ಫ್ಯಾಕ್ಟ್‌ಚೆಕ್‌: ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಚಿತ್ರ ವಿರಾಟ್‌ ಕೊಹ್ಲಿ ಮಗಳದ್ದಾ?

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಚಿತ್ರ ವಿರಾಟ್‌ ಕೊಹ್ಲಿ ಮಗಳದ್ದಾ?

Update: 2023-12-16 13:48 GMT

Virat Kohli daughter

2023ರ ವಿಶ್ವಕಪ್‌ನಲ್ಲಿ ಅತಿಹೆಚ್ಚು ಸ್ಕೂರ್‌ಗಳನ್ನು ಗಳಿಸಿ ವಿರಾಟ್‌ ಟಾಪ್‌ ಸ್ಕೋರರ್‌ ಆಗಿದ್ದರು. 2023ರಲ್ಲಿ ವಿರಾಟ್‌ 11ಪಂದ್ಯಗಳಲ್ಲಿ ಪಾಲ್ಗೊಂಡು 765ರನ್‌ ಗಳನ್ನು ಗಳಿಸಿದ್ದರು. ಅಷ್ಟೇ ಅಲ್ಲ ಕಳೆದ 25 ವರ್ಷಗಳಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಯೂ ಸಹ ವಿರಾಟ್‌ ಕೊಹ್ಲಿಯಾಗಿದ್ದರು.

ಇನ್ನು ವಿರಾಟ್‌ನ ವೈಯಕ್ತಿಕ ಜೀವನವನ್ನು ನೋಡಿದರೆ ವಿರಾಟ್‌ 2017ರಲ್ಲಿ ಬಾಲಿವುಡ್‌ ತಾರೆ ಅನುಷ್ಕ ಶರ್ಮರನ್ನು ಮದುವೆಯಾದರು. ಅವರಿಬ್ಬರಿಗೆ 2021ರಲ್ಲಿ ಒಂದು ಮುದ್ದಾದ ಹೆಣ್ಣು ಮಗಳೊಬ್ಬಳು ಜನಿಸಿದಳು. ಆಕೆಯ ಹೆಸರೇ ವಾಮಿಕ. ಇತ್ತೀಚೆಕೆ ವಿರಾಟ್‌ನ ಜೊತೆ ಒಂದು ಚಿಕ್ಕ ಮಗುವುನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಕೆಲವರು ಆ ಫೋಟೋವನ್ನು ಹಂಚಿಕೊಂಡು ವಿರಾಟ್‌ ತನ್ನ ಮಗಳು ವಾಮಿಕಳಾ ಜೊತೆಗಿರುವ ಫೋಟೋ ಎಂಬ ಶೀರ್ಷಿಕೆಯನ್ನು ನೀಡಿ ವೈರಲ್‌ ಮಾಡುತ್ತಿದ್ದಾರೆ.

Full View

Full View

Full View

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ಚಿತ್ರದಲ್ಲಿ ಕಂಡುಬರುವ ಪುಟ್ಟ ಮಗು ವಾಮಿಕ ಅಲ್ಲ, ಬದಲಿಗೆ ವಿರಾಟ್‌ನ ಅಪ್ಪಟ ಮುದ್ದಾದ ಅಭಿಮಾನಿ.

ನಾವು ಈ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್‌ನಲ್ಲಿ ವಿರಾಟ್‌ ಮಗಳು ವಾಮಿಕಾಳ ಚಿತ್ರಕ್ಕಾಗಿ ಹುಡುಕಾಟ ನಡೆಸಿದಾಗ ನಮಗೆ ಯಾವುದೇ ಚಿತ್ರಗಳು ಕಂಡುಬಂದಿಲ್ಲ.

ವೈರಲ್‌ ಚಿತ್ರವನ್ನು ಗೂಗಲ್‌ ರಿವರ್ಸ್‌ ಇಮೇಜ್‌ ಹುಡುಕಾಟದ ಮೂಲಕ ಹುಡುಕಿದಾಗ ಇನ್‌ಸೈಡ್‌ ಸ್ಟೋರಿ ಎಂಬ ಫೇಸ್‌ಬುಕ್‌ ಖಾತೆದಾರ ಆಗಸ್ಟ್‌ 23,2023ರಂದು ತನ್ನ ಖಾತೆಯಲ್ಲಿ ವೈರಲ್‌ ಆದ ಫೋಟೋವನ್ನು ಹಂಚಿಕೊಂಡು ಶೀರ್ಷಿಕೆಯಾಗಿ "ವಿರಾಟ್‌ ಕೊಹ್ಲಿ ವಿತ್‌ ಕ್ಯೂಟ್‌ ಲಿಟಲ್‌ ಫ್ಯಾನ್‌" ಎಂದು ಬರೆದು ಹಂಚಿಕೊಳ್ಳಲಾಗಿತ್ತು.

Full View

ಈ ಚಿತ್ರವನ್ನು X ಖಾತೆಯಲ್ಲಿ ಆಗಸ್ಟ್‌ 24,2023 ರಂದು @imTanujSingh ಎಂಬ ಖಾತೆದಾರ ತನ್ನ ಖಾತೆಯಲ್ಲಿ ಫೊಟೋವನ್ನು ಹಂಚಿಕೊಂಡಿರುವುದನ್ನು ನೋಡಬಹುದು.

ವಿರಾಟ್‌ ಕೊಹ್ಲಿಯ ಮಗಳು ವಾಮಿಕಾಳ ಫೋಟೋ ಇಲ್ಲಿಯವರೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿಲ್ಲ. ಕ್ರಿಕೆಟ್‌ ಪಂದ್ಯದಲ್ಲಿ ವಿರಾಟ್‌ನ್ನು ಹುರಿದುಂಬಿಸಲು ವಾಮಿಕಾಳ ಕೈಗಳನ್ನು ಮಾತ್ರ ಅನುಷ್ಕ ಶರ್ಮಾ ಹಂಚಿಕೊಂಡಿದ್ದರು ಎಂದು ದಿ ಸ್ಟೇಟ್ಸ್‌ಮ್ಯಾನ್‌ ವರದಿ ಮಾಡಿತ್ತು. ವಾಮಿಕ ಹುಟ್ಟಿದನಿಂದಲೂ ಆ ಮಗುವಿನ ಫೋಟೋವನ್ನು ಯಾರೂ ಹಂಚಿಕೊಳ್ಳಬಾರದು ಎಂದು ವಿರಾಟ್‌ ಮತ್ತು ಅನುಷ್ಕ ಮಾಧ್ಯಮದವರಿಗೆ ವಿನಂತಿಸಿಕೊಂಡಿದ್ದರು.

ಹೀಗಾಗಿ ವೈರಲ್‌ ಆದ ಚಿತ್ರದಲ್ಲಿ ಕಾಣಿಸುತ್ತಿರುವುದು ವಿರಾಟ್‌ ಮಗಳು ವಾಮಿಕಾ ಅಲ್ಲ ಬದಲಿಗೆ ವಿರಾಟ್‌ನ ಅಭಿಮಾನಿ.

Claim :  Image shows Virat Kohli with his daughter
Claimed By :  Social Media Users
Fact Check :  False
Tags:    

Similar News