ಫ್ಯಾಕ್ಟ್‌ಚೆಕ್: ಕರ್ನಾಟಕದ ಕಾಂಗ್ರೆಸ್ ಸರ್ಕಾರ ಬೃಂದಾವನ ಉದ್ಯಾನವನವನ್ನು ನಾಶ ಮಾಡಲಿದೆಯಾ?
ಕರ್ನಾಟಕದ ಕಾಂಗ್ರೆಸ್ ಸರ್ಕಾರ ಬೃಂದಾವನ ಉದ್ಯಾನವನವನ್ನು ನಾಶ ಮಾಡಲಿದೆಯಾ?
ಕರ್ನಾಟಕದ ಪ್ರಸಿದ್ದ ಪ್ರವಾಸಿಗರ ತಾಣದಲ್ಲಿ ಬೃಂದಾವನ ಉದ್ಯಾನವನವೂ ಒಂದು. ಮಂದ್ಯ ಜಿಲ್ಲೆಯಲ್ಲಿರುವ ಈ ಪ್ರವಾಸಿಗರ ಸ್ವರ್ಗ ಎಂದು ಕರೆಯಲ್ಪಡುವ ಈ ತಾಣವನ್ನು 1932 ರಲ್ಲಿ ಮೈಸೂರಿನ ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ನಿರ್ಮಿಸಿದರು. ಇಂದು ಈ ಉದ್ಯಾನವನಕ್ಕೆ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಸುಮಾರು 60 ಎಕರೆ ವಿಸ್ತೀರ್ಣ ಹೊಂದಿರುವ ಬೃಂದಾವನ ಉದ್ಯಾನವನವು ಕಾಶ್ಮೀರದ ಶಾಲಿಮಾರ್ ಉದ್ಯಾನವನದ ಮಾದರಿಯಲ್ಲಿ, ಹಚ್ಚ ಹಸಿರಿನ ಹುಲ್ಲುಹಾಸುಗಳು, ಸಸ್ಯಾಲಂಕರಣ ಮತ್ತು ಕಾರಂಜಿಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಹಚ್ಚ ಹಸಿರಿನಲ್ಲಿ ಕಂಗೊಳಿಸುವ ಈ ನಂದನವನದಲ್ಲಿ ಮುಖ್ಯ ಆಕರ್ಷಣೆಯೆಂದರೆ ಸಂಗೀತ ಕಾರಂಜಿಗಳು (ಮ್ಯೂಸಿಕಲ್ ಫೌಂಟೇನ್).
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಬೃಂದಾವನ ಉದ್ಯಾನವನದ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಎಕ್ಸ್ ಖಾತೆಯಲ್ಲಿ ಖಾತೆದಾರರೊಬ್ಬರು ಬೃಂದಾನವನ ಉದ್ಯಾನವನದ ಹಳೆಯ ಫೋಟೋವೊಂದನನು ಹಂಚಿಕೊಂಡು " ಆಘಾತಗಾರಿ ಸುದ್ದಿ!! ಮೈಸೂರಿನ ಐತಿಹಾಸಿಕ ಯುನೆಸ್ಕೋವಿನ ಪಾರಂಪರಿಕ ತಾಣವಾದ ಬೃಂದಾವನವನ್ನು ಸಿದ್ದರಾಮಯ್ಯ ಸರ್ಕಾರ ನಾಶ ಮಾಡಲು ಹೊರಟಿದೆ. ಈ ದುರಂತ ಮಾಡಲು ಸಿದ್ದರಾಮಯ್ಯ ಸರ್ಕಾರ ಕೋಟ್ಯಾಂತರ ರೂಪಾಯಿಯನ್ನು ಮಂಜೂರು ಮಾಡಿದೆ. ಈ ಅನಾಹುತ ಆದಷ್ಟು ಬೇಗ ತಡಿಯಬೇಕು" ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
HORRIBLE NEWS!!
