ಫ್ಯಾಕ್ಟ್‌ಚೆಕ್‌: ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರಾ?

ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರಾ?

Update: 2024-05-14 15:20 GMT

Owaisi visits temple

ತೆಲಂಗಾಣದ ರಾಜಧಾನಿ 'ಹೈದರಾಬಾದ್' ಲೋಕಸಭಾ ಚುನಾವಣೆಯ ಪ್ರಮುಖ ಸ್ಥಾನಗಳಲ್ಲಿ ಒಂದು. ಕಳೆದ ಮೂರು ದಶಕಗಳಿಂದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿ ಮೀನ್ (ಎಐಎಂಐಎಂ) ಹೈದರಾಬಾದ್‌ ಸ್ಥಾನವನ್ನು ತನ್ನ ಮುಷ್ಟಿಯಲ್ಲಿರಿಸಿಕೊಂಡಿದೆ .2004ರಿಂದ ಕಳೆದ ನಾಲ್ಕು ಚುನಾವಣೆಗಳಲ್ಲೂ ಅಸಾದುದ್ದೀನ್ ಓವೈಸಿ ಹೈದರಾಬಾದ್‌ ಸ್ಥಾನವನ್ನು ಸತತವಾಗಿ ಗೆಲ್ಲುತ್ತಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಗೆ ಬಿಜೆಪಿ ನಾಯಕಿ ಮಾಧವಿ ಲತಾ ಸವಾಲು ಹಾಕಿದ್ದರು.

ಅಸಾದುದ್ದೀನ್ ಓವೈಸಿ ಅವರು ಹೈದರಾಬಾದಿನಲ್ಲಿ ಚುನಾವಣಾ ಪ್ರಚಾರದ ವೇಳೆ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ ಎಂಬ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವೈರಲ್‌ ಪೋಸ್ಟ್‌ನಲ್ಲಿ ಅಸಾದುದ್ದೀನ್ ಓವೈಸಿ ದೇವಸ್ಥಾನದ ಅರ್ಚಕರ ಮುಂದೆ ಹೂವಿನ ಹಾರ ಹಾಕಿಕೊಂಡು ನಿಂತಿದ್ದಾರೆ. ಎಂಐಎಂ ನಾಯಕ ಬಿಜೆಪಿ ಅಭ್ಯರ್ಥಿಯಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಹಿಂದೂ ಸಮುದಾಯವನ್ನು ಮೆಚ್ಚಿಸಲು ದೇವಸ್ಥಾನಗಳಿಗೆ ಭೇಟಿ ನೀಡಿ ಪ್ರಚಾರ ನಡೆಸುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ ವೈರಲ್‌ ಆಗಿದೆ.

“ఇవాళ ప్రచార సమయం లో గుడికి వెళ్లి అర్చన చేయించుకున్న అసద్దుద్దీన్ ఒవైసీ.ఈ బీజేపీ వాళ్ళు మామూలోళ్ళు కాదు. జీవితంలో గుడి ముఖం చూడడానికి కూడా ఇష్ఠపడని వాన్ని దేవాలయం మెట్లు ఎక్కేలా చేస్తున్నారు.” ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದಾರೆ.

Full View

Full View


ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ.

ನಾವು ವೈರಲ್‌ ಪೋಸ್ಟ್‌ನ ಅಸಲಿಯತ್ತನ್ನು ತಿಳಿಯಲು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಚಿತ್ರದ ಬಗ್ಗೆ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಎಐಎಂಐಎಂನ ಅಧಿಕೃತ ಎಕ್ಸ್ (ಟ್ವಿಟರ್) ಹ್ಯಾಂಡಲ್‌ನಲ್ಲಿ ವೈರಲ್‌ ಆದ ಚಿತ್ರ ಕಂಡುಬಂದಿತು. ಓವೈಸಿ ಮುಸಾರಂಬಾಗ್, ಇಂದಿರಾನಗರದ ಸಮೀಪದ ಪ್ರದೇಶಗಳಲ್ಲಿ ಪ್ರಚಾರ ಮಾಡುತ್ತಿದ್ದಾಗ ತೆಗೆದ ಚಿತ್ರಗಳು ಎಂಬ ಶೀರ್ಷಿಕೆಯೊಂದಿಗೆ ಫೋಟೋಗಳನ್ನು ಪೋಸ್ಟ್‌ ಮಾಡಲಾಗಿತ್ತು. ಪ್ರಚಾರದ ವೇಳೆ ಕಾಲ್ನಡಿಗೆಯಲ್ಲಿ ಮನೆ ಮನೆಗೂ ಹೋಗಿದ್ದನ್ನು ನಾವು ಕಾಣಬಹುದು. ಓವೈಸಿ ಯಾವುದೇ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂಬುವುದಕ್ಕೆ ಸಾಕ್ಷಿಯಿಲ್ಲ.

