಂದು ಕೆಲವರು ಮಾಧ್ಯಮದಲ್ಲಿ ವೈರಲ್‌ ಆದ ವಿಡಿಯೋವನ್ನು ತಮ್ಮ ಖಾತೆಯಲ್ಲಿ ಹಂಚಿಕೊಳ್ಳುವುದಲ್ಲದೇ ಕಮೆಂಟ್‌ ಸಹ ಮಾಡುತ್ತಿದ್ದಾರೆ.


ಫ್ಯಾಕ್ಟ್‌ಚೆಕ್‌:

ವೈರಲ್‌ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ.

ವೈರಲ್‌ ಆದ ವಿಡಿಯೋವಿನ ಅಸಲಿಯತ್ತನ್ನು ತಿಳಿಯಲು ನಾವು ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಫ್ರೆಮ್‌ಗಳನ್ನು ತೆಗೆದುಕೊಂಡು ಗೂಗಲ್‌ ರಿವರ್ಸ್‌ ಸರ್ಚ್‌ ಮಾಡಿದೆವು. ಹುಡುಕಾಟದಲ್ಲಿ ನಮಗೆ ಮಾರ್ಚ್ 14, 2024 ರಂದು ರಾಹುಲ್ ಗಾಂಧಿ ಅವರು ತಮ್ಮ ಅಧಿಕೃತ YouTube ಚಾನಲ್‌ನಲ್ಲಿ ಹಂಚಿಕೊಂಡ ವೀಡಿಯೊವೊಂದು ಕಾಣಿಸಿತು. ಈ ವಿಡಿಯೋವಿನಲ್ಲಿ 17:15 ಟೈಮ್‌ಸ್ಟ್ಯಾಂಪ್‌ ನೋಡಿದರೆ ರಾಹುಲ್‌ ಗಾಂಧಿ ಪ್ರತಿಮೆಯನ್ನಿಡಿದು ಫೋಟೋ ಕ್ಲಿಕ್ಕಿಸಿ ಕೊಳ್ಳುತ್ತಿರುವುದನ್ನು ನಾವು ಕಾಣಬಹುದು.

Full View

ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ನಾನಾ ಪಟೋಲೆ ಮಾರ್ಚ್ 14, 2024 ರಂದು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದ ವಿಡಿಯೋವೊಂದನ್ನು ನಾವು ಕಂಡುಕೊಂಡೆವು. ವಿಡಿಯೋವಿನಲ್ಲಿ ಕೇಸರಿ ಕುರ್ತಾದಲ್ಲಿ ಕಾಣುವ ವ್ಯಕ್ತಿ ಮತ್ತು ಬಿಳಿ ಶರ್ಟ್‌ ತೊಟ್ಟಿರುವ ವ್ಯಕ್ತಿ ರಾಹುಲ್‌ ಗಾಂಧಿಗೆ ಪ್ರತಿಮೆಯನ್ನು ಕೊಡುತ್ತಿರುವುದನ್ನು ವಿಡಿಯೋವಿನಲ್ಲಿ ಕಾಣಬಹುದು

ಒಡಿಯಾ ಈರನ್‌ ಮ್ಯಾನ್‌ ಎಂಬ ಖಾತೆದಾರ ಮತ್ತು ಅಮಿತ್‌ ಮಾಳವಿಯಾ ಹಂಚಿಕೊಂಡಿದ್ದ ಪೋಸ್ಟ್‌ನ್ನು ಹಂಚಿಕೊಂಡಿದ್ದರು. ಎರಡೂ ವಿಡಿಯೋವನ್ನು ಗಮನಿಸಿದೆವು, ವೈರಲ್‌ ಆದ ವಿಡಿಯೋವನ್ನು ಎಡಿಟ್ ಮಾಡಲಾಗಿದೆ ಎಂದು ನಾವು ತಿಳಿದುಕೊಂಡೆವು. ಪೋಸ್ಟ್‌ಗೆ ಶೀರ್ಷಿಕೆಯಾಗಿ "Be aware of the fake news spread by godimedia. Rahul falsly trolled for respecting Bhagwan Vitthal" ಎಂದು ಪೋಸ್ಟ್‌ ಮಾಡಿದ್ದರು. ಶೀರ್ಷಿಕೆಯನ್ನು ಅನುವಾದಿಸಿದಾಗ "ಗೋಧಿ ಮಾಧ್ಯಮಗಳು ಹರಡುವ ನಕಲಿ ಸುದ್ದಿಯ ಬಗ್ಗೆ ಎಚ್ಚರವಾಗಿರಿ,ಭಗವಾನ್ ವಿಠ್ಠಲ್ ಅವರನ್ನು ಗೌರವಿಸಿದರೂ ರಾಹುಲ್ ಗಾಂಧಿ ಅವರನ್ನು ಸುಳ್ಳು ಹೇಳಿಕೆಗಳ ಮೂಲಕ ಟ್ರೋಲ್ ಮಾಡಲಾಗುತ್ತಿದೆ " ಎಂದು ಬರೆದಿದ್ದನ್ನು ನಾವು ಕಂಡುಕೊಂಡೆವು.

Full View

ನ್ಯೂಸ್‌ ಆ್ಯಪ್ ಇನ್‌ಶಾರ್ಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ರಾಹುಲ್ ಗಾಂಧಿ ವಿಠಲ ವಿಗ್ರಹವನ್ನು ಸ್ವೀಕರಿಸಿದರೂ ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ವರದಿ ಮಾಡಿತ್ತು.

ಹೀಗಾಗಿ ವೈರಲ್ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಭೆಯಲ್ಲಿ ನೀಡಿದ ಫೊಟೋವನ್ನು ಸ್ವೀಕರಿಸಿ ಫೋಟೋಗೆ ಪೋಸ್ ಸಹ ನೀಡಿದ್ದರು.

Claim :  Congress leader Rahul Gandhi did not accept an idol of a Hindu deity at a public gathering
Claimed By :  Social Media Users
Fact Check :  False
Tags:    

Similar News