— मङ्गलम् (@veejaysai) July 27, 2024
The famous UNESCO Heritage site ‘Brindavan Gardens’ outside Mysore is going to be destroyed forever!
Siddu congress govt has sanctioned crores of rupees for this disaster!
HOPE THIS STOPPED ASAP!! pic.twitter.com/UJIxo9BD6v
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಸಿದ್ದರಾಮಯ್ಯ ಸರ್ಕಾರ ಬೃಂದಾವನ ಉದ್ಯಾನವನವನ್ನು ನಾಶ ಮಾಡಲು ಅಲ್ಲ ಬದಲಿಗೆ ಉದ್ಯಾನವನವನ್ನು ಅಭಿವೃದ್ದಿ ಪಡಿಸಲು ಹಣವನ್ನು ಮಂಜೂರು ಮಾಡಿದೆ.
ನಾವು ವೈರಲ್ ಆದ ಸುದ್ದಿಯಲ್ಲಿನ ಸತ್ಯಾಂಶವನ್ನು ತಿಳಿಯಲು ವೈರಲ್ ಸುದ್ದಿಗೆ ಸಂಬಂಧಿಸಿದ ಕೆಲವು ಕೀವರ್ಡ್‌ಗಳ ಮೂಲಕ ಹುಡುಕಾಟವನ್ನು ನಡೆಸಿದೆವು. ಹುಡುಕಾಟದಲ್ಲಿ ನಮಗೆ ಕೆಲವು ಮಾಧ್ಯಮ ಸಂಸ್ಥೆಗಳು ಪ್ರಕಟಿಸಿರುವ ಕೆಲವು ಲೇಖನಗಳನ್ನು ನಾವು ಕಂಡುಕೊಂಡೆವು.
ದಿ ಎಕನಾಮಿಕ್ಸ್ ಟೈಮ್ಸ್ ವರದಿಯ ಪ್ರಕಾರ," ಕರ್ನಾಟಕ ಕ್ಯಾಬಿನೆಟ್ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಮಾದರಿಯ ಮೂಲಕ ಬೃಂದಾವನವನ್ನು ನವೀಕರಿಸಲು 2,663 ಕೋಟಿ ರೂಪಾಯಿ ಹಣವನ್ನು ಯೋಜನೆಗೆ ಅನುಮೋದನೆ ನೀಡಿದೆ" ಎಂದು ಲೇಖನದಲ್ಲಿ ವರದಿ ಮಾಡಿದ್ದಾರೆ
ಅಷ್ಟೇ ಅಲ್ಲ, 26,ಜುಲೈ 2024ರಂದು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದ (ಪಿಟಿಐ) ವರದಿಯ ಪ್ರಕಾರ " ಕರ್ನಾಟಕ ಸಚಿವ ಸಂಪುಟ ಕೃಷ್ಣ ರಾಜ ಸಾಗರ (ಕೆಆರ್‌ಎಸ್) ಡ್ಯಾಮ್‌ನ ಕೆಳಭಾಗದಲ್ಲಿರವ ಬೃಂದಾವನನ ಉದ್ಯಾನವನವನ್ನು ನವೀಕರಿಸುವ ಪ್ರಸ್ತಾವನೆಗೆ ಸರ್ಕಾರ ಅನುಮೋದನೆಯನ್ನು ನೀಡಿದೆ. ಕೆಆರ್‌ಎಸ್‌ನಲ್ಲಿ ದೀಪಗಳನ್ನು ಅಲಂಕರಿಸುವುದು ಹಾಗೆ ನವೀಕರಿಸುವುದು, ಜಲಕ್ರೀಡೆಯ ಸೌಲಭ್ಯವನ್ನು ಸ್ಥಾಪಿಸುವುದು, ಕೆಆರ್‌ಎಸ್ ಸುತ್ತಮುತ್ತ ಹೋಟೆಲ್‌ಗಳನ್ನು ನಿರ್ಮಿಸುವುದು ಹೀಗೆ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಬೃಂದಾನವನ ಉದ್ಯಾನವನವನ್ನು ಫ್ಯಾಂಟಸಿ ಪಾರ್ಕ್‌ನ ರೀತಿಯಲ್ಲಿ ಮಾಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ಹೇಳಿದ್ದಾರೆ.