ನಾವು ಮತ್ತಷ್ಟು ನಿಜಾಂಶವನ್ನು ತಿಳಿಯಲು ಕೀವರ್ಟ್‌ಗಳ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಎಎನ್‌ಐ ಎಕ್ಸ್‌ ಖಾತೆಯಲ್ಲಿ ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಲೋಕಸಭಾ ಅಭ್ಯರ್ಥಿ ಅಸಾದುದ್ದೀನ್ ಓವೈಸಿಯನ್ನು ಮಲಕ್‌ಪೇಟ್ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡುವಾಗ ಕೆಲವು ಪುರೋಹಿತರು ಸ್ವಾಗತಿಸಿದ ವೀಡಿಯೊವನ್ನು ನಾವು ಕಂಡುಕೊಂಡೆವು.

ಮೈಕ್ ಟಿವಿ ನ್ಯೂಸ್ ಯೂಟ್ಯೂಬ್ ಚಾನೆಲ್‌ನಲ್ಲೂ ʼಓವೈಸಿ ಪ್ರಚಾರ ಮಾಡುವ ವೇಳೆ ಸ್ಥಳೀಯರು ಅವರಿಗೆ ಹಾರ ಮತ್ತು ಶಾಲುಗಳನ್ನು ಹೊದಿಸಿ ಗೌರವಿಸುವುದನ್ನು ನಾವು ಕಾಣಬಹುದು. ಇದೇ ಸಮಯದಲ್ಲಿ ಓವೈಸಿಯನ್ನು ಕೆಲ ಪುರೋಹಿತರು ಸನ್ಮಾನಿಸಿದ್ದರ ವಿಡಿಯೋಗಳನ್ನು ನಾವು ಕಾಣಬಹುದು ಆದರೆ ನಮಗೆ ಓವೈಸಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂಬ ಸುದ್ದಿಯ ಬಗ್ಗೆ ಯಾವುದೇ ವರದಿಗಳು ಸಿಗಲಿಲ್ಲ.

Full View

'ದಿ ಪ್ರಿಂಟ್' ಯೂಟ್ಯೂಬ್ ಚಾನೆಲ್ ಕೂಡ ಇದೇ ವಿಡಿಯೋವನ್ನು ಹಂಚಿಕೊಂಡಿದ್ದರು. ಪ್ರಚಾರದ ವೇಳೆ ಅಸಾದುದ್ದೀನ್ ಓವೈಸಿ ಅವರನ್ನು ಪುರೋಹಿತರು ಗೌರವಿಸುತ್ತಿದ್ದಾರೆ ಎಂಬ ಶೀರ್ಷಿಕೆಯಡಿಯಲ್ಲಿವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

Full View

ಹೀಗಾಗಿ ವೈರಲ್ ಆದ ಚಿತ್ರಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಹೈದರಾಬಾದ್ ಸಂಸದ ಅಭ್ಯರ್ಥಿ ಅಸಾದುದ್ದೀನ್ ಓವೈಸಿ ಯಾವು ದೇವಸ್ಥಾನಕ್ಕೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿಲ್ಲ.

Claim :  ಹೈದರಾಬಾದ್ ಸಂಸದ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಚಾರದ ವೇಳೆ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆಯನ್ನು ಸಲ್ಲಿಸಿದರು
Claimed By :  Social Media Users
Fact Check :  False
Tags:    

Similar News