ಫ್ಯಾಂಟಸಿ ಪಾರ್ಕ್‌ನಲ್ಲಿ ಏನೆಲ್ಲಾ ಇರಲಿದೆಯೆಂದರೆ, ಬೋಟಿಂಗ್ ಲೇಕ್, ಆಂಫಿಥಿಯೇಟರ್, ಕಾವೇರಿ ಪ್ರತಿಮೆ, ಸ್ವಾಗತ ಕಮಾನುಗಳು, ಮೀನಾ ಬಜಾರ್, ಜಂಗಲ್ ಟ್ರ‍್ಯಾಕ್, ಡೋಲ್ ಮ್ಯೂಸಿಯಂ, ಪೆಂಗ್ವಿನ್ ಪಾರ್ಕ್, ಕೆಆರ್‌ಎಸ್ ಸರ್ಕಲ್ ವಿಸ್ತರಣೆ, ಟೋಲ್ ಗೇಟ್, ವಾಹನಗಳ ಪಾರ್ಕಿಂಗ್, ವಿಸ್ತಾರವಾದ ಪಾದಚಾರಿ ಮಾರ್ಗ, ಇಂಡೋರ್ ಅಮ್ಯೂಸ್ ಮೆಂಟ್ ಪಾರ್ಕ್, ಗಾಜಿನ ಮೇಲ್ಸೇತುವೆ, ವ್ಯಾಕ್ಸ್ ಮ್ಯೂಸಿಯಂ,ಪ್ಯಾರಾ ಸೇಲಿಂಗ್, ವಾಟರ್ ಪ್ಲೇನ್, ಬಟಾನಿಕಲ್ ಗಾರ್ಡನ್, ಲೇಸರ್ ಶೋ ಪ್ರಾಜೆಕ್ಟ್ ವಾಲ್, ಅರೋಮ ಗಾರ್ಡನ್ ಮತ್ತು ಮಕ್ಕಳಿಗಾಗಿ ವಿಶೇಷ ಪಾರ್ಕ್, ಲೇಸರ್ ಶೋ ಪ್ರಾಜೆಕ್ಟ್ ವಾಲ್, ಹೆಲಿಪ್ಯಾಡ್, ಜೈಹೋ ಫೌಂಟನ್ ಇರಲಿದೆಯಂತೆ.
ಹೀಗಾಗಿ, ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ಸಾಭೀತಾಗಿದೆ. ಕಳೆದ ವರ್ಷವಷ್ಟೇ ಬೃಂದಾವನ ಉದ್ಯಾನವನದ ಕಾರಂಜಿಯನ್ನು ನವೀಕರಿಸಲಾಗಿದೆ. ಈಗ ಇದೇ ಉದ್ಯಾನವನವನ್ನು ಸರ್ಕಾರ ನಾಶ ಮಾಡುತ್ತಿದೆ ಎಂದು ವೈರಲ್ ಆಗುತ್ತಿರುವ ಹೇಳಿಕೆ ಸಾಮಾಜಿಕ ಬಳಕೆದಾರರನ್ನು ದಾರಿತಪ್ಪಿಸುವ ಹೇಳಿಕೆಯಾಗಿದೆ. ಅಷ್ಟೇ ಅಲ್ಲ ಸಿದ್ದರಾಮಯ್ಯ ಸರ್ಕಾರ ಬೃಂದಾವನ ಉದ್ಯಾನವನವನ್ನು ನಾಶ ಮಾಡಲು ಅಲ್ಲ ಬದಲಿಗೆ ಉದ್ಯಾನವನವನ್ನು ಅಭಿವೃದ್ದಿ ಪಡಿಸಲು ಹಣವನ್ನು ಮಂಜೂರು ಮಾಡಿದೆ.